ಉಡುಪಿಯಲ್ಲಿ ಭೀಕರ ಅಪಘಾತ: ಟೆಂಪೋ ಪಲ್ಟಿ, ಐವರ ಸಾವು, ಘಟನೆ ನಡೆದದ್ದು ಹೇಗೆ?

ಉಡುಪಿ: ಕಾರ್ಯಕ್ರಮವೊಂದಕ್ಕೆ ಡೆಕೊರೇಷನ್ ಸಾಮಗ್ರಿ ಸಾಗಿಸುತ್ತಿದ್ದ ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಘಟನೆಯಲ್ಲಿ ಐವರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಇಂದು (ನವೆಂಬರ್ 30) ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಕೋತಲಕಟ್ಟೆ ಬಳಿ ಈ ದುರ್ಘಟನೆ ಸಂಭವಿಸಿದೆ. ಕಾರ್ಯಕ್ರಮವೊಂದಕ್ಕೆ ಡೆಕೊರೇಷನ್ ಸಾಮಗ್ರಿ ಸಾಗಿಸುತ್ತಿದ್ದ ವೇಳೆ ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಡಿವೈಡರ್ ಹಾರಿ ಸರ್ವಿಸ್ ರಸ್ತೆಗೆ ಉರುಳಿಬಿದ್ದಿದ್ದು, ಟೆಂಪೋನಲ್ಲಿದ್ದ 12 ಕಾರ್ಮಿಕರು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದಾರೆ. ಈ ಪೈಕಿ ಐವರು ಮೃತಪಟ್ಟಿದ್ದಾರೆ. ಹಲವರಿಗೆ ಗಾಯಗಳಾಗಿವೆ. ಪಶ್ಚಿಮ ಬಂಗಾಳದ ಕಮಲ್, […]
ಪ್ರೀತಿಗೆ ಜಾತಿ ಅಡ್ಡಿ; ಕುಟುಂಬಸ್ಥರಿಂದ ಪ್ರಿಯಕರನ ಹತ್ಯೆ: ಆತನ ಮೃತ ದೇಹವನ್ನೇ ಮದುವೆಯಾದ ಯುವತಿ!

ಮುಂಬೈ: ಮಗಳ ಪ್ರೀತಿ ನಿರಾಕರಿಸಿದ ಕುಟುಂಬವೊಂದು ಆಕೆಯ ಪ್ರಿಯಕರನನ್ನೇ ಕೊಂದು ಹಾಕಿದ್ದು, ಇದಕ್ಕೆ ಆಕ್ರೋಶಗೊಂಡ ಯುವತಿ ಪ್ರತ್ಯುತ್ತರವಾಗಿ ಪ್ರಿಯಕರನ ಮೃತದೇಹವನ್ನೇ ಮದುವೆಯಾಗಿರುವ ವಿಲಕ್ಷಣ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಹೌದು.. ಮಹಾರಾಷ್ಟ್ರದ ನಾಂದೇಡ್ ನಲ್ಲಿ ಈ ಘಟನೆ ನಡೆದಿದ್ದು, 25 ವರ್ಷದ ಸಕ್ಷಾಮ್ ಟೆಟೆ ಎಂಬಾತನನ್ನು ಯುವತಿ ಕುಟುಂಬಸ್ಥರು ಕೊಲೆಗೈದಿದ್ದು, ಇದರಿಂದ ಆಕ್ರೋಶಗೊಂಡ ಯುವತಿ 20 ವರ್ಷದ ಅಂಚಲ್ ಆತನ ಮೃತದೇಹವನ್ನೇ ಮದುವೆಯಾಗಿದ್ದಾರೆ. ಈ ವಿಚಾರ ಇದೀಗ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದೆ. ಅಂಚಲ್ ಮತ್ತು ಸಕ್ಷಮ್ ಕಳೆದ […]
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆಯಲ್ಲಿ ಬಾಣಂತಿ ಸಾವು: ವೈದ್ಯರ ವಿರುದ್ಧ ದೂರು

