ದಾರುನ್ನೂರ್ ಎಜುಕೇಶನಲ್ ಸೆಂಟರ್ ಕಾಶಿಪಟ್ನದ ನೂತನ ಉಪಾಧ್ಯಕ್ಷರಾಗಿ ಯುವ ಉದ್ಯಮಿ ಡಾ. ಅಬ್ದುಲ್ ಶಕೀಲ್ ಆಯ್ಕೆ

ಮಂಗಳೂರು: ದಾರುನ್ನೂರ್ ಎಜುಕೇಶನಲ್ ಸೆಂಟರ್ ಕಾಶಿಪಟ್ನ ಇದರ ನೂತನ ಉಪಾಧ್ಯಕ್ಷರಾಗಿ ಉದ್ಯಮಿ ಡಾ. ಅಬ್ದುಲ್ ಶಕೀಲ್ ಅವರು ಆಯ್ಕೆಯಾಗಿದ್ದಾರೆ. ದಾರುನ್ನೂರ್ ಎಜುಕೇಶನಲ್ ಸೆಂಟರ್ ಕಾಶಿಪಟ್ನದ ಗೌರವಾಧ್ಯಕ್ಷರಾದ ಶೈಖುನಾ ತ್ವಾಖಾ ಉಸ್ತಾದ್ ಅವರು ನೇಮಕ ಪತ್ರವನ್ನು ನೀಡಿದರು. ಈ ಸಂದರ್ಭದಲ್ಲಿ ದಾರುನ್ನೂರ್ ಎಜುಕೇಶನಲ್ ಇದರ ಅಧ್ಯಕ್ಷರಾದ ಶೇರಿಫ್ ಹಾಜಿ ಜೋಕಟ್ಟೆ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು. ಹಲವಾರು ದೀನೀ ಸ್ಥಾಪನೆಗಳ ಹಿತೈಷಿಗಳು, ಯುವ ಉದ್ಯಮಿಯೂ ಆಗಿರುವಡಾ ಅಬ್ದುಲ್ ಶಕೀಲ್ ದೇರಳಕಟ್ಟೆ ನಿಸ್ವಾರ್ಥ ಸಮಾಜ ಸೇವಕರೂ ಆಗಿದ್ದು, ಹಲವಾರು ಸಮಾಜಮುಖಿ ಕಾರ್ಯದಲ್ಲಿ […]
ಗೃಹಸಚಿವ ಪರಮೇಶ್ವರ್ ರಾಜೀನಾಮೆಗೆ ಬಿಜೆಪಿ ಒತ್ತಾಯ…!

ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಡ್ರಗ್ಸ್ ದಂಧೆ ಪ್ರಕರಣ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲರಾಗಿರುವ ಗೃಹಸಚಿವ ಡಾ.ಜಿ.ಪರಮೇಶ್ವರ್ ತಕ್ಷಣವೇ ತಮ ಸ್ಥಾನಕ್ಕೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಬಿಜೆಪಿ ಒತ್ತಾಯಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಧಾನಪರಿಷತ್‌ನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಶಾಂತಿ ಸುವ್ಯವಸ್ಥೆಗೆ ಹೆಸರಾಗಿದ್ದ ಕರ್ನಾಟಕ ಇಂದು ಬೇರೆ ಬೇರೆ ಕಾರಣಗಳಿಂದ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ. ಇದಕ್ಕೆ ಗೃಹ ಇಲಾಖೆ ಮತ್ತು ಗೃಹಸಚಿವರು ವಿಫಲರಾಗಿರುವುದೇ ಸಾಕ್ಷಿ ಎಂದು ದೂರಿದರು. ರಾಜ್ಯದಲ್ಲಿ ಡ್ರಗ್ ಫ್ಯಾಕ್ಟರಿಗಳು ತಲೆ ಎತ್ತುತ್ತಿವೆ. […]
ಬೊಲೆರೊ ಮೇಲೆ ಉರುಳಿಬಿದ್ದ ಹುಲ್ಲಿನ ಟ್ರಕ್; ಮೃತ ಚಾಲಕನ ವಿವರ ರಿವೀಲ್ ಮಾಡಿದ ಸರ್ಕಾರ!

