Flash News

Mangalore | 22 ದೇಶಗಳನ್ನು ಮಣಿಸಿ ಗೆದ್ದ ಕುಡ್ಲದ ಚೆಲುವೆ, ಮಗನ ʼಮಮ್ಮಿʼ ಈಗ ‌ʼಮಿಸೆಸ್‌ ಅರ್ಥ್‌ ಇಂಟರ್‌ ನ್ಯಾಷನಲ್!

ಮಂಗಳೂರು: ಮನೆ, ಸಂಸಾರ, ಮಗ, ಉದ್ಯಮವನ್ನೂ ನಿಭಾಯಿಸುತ್ತಾ, ಮಾಡೆಲಿಂಗ್ ಜಗತ್ತಿನಲ್ಲಿ ಛಾಪು ಮೂಡಿಸಿದ ಮಂಗಳೂರಿನ ಬೆಡಗಿಯೋರ್ವರು ಫಿಲಿಫೈನ್ಸ್​​ನಲ್ಲಿ ನಡೆದ ಮಿಸೆಸ್ ಅರ್ಥ್ ಇಂಟರ್ ನ್ಯಾಷನಲ್ ಸ್ಪರ್ಧೆಯಲ್ಲಿ ಕ್ರೌನ್ ಮುಡಿಗೇರಿಸಿದ್ದಾರೆ. ಮಂಗಳೂರಿನ ಚಿತ್ರಾಪುರದಲ್ಲಿ ಸೂಪರ್ ಮಾರ್ಕೆಟ್ ಉದ್ಯಮಿಯಾಗಿರುವ ವಿದ್ಯಾ ಸಂಪತ್ ಈ‌ ಸಾಧನೆ ಮಾಡಿದವರು. ಬೆಂಗಳೂರಿನಲ್ಲಿ ನಡೆದ ಸ್ಪರ್ಧೆಯಲ್ಲಿ ಅವರು ವಿವಿಧ ರೌಂಡ್‌ಗಳ ಮೂಲಕ ಅಂತರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾಗಿದ್ದರು. ಡಿ. 2 ರಿಂದ ಡಿ.10ರವರೆಗೆ ನಡೆದ ಅಂತಾರಾಷ್ಟ್ರೀಯ ಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಲು ಭಾರತದಿಂದ ಆಯ್ಕೆಯಾದ ಏಕೈಕ ಸ್ಪರ್ಧಿ. […]

‘ಆಕೆ ನರಕಕ್ಕೆ ಹೋಗಲಿ, ನಿತೀಶ್ ಕುಮಾರ್ ಕ್ರಮ ಸರಿ ಇದೆ’: ಮುಸ್ಲಿಂ ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂನ್ನು ಸಮರ್ಥಿಸಿಕೊಂಡ BJP ಸಚಿವ

ನವದೆಹಲಿ: ನೇಮಕಾತಿ ಪತ್ರ ಪಡೆಯಲು ಬಂದ ಮುಸ್ಲಿಂ ವೈದ್ಯೆಯ ಹಿಜಾಬ್ ಹಿಡಿದೆಳೆದ ಬಿಹಾರ ಸಿಎಂ ನಿತೀಶ್ ಕುಮಾರ್ ಪರ ಕೇಂದ್ರ ಸಚಿವ ಗಿರಿರಾದ್ ಸಿಂಗ್ ಮಾತನಾಡಿದ್ದಾರೆ. ಅವರು ಯಾವುದೇ ತಪ್ಪು ಮಾಡಿಲ್ಲ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಸಮರ್ಥಿಸಿಕೊಂಡಿದ್ದಾರೆ. ಮೊನ್ನೆ ಸೋಮವಾರ ಪಾಟ್ನಾದಲ್ಲಿ ನಡೆದ ಘಟನೆಗೆ ಪ್ರತಿಕ್ರಿಯಿಸಿದ ಸಚಿವ ಗಿರಿರಾಜ್ ಸಿಂಗ್, ಘಟನೆಯಿಂದ ಉಂಟಾದ ಆಘಾತದಿಂದಾಗಿ ಮಹಿಳೆ ಕೆಲಸ ಸ್ವೀಕರಿಸಲು ನಿರಾಕರಿಸಿದ್ದಾರೆ ಎಂದು ಹೇಳಿದಾಗ ಪರವಾಗಿಲ್ಲ, ಅವರು ನರಕಕ್ಕೆ ಹೋಗಬಹುದು […]

