ಕೆಲಸ ಹುಡುಕಲು ಹೋದ ವಿದ್ಯಾರ್ಥಿನಿಯ ಶವ ಪತ್ತೆ: ಝಕೀಯಾ ಮುಲ್ಲಾ ಕೊಲೆಗೆ ಕಾರಣ ಏನು?

ಧಾರವಾಡ: ಯುವತಿಯೋರ್ವಳು ಕೆಲಸ ಹುಡುಕಲು ಮನೆಯಿಂದ ಹೋಗಿದ್ದವಳು ಶವವಾಗಿ ಪತ್ತೆಯಾಗಿದ್ದಾಳೆ. ಪ್ಯಾರಾಮೆಡಿಕಲ್ ಪೂರ್ಣಗೊಳಸಿದ್ದ ಧಾರವಾಡದ ಗಾಂಧಿ ಚೌಕ್ನ ನಿವಾಸಿ 21 ವರ್ಷ ಝಕಿಲಾ ಮುಲ್ಲಾ, ಕೆಲಸ ಹುಡುಕಲೆಂದು ನಿನ್ನೆ(ಜನವರಿ 20) ಮನೆಯಿಂದ ಹೋಗಿದ್ದವಳು. ಆದ್ರೆ, ಇಂದು (ಜನವರಿ 21) ಧಾರವಾಡದ ಮನಸೂರು ಗ್ರಾಮದ ರಸ್ತೆ ಪಕ್ಕ ಝಕಿಲಾ ಮುಲ್ಲಾ ಮೃತದೇಹ ಪತ್ತೆಯಾಗಿದೆ. ಯುವತಿ ಬಾಯಲ್ಲಿ ರಕ್ತ ಬಂದಿದ್ದು, ಆಕೆಯ ವೇಲ್ನಿಂದಲೇ ಕುತ್ತಿಗೆ ಬಿಗಿದು ಕೊಂದಿರುವ ಸಂಶಯ ಹುಟ್ಟುಕೊಂಡಿದೆ. ಇನ್ನು ಈ ಘಟನೆಯಿಂದ ಧಾರವಾಡ ಜನರೆಲ್ಲ ಬೆಚ್ಚಿ ಬಿದ್ದಿದ್ದಾರೆ. […]
ಧಾರವಾಡ ಪೊಲೀಸರ ಮಿಂಚಿನ ಕಾರ್ಯಾಚರಣೆ: ರಕ್ತದ ಕಲೆ ಒಣಗುವ ಮುನ್ನವೇ ಹಂತಕನ ಬಂಧನ

ಧಾರವಾಡ: ನಗರದ ಹೊರವಲಯದಲ್ಲಿ ನಡೆದಿದ್ದ ಝಕೀಯಾ ಮುಲ್ಲಾ ಎಂಬುವವರ ಭೀಕರ ಹತ್ಯೆ ಪ್ರಕರಣವನ್ನು ಧಾರವಾಡ ಜಿಲ್ಲಾ ಪೊಲೀಸರು ಕೇವಲ ಕೆಲವೇ ಗಂಟೆಗಳಲ್ಲಿ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಶಂಕಿತ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ಚುರುಕುಗೊಳಿಸಿದ್ದಾರೆ. ಧಾರವಾಡದ ಹೊರವಲಯದಲ್ಲಿ ಝಕೀಯಾ ಮುಲ್ಲಾ ಅವರ ಶವ ಪತ್ತೆಯಾದ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಜಿಲ್ಲಾ ಪೊಲೀಸ್ ತಂಡ, ರಾತ್ರೋರಾತ್ರಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಪತ್ತೆಹಚ್ಚಿದೆ. ಕೊಲೆ ಮಾಡಿದ ನಂತರವೂ ಆರೋಪಿಯು ಹತ್ಯೆ ನಡೆದ ಸ್ಥಳದ ಸುತ್ತಮುತ್ತಲೇ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ […]
ಕೇಸರಿ ಕೋಟೆಯಲ್ಲಿ SDPI ಘರ್ಜನೆ: ಮಂಗಳೂರು ಹಸಿರು, ಕೆಂಪು ಮಯ

