Flash News

ಚುನಾವಣೆಯಲ್ಲಿ ಭಾರಿ ಅಕ್ರಮ ನಡೆದಿದೆ: ಇಸ್ರೇಲ್‌ ಪ್ರಧಾನಿ ನೆತನ್ಯಾಹು ಆರೋಪ

ಟೆಲ್‌ ಅವೀವ್‌: ಇಸ್ರೇಲ್‌ನ ಸಾರ್ವತ್ರಿಕ ಚುನಾವಣೆಯಲ್ಲಿ ಅರಬ್ ನೇತೃತ್ವದ ಪಕ್ಷಗಳಿಂದ ಭಾರಿ ಅಕ್ರಮ ನಡೆದಿದೆ ಎಂದು ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಆರೋಪಿಸಿದ್ದಾರೆ. ಅಲ್ಲದೇ, ಶಂಕಿತ ವಿದೇಶಿ ಹಸ್ತಕ್ಷೇಪದ ಬಗ್ಗೆ ತಕ್ಷಣವೇ ತನಿಖೆ ನಡೆಸುವಂತೆ ಅವರು ಒತ್ತಾಯಿಸಿದ್ದಾರೆ.

ಚುನಾವಣಾ ಅಕ್ರಮವನ್ನು ‘ಭೂಕಂಪ’ ಎಂದು ಬಣ್ಣಿಸಿರುವ ಅವರು, ತಕ್ಷಣವೇ ಈ ಬಗ್ಗೆ ಪೊಲೀಸರಿಂದ ಮತ್ತು ಇಸ್ರೇಲ್‌ನ ಅತ್ಯುನ್ನತ ಆಂತರಿಕ ಭದ್ರತಾ ಸಂಸ್ಥೆ ’ಶಿನ್‌ ಬೆಟ್‌’ನಿಂದ ತನಿಖೆ ನಡೆಸಬೇಕು ಎಂದಿದ್ದಾರೆ.

ಇಸ್ರೇಲ್‌ನಲ್ಲಿ ಇಸ್ಲಾಮೀಕರಣ ಉತ್ತೇಜಿಸುವುದು ಮತ್ತು ಬಲಪಂಥೀಯ ಆಡಳಿತ ಕೊನೆಗೊಳಿಸುವ ಗುರಿಯನ್ನು ಶಂಕಿತ ವಿದೇಶಿ ಹಸ್ತಕ್ಷೇಪವು ಹೊಂದಿದೆ. ಅರಬ್‌ ಪಕ್ಷಗಳ ಬೆಂಬಲದ ಸರ್ಕಾರವು ಅಸ್ತಿತ್ವಕ್ಕೆ ಬಂದರೆ ಇಸ್ರೇಲ್‌ ಸಂಸತ್ತನ್ನು ವಿದೇಶಿ ವ್ಯಕ್ತಿಗಳು ಸ್ವಾಧೀನಪಡಿಸಿಕೊಳ್ಳುವ ಅಪಾಯವಿದ್ದು, ಇದು ಇರಾನ್‌ ವಿರುದ್ಧದ ಯುದ್ಧದಲ್ಲಿ ಇಸ್ರೇಲ್‌ ಸೇನೆಗೆ ಭಾರಿ ಹಿನ್ನಡೆ ತರಬಹುದು. ಹಾಗಾಗಿ ಯಾವುದೇ ಜಿಯೋನಿಸ್ಟ್‌ ಪಕ್ಷವು ಅರಬ್‌ ನೇತೃತ್ವದ ರಾಜಕೀಯ ಪಕ್ಷದೊಂದಿಗೆ ಸಹಕರಿಸಬಾರದು ಎಂದು ಹೇಳಿದ್ದಾರೆ.