ಉತ್ತರ ಪ್ರದೇಶದ ರಾಂಪುರದಲ್ಲಿ ಭಾನುವಾರ ಸಂಜೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ, ವಿದ್ಯುತ್ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರ ವಾಹನದ ಮೇಲೆ ಹುಲ್ಲು ತುಂಬಿದ ಟ್ರಕ್ ಉರುಳಿಬಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ. ಬಿಲಾಸ್‌ಪುರ ಕಡೆಗೆ ಹೋಗುತ್ತಿದ್ದ ಹುಲ್ಲಿನ ಟ್ರಕ್, ಸ್ಥಳೀಯ ಪವರ್ ಹೌಸ್ ಬಳಿಯ ಪಹಾಡಿ ಗೇಟ್ ಸಮೀಪದ ನೈನಿತಾಲ್ ರಸ್ತೆಯಲ್ಲಿ ತಿರುವು ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಾಗ ಈ ಘಟನೆ ನಡೆದಿದೆ. ರಾಂಪುರದ ಹೊಸ ವೈರಲ್ ವಿಡಿಯೋವೊಂದು ಆನ್‌ಲೈನ್‌ನಲ್ಲಿ ಭಾರಿ ಗಮನ ಸೆಳೆಯುತ್ತಿದೆ. ಇದನ್ನು ರಸ್ತೆ ಸುರಕ್ಷತಾ ಜಾಗೃತಿ ಖಾತೆಯಾದ @motordave2 […]
ವಿಶ್ವ ಕಲ್ಯಾಣಕ್ಕಾಗಿ ಭಾರತ ವಿಶ್ವಗುರು ಆಗಲೇಬೇಕು; ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್

ಹೈದರಾಬಾದ್: “ವಿಶ್ವಗುರು” ಆಗುವ ಭಾರತದ ಪ್ರಯಾಣವು ಕೇವಲ ರಾಷ್ಟ್ರೀಯ ಮಹತ್ವಾಕಾಂಕ್ಷೆಯ ವಿಷಯವಲ್ಲ, ಅದು ಜಾಗತಿಕ ಅವಶ್ಯಕತೆಯಾಗಿದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಒತ್ತಿ ಹೇಳಿದ್ದಾರೆ. ಈ ಗುರಿಗೆ ಕಠಿಣ ಪರಿಶ್ರಮ, ಬದ್ಧತೆ ಮತ್ತು ಮಾನವ ಮೌಲ್ಯಗಳು ಮತ್ತು ಸಾಮಾಜಿಕ ಬದಲಾವಣೆಯನ್ನು ಅಭಿವೃದ್ಧಿಪಡಿಸುವತ್ತ ಅಚಲ ಗಮನದ ಅಗತ್ಯವಿದೆ ಎಂದು ಹೇಳಿದ್ದಾರೆ. ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋಹನ್ ಭಾಗವತ್, ವಿಶ್ವಗುರುವಾಗಿ ಭಾರತದ ಪಾತ್ರವು ಕೇವಲ ಒಂದು ಆಕಾಂಕ್ಷೆಯಲ್ಲ. ಆರ್‌ಎಸ್‌ಎಸ್ ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರಯತ್ನಗಳ […]
ಹಿಂದೂ ಬಾಲಕಿಯ ಹುಟ್ಟುಹಬ್ಬದ ಪಾರ್ಟಿಯಲ್ಲಿ ಮುಸ್ಲಿಂ ಯುವಕರ ಭಾಗಿ: ಬಜರಂಗದಳದ ಕಾರ್ಯಕರ್ತರಿಂದ ಥಳಿತ

ಲಖನೌ: ಇಲ್ಲಿನ ಬರೇಲಿ ಪಟ್ಟಣದಲ್ಲಿ ಕೆಫೆಯೊಂದರಲ್ಲಿ ಹಿಂದೂ ಬಾಲಕಿಯೊಬ್ಬಳು ಆಯೋಜಿಸಿದ್ದ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಿದ್ದ ಮುಸಲ್ಮಾನ ಯುವಕರ ಮೇಲೆ ಬಜರಂಗದಳದ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ಶನಿವಾರ ರಾತ್ರಿ ವೇಳೆ ಸ್ಥಳೀಯ ನರ್ಸಿಂಗ್ ಕಾಲೇಜಿನ 8 ಮಂದಿ ಪಾರ್ಟಿ ನಡೆಸುತ್ತಿದ್ದರು. ಇದರಲ್ಲಿ ಇಬ್ಬರು ಮುಸಲ್ಮಾನ ಯುವಕರು ಭಾಗವಹಿಸಿದ್ದರು. ಈ ವೇಳೆ ಬಜರಂಗದಳದ ಡಜನ್‌ಗೂ ಅಧಿಕ ಮಂದಿ ನುಗ್ಗಿ ‘ಲವ್ ಜಿಹಾದ್‘ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಹಲ್ಲೆ ನಡೆಸಿದರು. ಈ ವೇಳೆ ಯುವಕರನ್ನು ಬಿಟ್ಟುಬಿಡುವಂತೆ ಬಾಲಕಿಯು ಮನವಿ ಮಾಡಿಕೊಂಡರೂ ಹಲ್ಲೆ ಮುಂದುವರಿಸಿ, […]
ಕೋಗಿಲು ಬಡಾವಣೆಗೆ ಕೇರಳ ನಿಯೋಗ ಬಂದಿದ್ದು ರಾಜಕಾರಣ ಮಾಡಲು, ಹಣವನ್ನೇನು ಕೊಟ್ಟಿಲ್ಲ; ಸಚಿವ ಜಮೀರ್ ಕಿಡಿ

