Flash News

ತೇಜಸ್ವಿ ಸೂರ್ಯ ಬಂಧನ ಮಾಡಿಸಿದ ಸಿದ್ದರಾಮಯ್ಯ ಪುಕ್ಕಲ ಸಿಎಂ: ಪ್ರತಾಪ್‌ ಸಿಂಹ ಕಿಡಿ

ಈಗ ಖಜಾನೆ ಖಾಲಿಯಾಗಿದೆ ಎಂದು ಖಾಲಿ ಡಬ್ಬಿ ಹಿಡಿದು ತೇಜಸ್ವಿ ಸೂರ್ಯ ಸಾಂಕೇತಿಕವಾಗಿ ಪ್ರತಿಭಟನೆ ಮಾಡಿದ್ದಾರೆ. ಅವರನ್ನು ಬಂಧನ ಮಾಡುವ ಕೆಲಸವನ್ನು ಈ ಸರ್ಕಾರ ಮಾಡಿದೆ. ಅವರ ವೈಫಲ್ಯ ತೋರಿಸಿದವರನ್ನು ಯಾವ ರೀತಿ ಹತ್ತಿಕ್ಕುತ್ತಾರೆ ಎನ್ನುವುದಕ್ಕೆ ಇದೇ ಉದಾಹರಣೆ. ತೇಜಸ್ವಿ ಸೂರ್ಯ ಸಮಸ್ತ ಬೆಂಗಳೂರಿಗರ ಪರವಾಗಿ ಹೋರಾಟ ಮಾಡಿದ್ದಾರೆ ಎಂದರು. ಸಿದ್ದರಾಮಯ್ಯನವರು 17 ಬಜೆಟ್ ಮಂಡನೆ ಮಾಡಿ ವಿಶ್ವ ಪ್ರಖ್ಯಾತ ಅರ್ಥಶಾಸ್ತ್ರಜ್ಞರು ಆಗಿದ್ದಾರೆ. ಖಜಾನೆ ಖಾಲಿಯಾಗಿ ಅಭಿವೃದ್ಧಿ ಕೆಲಸಕ್ಕೆ ಹಣ ಕೊಡದ ಪರಿಸ್ಥಿತಿ ಇದೆ. ಬರೀ ಸಭೆ […]

ಮೆಟ್ರೊದಲ್ಲಿ Girlfriend ಜೊತೆ ಸಿಕ್ಕಿಬಿದ್ದ ಮಗ: ನಿಲ್ದಾಣದಲ್ಲೇ ನಿಶ್ಚಿತಾರ್ಥ ಮಾಡಿದ ತಾಯಿ

ನವದೆಹಲಿ: ದೆಹಲಿಯ ಮೆಟ್ರೋ ನಿಲ್ದಾಣದಲ್ಲಿ ಗೆಳತಿ ಜೊತೆಗೆ ಸಿಕ್ಕಿಬಿದ್ದ ಪುತ್ರನಿಗೆ ಆತನ ತಾಯಿ ನಿಲ್ದಾಣದಲ್ಲಿಯೇ ನಿಶ್ಚಿತಾರ್ಥ ಮಾಡಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೈರಲ್ ಆಗಿರುವ ವೀಡಿಯೋದಲ್ಲಿ ಮೆಟ್ರೊ ನಿಲ್ದಾಣವೊಂದರಲ್ಲಿ ಗೆಳತಿ ಜೊತೆಗೆ ಪುತ್ರ ಕುಳಿತಿರುವುದನ್ನು ನೋಡಿದ ಯುವಕನ ತಾಯಿ, ಕೆಲ ಕ್ಷಣ ಆತನೊಂದಿಗೆ ದಬಾಯಿಸಿರುವುದು ಕಂಡು ಬಂದಿದೆ. ಬಳಿಕ ಕೂಡಲೇ ತಾವು ತಂದಿದ್ದ ಹೂ–ಹಣ್ಣು, ಸಿಹಿ ಮುಂತಾದವುಗಳನ್ನು ಯುವತಿಗೆ ಕೊಟ್ಟು ನಿಶ್ಚಿತಾರ್ಥ ಮಾಡಿಸಿದ್ದಾರೆ. ಈ ವೇಳೆ ಯುವಕ ಗೊಣಗುತ್ತಾ ಅಮ್ಮಾ ಏನಮ್ಮಾ ಇದು ಎಂದು […]

