Flash News

ಜಾತಕ ತೋರಿಸಲು ಬಂದ ಯುವತಿ ಮೇಲೆ ಅತ್ಯಾಚಾರ ಆರೋಪ: ಪರಿಹಾರ ನೀಡೋ ನೆಪದಲ್ಲಿ ಯಾಮಾರಿಸಿದ ಅರ್ಚಕ!

ಚಿಕ್ಕಮಗಳೂರು: ಜಾತಕದ ದೋಷ ಅಂತ ಯಾಮಾರಿಸೋ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಪೂಜೆ-ಪುನಸ್ಕಾರ ಮಾಡಿದ್ರೆ ದೋಷ ಮಂಗಮಾಯವಾಗುತ್ತೆ ಅಂತ ರೈಲು ಬಿಡೋ ಸ್ವಾಮೀಜಿಗಳ ಬಳಿ ಹೋಗುವ ಮುನ್ನ ಈ ಸುದ್ದಿ ನೋಡಿ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೊರಟ್ಟಿ ಗ್ರಾಮದಲ್ಲಿ ಜಾತಕ ತೋರಿಸಲು ಹೋದ ಯುವತಿಯ ಮೇಲೆಯೇ ಅರ್ಚಕ ಅತ್ಯಾಚಾರವೆಸಗಿರೋ ಆರೋಪ ಕೇಳಿ ಬಂದಿದೆ. ಇದೀಗ ಪೊಲೀಸ್​ ಠಾಣೆ ಮೆಟ್ಟೆಲೇರಿರುವ ಯುವತಿ, ಅರ್ಚಕನ ವಿರುದ್ಧ ದೂರು ನೀಡಿದ್ದಾರೆ.

ಪೊಲೀಸರಿಗೆ ಕೊಟ್ಟ ದೂರಿನ ಅನ್ವಯ, ಮದುವೆ ಸೆಟ್ ಆಗ್ತಿಲ್ಲ ಜಾತಕ ನೋಡಿ ಎಂದು ಯುವತಿಯೋರ್ವಳು ಅರ್ಚಕನ ಬಳಿ ಹೋಗಿದ್ದಾಳೆ. ಜಾತಕದಲ್ಲಿ ದೊಡ್ಡ ದೋಷ ಇದೆ ಎಂದು ಹೆದರಿಸಿದ ಅರ್ಚಕ ಆಕೆಯನ್ನ ಲೈಂಗಿಕ ವಾಗಿ ಬಳಸಿಕೊಂಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

ಮೂಡಿಗೆರೆ ತಾಲೂಕಿನ ಹೊರಟ್ಟಿ ಗ್ರಾಮದ ಪಾರ್ವತಿ ಈಶ್ವರ ದೇವಸ್ಥಾನದ ಅರ್ಚಕ ಕೃಷ್ಣರಾವ್ ಎಂಬಾತನೇ ಯುವತಿ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ತಿಳಿದು ಬಂದಿದೆ. ನೊಂದ ಯುವತಿ ಪೊಲೀಸ್ ಠಾಣೆಗೆ ದೂರು‌ ನೀಡಿದ್ದಾರೆ.

ಜಾತಕದಲ್ಲಿ ದೋಷ ಇದೆ ಎಂದು ಹೆದರಿಸಿ ಅರ್ಚಕ ಲೈಂಗಿಕ ವಾಗಿ ಬಳಸಿಕೊಂಡು, ನಿರಂತರವಾಗಿ ಅತ್ಯಾಚಾರ ಎಸೆಗಿದ್ದಾನೆ ಎಂದು ಯುವತಿ ಆರೋಪ ಮಾಡ್ತಿದ್ದಾಳೆ. ಸಂತ್ರಸ್ತೆ ನೀಡಿದ ದೂರಿನ ಮೇಲೆ ಅರ್ಚಕ ಕೃಷ್ಣರಾವ್ ನನ್ನ ಬಣಕಲ್ ಪೊಲೀಸರು‌ ಬಂಧಿಸಿದ್ದಾರೆ. ಈ ಸಂಬಂಧ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.