Mangaluru: ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ಕೋಮು ಪ್ರಚೋದನಕಾರಿ ಸಂದೇಶ: ಕುಖ್ಯಾತ ಕ್ರಿಮಿನಲ್ ಪೊಲೀಸ್ ಬಲೆಗೆ

ಮಂಗಳೂರು: ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ಪ್ರಚೋದನಕಾರಿ ಸಂದೇಶ ಹರಿಬಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳೂರು, ಕಾಟಿಪಾಳ್ಳ ನಿವಾಸಿ ಅಭಿಷೇಕ್ ಎಮ್(23) ಬಂಧಿತ ಆರೋಪಿ. ಆರೋಪಿಯ ವಿರುದ್ಧ ಬಜಪೆ ಪೊಲೀಸ್ ಠಾಣಾ ಅ.ಕ್ರ. 84/2025 ಕಲಂ. 353(1) (ಸಿ), 353(2) 56,57 ಜೊತೆಗೆ 189 ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ, mr_a_titude ಎಂಬ ಇನ್ಸ್ಟಾಗ್ರಾಮ್ ಪೇಜ್ ಮುಖಾಂತರ ಹೋಟೆಲ್ ನಿಸರ್ಗ ಎಂಬ ಫೋಟೋವನ್ನು ಹಾಕಿ ಅದರ ಮೇಲೆ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾದ […]

ಶಿವಮೊಗ್ಗ | ಕಾಂಗ್ರೆಸ್ ಪ್ರತಿಭಟನೆಯಲ್ಲಿ ಎಎಸ್ಐ ಮಾಂಗಲ್ಯ ಸರ ಕಳುವು: ಕಣ್ಣೀರಿಟ್ಟ ಅಧಿಕಾರಿ, ಕದ್ದವರು ಯಾರು?

ಶಿವಮೊಗ್ಗ: ಕಾಂಗ್ರೆಸ್ ಪಕ್ಷದ ಪ್ರತಿಭಟನೆ ವೇಳೆ ಬಂದೋಬಸ್ತ್ ಡ್ಯೂಟಿಯಲ್ಲಿದ್ದ ಮಹಿಳಾ ಪೊಲೀಸ್ ಅಧಿಕಾರಿಯ ಕೊರಳಲ್ಲಿದ್ದ 40 ಗ್ರಾಂ ತೂಕದ ಮಾಂಗಲ್ಯ ಸರವನ್ನೇ ಕಳ್ಳರು ಎಗರಿಸಿದ ಆಘಾತಕಾರಿ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಗಾಂಧಿ ಕುಟುಂಬದ ವಿರುದ್ಧದ ಪಿತೂರಿ ಕಾನೂನುಬಾಹಿರ ಎಂದು ಸಾಬೀತಾದ ಹಿನ್ನೆಲೆಯಲ್ಲಿ, ಜಿಲ್ಲಾ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಕಾಂಗ್ರೆಸ್ ಕಾರ್ಯಕರ್ತರು ಯತ್ನಿಸಿದ್ದರು. ಈ ವೇಳೆ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಎಎಸ್‌ಐ ಅಮೃತಾ ಅವರು ಪ್ರತಿಭಟನಾಕಾರರನ್ನು […]

‘ನೀವು ಕರಾವಳಿಯವರು ಬೆಂಕಿ ಹಚ್ಚೋರು’ ಎಂದ ಸಚಿವ ಬೈರತಿ ಸುರೇಶ್; ಕೆರಳಿ ಕೆಂಡವಾದ ಸುನೀಲ್ ಕುಮಾರ್, ಕಾಮತ್

