Flash News

ಹಿಂದೂ ಹುಡುಗಿಗೆ ಬುರ್ಖಾ ತೊಡಿಸಿದ ಮುಸ್ಲಿಂ ಸ್ನೇಹಿತೆಯರು!

ಮೊರಾದಾಬಾದ್: ಮುಸ್ಲಿಂ ಸ್ನೇಹಿತೆಯರ ಗುಂಪೊಂದು ಹಿಂದೂ ಹುಡುಗಿಗೆ ಬುರ್ಖಾ ತೊಡಿಸಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ. ಈ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್ ನ ಬಿಲಾರಿ ಪ್ರದೇಶದ ಸಾಹುಕುಂಜ್ ಕಾಲೋನಿಯಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಈ ವಿಡಿಯೋ ಇದೀಗ ವ್ಯಾಪಕ ಸಂಚಲನ ಮೂಡಿಸಿದೆ. ಪ್ರಸ್ತುತ ವೈರಲ್ ಆಗಿರುವ ವಿಡಿಯೋದಲ್ಲಿ ಬುರ್ಖಾ ಧರಿಸಿದ ಕೆಲವು ಹುಡುಗಿಯರು ಸರಳ ಉಡುಪಿನಲ್ಲಿರುವ ಹಿಂದೂ ಹುಡುಗಿಯನ್ನು ಬುರ್ಖಾ ಧರಿಸಲು ಒತ್ತಾಯಿಸುತ್ತಿರುವುದು ಕಂಡುಬರುತ್ತದೆ. ಇದಕ್ಕೆ ಹುಡುಗಿ ನಿರಾಕರಿಸಿದಾಗ, ಅವರು “ಇದನ್ನು ಧರಿಸು, ಚೆನ್ನಾಗಿ […]

ಪುತ್ತೂರು | ಉಪ್ಪಳಿಗೆಯಲ್ಲಿ ದ್ವೇಷ ಭಾಷಣ ಪ್ರಕರಣ; ಸಂಘಟಕ ಚರಣ್’ಗೆ ಜಾಮೀನು

ಪುತ್ತೂರು: ಉಪ್ಪಳಿಗೆಯಲ್ಲಿ ಕೆಲ ದಿನಗಳ ಹಿಂದೆ ನಡೆದ ದೀಪೋತ್ಸವ ಕಾರ್ಯಕ್ರಮದಲ್ಲಿದ್ವೇಷ ಭಾಷಣ ಮಾಡಿರುವ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸಂಘಟಕ ಚರಣ್ ಗೆ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ದೀಪಾವಳಿ ಹಬ್ಬದ ಪ್ರಯುಕ್ತ ಉಪ್ಪಳಿಗೆಯಲ್ಲಿ ಆಯೋಜಿಸಲಾಗಿದ್ದ ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಡಾ| ಕಲ್ಲಡ್ಕ ಪ್ರಭಾಕರ ಭಟ್ ಅವರು ದ್ವೇಷದ ಮತ್ತು ಮಹಿಳೆಯರ ವಿರುದ್ಧ ಅವಮಾನಕಾರಿಯಾದ ಭಾಷಣ ಮಾಡಿದ್ದರೆಂದು ಆರೋಪಿಸಿ ಜನವಾದಿ ಮಹಿಳಾ ಸಂಘಟನೆಯ ಈಶ್ವರಿ ಪದ್ಮುಂಜ ಅವರು ಪುತ್ತೂರು ಗ್ರಾಮಾಂತರ […]

10 ವರ್ಷದ ಕಿರಿಯ ನಟಿಯನ್ನು ಮದುವೆ ಆಗೋಕೆ ರೆಡಿಯಾದ ಸೂಪರ್‌ಸ್ಟಾರ್ ಧನುಷ್?

ತಮಿಳು ಸೂಪರ್‌ಸ್ಟಾರ್ ಧನುಷ್ ಮತ್ತು ಬಾಲಿವುಡ್-ಸೌತ್ ನಟಿ ಮೃಣಾಲ್ ಠಾಕೂರ್ ಮದುವೆಯಾಗಲಿದ್ದಾರೆ. ಇದನ್ನು ನಾವು ಹೇಳುತ್ತಿಲ್ಲ, ಬದಲಿಗೆ ಮಾಧ್ಯಮ ವರದಿಗಳು ಮೂಲಗಳನ್ನು ಉಲ್ಲೇಖಿಸಿ ಈ ಬಗ್ಗೆ ಹೇಳುತ್ತಿವೆ. ಅಷ್ಟೇ ಅಲ್ಲ, ಅವರ ಮದುವೆ ದಿನಾಂಕವನ್ನೂ ವರದಿಗಳಲ್ಲಿ ತಿಳಿಸಲಾಗಿದೆ. ವರದಿಗಳ ಪ್ರಕಾರ, 42 ವರ್ಷದ ಧನುಷ್ ಮತ್ತು 33 ವರ್ಷದ ಮೃಣಾಲ್ ಠಾಕೂರ್ ಫೆಬ್ರವರಿ 14, 2026 ರಂದು ಮದುವೆಯಾಗಬಹುದು. ಇದು ಆಪ್ತರು ಮತ್ತು ಸ್ನೇಹಿತರು ಮಾತ್ರ ಭಾಗವಹಿಸುವ ಖಾಸಗಿ ಸಮಾರಂಭವಾಗಿರಲಿದೆ ಎನ್ನಲಾಗಿದೆ. ‘ಸನ್ ಆಫ್ ಸರ್ದಾರ್ 2’ […]

