ಇರಾನ್ ಸರ್ವೋಚ್ಛ ನಾಯಕನ ಹತ್ಯೆಯನ್ನು ಸಂಭ್ರಮಿಸಿದ ಬಾಲಿವುಡ್ ನಟಿ; ಯಾಕೆ ಗೊತ್ತಾ?

ಅಮೆರಿಕ ಹಾಗೂ ಇಸ್ರೇಲ್ ಜಂಟಿ ಕಾರ್ಯಚರಣೆಯಲ್ಲಿ ಇರಾನ್‌ನ ಪರಮೋಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿ ಅವರು ಮೃತರಾಗಿದ್ದಾರೆ. ಇರಾನ್‌ನಲ್ಲಿ ಖಮೇನಿ ಸಾವಿಗೆ ಶೋಕಾಚರಣೆ ಮಾಡುತ್ತಿದ್ದರೆ, ಬಾಲಿವುಡ್ ನಟಿ ಎಲ್ನಾಜ್ ನೊರೌಜಿ ಅವರು ಸಂಭ್ರಮಿಸಿದ್ದಾರೆ. ಈ ಕುರಿತು ಎಲ್ನಾಜ್ ನೊರೌಜಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ‘ಖಮೇನಿ ಅವರು ಕಳೆದ 35 ವರ್ಷಗಳಿಂದ ಸಾವಿರಾರು ಅಮೆರಿಕನ್ನರನ್ನು ಕೊಂದ ಸಶಸ್ತ್ರ ಗುಂಪುಗಳಿಗೆ ಧನಸಹಾಯ ಮಾಡುತ್ತಿದ್ದರು. ಉಕ್ರೇನ್ ಮತ್ತು ರಷ್ಯಾ ಯುದ್ಧದ ಸಂದರ್ಭದಲ್ಲಿ ಉಕ್ರೇನ್ ನಾಗರಿಕರ ಮೇಲೆ ಬಾಂಬ್ ದಾಳಿ ನಡೆಸಲು […]
ಭಾರತದಲ್ಲೂ ಹಿಂಸಾಚಾರ ಸಂಭವಿಸುವ ಸಾಧ್ಯತೆಯಿದೆ – ಎಲ್ಲಾ ರಾಜ್ಯಗಳಿಗೆ ಗೃಹ ಸಚಿವಾಲಯ ಎಚ್ಚರಿಕೆ

ನವದೆಹಲಿ: ಇರಾನ್ – ಅಮೆರಿಕ – ಇಸ್ರೇಲ್ ದಾಳಿ-ಪ್ರತಿದಾಳಿಯಿಂದಾಗಿ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಈ ದಾಳಿಯ ನಂತರ ಭಾರತದಲ್ಲಿ ಸಂಭಾವ್ಯ ಹಿಂಸಾಚಾರದ ಬಗ್ಗೆ ಕೇಂದ್ರ ಗೃಹಸಚಿವಾಲಯ ಎಲ್ಲಾ ರಾಜ್ಯಗಳಿಗೆ ಎಚ್ಚರಿಕೆ ಪತ್ರ ಬರೆದಿದೆ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಫೆ.28 ರಂದು ಕಳುಹಿಸಲಾದ ಸುತ್ತೋಲೆಯಲ್ಲಿ, ದೇಶದಲ್ಲಿ ಹಿಂಸಾಚಾರ (violence) ಸಂಭವಿಸುವ ಸಾಧ್ಯತೆಯಿದೆ. ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಭದ್ರತಾ ಸಂಸ್ಥೆಗಳು ಜಾಗರೂಕತೆಯಿಂದ ಇರಬೇಕು. ಅಶಾಂತಿಯನ್ನ ಪ್ರಚೋದಿಸುವ ಇರಾನ್ ಪರ ಮೂಲಭೂತ ಪ್ರಚಾರಕರನ್ನ ಪತ್ತೆ ಮಾಡಬೇಕು ಎಂದು ಪತ್ರದಲ್ಲಿ […]
UAE ಅಧ್ಯಕ್ಷರ ಜೊತೆ ಪ್ರಧಾನಿ ನರೇಂದ್ರ ಮೋದಿ ಒಗ್ಗಟ್ಟಿನ ಭರವಸೆ: ಸಂಘರ್ಷ ನಿಲ್ಲಿಸುವಂತೆ ಇಸ್ರೆಲ್ ಜೊತೆಗೂ ಮಾತುಕತೆ