ಬೆಳಗಾವಿ: ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ‘ನೀವು ಕರಾವಳಿಯವರು ಬೆಂಕಿ ಹಚ್ಚುವವರು’ ಎಂಬ ಹೇಳಿಕೆ ನೀಡುವ ಮೂಲಕ ಹೊಸ ವಿವಾದವನ್ನು ಸೃಷ್ಟಿಸಿದ್ದು, ಇದು ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಭಾರೀ ವಾಕ್ಸಮರಕ್ಕೆ ಕಾರಣವಾಯಿತು. ಕರಾವಳಿ ಭಾಗದ ಬಿಜೆಪಿ ಶಾಸಕರು ಸಚಿವರ ವಿರುದ್ಧ ತಿರುಗಿಬಿದ್ದು, ಕ್ಷಮೆಯಾಚನೆಗೆ ಪಟ್ಟು ಹಿಡಿದ ಘಟನೆ ಕಲಾಪದ ದಿಕ್ಕನ್ನೇ ಬದಲಿಸಿತು. ಸದನದಲ್ಲಿ ಚರ್ಚೆಯ ವೇಳೆ ಸಚಿವ ಭೈರತಿ ಸುರೇಶ್ ಅವರು ಬಿಜೆಪಿ ಶಾಸಕರನ್ನು ಉದ್ದೇಶಿಸಿ, ‘ನೀವು ಕರಾವಳಿಯವರು […]

ಸಿಕ್ಕಿದ್ದೇ ಚಾನ್ಸ್ ಅಂತ ಕಂಡ ಕಂಡಲ್ಲಿ ಮುಟ್ಟಿದ್ರು; ಮಾಲ್​​ನಲ್ಲಿ ನಟಿಗೆ ಕಿರುಕುಳ

ನಟಿಯರು ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಎಲ್ಲರೂ ಸೆಲ್ಫಿಗೆ ಮುಗಿ ಬೀಳುತ್ತಾರೆ. ಆದರೆ, ಕೆಲವೊಮ್ಮೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾಗ ಅಲ್ಲಿ ಬೇರೆಯದೇ ರೀತಿಯ ಪರಿಸ್ಥಿತಿ ನಿರ್ಮಾಣ ಆಗುತ್ತದೆ. ಸಿಕ್ಕಿದ್ದೇ ಚಾನ್ಸ್ ಎಂದು ಕಂಡ ಕಂಡಲ್ಲಿ ಮುಟ್ಟುವ ಕಿಡಿಗೇಡಿಗಳೂ ಇದ್ದಾರೆ. ಈಗ ತೆಲುಗು ನಟಿ ನಿಧಿ ಅಗರ್​ವಾಲ್ ಅವರಿಗೂ ಇದೇ ರೀತಿಯ ಅನುಭವ ಆಗಿದೆ. ಈ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಚರ್ಚೆ ಹುಟ್ಟುಹಾಕಿದೆ. ನಿಧಿ ಅವರು ಹುಟ್ಟಿದ್ದು ಆಂಧ್ರದಲ್ಲಿ. ಅವರು ತಮ್ಮ ಶಿಕ್ಷಣವನ್ನು ಬೆಂಗಳೂರಿನಲ್ಲಿ ಮಾಡಿದ್ದಾರೆ. ಹೀಗಾಗಿ, […]

ಮುಸ್ಲಿಮರು ಸೂರ್ಯ ನಮಸ್ಕಾರ ಮಾಡಿ, ನದಿಗಳನ್ನು ಪೂಜಿಸಿದರೆ ಅವರಿಗೆ ಭಾರತದಲ್ಲಿ ಏನೂ ತೊಂದರೆ ಇಲ್ಲ: RSS ನಾಯಕ ಹೊಸಬಾಳೆ