ಕೊನೆಗೂ ಡೊನಾಲ್ಡ್​ ಟ್ರಂಪ್​ಗೆ ಸಿಕ್ಕೇ ಬಿಡ್ತು ನೊಬೆಲ್ ಶಾಂತಿ ಪುರಸ್ಕಾರ

ವಾಷಿಂಗ್ಟನ್: ಕೊನೆಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಗೆ ನೊಬೆಲ್ ಶಾಂತಿ ಪುರಸ್ಕಾರ ಸಿಕ್ಕಿಬಿಟ್ಟಿದೆ. ವೆನೆಜುವೆಲಾದ ವಿರೋಧ ಪಕ್ಷದ ನಾಯಕಿ ಮಾರಿಯಾ ಕೊರಿನಾ ಮಚಾದೊ ಅವರು ತಮ್ಮ ನೊಬೆಲ್ ಶಾಂತಿ ಪುರಸ್ಕಾರವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಗೌರವ ಸೂಚಕವಾಗಿ ಪ್ರದಾನ ಮಾಡಿದ್ದಾರೆ. ಮಚಾದೊ ಅವರು ಟ್ರಂಪ್ ಅವರನ್ನು ಶ್ವೇತಭವನದಲ್ಲಿ ಭೇಟಿಯಾದರು. ವಾಷಿಂಗ್ಟನ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಚಾದೊ, ಅಧ್ಯಕ್ಷ ಟ್ರಂಪ್‌ಗೆ ಪುರಸ್ಕಾರ ಪ್ರಧಾನ ಮಾಡಿರುವುದಾಗಿ ಹೇಳಿದರು. ಟ್ರಂಪ್ ಅದನ್ನು ಸ್ವೀಕರಿಸಿದ್ದಾರೆಯೇ ಎಂದು ಅವರು ಹೇಳಲಿಲ್ಲ. ಈ […]

ಸನಾತನ ಹಿಂದೂ ಧರ್ಮದ ಪ್ರಚಾರ ನಿಲ್ಲಿಸಲು ನಿರ್ಧರಿಸಿದ್ದೇನೆ: ಹರ್ಷ ರಿಚಾರಿಯಾ

ಜಬಲ್ಪುರ: ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭ ಮೇಳದಲ್ಲಿ ಕಾಣಿಸಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಪ್ರಭಾವಿ ಮಾಡೆಲ್ ಮತ್ತು ವೃತ್ತಿಪರ ನಿರೂಪಕಿ ಹರ್ಷ ರಿಚಾರಿಯಾ ‘ಸನಾತನ ಧರ್ಮದ ಪ್ರಚಾರವನ್ನು ನಿಲ್ಲಿಸಲು ನಿರ್ಧರಿಸಿದ್ದೇನೆ’ ಎಂದು ಹೇಳಿದ್ದಾರೆ. “ಎಲ್ಲರೂ ಹಿಂದೂ ರಾಷ್ಟ್ರದ ಬಗ್ಗೆ ಮಾತನಾಡುತ್ತಾರೆ. ಆದರೆ ಇದನ್ನು ಪ್ರಚಾರ ಮಾಡಲು ಮುಂದೆ ಬರುವ ಯಾವುದೇ ಯುವಕನಿಗೆ ವಿರೋಧ ವ್ಯಕ್ತವಾಗುತ್ತದೆ” ಎಂದು 31 ರ ಹರೆಯದ ಹರ್ಷ ರಿಚಾರಿಯಾ ಅವರು ಜಬಲ್ಪುರದಲ್ಲಿ ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ನರ್ಮದಾ ನದಿಯಲ್ಲಿ ಪವಿತ್ರ ಸ್ನಾನ ಮಾಡಿದ […]

ಬೆಳ್ತಂಗಡಿ | ಬಾವಿಗೆ ಬಿದ್ದಾಗ ಜೀವಂತವಿದ್ದ ಬಾಲಕ, ಕೊಲೆಯಾದ ಶಂಕೆಯಲ್ಲಿ ಪ್ರಕರಣ ದಾಖಲು; ಪೋಸ್ಟ್ ಮಾರ್ಟಮ್ ವರದಿಯಲ್ಲಿ ಏನಿದೆ?

