Flash News

Mangaluru | ಸುಹಾಸ್ ಶೆಟ್ಟಿ ರೀತಿ ಟ್ರೀಟ್ಮೆಂಟ್: ಮುಸ್ಲಿಂ ಪೇಜ್ ಹೆಸರಲ್ಲಿ ಪ್ರಚೋದನಕಾರಿ ಪೋಸ್ಟ್ ; FIR ದಾಖಲು; ಆರೋಪಿಗಳಿಗೆ ಶೋಧ

ಮಂಗಳೂರು: ಬಜಪೆಯಲ್ಲಿ ಗೋಮಾಂಸ ಒಯ್ಯುತ್ತಿದ್ದ ತಂದೆ, ಮಗಳನ್ನು ತಡೆದ ಪ್ರಕರಣ ಸಂಬಂಧಿಸಿ ಇಬ್ಬರು ಯುವಕರ ಫೋಟೊ ಹಾಕಿ ಮಿತಿಮೀರುತ್ತಿರುವ ಸಂಘಿಗಳ ಅಟ್ಟಹಾಸ ಎಂದು ಬರೆದು ಪ್ರಚೋದನಕಾರಿ ಸಂದೇಶ ಹಾಕಿದ ಬಗ್ಗೆ ಮಂಗಳೂರು ಪೊಲೀಸರು ಸ್ವಯಂಪ್ರೇರಿತ ಕೇಸು ದಾಖಲಿಸಿದ್ದಾರೆ. ಬಜಪೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಡಿ. 27 ರಂದು ನಾರ್ಲಪದವು ಎಂಬಲ್ಲಿ ಅಬ್ದುಲ್ ಸತ್ತಾರ್ ಎಂಬಾತ ತನ್ನ ಮಗಳ ಜೊತೆಗೆ ಸ್ಕೂಟರ್ ನಲ್ಲಿ ಕೂರಿಸಿ ಅಕ್ರಮವಾಗಿ ದನದ ಮಾಂಸ ಸಾಗಾಟ ಮಾಡುತ್ತಿದ್ದ ವೇಳೆ, ಸುಮಿತ್ ಮತ್ತು ರಜತ್ ನಾಯಕ್ […]

ರಂಜಿತಾಳನ್ನು ಕೊಂದು ಎಸ್ಕೇಪ್ ಆಗಿದ್ದ ರಫೀಕ್ ಶವ ಕಾಡಿನಲ್ಲಿ ಪತ್ತೆ

ಹುಬ್ಬಳ್ಳಿ: ಯಲ್ಲಾಪುರದಲ್ಲಿ ಮಹಿಳೆಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮಹಮ್ಮದ್ ರಫೀಕ್ ಇಮಾಮಸಾಬ್ (30) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಯಲ್ಲಾಪುರದ ರಾಮಪುರ ಕಾಡಿನಲ್ಲಿ ಮರವೊಂದಕ್ಕೆ ನೇಣು ಬಿಗಿದುಕೊಂಡಿದ್ದಾನೆ. ಮೃತ ರಫೀಲ್ ಕಾಳಮ್ಮನಗರದ ನಿವಾಸಿಯಾಗಿದ್ದನು. ಶನಿವಾರದಿಂದ ಆರೋಪಿ ರಫೀಕ್ ಬಂಧನಕ್ಕಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಇದೀಗ ರಫೀಕ್ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಶನಿವಾರ ಆಶ್ರಯ ನಗರ ನಿವಾಸಿ ರಂಜಿತಾ ಮಲ್ಲಪ್ಪ ಬನ್ಸೊಡೆ (30) ಎಂಬ ಮಹಿಳೆಯ ಕೊ*ಲೆಯಾಗಿತ್ತು. ರಂಜಿತಾ ಕೊಲೆ ಬಳಿಕ ಮಹಮ್ಮದ್ ರಫೀಕ್ ಎಸ್ಕೇಪ್ ಆಗಿದ್ದನು. ಕೊಲೆಯಾದ […]