ಲಕ್ನೋ: ಹಿಂದೂ ಧರ್ಮ ಶ್ರೇಷ್ಠವಾದದ್ದು. ಭಾರತ ನೆಲದಲ್ಲಿರುವ ಮುಸ್ಲಿಮರು ಸೂರ್ಯ ನಮಸ್ಕಾರ ಮಾಡಬೇಕು, ನದಿಗಳನ್ನು ಪೂಜಿಸಬೇಕು ಎಂದು ಹಿರಿಯ ಆರ್‌ಎಸ್‌ಎಸ್‌ ನಾಯಕ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ. ಭಾರತದಲ್ಲಿ ಮುಸ್ಲಿಮರಿಗೆ ಏನೂ ತೊಂದರೆಯಾಗುವುದಿಲ್ಲ. ನಮ್ಮ ಮುಸ್ಲಿಂ ಸಹೋದರರು ಸಹ ಸೂರ್ಯ ನಮಸ್ಕಾರ ಮಾಡಿದರೆ, ಅವರಿಗೆ ಏನೂ ಆಗಲ್ಲ. ಹಾಗಂತ ಅವರು ಮಸೀದಿಗೆ ಹೋಗುವುದನ್ನು ಯಾರೂ ತಡೆಯುವುದಿಲ್ಲ. ನಮ್ಮ ಹಿಂದೂ ಧರ್ಮ ಸರ್ವೋಚ್ಛ. ಅದು ಎಲ್ಲರ ಪರವಾಗಿದೆ ಎಂದು ಹೊಸಬಾಳೆ ಪ್ರತಿಪಾದಿಸಿದ್ದಾರೆ. ಯೋಗಾಸನಗಳ ಅನುಕ್ರಮವಾದ ಸೂರ್ಯ ನಮಸ್ಕಾರವು ವೈಜ್ಞಾನಿಕ ಮತ್ತು […]

Mangalore | ಬಾಲಪ್ರತಿಭೆ ಝೊಹಾನ್ ಓಝಿಲ್‌ಗೆ ಟ್ರಿಪಲ್ ರೆಕಾರ್ಡ್ ಗೌರವ; ಅಂತರರಾಷ್ಟ್ರೀಯ ಮಟ್ಟದಲ್ಲಿ ಮಂಗಳೂರಿಗೆ ಕೀರ್ತಿ

ಮಂಗಳೂರು: ಉರ್ವಾ ಸ್ಟೋರ್ ಅಶೋಕ್ ನಗರದ ಬಾಲಪ್ರತಿಭೆ ಝೊಹಾನ್ ಓಝಿಲ್, ಅಪೂರ್ವ ಸಾಧನೆಯ ಮೂಲಕ ಟ್ರಿಪಲ್ ರೆಕಾರ್ಡ್ ಹೋಲ್ಡರ್ ಆಗಿ ಗುರುತಿಸಿಕೊಂಡಿದ್ದು, ತಮ್ಮ ಅಸಾಧಾರಣ ಪ್ರತಿಭೆ ಮತ್ತು ವಿಶಿಷ್ಟ ಸಾಧನೆಗಳಿಗಾಗಿ ದೇಶೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಮೂರು ಪ್ರಮುಖ ದಾಖಲೆಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಝೊಹಾನ್ ಓಝಿಲ್ ಅವರಿಗೆ ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ವತಿಯಿಂದ “Super Talented Kid – One in a Million” ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ದೊರಕಿದೆ. ವಿಶೇಷವಾಗಿ ಪ್ರತಿಷ್ಠಿತ […]

ಬುರ್ಖಾ ಧರಿಸದೆ ತವರಿಗೆ ಹೋದ ಪತ್ನಿ: ಇಬ್ಬರು ಪುಟ್ಟ ಹೆಣ್ಣು ಮಕ್ಕಳನ್ನು ಕೊಂದು ಹೂತು ಹಾಕಿದ ಕ್ರೂರಿ