ಹೊಸದಿಲ್ಲಿ: ಮಧ್ಯಪ್ರಾಚ್ಯದ ಕೊಲ್ಲಿ ರಾಷ್ಟ್ರಗಳಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಅರಬ್ ರಾಷ್ಟ್ರಗಳ ಒಕ್ಕೂಟದೊಂದಿಗೆ ಮಾತುಕತೆ ನಡೆಸಿದ್ದಾರೆ. ಅಲ್ಲದೆ ನಾಗರಿಕರ ಸುರಕ್ಷತೆಗೆ ಒತ್ತು ಕೊಡುವಂತೆ ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರೊಂದಿಗೂ ಟೆಲಿಫೋನ್ ಮಾತುಕತೆ ನಡೆಸಿದ್ದಾರೆ. ಈ ಬಗ್ಗೆ ಪ್ರಧಾನಿ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ. “ಯುಎಇ ಅಧ್ಯಕ್ಷರಾದ ನನ್ನ ಸಹೋದರ ಶೇಖ್ ಮೊಹಮ್ಮದ್ ಬಿನ್ ಝಾಯೇದ್ ಅಲ್ ನಹ್ಯಾನ್” ಅವರೊಂದಿಗೆ ಮಾತನಾಡಿದ್ದೇನೆ. ಯುಎಇ ಮೇಲೆ ಆಗಿರುವ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದೇನೆ. ಈ ದಾಳಿಯಲ್ಲಾದ ಜೀವಹಾನಿ […]
ದುಬೈ: ಇರಾನ್ ದಾಳಿಯ ವೀಡಿಯೋ ಹಂಚಿಕೊಂಡರೆ 50 ಲಕ್ಷ ರೂ. ದಂಡ

ಇತ್ತೀಚೆಗೆ ದುಬೈ ಮೇಲೆ ನಡೆದ ಇರಾನ್ ಡ್ರೋನ್ ದಾಳಿಗಳು ಆತಂಕ ಮೂಡಿಸಿವೆಯಾದರೂ, ಈ ಘಟನೆಯ ನೈಜ ಚಿತ್ರಣ ಹೊರಜಗತ್ತಿಗೆ ಹೆಚ್ಚು ರವಾನೆಯಾಗುತ್ತಿಲ್ಲ. ದಾಳಿಯ ದೃಶ್ಯಗಳು, ವಿಡಿಯೊಗಳು ಅಥವಾ ‘ರೀಲ್ಸ್’ಗಳನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರೆ ಬರೋಬ್ಬರಿ ಸುಮಾರು 50 ಲಕ್ಷ ರೂ. ದಂಡ ವಿಧಿಸಲಾಗುವುದು ಎಂದು ದುಬೈ ಸರ್ಕಾರ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. ತೈಲ ಆಧಾರಿತ ಆರ್ಥಿಕತೆಯಿಂದ ಹೊರಬಂದು ಪ್ರವಾಸೋದ್ಯಮ, ವಾಣಿಜ್ಯ ಹಾಗೂ ರಿಯಲ್ ಎಸ್ಟೇಟ್ ಕ್ಷೇತ್ರಗಳತ್ತ ದುಬೈ ಮುಖ ಮಾಡಿದೆ. ಭವಿಷ್ಯದ ಆರ್ಥಿಕ ಭದ್ರತೆಗಾಗಿ ದುಬೈ […]
ಇರಾನ್ ಪ್ರತೀಕಾರ: ಇಸ್ರೇಲ್‌ಗೆ ನುಗ್ಗಿದ ಮಿಸೇಲ್, ಹಲವು ಕಟ್ಟಡಗಳು ಉಡೀಸ್, 9 ಮಂದಿ ಖಲ್ಲಸ್