ರಂಜಿತಾಳ ಕುತ್ತಿಗೆಗೆ ಚಾಕು ಇರಿದು ಕೊಂದ ಪ್ರಿಯಕರ ರಫೀಕ್!: ನಾಳೆ ಯಲ್ಲಾಪುರ ಬಂದ್‌ಗೆ ಕರೆ

ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಮತಿಹೀನ ಕೃತ್ಯವೊಂದು ನಡೆದಿದ್ದು, ಚಾಕು ಇರಿತಕ್ಕೊಳಗಾಗಿದ್ದ ಕಾಳಮ್ಮ ನಗರದ ರಂಜಿತಾ ಎಂಬ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಘಟನೆಯು ಜಿಲ್ಲೆಯಾದ್ಯಂತ ಭಾರಿ ಚರ್ಚೆ ಹಾಗೂ ಆಕ್ರೋಶಕ್ಕೆ ಕಾರಣವಾಗಿದ್ದು, ಹಿಂದೂ ಸಂಘಟನೆಗಳು ಯಲ್ಲಾಪುರ ಬಂದ್‌ಗೆ ಕರೆ ನೀಡಿವೆ. ಆರೋಪಿ ರಫೀಕ್ ಎಂಬ ವ್ಯಕ್ತಿ ರಂಜಿತಾ ಎಂಬುವವರ ಕುತ್ತಿಗೆಗೆ ಚಾಕು ಹಾಕಿ ಭೀಕರವಾಗಿ ಹಲ್ಲೆ ನಡೆಸಿದ್ದ. ಇದರಿಂದಾಗಿ ಆಕೆಯ ಶ್ವಾಸಕೋಶಕ್ಕೆ ತೀವ್ರ ಗಾಯವಾಗಿತ್ತು. ತಕ್ಷಣವೇ ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಬಳಿಕ […]

ಕೆಟ್ಟ ದೃಷ್ಟಿಯಿಂದ ‘ಮುಸ್ಲಿಂ ಮಹಿಳೆ’ ಮುಟ್ಟುವವರ ಕೈ ಕತ್ತರಿಸುತ್ತೇನೆ: AIMIM ನಾಯಕ ಇಮ್ತೀಯಾಜ್ ಜಲೀಲ್!

ಜಲ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಮುಸ್ಲಿಂ ಮಹಿಳೆಯೊಬ್ಬರ ‘ಹಿಜಾಬ್’ ಎಳೆದ ವಿವಾದದ ನಡುವೆ ಮುಸ್ಲಿಂ ಮಹಿಳೆಯರನ್ನು ಕೆಟ್ಟ ಉದ್ದೇಶದಿಂದ ಮುಟ್ಟುವ ಯಾವುದೇ ವ್ಯಕ್ತಿಯ ಕೈಯನ್ನು ಕತ್ತರಿಸುವುದಾಗಿ AIMIM ನಾಯಕ ಇಮ್ತೀಯಾಜ್ ಜಲೀಲ್ ಹಾಕಿದ್ದಾರೆ. ಶುಕ್ರವಾರ ಮಹಾರಾಷ್ಟ್ರದ ಜಲ್ನಾ ನಗರದಲ್ಲಿ ರ‍್ಯಾಲಿಯಲ್ಲಿ ಮಾತನಾಡಿದ ಜಲೀಲ್, ಸೋ ಕಾಲ್ಡ್ ಜಾತ್ಯತೀತ ಪಕ್ಷಗಳು ಗೂಂಡಾಗಳು ಮತ್ತು ಕ್ರಿಮಿನಲ್ ಗಳ ಪರವಾಗಿವೆ. ಆದರೆ ಮುಸ್ಲಿಮರನ್ನು ಬೆಂಬಲಿಸಲು ಹಿಂಜರಿಯುತ್ತವೆ ಎಂದು ಆರೋಪಿಸುವ ಮೂಲಕ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ನಿತೀಶ್ ಕುಮಾರ್ ಅವರ […]

ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್: ಪ್ರಮೋದ್ ಮುತಾಲಿಕ್

ಬೆಂಗಳೂರು: ಕಾಂಗ್ರೆಸ್ ನಾಯಕ ಹಾಗೂ ಸಚಿವ ಜಮೀರ್ ಅಹಮದ್ ಅವರು ಕೋಗಿಲು ನಿರಾಶ್ರಿತರಿಗೆ ಮನೆಗಳನ್ನು ನೀಡುವ ಪ್ರಸ್ತಾಪವನ್ನು ಮುತಾಲಿಕ್ ತೀವ್ರವಾಗಿ ಖಂಡಿಸಿದ್ದಾರೆ. “ಕೋಗಿಲು ನಗರದಲ್ಲಿ ಶುದ್ಧ ಬಾಂಗ್ಲಾದೇಶಿ ಮುಸ್ಲಿಂರ ವಾಸಸ್ಥಾನವಿದೆ. ಅಲ್ಲಿ ರೋಹಿಂಗ್ಯಾಗಳಿದ್ದಾರೆ. ಕಾಂಗ್ರೆಸ್ ನಾಯಕರು ಅವರಿಗೆ ತಕ್ಷಣವೇ ಹೇಗೆ ಸ್ಪಂದಿಸುತ್ತಾರೆ?” ಎಂದು ಪ್ರಶ್ನಿಸಿದ್ದಾರೆ. ಜಮೀರ್ ಅಹಮದ್ ಅವರನ್ನು ಎರಡನೆಯ ಟಿಪ್ಪು ಸುಲ್ತಾನ್ ಎಂದ ಮುತಾಲಿಕ್, ಅವರು ಬಾಂಗ್ಲಾದೇಶಿ ಮುಸ್ಲಿಮರಿಗೆ ಮನೆ ಕೊಡುವುದಾಗಿ ಹೇಳಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ, ಸ್ಥಳೀಯರು ಮನೆಗಳಿಲ್ಲದೆ ಏಳರಿಂದ ಎಂಟು ವರ್ಷಗಳಿಂದ ಚಪ್ಪರದಲ್ಲಿ ಟೆಂಟ್ […]

ಹೆಲ್ಮೆಟ್ ಮೇಲೆ ‘ಪ್ಯಾಲೆಸ್ತೀನ್ ಧ್ವಜ’ ಧರಿಸಿದ ಭಾರತೀಯ ಕ್ರಿಕೆಟಿಗ: ತನಿಖೆ ಆರಂಭಿಸಿದ ಪೊಲೀಸರು!

ಕ್ರಿಕೆಟಿಗರು ತಮ್ಮ ಹೆಲ್ಮೆಟ್‌ ಗಳ ಮೇಲೆ ತಾವು ಪ್ರತಿನಿಧಿಸುವ ತಂಡ ಅಥವಾ ದೇಶದ ಚಿಹ್ನೆಗಳನ್ನು ಧರಿಸುವುದು ಸಾಮಾನ್ಯ. ಆದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ದೇಶೀಯ ಲೀಗ್ ಪಂದ್ಯದ ವೇಳೆ ಕ್ರಿಕೆಟಿಗನೊಬ್ಬ ಪ್ಯಾಲೆಸ್ತೀನ್ ಧ್ವಜ ಬಳಸಿರುವುದು ವಿವಾದಕ್ಕೆ ಕಾರಣವಾಗಿದೆ. ಜಮ್ಮು ಮತ್ತು ಕಾಶ್ಮೀರ ಚಾಂಪಿಯನ್ಸ್ ಲೀಗ್‌ ನಲ್ಲಿ ಪಂದ್ಯ ಆಡುವಾಗ ಫರ್ಖಾನ್ ಭಟ್ ಎಂಬ ಆಟಗಾರ ತಮ್ಮ ಹೆಲ್ಮೆಟ್‌ನಲ್ಲಿ ಪ್ಯಾಲೆಸ್ತೀನ್ ಧ್ವಜ ಹಾಕಿಕೊಂಡಿರುವುದು ಬೆಳಕಿಗೆ ಬಂದಿದೆ. ಬುಧವಾರ ಜಮ್ಮು ಟ್ರೈಲ್‌ಬ್ಲೇಜರ್ಸ್ ವಿರುದ್ಧದ ಪಂದ್ಯದಲ್ಲಿ ಜೆಎಕೆ11 ಕಿಂಗ್ಸ್ ಪರ […]

ಶಾರುಖ್ ಖಾನ್ ನಾಲಿಗೆ ‘ಕತ್ತರಿಸಿದರೆ’ 1 ಲಕ್ಷ ರೂ. ಬಹುಮಾನ: ಹಿಂದೂ ಮಹಾಸಭಾ ನಾಯಕಿ ಘೋಷಣೆ!