ಶಿವಮೊಗ್ಗ: ನಗರದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದ ಬಾಣಂತಿ ಸಾವನ್ನಪ್ಪಿದ್ದು, ವೈದ್ಯರ ನಿರ್ಲಕ್ಷ್ಯದಿಂದ ಈ ಸಾವಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಮೃತಳನ್ನು ಶಿವಮೊಗ್ಗದ ಇಮಾಂಬಾಡಾ ಬಡಾವಣೆಯ ನಿವಾಸಿ ನೂರ್ ಅಫ್ಸಾ (25) ಎಂದು ಗುರುತಿಸಲಾಗಿದೆ. ನ.20 ರಂದು ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದಳು. ನ.21 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಳು. ಸಿಜೇರಿಯನ್ ಮೂಲಕ ಮಗುವನ್ನು ವೈದ್ಯರು ಹೊರತೆಗೆದಿದ್ದರು. ಆಪರೇಷನ್ ಆದ ಎರಡು ದಿನದ ಬಳಿಕ ಮಹಿಳೆಗೆ ಮಲ ವಾಂತಿಯಾಗಿತ್ತು. ಬಳಿಕ ಪುನಃ ವೈದ್ಯರು ಆಪರೇಷನ್ ಮಾಡಿದ್ದರು. ಆಪರೇಷನ್ ಬಳಿಕ […]
ಸುಹೈಲ್ ಕಂದಕ್’ಗೆ 2025ನೇ ಡಿ & ವಿ ಎಕ್ಸಲೆನ್ಸ್ ಅವಾರ್ಡ್ಸ್ ಗೌರವ

ಪಣಜಿ: ಬಿಗಿನಪ್ ವೆಂಚರ್ಸ್ ಇಂಡಿಯಾ ಆಯೋಜಿಸಿದ್ದ ಡಿಸೈನ್ & ವಿಷನ್ ಆರ್ಕಿಟೆಕ್ಚರ್ & ಇಂಟೀರಿಯರ್ ಡಿಸೈನ್ ಎಕ್ಸಲೆನ್ಸ್ ಅವಾರ್ಡ್ಸ್ & ಕಾನ್ಫರೆನ್ಸ್ 2025, ಗ್ಲೋಬಲ್ ಎಡಿಷನ್‌ನಲ್ಲಿ ಮಂಗಳೂರು ಮೂಲದ ಉದ್ಯಮಿ, ಅರ್ಬನ್ ಬಿಜ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಬಿಗ್ ಡೀಲ್ ಪ್ರಾಪರ್ಟಿಯ ಸಂಸ್ಥಾಪಕ ಮತ್ತು ಅಧ್ಯಕ್ಷ ಸುಹೈಲ್ ಕಂದಕ್ ಎರಡು ಪ್ರಮುಖ ಪ್ರಶಸ್ತಿಗಳನ್ನು ಪಡೆದರು. ನಗರಾಭಿವೃದ್ಧಿ, ರಿಯಲ್ ಎಸ್ಟೇಟ್ ನಾವೀನ್ಯತೆ ಮತ್ತು ಸಮುದಾಯ ಕೇಂದ್ರಿತ ವ್ಯವಹಾರ ನಾಯಕತ್ವಕ್ಕೆ ಅವರ ಅತ್ಯುತ್ತಮ ಕೊಡುಗೆಗಳನ್ನು ಗುರುತಿಸಿ, ಸುಹೈಲ್ ಕಂದಕ್ […]
ಬೈಕ್ ಟ್ಯಾಕ್ಸಿ ಚಾಲಕನ ಖಾತೆಯಲ್ಲಿ 331 ಕೋಟಿ ಪತ್ತೆ: ED ಅಧಿಕಾರಿಗಳೇ ದಂಗು!

ಜೈಪುರ: ʻಲಕ್ಕಿ ಬಾಸ್ಕರ್ʼ ಸಿನಿಮಾ ನೋಡಿದ್ರೆ ಒಬ್ಬ ಸಾಧಾರಣ ಬ್ಯಾಂಕ್ ಉದ್ಯೋಗಿ 100 ಕೋಟಿ ರೂ. ಹಣ ಗಳಿಸೋದು ಅಚ್ಚರಿ ತರಿಸುತ್ತೆ. ಆದ್ರೆ ರಿಯಲ್ ಲೈಫಲ್ಲಿ ಆ ರೀತಿಯ ಘಟನೆಗಳು ತೀರ ಅಪರೂಪ. ಇದೀಗ ಅಂತಹದ್ದೇ ಘಟನೆಯೊಂದು ಉದಯಪುರದಲ್ಲಿ ನಡೆದಿದೆ. 2 ಕೋಣೆಯ ಗುಡಿಸಲಿನಲ್ಲಿ ವಾಸಿಸುತ್ತಿದ್ದ ರ‍್ಯಾಪಿಡೋ ಚಾಲಕನ ಬ್ಯಾಂಕ್ ಖಾತೆಯಲ್ಲಿ ನಡೆದ ವಹಿವಾಟು ಹಾಗೂ ಖರ್ಚು ವೆಚ್ಚ ನೋಡಿ ಇಡಿ ಅಧಿಕಾರಿಗಳೇ ದಂಗಾಗಿದ್ದಾರೆ. ಏಕೆಂದ್ರೆ ರ‍್ಯಾಪಿಡೋ ಚಾಲಕನಿಗೆ ಸಂಪರ್ಕವೇ ಇಲ್ಲದ, ಆತ್ಮೀಯರೂ ಅಲ್ಲ, ಗೆಳೆಯ, ಕುಟುಂಬಸ್ಥರು […]
ಪುತ್ತೂರು: ಕ್ಲಿನಿಕ್ ಸಿಬ್ಬಂದಿ ಮೇಲೆ ಹಲ್ಲೆ; ಘಟನಾ ಸ್ಥಳಕ್ಕೆ ಅರುಣ್ ಕುಮಾರ್ ಪುತ್ತಿಲ ಭೇಟಿ

