ನವದೆಹಲಿ: ಕರ್ನಾಟಕದ ಆಳಂದ, ಮಹಾದೇವಪುರದಂತೆ ಹರಿಯಾಣದಲ್ಲಿ ಕೂಡ ಮತಗಳ್ಳತನ ನಡೆದಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಒಂದೇ ವ್ಯಕ್ತಿ ಹಲವು ಕಡೆ ಮತದಾನ ಮಾಡಿರುವ ನಿದರ್ಶನಗಳಿವೆ. ಅದರಲ್ಲೂ ಬ್ರೆಜಿಲ್ ಮಾಡೆಲ್ ಫೋಟೊ ಬಳಸಿ 10 ಬೂತ್ಗಳಲ್ಲಿ 22 ಹೆಸರಿನಲ್ಲಿ ಮತದಾನ ನಡೆದಿತ್ತು ಎಂದು ಹೇಳಿದ್ದಾರೆ. ಹರ್ಯಾಣದಲ್ಲ 25 ಲಕ್ಷ ಮತಗಳ್ಳತನವಾಗಿದೆ ಎಂದು ದೂರಿದ್ದಾರೆ.
ಹಲವು ರಾಜ್ಯಗಳಲ್ಲಿ ಮತ ಕಳ್ಳತನದ ದೂರುಗಳು ನಮಗೆ ಬಂದಿವೆ, ಹರಿಯಾಣದ ಎಕ್ಸಿಟ್ ಪೋಲ್ನಲ್ಲಿ ಕಾಂಗ್ರೆಸ್ ಗೆಲ್ಲುವ ಮುನ್ಸೂಚನೆ ನೀಡಲಾಗಿತ್ತು. ಅಂಚೆ ಮತಪತ್ರಗಳಲ್ಲಿ ಕೂಡ ಕಾಂಗ್ರೆಸ್ ಮುಂದಿತ್ತು. ಆದರೆ ಕೊನೆಯಲ್ಲಿ ಫಲಿತಾಂಶ ಮಾತ್ರ ಉಲ್ಟಾ ಆಗಿತ್ತು ಎಂದರು.
ರಾಹುಲ್ ಗಾಂಧಿ ಇಡೀ ರಾಜ್ಯದಲ್ಲಿ ಜನಾದೇಶವನ್ನು ಕದ್ದಿದ್ದಾರೆ, ಕರ್ನಾಟಕದ ನಂತರ ಈಗ ಹರಿಯಾಣದಲ್ಲಿ ಮತ ಕಳ್ಳತನ ಪತ್ತೆಯಾಗಿದೆ, ಆರಂಭದಲ್ಲಿ ನಾವು ಅದನ್ನು ನಂಬಿರಲಿಲ್ಲ ಎಂದು ಹೇಳಿದರು. ಕಾಂಗ್ರೆಸ್ ಗೆಲುವು ಸೋಲಾಗಿ ಬದಲಾಯಿತು. ಹರಿಯಾಣದ ಎಲ್ಲರೂ ಇದನ್ನು ಕಾಂಗ್ರೆಸ್ ಗೆಲುವು ಎಂದು ಕರೆಯುತ್ತಿದ್ದರು. ದೇಶದ ಯುವಕರ ಭವಿಷ್ಯವನ್ನು ಕದ್ದಿದ್ದಾರೆ ಎಂದರು.
ಹರಿಯಾಣ ಚುನಾವಣೆ ವೇಳೆ ಎಲ್ಲಾ ಸಮೀಕ್ಷೆಗಳಲ್ಲೂ ಕಾಂಗ್ರೆಸ್ 52 ರಿಂದ 62 ಸ್ಥಾನಗಳಷ್ಟು ಮುಂದಿತ್ತು. ಅದರಂತೆ ಹರಿಯಾಣ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಸ್ವೀಪ್ ಮಾಡಲಿದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದ್ರೆ ಫಲಿತಾಂಶ ಸಂಪೂರ್ಣ ವಿಭಿನ್ನವಾಗಿತ್ತು. ಹರಿಯಾಣದಲ್ಲಿ ಫಸ್ಟ್ ಟೈಮ್ ಅಂಚೆ ಮತಗಳು ಮತ್ತು ಸಾಮಾನ್ಯ ಮತಗಳಲ್ಲಿ ವ್ಯತ್ಯಾಸ ಆಗಿರುವುದು ಕಂಡುಬಂದಿತು ಎಂದು ಆರೋಪಿಸಿದರು.
ರಾಜ್ಯದಲ್ಲಿ 5 ಲಕ್ಷ 21 ಸಾವಿರ 619 ನಕಲಿ ಮತಗಳಿವೆ ಎಂದು ರಾಹುಲ್ ಹೇಳಿದರು. ಬ್ರೆಜಿಲ್ನ ಒಬ್ಬ ಮತದಾರರು 22 ಸ್ಥಳಗಳಲ್ಲಿ ಹೇಗೆ ಮತ ಚಲಾಯಿಸಿದ್ದಾರೆ ಎಂದು ರಾಹುಲ್ ಪ್ರಶ್ನೆ ಎತ್ತಿದ್ದಾರೆ. ಹರಿಯಾಣದಲ್ಲಿ, ಪ್ರತಿ 8 ರಲ್ಲಿ ಒಬ್ಬ ಮತದಾರರು ನಕಲಿ ಎಂದು ಅವರು ಹೇಳಿದರು. ಈ ಮತ ಕಳ್ಳತನ ಬೂತ್ ಮಟ್ಟದಲ್ಲಿ ನಡೆದಿಲ್ಲ ಎಂದು ಅವರು ಹೇಳಿದರು.