ವಿವಿಧ ಇಲಾಖೆಗಳಲ್ಲಿ ಯತೀಂದ್ರ ಸಿದ್ದರಾಮಯ್ಯ ಹಸ್ತಕ್ಷೇಪ: ಕೆಜೆ.ಜಾರ್ಜ್ ಬಳಿಕ ಶಾಸಕ ತನ್ವೀರ್ ಸೇಠ್ ಬಹಿರಂಗ ಅಸಮಾಧಾನ..!

ಮೈಸೂರು: ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಹಸ್ತಕ್ಷೇಪ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ಸಚಿವ ಕೆ.ಜೆ. ಜಾರ್ಜ್ ನಂತರ ಕಾಂಗ್ರೆಸ್​​ನ ಮತ್ತೊಬ್ಬ ನಾಯಕ ಅಸಮಾಧಾನ ಹೊರ ಹಾಕಿದ್ದಾರೆ. ಪೊಲೀಸ್ ಠಾಣೆ ಉದ್ಘಾಟನೆ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಮತ್ತು ನರಸಿಂಹರಾಜ ಕ್ಷೇತ್ರದ ಕಾಂಗ್ರೆಸ್​ ಶಾಸಕ ತನ್ವೀರ್ ಸೇಠ್ ಈ ಬಗ್ಗೆ ಗೃಹ ಸಚಿವ ಪರಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿ ಹೊರ ನಡೆಯಲು ಮುಂದಾದ ಘಟನೆ ನಡೆದಿದೆ. ಈ ವೇಳೆ ಸಚಿವ ಪರಮೇಶ್ವರ್​​ ತನ್ವೀರ್​ಸೇಠ್​ ಮನವೊಲಿಕೆ ಯತ್ನ ಮಾಡಿದ್ದು, ಜೊತೆಗೆ ಶಾಸಕ‌ […]

ಬೆಳ್ತಂಗಡಿ | ಕಾಲೇಜು ತೆರಳುತ್ತಿದ್ದ ಅಪ್ರಾಪ್ತ ಯುವತಿಯ ಅಪಹರಣ ಯತ್ನ, ಓಮ್ನಿ ಕಾರಿನಲ್ಲಿ ಅಡ್ಡಗಟ್ಟಿ ಕಿಡ್ನಾಪ್ ಕೃತ್ಯ ವಿಫಲ

ಬೆಳ್ತಂಗಡಿ: ಶಾಲಾ ಬಾಲಕಿಯೊಬ್ಬಳನ್ನು ಮಾರುತಿ ಓಮ್ನಿ ಕಾರಿನಲ್ಲಿ ಬಂದ ಅಪರಿಚಿತ ತಂಡವೊಂದು ಅಪಹರಿಸಲು ಯತ್ನಿಸಿದ ಬೆಚ್ಚಿಬೀಳಿಸುವ ಘಟನೆ ಸೋಮವಾರ ಬೆಳಿಗ್ಗೆ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ದುಷ್ಕರ್ಮಿಗಳ ಕೃತ್ಯವನ್ನು ಪ್ರತಿರೋಧಿಸಿದ ಬಾಲಕಿಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದ್ದು, ಅದೃಷ್ಟವಶಾತ್ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಇಲ್ಲಿನ 16 ವರ್ಷದ ಬಾಲಕಿಯು ಇಂದು ಬೆಳಿಗ್ಗೆ ಸುಮಾರು 8:30ರ ವೇಳೆಗೆ ಸ್ಕೂಟಿಯಲ್ಲಿ ಶಾಲೆಗೆ ತೆರಳುತ್ತಿದ್ದಳು. ಮನೆಯಿಂದ ಸುಮಾರು 300 ಮೀಟರ್ ಕ್ರಮಿಸುತ್ತಿದ್ದಂತೆ, ಮಾರುತಿ ಓಮ್ನಿ ವಾಹನದಲ್ಲಿ ಬಂದ ಮೂವರು ಅಪರಿಚಿತರು […]