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಆವೃತ್ತಿಗೆ ಬಾಂಗ್ಲಾದೇಶದ ಕ್ರಿಕೆಟಿಗನನ್ನು ಖರೀದಿಸಿದ್ದಕ್ಕಾಗಿ ಬಿಜೆಪಿ, ಹಿಂದುತ್ವ ನಾಯಕರು ಬಾಲಿವುಡ್ ನಟ ಶಾರುಖ್ ಖಾನ್ ಅವರನ್ನು ಗುರಿಯಾಗಿಸಿಕೊಂಡಿದ್ದಾರೆ. ಬಿಜೆಪಿಯ ಹಿರಿಯ ನಾಯಕ, ಶಾಸಕ ಸಂಗೀತ್ ಸೋಮ್ ಇತ್ತೀಚೆಗೆ ಶಾರುಖ್ ಖಾನ್ ಅವರನ್ನು ದೇಶದ್ರೋಹಿ ಎಂದು ಕರೆದಿದ್ದಾರೆ. ಈ ನಡುವೆ ಅಖಿಲ ಭಾರತ ಹಿಂದೂ ಮಹಾಸಭಾದ ಆಗ್ರಾ ಜಿಲ್ಲಾ ಘಟಕದ ಅಧ್ಯಕ್ಷೆ ಮೀರಾ ಠಾಕೂರ್‌ “ಶಾರುಖ್ ಖಾನ್ ನಾಲಿಗೆಯನ್ನು ಕತ್ತರಿಸಿದವರಿಗೆ ಒಂದು ಲಕ್ಷ ರೂ. ನಗದು ಬಹುಮಾನ” ನೀಡುವುದಾಗಿ ವಿವಾದಾತ್ಮಕ ಘೋಷಣೆಯನ್ನು […]

ಬಳ್ಳಾರಿ ಗಲಭೆಗೆ ಎಸ್ಪಿ ತಲೆದಂಡ: ಅಧಿಕಾರ ಸ್ವೀಕರಿಸಿದ ಒಂದೇ ದಿನಕ್ಕೆ ಪವನ್ ನೆಜ್ಜೂರು ಸಸ್ಪೆಂಡ್!

ಬಳ್ಳಾರಿ: ಹೊಸ ವರ್ಷ ದಿನದ ರಾತ್ರಿ ಬಳ್ಳಾರಿಯಲ್ಲಿ ನಡೆದ ಫೈರಿಂಗ್​ನಲ್ಲಿ ಕಾಂಗ್ರೆಸ್​ ಕಾರ್ಯಕರ್ತ ರಾಜಶೇಖರ್ ಬಲಿ ಆಗಿದ್ದಾನೆ. ಕಾಂಗ್ರೆಸ್​ ಶಾಸಕ ಭರತ್ ರೆಡ್ಡಿ ಹಾಗೂ ಗಾಲಿ ಜನಾರ್ದನ ರೆಡ್ಡಿ ಬೆಂಬಲಿಗರ ನಡುವೆ ಬರೀ ಟ್ವೆಂಟಿ ಬೈ ಟ್ವೆಂಟಿ ಬ್ಯಾನರ್, ಇಡೀ ಜಿಲ್ಲೆಯಲ್ಲಿ ಸಂಘರ್ಷವನ್ನೇ ಸೃಷ್ಟಿಸಿದೆ. ಕಲ್ಲು ತೂರಾಟ, ಖಾರದು ಪುಡಿ ಎರೆಚಾಟ, ಬಡಿದಾಟ ನಡೆದಿದೆ. ಸಾಲದಕ್ಕೆ ಫೈರಿಂಗ್ ಸಹ ಮಾಡಲಾಗಿದೆ. ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇದನ್ನು ರಾಜ್ಯ ಸರ್ಕಾರವೂ ಸಹ ಗಂಭೀರವಾಗಿ ಪರಿಗಣಿಸಿದೆ. ಇದರಿಂದ […]

