Flash News

ರಾಜ್ಯ ತಂಡಕ್ಕೆ ಮರಳಿದ ಕರುಣ್; ಮಯಾಂಕ್ ನಾಯಕ: ಹೀಗಿದೆ ತಂಡ

2025–26ನೇ ಸಾಲಿನ ರಣಜಿ ಟ್ರೋಫಿಯ ಮೊದಲ ಪಂದ್ಯಕ್ಕಾಗಿ 15 ಆಟಗಾರರ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ.

  • ಕಳೆದ ಬಾರಿ ವಿದರ್ಭ ತಂಡದ ಪರ ಆಡಿದ್ದ ಕರುಣ್ ನಾಯರ್ ಅವರು ತಮ್ಮ ತವರು ತಂಡವಾದ ಕರ್ನಾಟಕಕ್ಕೆ ವಾಪಸಾಗಿದ್ದಾರೆ.
  • ಮಯಾಂಕ್ ಅಗರವಾಲ್ ಅವರು ತಂಡದ ನಾಯಕರಾಗಿ ಮುಂದುವರೆದಿದ್ದಾರೆ.

ಸೌರಾಷ್ಟ್ರ ವಿರುದ್ಧದ ಪಂದ್ಯಕ್ಕೆ 15 ಆಟಗಾರರ ಕರ್ನಾಟಕ ತಂಡದ ವಿವರ:

ಮಯಾಂಕ್ ಅಗರವಾಲ್ (ನಾಯಕ), ಕರುಣ್ ನಾಯರ್, ಆರ್. ಸ್ಮರಣ್, ಕೆ.ಎಲ್ ಶ್ರೀಜಿತ್ (ವಿಕೆಟ್ ಕೀಪರ್), ಶ್ರೇಯಸ್ ಗೋಪಾಲ್, ವೈಶಾಕ್ ವಿಜಯಕುಮಾರ್, ವಿದ್ವತ್ ಕಾವೇರಪ್ಪ, ಅಭಿಲಾಷ್ ಶೆಟ್ಟಿ, ಎಂ. ವೆಂಕಟೇಶ್, ಎಸ್‌.ಜೆ. ನಿಖಿನ್ ಜೋಸ್, ಅಭಿನವ್ ಮನೋಹರ್, ಕೃತಿಕ್ ಕೃಷ್ಣ, ಕೆ.ವಿ ಅನೀಶ್, ಮೋಯ್ಸಿನ್ ಖಾನ್ ಹಾಗೂ ಶಿಖರ್ ಶೆಟ್ಟಿ.

ಕರ್ನಾಟಕ ತಂಡವು ತನ್ನ ಮೊದಲ ಪಂದ್ಯದಲ್ಲಿ ಸೌರಾಷ್ಟ್ರ ತಂಡವನ್ನು ಅಕ್ಟೋಬರ್ 15 ರಿಂದ 18 ರವರೆಗೆ ರಾಜ್‌ಕೋಟ್‌ನಲ್ಲಿ ಎದುರಿಸಲಿದೆ.