Flash News

ಸುಂದರವಾಗಿದ್ದಾರೆ ಎಂದು ಅಸೂಯೆ: ಮೂವರು ಬಾಲಕಿಯರನ್ನು ಕೊಂದ ಮಹಿಳೆ!

ಚಂಡೀಗಢ: ಸೌಂದರ್ಯವನ್ನು ಸಹಿಸಲಾಗದೇ ಹೊಟ್ಟೆಕಿಚ್ಚಿನಿಂದ ಮಹಿಳೆಯೊಬ್ಬರು ಮೂವರು ಹುಡುಗಿಯರನ್ನು ಕೊಂದಿರುವ ಪ್ರಕರಣವನ್ನು ಹರಿಯಾಣ ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ 32 ವರ್ಷದ ಪೂನಂ ಎಂಬ ಮಹಿಳೆಯನ್ನು ಬಂಧಿಸಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಮೂವರು ಬಾಲಕಿಯರ ಹತ್ಯೆ ಮಾಡಿದ್ದಾಳೆ. ಸುಂದರವಾಗಿದ್ದರು ಎಂಬ ಕಾರಣಕ್ಕೆ ಬಾಲಕಿಯರ ಮೇಲೆ ಪೂನಂ ದ್ವೇಷ ಬೆಳೆಸಿಕೊಂಡಿದ್ದಳು ಎಂದು ವರದಿ ತಿಳಿಸಿದೆ. ಹತ್ಯೆಯಾದ ಬಾಲಕಿಯರು ಮಹಿಳೆಯ ಸಂಬಂಧಿಕರೇ ಆಗಿದ್ದಾರೆ. ಇದಲ್ಲದೆ, ಪೂನಂ ತನ್ನ ಮೂರು ವರ್ಷದ ಮಗನನ್ನೂ ಕೊಂದಿದ್ದಾಳೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಆಕಸ್ಮಿಕ […]

ಮಂಡ್ಯ | ಹನುಮ ಮಾಲಾಧಾರಿಗಳಿಂದ ಜಾಮಿಯಾ ಮಸೀದಿ ಕಡೆ ನುಗ್ಗಲು ಯತ್ನ: ಪೊಲೀಸರಿಂದ ತಡೆ

ಮಸೀದಿ ಜಾಗ ನಮ್ಮದು ಎಂದ ಮಾಲಾಧಾರಿಗಳು; ಮಸೀದಿ ಮುಂದೆ ಭಜನೆ ಮಂಡ್ಯ : ಶ್ರೀರಂಗಪಟ್ಟಣದಲ್ಲಿ ಬುಧವಾರ ಹನುಮ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆ ನಡೆಯಿತು. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಪಟ್ಟಣದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿ ಕಟ್ಟೆಚ್ಚರ ವಹಿಸಿತ್ತು. ಪಟ್ಟಣದ ಹೊರವಲಯದ ನಿಮಿಷಾಂಬ ದೇವಾಲಯದಿಂದ ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯದವರೆಗೆ ನಡೆದ ಯಾತ್ರೆಯಲ್ಲಿ ಜಿಲ್ಲೆ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳ ನೂರಾರು ಮಂದಿ ಭಾಗವಹಿಸಿದ್ದರು. ಯಾತ್ರೆ ಉದ್ದಕ್ಕೂ ಹನುಮ ಮತ್ತು ಶ್ರೀರಾಮನ ಮೂರ್ತಿಗಳ ಮೆರವಣಿಗೆ ನಡೆಯಿತು. […]