ರಾಜಕೀಯ ಅಧಿಕಾರ ಪಡೆದಾಗ ದೌರ್ಜನ್ಯ ತಡೆಗಟ್ಟಲು ಸಾಧ್ಯ; ಅಬ್ದುಲ್ ಮಜೀದ್ ಮಂಗಳೂರು: ದ.ಕ ಜಿಲ್ಲೆಯನ್ನು ಕೇಸರಿ ಕೋಟೆ ಎಂದು ಹೇಳುತ್ತಾರೆ. ಆದರೆ ನಿನ್ನೆ ಎಸ್ ಡಿಪಿಐ ನಡೆಸಿದ ಬೃಹತ್ ಮೆರವಣಿಯಲ್ಲಿ ಸೇರಿದ ಸಾವಿರಾರು ಜನಸ್ತೋಮವು ಎಲ್ಲರನ್ನು ಹುಬ್ಬೆರುವಂತೆ ಮಾಡಿದೆ. ಮಂಗಳೂರಿನ ಬೀದಿಬೀದಿಗಳಲ್ಲಿ ಎಸ್ ಡಿಪಿಐ ಹಸಿರು, ಕೆಂಪು ಬಾವುಟ ರಾರಾಜಿಸಿವೆ. ಎಸ್‌ಡಿಪಿಐನ ರಾಷ್ಟ್ರೀಯ ಕಾರ್ಯಕಾರಿ ಸಮಿತಿಗೆ ನೂತನವಾಗಿ ಆಯ್ಕೆಯಾಗಿರುವ ಪದಾಧಿಕಾರಿಗಳಿಗೆ ಅಭಿನಂದನಾ ರ್ಯಾಲಿ ನಗರದ ಜ್ಯೋತಿ ವೃತ್ತದಿಂದ ಪುರಭವನದ ತನಕ ನಡೆಯಿತು. ಬಳಿಕ ಪುರಭವನದಲ್ಲಿ ಎಸ್‌ಡಿಪಿಐ ರಾಜ್ಯಾಧ್ಯಕ್ಷ […]
‘ಮುಂದೆ ದ್ವೇಷ ಭಾಷಣ ಮಾಡುವುದಿಲ್ಲ ಎಂಬ ಷರತ್ತು ಉಲ್ಲಂಘಿಸಿದ ಕಲ್ಲಡ್ಕ ಭಟ್’: ಮತ್ತೆ ಕೋಮುದ್ವೇಷ ಭಾಷಣ; FIR ಜಡಿದ ಪೊಲೀಸರು

ಪುತ್ತೂರು: ಹಿಂದೂ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರು ಮತ್ತೊಮ್ಮೆ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪುತ್ತೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರುವಂತಹ ಮತ್ತು ಕೋಮುದ್ವೇಷ ಪ್ರಚೋದಿಸುವಂತಹ ಭಾಷಣ ಮಾಡಿದ ಆರೋಪದಡಿ ಅವರ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಕಳೆದ ಜನವರಿ 12 ರಂದು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಪ್ರಭಾಕರ ಭಟ್ ಅವರು ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ್ದರು. ಈ ವೇಳೆ ಕಾಲೇಜು ವಿದ್ಯಾರ್ಥಿಗಳು ಮತ್ತು ಪೋಷಕರನ್ನು […]
ಧಾರವಾಡ: ಮುಸ್ಲಿಂ ಯುವತಿಯನ್ನು ಕೊಂದು ಶವ ಬಿಸಾಡಿ ಹೋದ ದುಷ್ಕರ್ಮಿಗಳು!

ಧಾರವಾಡ: ಪ್ಯಾರಾಮೆಡಿಕಲ್ ಶಿಕ್ಷಣ ಮುಗಿಸಿ ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದ 19 ವರ್ಷದ ವಿದ್ಯಾರ್ಥಿನಿಯೋರ್ವಳು ಬರ್ಬರವಾಗಿ ಹತ್ಯೆಗೀಡಾಗಿದ್ದಾಳೆ. ನಿನ್ನೆ ಲ್ಯಾಬ್‌ಗೆ ಹೋಗಿದ್ದ ಝಕಿಯಾ ಮುಲ್ಲಾ ಶವ ಇಂದು ಬೆಳಗ್ಗೆ ನಗರದ ಹೊರವಲಯದಲ್ಲಿ ಪತ್ತೆಯಾಗಿದೆ. ಮೃತ ವಿದ್ಯಾರ್ಥಿನಿ ಧಾರವಾಡದ ಗಾಂಧಿ ಚೌಕ್ ನಿವಾಸಿಯಾಗಿದ್ದ 19 ವರ್ಷದ ಝಕಿಯಾ ಮುಲ್ಲಾ ಎಂದು ತಿಳಿದುಬಂದಿದೆ. ಮಂಗಳವಾರ ಸಂಜೆ ಮನೆಯಿಂದ ಲ್ಯಾಬ್‌ಗೆ ಹೋಗಿ ಬರುವುದಾಗಿ ಹೇಳಿ ತೆರಳಿದ್ದ ವಿದ್ಯಾರ್ಥಿನಿ, ರಾತ್ರಿಯಾದರೂ ಮನೆಗೆ ಹಿಂದಿರುಗಿರಲಿಲ್ಲ. ಇದರಿಂದ ಆತಂಕಗೊಂಡ ಕುಟುಂಬಸ್ಥರು ಹುಡುಕಾಟ ನಡೆಸುತ್ತಿದ್ದರು. ಇಂದು ಮುಂಜಾನೆ ಮನಸೂರು […]
ಪುತ್ತೂರು | ವಿವೇಕಾನಂದ ಜಯಂತಿಯಲ್ಲಿ ದ್ವೇಷ ಭಾಷಣ ಆರೋಪ; ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ದೂರು

ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜಿನ ಆವರಣದಲ್ಲಿ ಜ.12ರಂದು ನಡೆದ ವಿವೇಕಾನಂದ ಜಯಂತಿ ಕಾರ್ಯಕ್ರಮದ ಸಭೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರು ಸಮಾಜದ ನಾಗರಿಕ ಸಮುದಾಯಗಳ ನಡುವೆ ಪರಸ್ಪರ ದ್ವೇಷ ಉಂಟಾಗುವ ರೀತಿಯಲ್ಲಿ ದ್ವೇಷ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ, ಅವರ ವಿರುದ್ಧ ಹಾಗೂ ಆ ಭಾಷಣವನ್ನು ಪ್ರಸಾರ ಮಾಡಿದ ಯೂಟ್ಯೂಬ್ ಚಾನೆಲ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ಮಾನವ ಬಂಧುತ್ವ ವೇದಿಕೆಯ ಪುತ್ತೂರು ತಾಲೂಕು […]
ಮಂಗಳೂರಿನಲ್ಲಿ SDPI ಬೃಹತ್ ಶಕ್ತಿಪ್ರದರ್ಶನ: ಯುವ ಘಟಕ “YOUNG DEMOCRATS” ಅಸ್ತಿತ್ವಕ್ಕೆ

ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷರಾಗಿ ಎಂ.ಕೆ. ಫೈಝ್ ಪುನರಾಯ್ಕೆ ಮಂಗಳೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ಇಂದು ಆಯ್ಕೆಯಾದ ನೂತನ ರಾಷ್ಟ್ರೀಯ ನಾಯಕರಿಗೆ ಅಭಿನಂದನಾ ಕಾರ್ಯಕ್ರಮ ಇಂದು ಪುರಭವನದಲ್ಲಿ ನಡೆಯಲಿದೆ. ಇದಕ್ಕೂ ಮೊದಲು ಮಂಗಳೂರು ನಗರದಲ್ಲಿ SDPI ರಣಕಹಳೆ ಮೊಳಗಿಸಿದೆ. ಮಂಗಳೂರಿನ ಅಂಬೇಡ್ಕರ್ ವೃತ್ತ (ಜ್ಯೋತಿ )ಯಿಂದ ಬೃಹತ್ ರ್‍ಯಾಲಿ ಸಾಗಿ ಬರುತ್ತಿದ್ದು, ರಾಜ್ಯದ ಮೂಲೆ ಮೂಲೆಯಿಂದ ಬಂದಿದ್ದ ಸಹಸ್ರಾರು ಕಾರ್ಯಕರ್ತರ ಸಮ್ಮುಖದಲ್ಲಿ ಎಸ್ ಡಿಪಿಐಯ ರಾಷ್ಟ್ರೀಯ ನಾಯಕರು ಹೆಜ್ಜೆ ಹಾಕಿದ್ದಾರೆ. […]
ಬೆಂಗಳೂರು | ಮಹಿಳೆಯರ ಒಳ ಉಡುಪು ಕದಿಯುತ್ತಿದ್ದ ವಿಕೃತ ಕಾಮಿ ಅರೆಸ್ಟ್!

“ಮಹಿಳೆಯರ ಒಳಉಡುಪು ಧರಿಸಿ ವಿಕೃತ ಆನಂದ ಪಡುತ್ತಿದ್ದ ಅಮಲ್” ಬೆಂಗಳೂರು: ಮಹಿಳೆಯರ ಒಳ ಉಡುಪುಗಳನ್ನು ಕದಿಯುತ್ತಿದ್ದ ವಿಕೃತ ಕಾಮಿಯನ್ನು ಹೆಬ್ಬಗೋಡಿಯ ವಿದ್ಯಾನಗರದಲ್ಲಿ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಕೇರಳ ಮೂಲದ ಅಮಲ್ (23) ಬಂಧಿತ ಆರೋಪಿ. ಈತ ಮನೆ ಮಹಡಿ, ಹಾಗೂ ಆಚೆ ಒಣಹಾಕಿದ್ದ ಮಹಿಳೆಯರ ಒಳ ಉಡುಪುಗಳನ್ನ ಕದಿಯುತ್ತಿದ್ದ. ಹೊರಗಡೆ ಸುತ್ತಾಡಿ ಮನೆಗಳನ್ನು ದೂರದಿಂದಲೇ ಪರಿಶೀಲನೆ ಮಾಡುತ್ತಿದ್ದ. ನಂತರ ಯಾರು ಇಲ್ಲದ ವೇಳೆ ನುಗ್ಗಿ ಒಳ ಉಡುಪುಗಳನ್ನ ಕದ್ದೊಯ್ಯುತ್ತಿದ್ದ. ಬಳಿಕ ಅವುಗಳನ್ನು ತಾನು ಧರಿಸಿಕೊಂಡು ಫೋಟೋ […]
ಸೌದಿ ಅರೇಬಿಯಾದಲ್ಲಿ ಭೀಕರ ಅಪಘಾತ; ಮಂಗಳೂರು ಮೂಲದ ಯುವಕ ಮೃತ್ಯು

