Flash News

ಮಂಜು ಭಾಷಿಣಿ ಮಾತಿಗೆ ಕಣ್ಣೀರಿಟ್ಟ ಅಶ್ವಿನಿ: ಅಸಲಿಗೆ ಇಬ್ಬರ ಮಧ್ಯೆ ಆಗಿದ್ದೇನು?

ಬಿಗ್‌ಬಾಸ್‌ ಕನ್ನಡ ಸೀಸನ್ 12 ಆರಂಭವಾಗಿ ಕೇವಲ ಒಂದು ವಾರ ಕಳೆದಿದ್ದರೂ, ಸ್ಪರ್ಧಿಗಳ ನಡುವೆ ವೈಮನಸ್ಸುಗಳು ಮೂಡುತ್ತಿವೆ.

ಇತ್ತೀಚೆಗೆ ಬಿಡುಗಡೆಯಾದ ಕಲರ್ಸ್‌ ಕನ್ನಡ ವಾಹಿನಿಯ ಪ್ರೋಮೋದ ಪ್ರಕಾರ, ನಟಿ ಮಂಜು ಭಾಷಿಣಿ ಅವರು ಆಡಿದ ಒಂದೇ ಮಾತಿಗೆ ನಟಿ ಅಶ್ವಿನಿ ಗೌಡ ಅವರು ಬಿಗ್‌ಬಾಸ್‌ ಮನೆಯಲ್ಲಿ ಕಣ್ಣೀರಿಟ್ಟಿದ್ದಾರೆ.

ಘಟನೆ ವಿವರ:

  • ಪ್ರೋಮೋದಲ್ಲಿ ಮಂಜು ಭಾಷಿಣಿ ಅವರು, “ಗಾಂಚಾಲಿ ಅಂತ ಯಾರಿಂದಲೂ ಅನಿಸಿಕೊಳ್ಳುವಂತಿಲ್ಲ ಬಿಗ್‌ಬಾಸ್‌” ಎಂದು ಹೇಳಿದ್ದಾರೆ.
  • ಇದಕ್ಕೆ ಪ್ರತಿಕ್ರಿಯಿಸಿದ ಅಶ್ವಿನಿ ಗೌಡ ಅವರು, “ಮಂಜು ಭಾಷಿಣಿ ಅಷ್ಟೊಂದು ಓವರ್‌ ಆಗಿ ಆಡೋ ಅವಶ್ಯಕತೆ ಇರಲಿಲ್ಲ. ನನಗೆ 3 ದಿನಗಳಿಂದ ಹುಷಾರಿಲ್ಲ, ಮಾತಾಡಿ ನಾನು ಅನಿಸಿಕೊಳ್ಳುತ್ತೇನೆ. ಆದರೆ, ಒಬ್ಬರನ್ನು ಹಂಗಿಸುವಂತಹ ಅವಶ್ಯಕತೆ ಇಲ್ಲ” ಎಂದು ಕಣ್ಣೀರು ಹಾಕಿದ್ದಾರೆ.

ಈ ಘಟನೆಯಿಂದಾಗಿ ಬಿಗ್‌ಬಾಸ್‌ ಮನೆ ಇದೀಗ ಸುದ್ದಿಯಲ್ಲಿದೆ.