ಸಂಜೆ ವೇಳೆ ಕಾಫಿ ಜೊತೆ ಅಥವಾ ಜಿಟಿ ಜಿಟಿ ಮಳೆಯಲ್ಲಿ ಚುರುಮುರಿ ಇದ್ದರೆ ಅದರ ರುಚಿಯೇ ಬೇರೆ. ಕಡಿಮೆ ಖರ್ಚಿನಲ್ಲಿ ಮನೆಯಲ್ಲಿಯೇ ಕೇವಲ 10 ನಿಮಿಷದಲ್ಲಿ ಖಾರ ಚುರುಮುರಿ ತಯಾರಿಸುವ ಸುಲಭ ವಿಧಾನವನ್ನು ಲೇಖನದಲ್ಲಿ ವಿವರಿಸಲಾಗಿದೆ.
ಚುರುಮುರಿ ಮಾಡಲು ಬೇಕಾಗುವ ಪ್ರಮುಖ ಸಾಮಾಗ್ರಿಗಳು:
- ಗರಿಗರಿ ಮಂಡಕ್ಕಿ (2 ಕಪ್)
- ಅರಿಶಿನ ಪುಡಿ
- ಖಾರದ ಪುಡಿ
- ಕೊತ್ತಂಬರಿ ಸೊಪ್ಪು
- ಶೇಂಗಾ (ಕಡಲೆಕಾಯಿ ಬೀಜ)
- ಈರುಳ್ಳಿ, ಟೊಮೊಟೊ, ಕ್ಯಾರೆಟ್
- ಅಡುಗೆ ಎಣ್ಣೆ, ಉಪ್ಪು, ಮತ್ತು ನಿಂಬೆಹಣ್ಣು
ಮಾಡುವ ವಿಧಾನದ ಸಾರಾಂಶ:
ಮೊದಲಿಗೆ, ಈರುಳ್ಳಿ, ಕೊತ್ತಂಬರಿ ಸೊಪ್ಪು, ಮತ್ತು ಟೊಮೆಟೊವನ್ನು ಸಣ್ಣದಾಗಿ ಹಚ್ಚಿ, ಕ್ಯಾರೆಟ್ ಅನ್ನು ತುರಿದುಕೊಳ್ಳಬೇಕು. ನಂತರ, ಬಾಣಲೆಯಲ್ಲಿ ಎಣ್ಣೆ ಹಾಕಿ ಸಿಪ್ಪೆ ತೆಗೆದ ಶೇಂಗಾ ಬೀಜವನ್ನು ಹುರಿದುಕೊಳ್ಳಬೇಕು. ಬಳಿಕ ಒಂದು ಪಾತ್ರೆಯಲ್ಲಿ ಮಂಡಕ್ಕಿ, ಅರಿಶಿನ ಪುಡಿ, ಖಾರ ಪುಡಿ, ಹಚ್ಚಿಕೊಂಡ ತರಕಾರಿಗಳು, ಹುರಿದ ಶೇಂಗಾ, ಉಪ್ಪು ಮತ್ತು ನಿಂಬೆ ರಸವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿದರೆ ಚುರುಮುರಿ ಸಿದ್ಧವಾಗುತ್ತದೆ.