ಬೆಳ್ತಂಗಡಿ | ರಸ್ತೆ ದಾಟುತ್ತಿದ್ದ ವೇಳೆ ಕಾರು ಡಿಕ್ಕಿ: 3 ವರ್ಷದ ಮಗು ಮೃತ್ಯು

ಬೆಳ್ತಂಗಡಿ: ಅಂಗಡಿಯಿಂದ ತಿಂಡಿ ತೆಗೆದುಕೊಂಡು ರಸ್ತೆ ದಾಟುತ್ತಿರುವ ಪುಟ್ಟ ಬಾಲಕನಿಗೆ ಕಾರು ಡಿಕ್ಕಿ ಹೊಡೆದು ಮೃತಪಟ್ಟಿರುವ ದಾರುಣ ಘಟನೆ ಇಂದು ಚಾರ್ಮಾಡಿಯಲ್ಲಿ ಸಂಭವಿಸಿದೆ. ಚಾರ್ಮಾಡಿ ಗ್ರಾಮ ಪಂಚಾಯತ್ ಸದಸ್ಯ ಬೀಟಿಗೆ ನಿವಾಸಿ ಸಿದ್ದಿಕ್ ಯು.ಪಿ. ಎಂಬವರ ಪುತ್ರ 3 ವರ್ಷದ ಮಹಮ್ಮದ್ ಹಝೀರಿನ್ ಮೃತ ಬಾಲಕ ಎಂದು ತಿಳಿದು ಬಂದಿದೆ. ಮೃತ ಬಾಲಕ ತನ್ನ ಮನೆಯ ಬಳಿಯ ಅಂಗಡಿಗೆ ತಿಂಡಿ ತರಲು ಹೋಗಿ, ಹಿಂದಿರುಗುವಾಗ ರಸ್ತೆ ದಾಟಲು ಪ್ರಯತ್ನಿಸುವ ವೇಳೆ ಕಾರು ಡಿಕ್ಕಿ ಹೊಡೆದಿದೆ.

ದಿತ್ವಾ ಚಂಡಮಾರುತ ಎಫೆಕ್ಟ್: ಕರಾವಳಿಗೆ ಯೆಲ್ಲೋ ಅಲರ್ಟ್‌ ಘೋಷಣೆ

ಬೆಂಗಳೂರು: ದಿತ್ವಾ ಚಂಡಮಾರುತ ತಮಿಳುನಾಡು-ಪುದುಚೇರಿ ಕರಾವಳಿ ಸಮೀಪದಲ್ಲಿ ದುರ್ಬಲಗೊಂಡಿದ್ದರೂ ಕೂಡಾ ಕರ್ನಾಟಕದ ಹಲವು ಕರಾವಳಿ ಪ್ರದೇಶದಲ್ಲಿ ಮುನ್ನೆಚ್ಚರಿಕೆಯಾಗಿ 17 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌ ಘೋಷಿಸಿರುವುದಾಗಿ ಹವಾಮಾನ ಇಲಾಖೆ ತಿಳಿಸಿದೆ. ಉದ್ಯಾನನಗರಿಯಲ್ಲಿ ಶೀತಗಾಳಿ ಮುಂದುವರಿದಿದ್ದು, ಇನ್ನುಳಿದಂತೆ ದಿತ್ವಾ ಚಂಡಮಾರುತದ ಪರಿಣಾಮ ದಕ್ಷಿಣ ಒಳನಾಡು ಜಿಲ್ಲೆ ಹಾಗೂ ಕರಾವಳಿ ಪ್ರದೇಶದಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಲ್ಲಿ ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಕರಾವಳಿ ಜಿಲ್ಲೆಗಳು: ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ದಕ್ಷಿಣ ಒಳನಾಡು […]

ದೇವಸ್ಥಾನಕ್ಕೆ ಬಿಡದಿದ್ದರೆ ನಿಮ್ಮದೇ ದೇವಸ್ಥಾನ ಕಟ್ಟಿ ಎಂದಿದ್ದು ನಾರಾಯಣ ಗುರುಗಳು, ಆ ಕಾಲಕ್ಕೆ ಅದೊಂದು ದೊಡ್ಡ ಕ್ರಾಂತಿ: ಸಿಎಂ ಸಿದ್ದರಾಮಯ್ಯ