ಶಾಂತಿ ಬೋಧಿಸುವ ಧರ್ಮ ಇಸ್ಲಾಂನಲ್ಲಿ ಶಾಂತಿ ಕಾಣುತ್ತಿಲ್ಲ: ಮೋಹನ್ ಭಾಗವತ್

ಮುಂಬೈ: ಇಸ್ಲಾಂ ಅನ್ನು ಶಾಂತಿ ಬೋಧಿಸುವ ಧರ್ಮ ಎನ್ನಲಾಗುತ್ತಿದೆ. ಆದರೆ ಶಾಂತಿ ಕಂಡುಬರುತ್ತಿಲ್ಲ. ಆಧ್ಯಾತ್ಮಿಕತೆ ಇಲ್ಲದ ಧರ್ಮವು ಆಕ್ರಮಣಕಾರಿಯಾಗುತ್ತದೆ ಹಾಗೂ ಪ್ರಾಬಲ್ಯ ಸಾಧಿಸಲು ಮುಂದಾಗುತ್ತದೆ ಎಂದು ಮೋಹನ್‌ ಭಾಗವತ್‌ ಹೇಳಿದರು. ಕ್ರೈಸ್ತ ಹಾಗೂ ಇಸ್ಲಾಂ ಧರ್ಮಗಳು ಏಸು ಕ್ರಿಸ್ತ ಮತ್ತು ಪ್ರವಾದಿ ಮೊಹಮ್ಮದ್ ಅವರ ಬೋಧನೆಗಳಂತೆ ಈಗ ಇಲ್ಲ. ನೈಜ ಇಸ್ಲಾಂ ಮತ್ತು ಕ್ರೈಸ್ತ ಧರ್ಮ ಪಾಲನೆ ಅಗತ್ಯ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ‘ಸಾಕಷ್ಟು ವಿರೋಧದ ನಡುವೆಯೂ ಸಂಘದ ಸ್ವಯಂ ಸೇವಕರು ಮುಸ್ಲಿಂ ಸಮುದಾಯದೊಂದಿಗೆ ಕೆಲಸ ಮಾಡುತ್ತಿದ್ದಾರಲ್ಲ’ […]

ಮಂಗಳೂರು ಗ್ರಾಮದಲ್ಲಿ ಖಾಸಗಿ ವಿಮಾನ ಪತನ

ವಿಜಯಪುರ: ಬಬಲೇಶ್ವರ ತಾಲೂಕಿನ ಮಂಗಳೂರು ಗ್ರಾಮದಲ್ಲಿ ಜೆಟ್ ವಿಮಾನವೊಂದು ಇಂದು ಮಧ್ಯಾಹ್ನ 3 ಗಂಟೆಯ ವೇಳೆಗೆ ಪತನವಾಗಿದೆ. ಕಲಬುರಗಿಯಿಂದ ಬೆಳಗಾವಿಗೆ (Belagavi) ತೆರಳುತ್ತಿದ್ದ ಇಂಧನ ಖಾಲಿಯಾದ ಕಾರಣ ವಿಮಾನ ಪತನಗೊಂಡಿದೆ ಎಂಬ ಪ್ರಾಥಮಿಕ ಮಾಹಿಲತಿ ಲಭ್ಯವಾಗಿದೆ. ರೆಡ್ ಬರ್ಡ್‌ ಕಂಪನಿಯ ಖಾಸಗಿ ಕಂಪನಿಯ ವಿಮಾನ ಪತನಗೊಂಡು ರೈತರ ಜಮೀನಿನ ಮೇಲೆ ಬಿದ್ದಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ, ಜೆಟ್‌ನಲ್ಲಿದ್ದ ಇಬ್ಬರು ತೀವ್ರ ಗಾಯಗೊಂಡಿದ್ದು ಜಿಲ್ಲಾ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ. ಸ್ಥಳಕ್ಕೆ ದೌಡಾಯಿಸಿರುವ ಬಬಲೇಶ್ವರ ಪೊಲೀಸರು ಭೇಟಿ ನೀಡಿ ಪರಿಶೀಲನೆ […]