ಕಲ್ಲಡ್ಕ ಭಟ್ ಹಿಂದೂಗಳು ಮಕ್ಕಳು ಮಾಡಿ ಎಂದು ಹೇಳ್ತಾರೆ; ಮದುವೆಯಾಗಿ ಮಕ್ಕಳು ಮಾಡಿ ಎಂದು ಹೇಳಿಲ್ಲ: ಪ್ರತಿಭಾ ಕುಳಾಯಿ ಕಿಡಿ

ಪುತ್ತೂರು ಕೃಷ್ಣನ ನವರಂಗಿ ಆಟ, ಡಿಎನ್‌ಎ ಟೆಸ್ಟ್‌ನಲ್ಲಿ ಅಪ್ಪ ಎಂದು ಕನ್ಫರ್ಮ್‌ ಆದರೂ ಮದುವೆ ಆಗಲ್ವಂತೆ! ಮಂಗಳೂರು: ಡಾ.ಪ್ರಭಾಕರ ಭಟ್ ಕಲ್ಲಡ್ಕ ಅವರ ಊರಿನಿಂದಲೇ ಹೋರಾಟ ಆರಂಭಿಸುತ್ತಿದ್ದೇನೆ, ಪ್ರಭಾಕರ ಭಟ್ ಎಲ್ಲ ಕಡೆ ಹೇಳುತ್ತಾರೆ ಹಿಂದೂಗಳು ಮಕ್ಕಳು ಮಾಡಿ ಎಂದು, ಆದರೆ ಅವರು ಮದುವೆಯಾಗಿ ಮಕ್ಕಳು ಮಾಡಿ ಎಂದು ಹೇಳಿಲ್ಲ ಅಂತ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸದಸ್ಯೆ ಪ್ರತಿಭಾ ಕುಳಾಯಿ ಆಕ್ರೋಶ ವ್ಯಕ್ತಪಡಿಸಿದರು. ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಅನ್ಯಾಯಕ್ಕೊಳಗಾದ ಯುವತಿ, ಮಗು ಹಾಗೂ ಯುವತಿಯ ಪೋಷಕರ […]

Mangalore | ಹಣಕ್ಕೆ ಬೇಡಿಕೆ ಇಟ್ಟು ಸಂಘಪರಿವಾರ ಕಾರ್ಯಕರ್ತರಿಂದ ಕೃಷಿಕನ ಮೇಲೆ ದಾಳಿ: ಪ್ರಕರಣ ದಾಖಲು

ಮುಲ್ಕಿ: ಕೃಷಿಕರೊಬ್ಬರಿಂದ ಸಂಘಪರಿವಾರದ ಕಾರ್ಯಕರ್ತರು ಹಣಕ್ಕೆ ಬೇಡಿಕೆ ಇಟ್ಟಿದ್ದು, ಹಣ ಕೊಡದೇ ಇದ್ದಾಗ ಹಲ್ಲೆ ನಡೆಸಿದ್ದಾರೆನ್ನಲಾದ ಘಟನೆ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ತಾಳಿಪಾಡಿ ಅಂಗಾರಗುಡ್ಡೆಯಲ್ಲಿ ಬುಧವಾರ ಸಂಜೆ ನಡೆದಿರುವ ಬಗ್ಗೆ ವರದಿಯಾಗಿದೆ. ಮುಲ್ಕಿ ಕೆಳಗಿನಮನೆ ಶಂಸು ಸಾಹೇಬ್ ಎಂಬವರ ಮನೆಗೆ ಅಕ್ರಮ ಪ್ರವೇಶ ಮಾಡಿದ ಸಂಘಪರಿವಾರದ ಕಾರ್ಯಕರ್ತರು ಹಣ ಸುಲಿಗೆ ಮಾಡುವ ಉದ್ದೇಶದಿಂದ ಕೈಯಿಂದ ಹಲ್ಲೆ‌ಗೈದು, ಕಬ್ಬಿಣದ ರಾಡ್ ನಿಂದ ಹಲ್ಲೆಗೆ ಯತ್ನಿಸಿ ಜೀವ ಬೆದರಿಕೆ ಒಡ್ಡಿರುವ ಕುರಿತು ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ. […]