ಜೆದ್ದಾ: ಸೌದಿ ಅರೇಬಿಯಾದ ನಜ್ರಾನ್ ಅಭಾ ಹೆದ್ದಾರಿಯಲ್ಲಿ ಎರಡು ಕಾರುಗಳು ಪರಸ್ಪರ ಡಿಕ್ಕಿ ಹೊಡೆದಿದ್ದು, ಒಂದು ಕಾರಿನಲ್ಲಿದ್ದ ಇಬ್ಬರು ಮೃತರಾಗಿದ್ದು, ಇನ್ನಿಬ್ಬರ ಸ್ಥಿತಿ ಗಂಭೀರವಾಗಿದೆ. ಮೃತರಲ್ಲಿ ಓರ್ವ ಮಂಗಳೂರು ಸಮೀಪದ ಕುಂದಾಪುರದ ನಿವಾಸಿ 25 ವರ್ಷ ಪ್ರಾಯದ ಅಮ್ಮಾರ್ ಅಹ್ಮದ್ ಶೇಖ್ ಎಂದು ತಿಳಿದು ಬಂದಿದ್ದು, ಇನ್ನೋರ್ವ ಕೇರಳದ ಯುವಕನಾಗಿದ್ದಾನೆ. ಕಾರಿನಲ್ಲಿದ್ದ ಇನ್ನಿಬ್ಬರ ಸ್ಥಿತಿ ಗಂಭೀರವಾಗಿದೆ. ಸೌದಿ ಅರೇಬಿಯಾದ ಸೆಂಟರ್ ಪಾಯಿಂಟ್ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ಈ ನಾಲ್ವರು ಕೆಲಸದ ನಿಮಿತ್ತ ಅಭಾಕ್ಕೆ ಪ್ರಯಾಣಿಸುತ್ತಿದ್ದರು. ಸೌದಿ ಪ್ರಜೆಯ ಕಾರಿಗೆ […]
ಬಂಟ್ವಾಳ | ಶರವೇಗದಲ್ಲಿ ಮಗುವಿನ ಜೀವ ಉಳಿಸಿದ SKSSF ಕಾರ್ಯಕರ್ತ ಇಮ್ರಾನ್ ಮಾರಿಪಳ್ಳ

ಬಂಟ್ವಾಳ: SKSSF ಕಾರ್ಯಕರ್ತ ಹಾಗೂ ಆಂಬುಲೆನ್ಸ್ ಚಾಲಕರೊಬ್ಬರು ಶರವೇಗದಲ್ಲಿ ಮಗುವಿನ ಜೀವ ಉಳಿಸಿರುವ ಅಪರೂಪದ ಘಟನೆ ಒಂದು ನಿನ್ನೆ ತಡರಾತ್ರಿ ನಡೆದಿದೆ. ಒಂದೂವರೆ ವರ್ಷದ ಮಗು ಉಸಿರಾಟದ ತೊಂದರೆ ಬಳಲುತ್ತಿದ್ದು, ಸೋಮವಾರ ರಾತ್ರಿ ಜೋರಾಗಿತ್ತು. ಕುಟುಂಬದವರು ತಕ್ಷಣ ತುಂಬೆಯ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದು ಕೊಂಡು ಹೋಗಿದ್ದಾರೆ. ಅಲ್ಲಿಯ ವೈದ್ಯರು ಮಗುವ ಸ್ಥಿತಿ ನೋಡಿ ಹೆಚ್ಚಿನ ಚಿಕಿತ್ಸೆಗೆ ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಹೇಳುತ್ತಾರೆ. ಕಂಗಾಲಾಗಿದ್ದ ಕುಟುಂಬ ತಕ್ಷಣ ಇಮ್ರಾನ್ ರವರಿಗೆ ತಡ ರಾತ್ರಿ […]