ಮಂಗಳೂರು: ಬೆಳ್ತಂಗಡಿ ಠಾಣೆ ವ್ಯಾಪ್ತಿಯ  ಓಡಿಲ್ನಾಳ ಗ್ರಾಮದ ಬಾಲಕ ಸುಮಂತ್‌ (15) ನಿಗೂಢ ಸಾವಿನ ಪ್ರಕರಣದಲ್ಲಿ ಪೋಸ್ಟ್ ಮಾರ್ಟಮ್ ವರದಿ ಆಧರಿಸಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದು ಬೆಳ್ತಂಗಡಿ ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆಗೆ ನಾಲ್ಕು ಪೊಲೀಸ್ ತಂಡಗಳನ್ನು ರಚಿಸಲಾಗಿದೆ.  ಶವದ ಪೋಸ್ಟ್ ಮಾರ್ಟಮ್ ಪರೀಕ್ಷೆಯ ಪ್ರಾಥಮಿಕ ವರದಿಯ ಪ್ರಕಾರ, ಬಾಲಕ ಕೆರೆಯಲ್ಲಿ ಮುಳುಗುವ ಸಮಯದಲ್ಲಿ ಜೀವಂತನಾಗಿದ್ದ ಎಂಬ ಮಾಹಿತಿ ಇದೆ.‌ ಅಲ್ಲದೆ, ನೀರಿನಲ್ಲಿ ಮುಳುಗಿದ್ದೇ ತಕ್ಷಣದ ಸಾವಿಗೆ ಕಾರಣವಾಗಿರುತ್ತದೆ ಎಂದು ತಿಳಿಸಿದೆ. ತಲೆಯ ಮೇಲಿರುವ ಗಾಯಗಳು ಮಂದ ಬಲದ […]

ಜೈಲೂಟ ತಿಂದರೂ ಬಿಡದ ಹಳೇ ಚಾಳಿ: 2 ತಿಂಗಳ ಹಿಂದಷ್ಟೇ ಬಿಡುಗಡೆಯಾಗಿ ಮತ್ತೆ ಡ್ರಗ್‌ ದಂಧೆಗಿಳಿದ ಯುವತಿಯ ಬಂಧನ

ಮಾದಕ ವಸ್ತುಗಳ ಮಾರಾಟ ಜಾಲದಲ್ಲಿ ಒಮ್ಮೆ ಜೈಲಿಗೆ ಹೋಗಿ ಬಂದರೂ ಬುದ್ಧಿ ಕಲಿಯದ ಮಹಿಳೆಯನ್ನು ಮತ್ತೆ ಪೊಲೀಸರು ಬಂಧಿಸಿದ್ದಾರೆ. ಮಾದಕ ದ್ರವ್ಯಗಳ ಮಾರಾಟ ಮಾಡುವ ಪ್ರಕರಣದಲ್ಲಿ ಈ ಹಿಂದೆ ಗೋವಾದಲ್ಲಿ ಜೈಲು ಪಾಲಾಗಿದ್ದ ಮಹಿಳೆ 2 ತಿಂಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಗೊಂಡಿದ್ದಳು. ಆದರೆ ಜೈಲೂಟ ತಿಂದು ಬಂದರೂ ಆಕೆಯ ಬುದ್ಧಿ ಬದಲಾಗಿರಲಿಲ್ಲ, ಮತ್ತೆ ಅದೇ ದಂಧೆ ಶುರು ಮಾಡಿದ ಆಕೆಯನ್ನು ಪೊಲೀಸರು ಮತ್ತೆ ಬಂಧಿಸಿ ಜೈಲಿಗಟ್ಟಿದ್ದು, ಆಕೆಯ ಬಳಿ ಇದ್ದ ಮಾರಕ ಸಿಂಥೆಟಿಕ್ ಡ್ರಗ್ ಮೆಥಾಂಫೆಟಮೈನ್ ಡ್ರಗ್ […]