ಬೆಂಗಳೂರು: ನಗರದ ಕೋಗಿಲು ಬಡಾವಣೆಯಲ್ಲಿ ಸುಮಾರು 200 ಅಕ್ರಮ ನಿವಾಸಿಗಳ ಮನೆಗಳನ್ನು ತೆರವುಗೊಳಿಸಿದ ವಿಚಾರ ಇದೀಗ ಕರ್ನಾಟಕ ಮತ್ತು ಕೇರಳ ಸರ್ಕಾರಗಳ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ತೆರವುಗೊಂಡ ಸ್ಥಳಕ್ಕೆ ಕೇರಳ ಸರ್ಕಾರದ ನಿಯೋಗ ಭೇಟಿ ನೀಡಿರುವುದಕ್ಕೆ ವಸತಿ ಸಚಿವ ಜಮೀರ್ ಅಹಮದ್ ಖಾನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ‘ಬಡವರ ಮೇಲೆ ಅಷ್ಟು ಪ್ರೀತಿ ಇದ್ದರೆ ಕೇರಳ ಸರ್ಕಾರವೇ ಅವರಿಗೆ ಹಣ ನೀಡಲಿ ಎಂದು ಟಾಂಗ್ ನೀಡಿದ್ದಾರೆ. ಸಚಿವ ಕೃಷ್ಣ ಬೈರೇಗೌಡ ಅವರು ಈ ಹಿಂದೆ ಹಲವು ಬಾರಿ […]
ಕೋಗಿಲು ಗ್ರಾಮ ಅಕ್ರಮ ಎಂದು ನೀವೇ ಹೇಳಿದ್ರಿ. ಹಾಗಾದ್ರೆ, ಈಗೇಕೆ ಸಮರ್ಥಿಸುತ್ತಿದ್ದೀರಿ; ಸಿಟಿ ರವಿ

ಚಿಕ್ಕಮಗಳೂರು: ಮುಖ್ಯಮಂತ್ರಿ -ಉಪಮುಖ್ಯಮಂತ್ರಿಗಳೇ ನಿಮ್ಮ ರಾಜಕೀಯದ ಸ್ವಾರ್ಥ – ತೆವಲಿಗೆ ಕನ್ನಡಿಗರ ಸ್ವಾಭಿಮಾನವನ್ನ ಒತ್ತೆ ಇಟ್ಟು ಸಾಯಿಸಬೇಡಿ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕರ್ನಾಟಕದಲ್ಲಿ ಕೇರಳ ದರ್ಬಾರ್ ಮಾಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಈ ವೇಳೆ ಮುಖ್ಯಮಂತ್ರಿಗಳೇ ನಿಮ್ಮ ರಾಜಕೀಯ ಸ್ವಾರ್ಥಕ್ಕೆ ಕರ್ನಾಟಕ-ಕನ್ನಡಿಗರ ಹಿತಾಸಕ್ತಿ-ಸ್ವಾಭಿಮಾನವನ್ನ ಒತ್ತೆ ಇಡಬೇಡಿ ಎಂದು ಸರ್ಕಾರಕ್ಕೆ ಕಿವಿ ಹಿಂಡಿದ್ದಾರೆ. ಮುಖ್ಯಮಂತ್ರಿಗಳೇ ಎಲ್ಲೋಯ್ತು ನಿಮ್ಮ ಸ್ವಾಭಿಮಾನ. ಸಿಎಂ-ಡಿಸಿಎಂ ಅವರೇ ಕೊಗಿಲು ಗ್ರಾಮ ಅಕ್ರಮ ಎಂದು ನೀವೇ ಹೇಳಿದ್ರಿ. […]
ಸೈಫುದ್ದೀನ್ ಕೊಲೆ ಪ್ರಕರಣ: ಮಹಿಳೆ ಸೇರಿ ಆರೋಪಿಗಳ ವಿರುದ್ಧ ಕೋಕಾ ಕುಣಿಕೆ!