ಪುತ್ತೂರು: ನಗರದ ದರ್ಬೆ ಗಣೇಶ್ ಕಾಂಪ್ಲೆಕ್ಸ್ ನಲ್ಲಿರುವ ಇಎನ್ ಟಿ ಕ್ಲಿನಿಕ್ ನ ಸಿಬಂದಿಯ ಮೇಲೆ ವ್ಯಕ್ತಿಯೋರ್ವ ಹಲ್ಲೆ ನಡೆಸಿ, ಕ್ಲಿನಿಕ್ ನ ಪೀಠೋಪಕರಣಗಳಿಗೆ ಹಾನಿ ಉಂಟು ಮಾಡಿದ ಘಟನೆ ಶನಿವಾರ ಬೆಳ್ಳಂಬೆಳಗ್ಗೆ ಸಂಭವಿಸಿದೆ. ಖ್ಯಾತ ನ ವೈದ್ಯ ಡಾ.ರಾಮ್ ಮೋಹನ್ ನೇತೃತ್ವದ ಕ್ಲಿನಿಕ್ ಇದಾಗಿದೆ. ದಿನಂಪ್ರತಿ ನೂರಾರು ಮಂದಿ ಚಿಕಿತ್ಸೆ ಗೆ ಇಲ್ಲಿಗೆ ಬರುತ್ತಿದ್ದು ಮುಂಜಾನೆ 6 ಗಂಟೆಯಿಂದಲೇ ಕ್ಲಿನಿಕ್ ಗೆ ಬಂದು ಟೋಕನ್ ಪಡೆಯುತ್ತಿದ್ದರು. ಶನಿವಾರ ಬೆಳಗ್ಗೆ 6.30 ರ ಹೊತ್ತಿಗೆ ಕ್ಲಿನಿಕ್ ಹೊರಭಾಗದ […]
ಗೊಂದಲ ತಿಳಿಗೊಳಿಸಲು ಕರೆದ ಪತ್ರಿಕಾಗೋಷ್ಠಿಯಲ್ಲೇ ಹಲವು ಅನುಮಾನ ಉಳಿಸಿಹೋದ ಸಿಎಂ-ಡಿಸಿಎಂ..!

ಬೆಂಗಳೂರು: ಕರ್ನಾಟಕ ಕಾಂಗ್ರೆಸ್ನಲ್ಲಿ ಉಂಟಾಗಿದ್ದ ಅಧಿಕಾರ ಹಂಚಿಕೆ ಗೊಂದಲಗಳಿಗೆ ತೆರೆ ಎಳೆಯುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಶನಿವಾರ ಬ್ರೇಕ್ಫಾಸ್ಟ್ ಮೀಟಿಂಗ್ ನಡೆಸಿದರು. ಸಿದ್ದರಾಮಯ್ಯ ಅವರ ಕಾವೇರಿ ನಿವಾಸದಲ್ಲಿ ಸಭೆ ನಡೆಯಿತು. ಆ ಬಳಿಕ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಉಭಯ ನಾಯಕರು ಒಗ್ಗಟ್ಟು ಪ್ರದರ್ಶಿಸಿದರು. ಆದರೆ, ಗೊಂದಲ ತಿಳಿಗೊಳಿಸುವುದಕ್ಕೆಂದೇ ಕರೆದ ಈ ಪತ್ರಿಕಾಗೋಷ್ಠಿಯಲ್ಲಿ, ಮಾಧ್ಯಮ ಪ್ರತಿನಿಧಿಗಳ ಕೆಲ ಪ್ರಶ್ನೆಗಳಿಗೆ ಸ್ಪಷ್ಟವಾದ ಉತ್ತರ ನೀಡದೆ ಅನುಮಾನಗಳನ್ನು ಹಾಗೆಯೇ ಉಳಿಸಿಹೋಗಿದ್ದಾರೆ. ಅಧಿಕಾರ ಹಂಚಿಕೆ ಕುರಿತ […]
ಪತ್ರಕರ್ತ, ಸಾಮಾಜಿಕ ಕಾರ್ಯಕರ್ತ ಲುಕ್ಮಾನ್ ಅಡ್ಯಾರ್ ಕಾಂಗ್ರೆಸ್ ಸೇರ್ಪಡೆ