ಬಿಜೆಪಿಗೆ ಮತ ಹಾಕಿ ಸಿಪಿಎಂ ಸದಸ್ಯನನ್ನು ಸೋಲಿಸಿದ ಮುಸ್ಲಿಂ ಲೀಗ್ ಸದಸ್ಯರು

ಕಾಸರಗೋಡು: ಕಾಸರಗೋಡು ಪೈವಳಿಕೆ ಪಂಚಾಯತ್ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಚುನಾವಣೆಯಲ್ಲಿ ಮುಸ್ಲಿಂ ಲೀಗ್ ಸದಸ್ಯರು ಬಿಜೆಪಿಗೆ ಮತ ಚಲಾಯಿಸಿದ್ದಾರೆ. ಕಾಡಂಕೋಡಿ ವಾರ್ಡ್‌ನಿಂದ ಗೆದ್ದ ಮೈಮುನತುಲ್ ಮಿಶ್ರಿಯಾ ಬಿಜೆಪಿ ಸದಸ್ಯರಿಗೆ ಮತ ಚಲಾಯಿಸಿದ್ದಾರೆ. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷೆಯಾಗಿ ಬಿಜೆಪಿಯ ಸುಮನಾ ಜಿ ಭಟ್ ಗೆಲುವು ಸಾಧಿಸಿದ್ದಾರೆ. ಸಿಪಿಎಂನ ದಿನೇಶ್ವರಿ ನಾಗೇಶ್ ವಿರುದ್ಧ ಸುಮನಾ ಜಿ ಭಟ್ ಗೆಲುವು ಸಾಧಿಸಿದರು. ಸುಮನಾ ಭಟ್ ಮೂರು ಮತಗಳನ್ನು ಮತ್ತು ದಿನೇಶ್ವರಿ ನಾಗೇಶ್ ಎರಡು ಮತಗಳನ್ನು ಪಡೆದರು. […]

ಅಕ್ರಮವಾಸಿಗಳೆಂದು ಅನುಮಾನಿಸಿ ದಾಳಿ ನಡೆಸಿದರೆ ಕಾನೂನು ಕ್ರಮ: ಮಂಗಳೂರು ಪೊಲೀಸ್ ಕಮಿಷನರ್ ಎಚ್ಚರಿಕೆ

ಮಂಗಳೂರು: ಅಕ್ರಮವಾಗಿ ವಾಸಿಸುವ ಯಾರನ್ನಾದರೂ ಕಾನೂನುಬಾಹಿರವಾಗಿ ವಿಚಾರಣೆಗೆ ಒಳಪಡಿಸಲಾಗುತ್ತದೆ ಮತ್ತು ಕಾನೂನು ಪ್ರಕಾರ ಗಡೀಪಾರು ಮಾಡಲಾಗುತ್ತದೆ. ಅದೇ ವೇಳೆ ಯಾರ ಮೇಲಾದರೂ ಅನುಮಾನದ ಆಧಾರದ ಮೇಲೆ ದಾಳಿ ನಡೆಸುವವರ ವಿರುದ್ಧವೂ ಕಾನೂನು ಕ್ರಮ ವಹಿಸಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ. “ನಗರದ ರಾವ್ ಆಂಡ್ ರಾವ್ ಸರ್ಕಲ್ ರಿಕ್ಷಾ ಸ್ಟ್ಯಾಂಡ್ ಹಿಂಬದಿ ‘ಬಂಗಾಳಿ ಕ್ಯಾಂಟೀನ್’ ಅಂತ ಬೋರ್ಡ್ ಹಾಕಿ ಅದರ ಅಕ್ಕಪಕ್ಕ ಕೆಲವು ಅನಧಿಕೃತ ಅಂಗಡಿ ಇಟ್ಟು ವ್ಯಾಪಾರ […]

ಖಾರದ ಪುಡಿ ಎರಚಿ ಮೊಹಮ್ಮದ್ ಶಬ್ಬೀರ್ ಭೀಕರ ಹತ್ಯೆ

ಬೆಂಗಳೂರು: ಹಳೇ ದ್ವೇಷದ ಹಿನ್ನೆಲೆ ನಟೋರಿಯಸ್ ರೌಡಿ ಶೀಟರ್​​ ಒಬ್ಬನನ್ನು ಅಟ್ಟಾಡಿಸಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮಂಗಮ್ಮನಪಾಳ್ಯ ನಿವಾಸಿ 28 ವರ್ಷದ ಮೊಹಮ್ಮದ್ ಶಬ್ಬೀರ್ ಎಂಬಾತನನ್ನು 6 ಜನ ದುಷ್ಕರ್ಮಿಗಳ ತಂಡ ನಡು ರಸ್ತೆಯಲ್ಲಿಯೇ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದೆ. ಸೋಮವಾರ ರಾತ್ರಿ ತಮ್ಮ ಸ್ನೇಹಿತನನ್ನ ಮಾತಾಡಿಸಿ ಮೊಹಮ್ಮದ್ ಶಬ್ಬೀರ್ ಸ್ನೇಹಿತರ ಜೊತೆ ಆಟೋದಲ್ಲಿ ವಾಪಸ್ ಆಗುತ್ತಿದ್ದನು. ಈ ವೇಳೆ ಮಂಗಮ್ಮನಪಾಳ್ಯ ಮುಖ್ಯ ರಸ್ತೆಯ ತಿರುವಿನಲ್ಲಿ ಆರು ಮಂದಿ ದುಷ್ಕರ್ಮಿಗಳು ಖಾರದ ಪುಡಿ […]