ಲಕ್ನೋ: ತನ್ನೊಂದಿಗೆ ಜಗಳ ಮಾಡಿಕೊಂಡು ಬುರ್ಖಾ ಧರಿಸದೆ ತವರು ಮನೆಗೆ ತೆರಳಿದ ಪತ್ನಿ ಮತ್ತು ಇಬ್ಬರು ಮಕ್ಕಳ ಮೇಲೆ ಕೋಪಗೊಂಡ ವ್ಯಕ್ತಿಯೊಬ್ಬ, ಅವರು ವಾಪಸ್​ ಬಂದ ಬಳಿಕ ಮೂವರನ್ನೂ ಹತ್ಯೆ ಮಾಡಿ ಸೆಪ್ಟಿಕ್​ ಟ್ಯಾಂಕ್​​ನಲ್ಲಿ ಹೂತಿಟ್ಟ ಪ್ರಕರಣ ಇತ್ತೀಚೆಗೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇಲ್ಲಿನ ಕಂಡ್ಲಾ ಪೊಲೀಸ್​ ಠಾಣಾ ವ್ಯಾಪ್ತಿಯ ಗಢಿಡಾಲ್ಟ್ ಗ್ರಾಮದ ನಿವಾಸಿ ಫಾರೂಖ್​ ಹತ್ಯೆ ಕೇಸಲ್ಲಿ ಬಂಧಿತನಾದವ. ಸೊಸೆ ಮತ್ತು ಮೊಮ್ಮಕ್ಕಳು ಕಾಣೆಯಾದ ಬಗ್ಗೆ ಮಾವ (ಆರೋಪಿಯ ತಂದೆ) ನೀಡಿದ ದೂರಿನ ಆಧಾರದ […]

ಮಹಾರಾಷ್ಟ್ರ ಸರ್ಕಾರದಲ್ಲಿನ ಮೊದಲ ವಿಕೆಟ್ ಪತನ: ಸಚಿವ ಸ್ಥಾನಕ್ಕೆ ಮಾಣಿಕ್​ರಾವ್ ರಾಜೀನಾಮೆ; ಯಾವುದೇ ಕ್ಷಣದಲ್ಲಿ ಬಂಧನ ಸಾಧ್ಯತೆ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಸಚಿವ ಸಂಪುಟದ ಮೊದಲ ವಿಕೆಟ್ ಪತನವಾಗಿದೆ. ನಾಸಿಕ್ ಸೆಷನ್ಸ್ ನ್ಯಾಯಾಲಯವು ಸಚಿವ ಮಾಣಿಕ್​ರಾವ್ ಕೊಕಾಟೆ ವಿರುದ್ಧ ಬಂಧನ ವಾರಂಟ್ ಹೊರಡಿಸಿತ್ತು. ಅದರ ನಂತರ ಮಾಣಿಕ್​ರಾವ್ ಕೊಕಾಟೆ ಮಹತ್ವದ ನಿರ್ಧಾರವನ್ನು ತೆಗೆದುಕೊಂಡು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನಾಸಿಕ್‌ನಲ್ಲಿ ನಡೆದ ಅಪಾರ್ಟ್‌ಮೆಂಟ್ ಹಗರಣ ಪ್ರಕರಣದಿಂದ ಮಾಣಿಕ್​ರಾವ್ ಕೊಕಾಟೆ ತೀವ್ರವಾಗಿ ಸಂಕಷ್ಟಕ್ಕೆ ಸಿಲುಕಿದ್ದರು. ಈ ಪ್ರಕರಣವು 1995ರ ಕಾಲದ್ದು. ಈ ಪ್ರಕರಣದಲ್ಲಿ ಕೊಕಾಟೆಗೆ ಎರಡು ವರ್ಷಗಳ ಶಿಕ್ಷೆ ವಿಧಿಸಲಾಗಿತ್ತು. ಅದರ ನಂತರ ನಾಸಿಕ್ ಸೆಷನ್ಸ್ […]