ಟೆಲ್ ಅವೀವ್: ಮಧ್ಯ ಇಸ್ರೇಲ್‌ನ ಬೈತ್ ಶೆಮೇಶ್ ನಗರದ ಮೇಲೆ ಇರಾನ್ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಕನಿಷ್ಠ 9 ಮಂದಿ ಮೃತಪಟ್ಟಿದ್ದು, 27 ಜನರು ಗಾಯಗೊಂಡಿದ್ದಾರೆ. ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು aljazeera.com ವರದಿ ಮಾಡಿದೆ. ಮ್ಯಾಗೆನ್ ಡೇವಿಡ್ ಆಡಮ್ ಆಂಬ್ಯುಲೆನ್ಸ್ ಸೇವೆಯ ಪ್ರಕಾರ, ಜೆರುಸಲೇಂನ ಪಶ್ಚಿಮಕ್ಕೆ 30 ಕಿಮೀ ದೂರದಲ್ಲಿರುವ ಮಧ್ಯ ಇಸ್ರೇಲ್‌ನ ಬೈತ್ ಶೆಮೇಶ್ ನಗರದಲ್ಲಿ ಇರಾನಿನ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಯಲ್ಲಿ ಕನಿಷ್ಠ 9 ಮಂದಿ ಮೃತಪಟ್ಟಿದ್ದಾರೆ. ಇಸ್ರೇಲ್ ಸೇನೆಯು ಟೆಲಿಗ್ರಾಮ್‌ನಲ್ಲಿ ನೀಡಿದ […]
ಸೌದಿ ಅರೇಬಿಯಾಕ್ಕೆ ಮತ್ತೆ ಇರಾನ್ ದಾಳಿ: ರಿಯಾದ್ ನಲ್ಲಿ ಭಾರೀ ಸ್ಫೋಟ; ಪ್ರತೀಕಾರದ ಕಿಚ್ಚು

ರಿಯಾದ್: ಸೌದಿ ಅರೇಬಿಯಾದ ರಾಜಧಾನಿ ರಿಯಾದ್ ನಗರದ ಪೂರ್ವ ಭಾಗದಲ್ಲಿ ಭಾರೀ ಸ್ಫೋಟಗಳ ಶಬ್ದಗಳು ಕೇಳಿಬಂದಿರುವುದಾಗಿ ಅಂತರರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ ಪೂರ್ವ ರಿಯಾದ್ ನ ನಿವಾಸಿಗಳ ಪ್ರಕಾರ, ಒಂದರ ಹಿಂದೆ ಒಂದಾಗಿ ಹಲವು ದೊಡ್ಡ ಸ್ಫೋಟಗಳು ಸಂಭವಿಸಿದ್ದು, ಅದರ ನಂತರ ಆಕಾಶದಲ್ಲಿ ದಟ್ಟ ಹೊಗೆ ಆವರಿಸಿರುವುದು ಗೋಚರಿಸಿದೆ. ಎಎಫ್‌ಪಿ ವರದಿ ಪ್ರಕಾರ, ಅಲ್ಲಿನ ವರದಿಗಾರರೂ ಸ್ಫೋಟಗಳ ಶಬ್ದವನ್ನು ನೇರವಾಗಿ ಕೇಳಿದ್ದಾರೆ ಎಂದು ತಿಳಿದು ಬಂದಿದೆ ಎಂದು Aljazeera ವರದಿ ಮಾಡಿದೆ. ಘಟನೆಯ ಸ್ವರೂಪ, ಸ್ಫೋಟಗಳ […]
ಇರಾನ್ ಸರ್ವೋಚ್ಛ ನಾಯಕ ಖಮೇನಿ ಹತ್ಯೆ: ಖಚಿತಪಡಿಸಿದ ಇರಾನ್