ಮಂಗಳೂರು: ಗುರುಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಇದರ ನೂತನ ಬ್ಲಾಕ್ ಕಚೇರಿಯ ಉದ್ಘಾಟನಾ ಸಂದರ್ಭದಲ್ಲಿ ಪತ್ರಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರಾದ ಲುಕ್ಮಾನ್ ಅಡ್ಯಾರ್ ಅವರು ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು. ಕರ್ನಾಟಕ ಸರ್ಕಾರದ ಆರೋಗ್ಯ ಸಚಿವರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಬಂಡಾರಿಯವರು ಶಾಲು ಹೊದಿಸಿ ಲುಕ್ಮಾನ್ ಅವರನ್ನು ಪಕ್ಷಕ್ಕೆ ಸ್ವಾಗತಿಸಿದರು. ಮಾಜಿ ಸಚಿವ ರಮಾನಾಥ್ ರೈ, ಮಾಜಿ ಶಾಸಕರಾದ ವಿನಯ ಕುಮಾರ್ ಸೊರಕೆ, ಅಭಯಚಂದ್ರ ಜೈನ್ […]
ಮಂಗಳೂರು | ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ಇನಾಯತ್ ಅಲಿ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆ

ಗುರುಪುರ: ಗುರುಪುರ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾದ ಪದ್ಮನಾಭ ಕೋಟ್ಯಾನ್ ಅವರ ಪದಗ್ರಹಣ ಸಮಾರಂಭ ಹಾಗೂ ನೂತನ ಬ್ಲಾಕ್ ಕಾಂಗ್ರೆಸ್ ಕಚೇರಿಯ ಉದ್ಘಾಟನಾ ಸಮಾರಂಭವು ಕೆಪಿಸಿಸಿ ಪ್ರಧಾನಕಾರ್ಯದರ್ಶಿ ಇನಾಯತ್ ಅಲಿ ಅವರ ನೇತೃತ್ವದಲ್ಲಿ ಶುಕ್ರವಾರ ಗುರುಪುರ ಕೈಕಂಬದ ಪೊಳಲಿ ಕ್ರಾಸ್ ನ ಜಯಲಕ್ಷ್ಮೀ ಸಂಕೀರ್ಣದ ಬಳಿ ನಡೆಯಿತು. ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್, ಜನರನ್ನು ದಾರಿ ತಪದಪಿಸುತ್ತಾ ಎದುರಾಳಿ ಬಿಲಿಷ್ಠವಾಗುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ರಾಜ್ಯ ದೇಶದಲ್ಲಿ ಅಧಿಕಾರ […]
Mangaluru | ತಾಯಿಗೆ ಹಲ್ಲೆ ನಡೆಸುತ್ತಿರುವ ಮಗಳು: ವೀಡಿಯೋ ವೈರಲ್

ಮಂಗಳೂರು: ಮಗಳು ತನ್ನ ತಾಯಿಗೆ ಅಮಾನವೀಯವಾಗಿ ಹಲ್ಲೆ ನಡೆಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆ ನಗರ ಹೊರವಲಯದ ಮೂಡುಶೆಡ್ಡೆ ಗ್ರಾ.ಪಂ. ಆವರಣದಲ್ಲಿ ನಡೆದಿದ್ದು, ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೂಡುಶೆಡ್ಡೆಯ ಶಿವನಗರ ಎಂಬಲ್ಲಿ ತಾಯಿ ಮತ್ತು ಮಗಳು ವಾಸಿಸುತ್ತಿದ್ದು, ಇವರ ಮಧ್ಯೆ ಆಗಾಗ ಜಗಳವಾಗುತ್ತಿತ್ತು ಎನ್ನಲಾಗಿದೆ. ಈ ಬಗ್ಗೆ ತಾಯಿ ಕಾವೂರು ಠಾಣೆಗೆ ತೆರಳಿ ದೂರುತ್ತಿದ್ದರು ಎಂದು ತಿಳಿದು ಬಂದಿದೆ. ಪೊಲೀಸರು ತಾಯಿ ಮತ್ತು ಮಗಳಿಗೆ ಬುದ್ಧಿ ಹೇಳಿ ಕಳುಹಿಸಿಕೊಡುತ್ತಿದ್ದರು ಎನ್ನಲಾಗಿದೆ. ಇತ್ತೀಚೆಗೆ […]