ವೇಶ್ಯಾವಾಟಿಕೆ ಮಾಡುವಂತೆ ಅತ್ತೆಯಿಂದ ಕಿರುಕುಳ: ಮನೆಯಲ್ಲೇ ನೇಣು ಬಿಗಿದು ಸೊಸೆ ಆತ್ಮಹತ್ಯೆ

ಬೀದರ್‌: ಗಂಡನ ಮನೆಯವರ ಮಾನಸಿಕ ಕಿರುಕುಳದಿಂದಾಗಿ ಮನೆಯಲ್ಲೇ ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೀದರ್ ಜಿಲ್ಲೆಯ ಬಸವಕವಲ್ಯಾಣ ನಗರದ ಓಂ ನಗರದಲ್ಲಿ ನಡೆದಿದೆ. ಅಂಜನಾಬಾಯಿ ಪಾಟೀಲ್ (22) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿಯಾಗಿದ್ದು ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದು ಮೃತಪಟ್ಟಿದ್ದಾರೆ. ಮೃತಳ ಗಂಡ ಶೇಖರ್, ಅತ್ತೆ ಅರುಣಾಬಾಯಿ, ಮಾವ ಚಂದ್ರಕಾಂತ ಅವರ ಕಿರುಕುಳದಿಂದ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಂದೆ ವಿಜಯ್‌ ಕುಮಾರ್‌ ಬಸವಕಲ್ಯಾಣ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ. ದೂರಿನಲ್ಲಿ […]

SDPI ರಾಜ್ಯಾಧ್ಯಕ್ಷ ಸಂಚರಿಸುತ್ತಿದ್ದ ಕಾರಿಗೆ ಬೆಂಕಿ: ಅಪಾಯದಿಂದ ಪಾರಾದ ಅಬ್ದುಲ್ ಮಜೀದ್

ಮಡಿಕೇರಿ: SDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಸಂಚರಿಸುತ್ತಿದ್ದ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಜೀದ್ ಕೊಡ್ಲಿಪೇಟೆ ಸಂಚರಿಸುತ್ತಿದ್ದ ಕಾರು ಬೆಂಕಿ ಹೊತ್ತಿ ಕಾರು ಭಸ್ಮವಾಗಿದೆ, ಮಜೀದ್ ಹಾಗೂ ಚಾಲಕ ಪಾರಾಗಿದ್ದಾರೆ. ಇಂದು ದಿನಾಂಕ 07/02/2026, ರಾತ್ರಿ ಸುಮಾರು 10 ಗಂಟೆ ವೇಳೆಗೆ, ಎಸ್‌ಡಿಪಿಐ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಮೈಸೂರು ಅವರು ಪಕ್ಷದ ಸಂಘಟನಾ ಕಾರ್ಯದ ನಿಮಿತ್ತ ಉಡುಪಿ ಜಿಲ್ಲೆಯಿಂದ ಮೈಸೂರಿನತ್ತ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ, ಕುಶಾಲನಗರ ಸಮೀಪದ ಆನೆಕಾಡು ಪ್ರದೇಶದ ಬಳಿ ಅನಿರೀಕ್ಷಿತ ಘಟನೆ ಸಂಭವಿಸಿದೆ. […]