ವಾಷಿಂಗ್ಟನ್: ಇರಾನ್ ಸರ್ವೋಚ್ಛ ನಾಯಕ ಅಯತೊಲ್ಲ ಖಮೇನಿ ಅವರನ್ನು ಹತ್ಯೆಯಾಗಿದೆ ಎಂದು ವರದಿಯಾಗಿದೆ. ಇಸ್ಲಾಮಿಕ್ ಗಣರಾಜ್ಯದ ಮೇಲೆ ಅಮೆರಿಕ-ಇಸ್ರೇಲಿ ನಡೆಸಿದ ಜಂಟಿ ದಾಳಿಯಲ್ಲಿ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಸಾವನ್ನಪ್ಪಿದ್ದಾರೆ ಎಂದು ಇರಾನ್ ಸ್ಟೇಟ್ಸ್ ಮೀಡಿಯಾ ಖಚಿತಪಡಿಸಿದೆ. ಈ ಬೆಳವಣಿಗೆ ಬಳಿಕ ಇರಾನ್ ದೇಶಾದ್ಯಂತ 40 ದಿನಗಳ ಶೋಕಾಚರಣೆ ಘೋಷಿಸಿದೆ. “ಇತಿಹಾಸದ ಅತ್ಯಂತ ದುಷ್ಟ ಜನರಲ್ಲಿ ಒಬ್ಬರಾದ ಖಮೇನಿ ಸಾವನ್ನಪ್ಪಿದ್ದಾರೆ. ಇದು ಇರಾನ್ ಜನರು ಮಾತ್ರವಲ್ಲ, ಎಲ್ಲಾ ಅಮೆರಿಕನ್ನರು ಖಮೇನಿ ಮತ್ತವರ ರಕ್ತಪಿಪಾಸು ಗುಂಪಿನಿಂದ ಕೊಲ್ಲಲ್ಪಟ್ಟ […]
ಖಮೇನಿ ಹತ್ಯೆ ದೃಢಪಡಿಸಿದ ಡೊನಾಲ್ಡ್ ಟ್ರಂಪ್: ಜಗತ್ತಿನ ದುಷ್ಟ ವ್ಯಕ್ತಿ ಉಸಿರು ನಿಂತಿದೆ ಎಂದ ಯುಎಸ್ ಅಧ್ಯಕ್ಷ!

ಟೆಹ್ರಾನ್: ಅಮೆರಿಕ-ಇಸ್ರೇಲ್ ಜಂಟಿ ಮಿಲಿಟರಿ ಕಾರ್ಯಾಚರಣೆಯ ಕೆಲವು ಗಂಟೆಗಳ ನಂತರ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಹತ್ಯೆಯನ್ನು ದೃಢಪಡಿಸಿದ್ದಾರೆ. ಖಮೇನಿ ಸಾವು ನಿಜ ಎಂದು ಇಸ್ರೇಲ್ ಮಾಧ್ಯಮ ಘೋಷಣೆ ಮಾಡಿತ್ತು. ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಇರಾನ್ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಹತ್ಯೆ.ಆಯತೊಲ್ಲಾ ಅಲಿ ಖಮೇನಿ ಹತ್ಯೆ ದೃಢಪಡಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್.ಜಗತ್ತಿನ ಅತಿ ದುಷ್ಟ ವ್ಯಕ್ತಿಯ ಉಸಿರು ನಿಂತಿದೆ ಎಂದು ಪೋಸ್ಟ್ ಮಾಡಿದ ಅಮೆರಿಕ ಅಧ್ಯಕ್ಷ.
Dubai | ಪ್ಲಾಮ ಜುಮೇರಾ ಮೇಲೆ ಇರಾನ್ ದಾಳಿ: ಹೊತ್ತಿ ಉರಿದ ಹೋಟೆಲ್‌ಗಳು

ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಗುರಿಗಳ ಮೇಲೆ ಇರಾನ್ ದಾಳಿ ನಡೆಸಿದ ನಂತರ ಶನಿವಾರ ದುಬೈನಾದ್ಯಂತ ಸ್ಫೋಟಗಳ ಶಬ್ದಗಳು ಕೇಳಿಬಂದವು. ಈ ಮಧ್ಯೆ, ದುಬೈನ ಪಾಮ್ ಜುಮೇರಾದ ಫೇರ್‌ಮಾಂಟ್ ದಿ ಪಾಮ್ ಹೋಟೆಲ್ ಬಳಿ ಬೆಂಕಿ ಮತ್ತು ಹೊಗೆಯನ್ನು ತೋರಿಸುವ ವೀಡಿಯೊಗಳು ಕಾಣಿಸಿಕೊಂಡವು. ಪಾಮ್ ಜುಮೇರಾ ಪ್ರದೇಶದ ಕಟ್ಟಡವೊಂದರಲ್ಲಿ ನಡೆದ “ಘಟನೆ”ಗೆ ತುರ್ತು ತಂಡಗಳು ಪ್ರತಿಕ್ರಿಯಿಸಿವೆ ಎಂದು ಅಧಿಕಾರಿಗಳು ದೃಢಪಡಿಸಿದರು ಆದರೆ ಕಟ್ಟಡವು ಹೋಟೆಲ್ ಆಗಿದೆಯೇ ಎಂಬುದು ಸೇರಿದಂತೆ ಹೆಚ್ಚಿನ ವಿವರಗಳನ್ನು ನೀಡಲಿಲ್ಲ. “ಪಾಮ್ ಜುಮೇರಾ ಪ್ರದೇಶದ ಕಟ್ಟಡವೊಂದರಲ್ಲಿ ಘಟನೆ […]
ಇಸ್ರೇಲ್ ಮತ್ತು ಇರಾನ್ ಯುದ್ಧದಿಂದ ಭಾರತಕ್ಕೆ ಶಾಕ್: Petrol, diesel ದರ ಏರಿಕೆ ಸಾಧ್ಯತೆ?

ದೆಹಲಿ: ಪಶ್ಚಿಮ ಏಷ್ಯಾದಲ್ಲಿ ಇಸ್ರೇಲ್ ಮತ್ತು ಇರಾನ್ ನಡುವೆ ಉಲ್ಬಣಿಸಿರುವ ಸಂಘರ್ಷವು ಜಾಗತಿಕ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿದೆ. ಈ ಯುದ್ಧದ ಪರಿಣಾಮವಾಗಿ ಭಾರತದಲ್ಲಿ ಇಂಧನ ಬೆಲೆಗಳು ಏರಿಕೆಯಾಗಲಿವೆಯೇ ಎಂಬ ಆತಂಕ ಸಾರ್ವಜನಿಕರಲ್ಲಿ ಮನೆಮಾಡಿದೆ. ಇರಾನ್ ವಿಶ್ವದ ಪ್ರಮುಖ ತೈಲ ಉತ್ಪಾದಕ ರಾಷ್ಟ್ರಗಳಲ್ಲಿ ಒಂದಾಗಿದೆ. ಯುದ್ಧದ ಕಾರಣದಿಂದಾಗಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಭೀತಿಯಿಂದ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ ಏರಿಕೆಯಾಗುತ್ತಿದೆ. ಭಾರತವು ತನ್ನ ತೈಲದ ಅಗತ್ಯದ ಶೇ. 80ಕ್ಕಿಂತ ಹೆಚ್ಚಿನ ಪಾಲನ್ನು ಆಮದು ಮಾಡಿಕೊಳ್ಳುತ್ತದೆ. […]