Flash News

ಆಫ್ರಿಕಾ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ನ್ಯೂಜಿಲೆಂಡ್

ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನ 7ನೇ ಪಂದ್ಯವು ಇಂದೋರ್ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ನಡೆಯಲಿದೆ.

ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡವು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದೆ. ಈ ಪಂದ್ಯವು ಎರಡೂ ತಂಡಗಳಿಗೆ ಮಹತ್ವದ್ದಾಗಿದೆ, ಏಕೆಂದರೆ ಎರಡೂ ತಂಡಗಳು ತಮ್ಮ ಮೊದಲ ಪಂದ್ಯಗಳಲ್ಲಿ ಸೋತಿವೆ.

ಉಭಯ ತಂಡಗಳ ಪ್ಲೇಯಿಂಗ್ 11 ವಿವರಗಳು:

  • ನ್ಯೂಜಿಲೆಂಡ್: ಸುಜಿ ಬೇಟ್ಸ್, ಜಾರ್ಜಿಯಾ ಪ್ಲಿಮ್ಮರ್, ಅಮೆಲಿಯಾ ಕೆರ್, ಸೋಫಿ ಡಿವೈನ್ (ನಾಯಕಿ), ಬ್ರೂಕ್ ಹ್ಯಾಲಿಡೇ, ಮ್ಯಾಡಿ ಗ್ರೀನ್, ಇಸಾಬೆಲ್ಲಾ ಗೇಜ್ (ವಿಕೀ), ಜೆಸ್ ಕೆರ್, ಲಿಯಾ ತಹುಹು, ಈಡನ್ ಕಾರ್ಸನ್, ಬ್ರೀ ಇಲ್ಲಿಂಗ್.
  • ದಕ್ಷಿಣ ಆಫ್ರಿಕಾ: ಲಾರಾ ವೊಲ್ವಾರ್ಡ್ಟ್ (ನಾಯಕಿ), ತಜ್ಮಿನ್ ಬ್ರಿಟ್ಸ್, ಸುನೆ ಲೂಸ್, ಮಾರಿಜಾನ್ನೆ ಕಪ್, ಅನ್ನೆಕೆ ಬಾಷ್, ಸಿನಾಲೊ ಜಾಫ್ತಾ (ವಿಕೀ), ಕ್ಲೋಯ್ ಟ್ರಯಾನ್, ನಾಡಿನ್ ಡಿ ಕ್ಲರ್ಕ್, ಮಸಾಬಟಾ ಕ್ಲಾಸ್, ಅಯಾಬೊಂಗಾ ಖಾಕಾ, ನಾನ್ಕುಲುಲೆಕೊ ಮ್ಲಾಬಾ.