ಉಡುಪಿ: ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡವೂರು ಎಂಬಲ್ಲಿ ಸೆ.27ರಂದು ನಡೆದ ಎಕೆಎಂಎಸ್ ಬಸ್ ಮಾಲಕ ಸೈಫ್ ಯಾನೆ ಸೈಯಿಪುದ್ದಿನ್ ಆತ್ರಾಡಿ ಕೊಲೆ ಪ್ರಕರಣದ ಆರು ಮಂದಿ ಆರೋಪಿಗಳ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯಿದೆ(ಸೆಕ್ಷನ್ ೩ ಕೋಕಾ ಆ್ಯಕ್ಟ್)ನಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಈ ಪ್ರಕರಣದ ಆರೋಪಿಗಳಾದ ಉಡುಪಿ ಮಿಷನ್ ಕಂಪೌಂಡ್ ಬಳಿ ನಿವಾಸಿ ಮಹಮದ್ ಫೈಸಲ್ ಖಾನ್, ಕರಂಬಳ್ಳಿಯ ಮೊಹಮದ್ ಶರೀಫ್, ಕೃಷ್ಣಾಪುರದ ಅಬ್ದುಲ್ ಶುಕುರ್, ಫೈಸಲ್ ಖಾನ್ ಪತ್ನಿ ರಿಧಾ […]
ಮಂಗಳೂರು | ತಂದೆ ಮತ್ತು ಅಪ್ರಾಪ್ತ ಮಗಳಿಗೆ ಸಂಘಪರಿವಾರದ ಕಾರ್ಯಕರ್ತರಿಂದ ಹಲ್ಲೆ: ಇಬ್ಬರು ವಶಕ್ಕೆ

ಮಂಗಳೂರು: ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಮಳಲಿ ನಾರ್ಲಪದವು ರಸ್ತೆಯಲ್ಲಿ ಶನಿವಾರ ಬೆಳಿಗ್ಗೆ ಬೀಫ್ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ತಡೆದು ಹಲ್ಲೆ ನಡೆಸಿದ ಆರೋಪದ ಮೇಲೆ ಇಬ್ಬರು ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಘಟನೆಯಲ್ಲಿ 11 ವರ್ಷದ ಬಾಲಕಿಯೊಬ್ಬಳು ಗಾಯಗೊಂಡಿದ್ದಾಳೆ. ಶನಿವಾರ ಬೆಳಿಗ್ಗೆ ಸುಮಾರು 10 ಗಂಟೆಯ ವೇಳೆಗೆ ಅಬ್ದುಲ್ ಸತ್ತಾರ್ ಮುಲ್ಲರ್ ಪಟ್ನ ಎಂಬುವವರು ತಮ್ಮ 11 ವರ್ಷದ ಮಗಳೊಂದಿಗೆ ಬೈಕ್‌ನಲ್ಲಿ ಸುಮಾರು 19 ಕೆಜಿ ದನದ ಮಾಂಸವನ್ನು ಯಾವುದೇ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದರು. ಮಳಲಿ […]
ನಮಾಜ್ ಮಾಡ್ತಿದ್ದ ಪ್ಯಾಲೆಸ್ತೀನ್ ವ್ಯಕ್ತಿಗೆ ವಾಹನ ಡಿಕ್ಕಿ ಹೊಡೆಸಿದ ಇಸ್ರೇಲ್ ಸೈನಿಕ

ಜೆರುಸಲೇಮ್: ರಸ್ತೆ ಬದಿಯಲ್ಲಿ ಕುಳಿತು ನಮಾಜ್ ಮಾಡುತ್ತಿದ್ದ ಪ್ಯಾಲೆಸ್ತೀನ್ ವ್ಯಕ್ತಿಗೆ ಇಸ್ರೇಲಿ ಸೈನಿಕನೊಬ್ಬ ವಾಹನದಿಂದ ಡಿಕ್ಕಿ ಹೊಡೆಸಿರುವ ಘಟನೆ ನಡೆದಿದೆ. ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆಕ್ರಮಿತ ಪಶ್ಚಿಮ ದಂಡೆಯಲ್ಲಿ ರಸ್ತೆಯ ಪಕ್ಕದಲ್ಲಿ ಪ್ರಾರ್ಥನೆ ಮಾಡುತ್ತಿದ್ದ ಪ್ಯಾಲೆಸ್ತೀನಿಯನ್ ವ್ಯಕ್ತಿಗೆ, ರೈಫಲ್ ಹಿಡಿದುಕೊಂಡು ಇಸ್ರೇಲಿ ಮೀಸಲು ಪಡೆಯ ಸೈನಿಕನೊಬ್ಬ ಎಟಿವಿ ವಾಹವನ್ನು ಡಿಕ್ಕಿ ಹೊಡೆದಿದ್ದಾನೆ ಎಂದು ಇಸ್ರೇಲ್ ಸೇನೆ ತಿಳಿಸಿದೆ. ಶಸ್ತ್ರಸಜ್ಜಿತ ಸೈನಿಕ ಪ್ಯಾಲೆಸ್ತೀನಿಯನ್ ವ್ಯಕ್ತಿಗೆ ವಾಹನದಿಂದ ಡಿಕ್ಕಿ ಹೊಡೆಸಿದ್ದಾರೆ. ನಂತರ ಇಲ್ಲಿಂದ ಹೊರಡುವಂತೆ ಸೂಚಿಸಿದ್ದಾನೆ. […]