ಉಳ್ಳಾಲ: ದಕ್ಷಿಣ ಕನ್ನಡ ಅಥವಾ ಉಡುಪಿ ಜಿಲ್ಲೆಯಲ್ಲಿ ಶಿವಗಿರಿ ಮಠದ ಶಾಖೆ ನಿರ್ಮಾಣಕ್ಕೆ ಐದು ಎಕರೆ ಜಮೀನು ನೀಡಬೇಕೆಂದು ಶಿವಗಿರಿ ಮಠದ ಪೀಠಾಧಿಪತಿ ಬ್ರಹ್ಮಶ್ರೀ ಸಚ್ಚಿದಾನಂದ ಸ್ವಾಮಿಯವರು ಪ್ರಸ್ತಾಪಿಸಿದ್ದು, ಸಂಬಂಧಪಟ್ಟವರು ಜಾಗ ಗುರುತಿಸಿದಲ್ಲಿ ಸರಕಾರದ ವತಿಯಿಂದ ಜಮೀನು ಮಂಜೂರು ಮಾಡಲಾಗುವುದೆಂದು ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ. ‌ ಶಿವಗಿರಿ ಮಠ ವರ್ಕಲ, ಮಂಗಳೂರು ವಿಶ್ವವಿದ್ಯಾನಿಲಯದ ಶ್ರೀ ನಾರಾಯಣ ಗುರು ಅಧ್ಯಯನ ಪೀಠ ಆಶ್ರಯದಲ್ಲಿ ಬುಧವಾರ ಕೊಣಾಜೆಯ ಮಂಗಳೂರು ವಿವಿ ಕ್ಯಾಂಪಸ್‌ ಮೈದಾನದಲ್ಲಿ ನಡೆದ ಶತಮಾನದ ಮಹಾಪ್ರಸ್ಥಾನ ಮತ್ತು ಬ್ರಹ್ಮಶ್ರೀ […]

ಕಾಂಗ್ರೆಸ್ ಯುವ ಮುಖಂಡನಿಗೆ ಚಾಕು ಇರಿತ

ಚಾಮರಾಜನಗರ: ಕ್ಷುಲ್ಲಕ ವಿಚಾರಕ್ಕೆ ವ್ಯಕ್ತಿಯೋರ್ವ ಕಾಂಗ್ರೆಸ್ ಯುವ ಮುಖಂಡನಿಗೆ ಚಾಕುವಿನಿಂದ ಇರಿದಿರುವಂತಹ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ತೇರಂಬಳ್ಳಿಯಲ್ಲಿ ನಡೆದಿದೆ. ತೇರಂಬಳ್ಳಿ ಗ್ರಾಮದ ರಾಜಣ್ಣ ಎಂಬ ವ್ಯಕ್ತಿಯಿಂದ ಕೈ ಮುಖಂಡ ಸುನೀಲ್​ಗೆ ಚಾಕು ಇರಿಯಲಾಗಿದೆ. ಅಗರ-ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕ್ಷುಲ್ಲಕ ವಿಚಾರಕ್ಕೆ ಗಲಾಟೆ ಉಂಟಾಗಿದೆ. ಈ ವೇಳೆ ರಾಜಣ್ಣ ಎಂಬುವವರು ಸುನೀಲ್​​ಗೆ ಚಾಕುವಿನಿಂದ ಇರಿದಿದ್ದಾರೆ. ಚಾಕುವಿನಿಂದ ಇರಿದ ಹಿನ್ನಲೆ ರಕ್ತಸ್ರಾವ ಉಂಟಾಗಿ ಸುನೀಲ್​​ ಅಸ್ವಸ್ಥರಾಗಿದ್ದಾರೆ. ಕೂಡಲೇ ಗಾಯಾಳು ಸುನೀಲ್​ನನ್ನು ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ […]