RSS ಶತಮಾನೋತ್ಸವಕ್ಕೆ ಬಂದ ಸಲ್ಮಾನ್ ಖಾನ್: ಮೋಹನ್ ಭಾಗವತ್ ಅವರ ಪಾಠ ಕೇಳಿದ ಭಾಯ್‌ಜಾನ್

ರಾಷ್ಟ್ರೀಯ ಸ್ವಯಂಸೇವಕ ಸಂಘ (RSS)ತನ್ನ 100ನೇ ವರ್ಷದ ಸಂಭ್ರಮವನ್ನು ಆಚರಿಸುತ್ತಿದೆ. ಹೀಗಾಗಿ ಮುಂಬೈನ ನೆಹರೂ ಕೇಂದ್ರದಲ್ಲಿ ಮುಂದಿನ ಎರಡು ದಿನಗಳು ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಬಾಲಿವುಡ್ (Bollywood) ಸೇರಿದಂತೆ ಅನೇಕ ಕ್ಷೇತ್ರಗಳ ಗಣ್ಯರು ಭಾಗವಹಿಸುತ್ತಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಸುಭಾಷ್ ಘಾಯ್, ಹೇಮಾ ಮಾಲಿನಿ, ಅಶ್ವಿನಿ ಭಾವೆ ಮೊದಲಾದವರು ಹಾಜರಾಗಿದ್ದರು. ಆದಾಗ್ಯೂ ಎಲ್ಲರ ಗಮನವನ್ನು ಸೆಳೆದದ್ದು ನಟ ಸಲ್ಮಾನ್ ಖಾನ್ (Salman Khan) ಅವರ ಆಗಮನ. ರಾಷ್ಟ್ರೀಯ ಸ್ವಯಂಸೇವಕ ಸಂಘದ ‘ನವೇ ಕ್ಷಿತಿಜ್’ ಉಪನ್ಯಾಸ ಸರಣಿಗೆ ಅನೇಕ ಸೆಲೆಬ್ರಿಟಿಗಳು […]

ಫ್ಯಾಕ್ಟ್​ ಚೆಕ್: Epstein Filesನಲ್ಲಿ ರಾಹುಲ್​ ಗಾಂಧಿ ಹೆಸರು, ವಿಡಿಯೋ: ಅಸಲಿಯತ್ತೇನು?

ಈಗ ಸದ್ಯ ಜಗತ್ತಿನಾದ್ಯಂತ ಬೆಚ್ಚಿಬೀಳಿಸೋ ವಿಷ್ಯ ಎಂದರೆ ಅದು ಎಪ್​ಸ್ಟೀನ್​ ಫೈಲ್ಸ್​ (Epstein Files). ಚಿಕ್ಕ ಮಕ್ಕಳನ್ನು ಲೈಂ*ಗಿಕತೆಗೆ ಬಳಸಿಕೊಳ್ಳುವುದು ಮಾತ್ರವಲ್ಲದೇ ಅವರನ್ನು ಕೊಂದು ಅವರ ದೇಹದ ಭಾಗಗಳನ್ನು ತಿನ್ನುವಂಥ ವಿಕೃತಿಯನ್ನೂ ಕೆಲವರು ಮಾಡಿರುವುದಾಗಿ ಜೆಫ್ರಿ ಎಪ್​ಸ್ಟೀನ್ ಫೈಲ್ಸ್​ನಲ್ಲಿ ಉಲ್ಲೇಖಿಸಲಾಗಿದೆ. ಜೀವನಕ್ಕೆ ಬೇಕಾದ ಎಲ್ಲಾ ಐಷಾರಾಮಿಗಳು ಸಿಕ್ಕ ಬಳಿಕವೂ, ಇರುವ ದುಡ್ಡನ್ನು ಏನು ಮಾಡಬೇಕು ಎಂದು ತಿಳಿಯದೇ ಗೊಂದಲಕ್ಕೆ ಒಳಗಾದಾಗ ಮನುಷ್ಯ ಈ ರೀತಿ ವಿಕೃತನಾಗುತ್ತಾನೆ ಎಂದು ಹೇಳುವ ಮಾತಿಗೆ ಸಾಕ್ಷಿಯಾಗಿ ನಿಂತಿದೆ ಈ ಫೈಲ್ಸ್​. ನಿಜಕ್ಕೂ […]