Flash News

ಇರಾನ್ ಮೇಲೆ ಇಸ್ರೇಲ್ ದಾಳಿ ಬೆನ್ನಲ್ಲೆ ದುಬೈ, ಬಹರೈನ್, ಕುವೈತ್ ಸ್ಪೋಟ

ಬಹ್ರೇನ್ : ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ದಾಳಿ ಬೆನ್ನಲ್ಲೆ ಬಹ್ರೇನ್, ಕುವೈತ್, ಅಬುಧಾಬಿಯಲ್ಲಿ ಸ್ಫೋಟಗಳು ಸಂಭವಿರುವ ಬಗ್ಗೆ Aljazeera ವರದಿ ಮಾಡಿದೆ.

ಬಹ್ರೇನ್‌ನ ಆಂತರಿಕ ಸಚಿವಾಲಯ ತುರ್ತು ಎಚ್ಚರಿಕೆಯನ್ನು ನೀಡಿದೆ. ನಾಗರಿಕರನ್ನು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚನೆಯನ್ನು ನೀಡಿದೆ.

ಬಹ್ರೇನ್‌ನ ಜುಫೈರ್ ಪ್ರದೇಶದಲ್ಲಿರುವ ಯುಎಸ್ ನೌಕಾಪಡೆ ನೆಲೆಯಿಂದ ಹೊಗೆ ಕಾಣಿಸಿಕೊಂಡಿದೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಯುಎಸ್ ನೌಕಾಪಡೆಯ 5ನೇ ಪ್ರಧಾನ ಕಚೇರಿಯನ್ನು ಕ್ಷಿಪಣಿ ದಾಳಿಗೆ ಗುರಿಪಡಿಸಲಾಗಿದೆ ಎಂದು ಬಹ್ರೇನ್ ದೃಢಪಡಿಸಿದೆ.

ಯುನೈಟೆಡ್ ಅರಬ್ ಎಮಿರೇಟ್ಸ್ ರಾಜಧಾನಿ ಅಬುಧಾಬಿಯಲ್ಲಿ ದೊಡ್ಡ ಸ್ಫೋಟ ಸಂಭವಿಸಿದೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಕುವೈತ್‌ನಲ್ಲಿ ಸ್ಫೋಟಗಳ ಸದ್ದು ಕೇಳಿಬಂದಿದೆ. ಸೈರನ್‌ಗಳು ಸಕ್ರಿಯಗೊಂಡಿವೆ ಎಂದು ವರದಿಯು ತಿಳಿಸಿದೆ.

ಖತರ್‌ನ ರಾಜಧಾನಿ ದೋಹಾದಲ್ಲಿ ಸ್ಫೋಟಗಳ ಶಬ್ದ ಕೇಳಿಬಂದಿದೆ. ಖತರ್‌ನ ರಕ್ಷಣಾ ಸಚಿವಾಲಯವು, ದೇಶವನ್ನು ಗುರಿಯಾಗಿಸಿಕೊಂಡು ಹಾರಿಸಿದ ಕ್ಷಿಪಣಿಗಳನ್ನು ತಡೆಹಿಡಿಯಲಾಗಿದೆ ಎಂದು ಹೇಳಿದೆ.