ಪೊಲಿಟಿಕಲ್ ಟ್ವಿಸ್ಟ್: ಕೇರಳದ ಮುನ್ನಾರ್ ಪಂಚಾಯತ್ ಎಲೆಕ್ಷನ್ ಗೆ ಬಿಜೆಪಿಯಿಂದ ‘ಸೋನಿಯಾ ಗಾಂಧಿ’ ಸ್ಪರ್ಧೆ

ಕೇರಳದ ಮುನ್ನಾರ್ ಪಂಚಾಯತ್‌ನಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸೋನಿಯಾ ಗಾಂಧಿ ಇತ್ತೀಚೆಗೆ ಸ್ಥಳೀಯರ ಗಮನ ಸೆಳೆದಿದ್ದಾರೆ. ಮಾಜಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೆಸರು ಹೊಂದಿರುವ ಇವರ ರಾಜಕೀಯ ಹಾದಿ ಸಂಪೂರ್ಣವಾಗಿ ವಿಭಿನ್ನವಾದ ಮಾರ್ಗವಾಗಿದೆ. ಅವರ ತಂದೆ, ಹಿರಿಯ ಕಾಂಗ್ರೆಸ್ ನಾಯಕ ಮತ್ತು ನಲ್ಲತನ್ನಿ ಕಲ್ಲಾರ್‌ನ ಕಾರ್ಯಕರ್ತ ದಿವಂಗತ ದೂರ್ ರಾಜ್, ಸೋನಿಯಾ ಗಾಂಧಿ ಅವರ ಮೇಲಿನ ಅಭಿಮಾನದಿಂದ ತಮ್ಮ ಮಗಳಿಗೂ ಸೋನಿಯಾ ಗಾಂಧಿ ಎಂದು ಹೆಸರಿಟ್ಟರಂತೆ. ಸೋನಿಯಾ ಅವರ ಮದುವೆಯ ನಂತರ ಅವರ ರಾಜಕೀಯ ನಿಷ್ಠೆ […]

ಭಾರತ ಜಾತ್ಯತೀತ ಆಗಿರಲು ಹಿಂದುಗಳೇ ಕಾರಣ, ಮುಸ್ಲಿಂ ಬಾಹುಳ್ಯ ಇದ್ದರೆ ಜಾತ್ಯತೀತ ಆಗಿರುತ್ತಿರಲಿಲ್ಲ ; ಕೆ.ಕೆ ಮಹಮ್ಮದ್

“ಮುಸ್ಲಿಮರು ಇನ್ನೂ ಎರಡು ಮಸೀದಿಗಳನ್ನು ಹಿಂದೂಗಳಿಗೆ ಬಿಟ್ಟು ಕೊಡಬೇಕು” ಕೋಜಿಕ್ಕೋಡ್ : ಅಯೋಧ್ಯೆ ರಾಮಮಂದಿರ ಮಾತ್ರ ಅಲ್ಲ.. ಮುಸ್ಲಿಮರು ಇನ್ನೂ ಎರಡು ಐತಿಹಾಸಿಕ ಸ್ಥಳಗಳನ್ನು ಹಿಂದೂಗಳಿಗೆ ಬಿಟ್ಟುಕೊಡಬೇಕಿದೆ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ಮಾಜಿ ಪ್ರಾದೇಶಿಕ ನಿರ್ದೇಶಕ ಕೆ.ಕೆ. ಮುಹಮ್ಮದ್ ಹೇಳಿದ್ದಾರೆ. ಕೇರಳದ ಕೋಝಿಕ್ಕೋಡ್ ನಲ್ಲಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಕೆ.ಕೆ.ಮುಹಮ್ಮದ್, ‘ನನ್ನ ಪ್ರಕಾರ ಮುಸ್ಲಿಮರು ಇನ್ನೂ ಎರಡು ಐತಿಹಾಸಿಕ ಸ್ಥಳಗಳನ್ನು ಹಿಂದೂಗಳಿಗೆ ಬಿಟ್ಟುಕೊಡಬೇಕಾದೀತು ಎಂದು ನಾನು ಹಿಂದೆಯೇ ಹೇಳಿದ್ದೆ. ಶ್ರೀಕೃಷ್ಣನ ಜನ್ಮಸ್ಥಳ ಮಥುರಾ ಮತ್ತು […]

ಮಂಗಳೂರು: ತಾಯಿಗೆ ಹಲ್ಲೆಗೈದ ಮಗಳ ಮೇಲೆ ಬಿತ್ತು ಕೇಸ್..!

ಮಂಗಳೂರು: ಮೂಡುಶೆಡ್ಡೆ ಗ್ರಾಪಂನಲ್ಲಿ 65ರ ಹರೆಯದ ನಿರ್ಮಲಾ ಎಂಬವರಿಗೆ ಹಲ್ಲೆಗೈದ ಆಕೆಯ ಪುತ್ರಿ 35ರ ನೇತ್ರಾವತಿ ಎಂಬಾಕೆಯ ವಿರುದ್ಧ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಿಂದೂ ಮಹಿಳಾ ಸಂರಕ್ಷಣಾ ವೇದಿಕೆಯ ವಿಭಾಗೀಯ ಅಧ್ಯಕ್ಷೆಯಾಗಿರುವ ರಮಿತಾ ಸೂರ್ಯವಂಶಿ ಎಂಬವರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ನ.25ರಂದು ಮಧ್ಯಾಹ್ನ 1 ಗಂಟೆಗೆ ಮೂಡುಶೆಡ್ಡೆ ಗ್ರಾಪಂ ಎದುರು ತಾಯಿಗೆ ಮಗಳು ಹಲ್ಲೆ ನಡೆಸುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದುದು ನ.29ರ ಪೂ. 11ಕ್ಕೆ ತನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ […]

ಜಾರ್ಖಂಡ್‌ನಲ್ಲಿ ಜೆಎಂಎಂ, ಬಿಜೆಪಿ ಮೈತ್ರಿ ಸರ್ಕಾರ?

ನವದೆಹಲಿ: ಬಿಹಾರದಲ್ಲಿ ಮರಳಿ ಅಧಿಕಾರಕ್ಕೆ ಏರಿದ ಬೆನ್ನಲ್ಲೇ ಜಾರ್ಖಂಡ್‌ನಲ್ಲೂ ಎನ್‌ಡಿಎ ಸರ್ಕಾರ ರಚನೆಯಾಗುತ್ತಾ ಎಂಬ ಪ್ರಶ್ನೆ ಎದ್ದಿದೆ. ಮುಖ್ಯಮಂತ್ರಿ ಹೇಮಂತ್ ಸೊರೆನ್ ಮತ್ತು ಅವರ ಪತ್ನಿ ಕಲ್ಪನಾ ಅವರು ಬಿಜೆಪಿ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂಬ ವರದಿಗಳ ನಡುವೆ, ರಾಜ್ಯದಲ್ಲಿ ಅಧಿಕಾರ ಬದಲಾವಣೆಯಾಗಬಹುದು ಎಂಬ ಊಹಾಪೋಹಗಳು ಹರಡಿವೆ. ಹೇಮಂತ್ ಸೊರೆನ್ ಮತ್ತು ಕಲ್ಪನಾ ಸೊರೆನ್ ಕಳೆದ ಹಲವು ದಿನಗಳಿಂದ ದೆಹಲಿಯಲ್ಲಿದ್ದಾರೆ. ಅವರು ಇಂದು ದೆಹಲಿಯಿಂದ ರಾಂಚಿಗೆ ಹಿಂತಿರುಗುವ ಸಾಧ್ಯತೆಯಿದೆ. ಕಾಂಗ್ರೆಸ್‌ನ 16 ಶಾಸಕರಲ್ಲಿ ಕನಿಷ್ಠ ಎಂಟು ಮಂದಿ […]