ಪೋಕ್ಸೋ ಪ್ರಕರಣದಲ್ಲಿ ಬಿಗ್ ರಿಲೀಫ್: ಮುರುಘಾ ಶ್ರೀ ನಿರ್ದೋಷಿ

ಚಿತ್ರದುರ್ಗ: ಮುರುಘಾ ಮಠದ ಹಾಸ್ಟೆಲ್‌ನ ಇಬ್ಬರು ಅಪ್ರಾಪ್ತ ವಿದ್ಯಾರ್ಥಿನಿರಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದ ಮೇಲೆ ದಾಖಲಾಗಿದ್ದ ಪೋಕ್ಸೊ ಪ್ರಕರಣದಲ್ಲಿ ಮುರುಘಾ ಶ್ರೀ ನಿರ್ದೋಷಿ ಎಂದು ಕೋರ್ಟ್ ತೀರ್ಪು ನೀಡಿದೆ. 2022ರ ಆಗಸ್ಟ್ 26 ರಂದು ಮೈಸೂರಿನ ನಜರಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 3 ವರ್ಷಗಳ ಸುದೀರ್ಘ ತನಿಖೆ ಬಳಿಕ ಚಿತ್ರದುರ್ಗದ 2ನೇ ಜಿಲ್ಲಾ ಅಪರ ಮತ್ತು ಸತ್ರ ನ್ಯಾಯಾಲಯದ ನ್ಯಾ.ಗಂಗಾಧರಪ್ಪ ಚನ್ನಬಸಪ್ಪ ಹಡಪದ್ ಅವರಿದ್ದ ಪೀಠ ನಿರ್ದೋಷಿ ಅಂತ ತೀರ್ಪು ಪ್ರಕಟಿಸಿದೆ. ಇದರೊಂದಿಗೆ ಮೊದಲ ಪ್ರಕರಣ […]
ಮೈಸೂರು: ಸಯ್ಯದ್ ಸೂಫಿಯನ್ ಬರ್ಬರ ಹತ್ಯೆ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಶಾಂತಿನಗರದಲ್ಲಿ ಮಾರಕಾಸ್ತ್ರಗಳು ಝಳಪಿಸಿದೆ. ಸ್ನೇಹಿತನ ಜೊತೆ ಟೀ ಕುಡಿಯಲು ಹೋಗಿದ್ದ ಯುವಕನನ್ನ ಮದ್ಯವ್ಯಸನಿ ಯುವಕರು ಬರ್ಬರವಾಗಿ ಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. 19 ವರ್ಷದ ಯುವಕ ಸಯ್ಯದ್ ಸೂಫಿಯನ್ ಕೊಲೆಯಾಗಿದ್ದು, ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಂಜಾನೆ 5:40 ಸುಮಾರಿಗೆ ಟೀ ಕುಡಿಯಲು ಹೋಗಿದ್ದ ವೇಳೆ ಮದ್ಯವ್ಯಸನಿ ಯುವಕರು ಸೂಫಿಯಾನ್ ಜೊತೆ ಹೊಡೆದಾಡಿದ್ದಾರೆ. ಇದೇ ವೇಳೆ ಚಾಕುವಿನಿಂದ ಚುಚ್ಚಿದ್ದಾರೆ. ಇಬ್ಬರು ಸ್ನೇಹಿತರು ಸೇರಿ ರಸ್ತೆಯಲ್ಲೇ ಅಟ್ಟಾಡಿಸಿ ಕೊಲೆ ಮಾಡಿದ್ದಾರೆ. ಎದೆ […]
ಬಿಸ್ನೆಸ್ನಲ್ಲಿ ಭಾರೀ ಹೊಡೆತ ತಿಂದ ನಟಿ ದೀಪಿಕಾ ಪಡುಕೋಣೆ; ಕೋಟಿ ಕೋಟಿ ನಷ್ಟ

ನಟಿ ದೀಪಿಕಾ ಪಡುಕೋಣೆ ಅವರು ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿದ್ದಾರೆ. ಕೆಲವು ಸಿನಿಮಾಗಳಿಂದ ಅವರು ಹೊರ ಬಂದಿರೋದು ಚರ್ಚೆಗೆ ಕಾರಣ ಆಗಿದೆ. ಈ ಮಧ್ಯೆ ದೀಪಿಕಾ ಪಡುಕೋಣೆ ಅವರು ಬಿಸ್ನೆಸ್ನಲ್ಲಿ ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಅವರ ಒಡೆತನದ ಸ್ಕಿನ್ಕೇರ್ ಕಂಪನಿ ನಷ್ಟದಲ್ಲಿ ಇದೆ. ಈ ಬಗ್ಗೆ ವರದಿ ಪ್ರಸಾರ ಆಗಿದೆ. ದೀಪಿಕಾ ಪಡುಕೋಣೆ ಅವರು ‘82°E’ ಹೆಸರಿನ ಬ್ರ್ಯಾಂಡ್ ಹೊಂದಿದ್ದಾರೆ. 2024ರಲ್ಲಿ ಕಂಪನಿ 21.2 ಕೋಟಿ ರೂಪಾಯಿ ಬಿಸ್ನೆಸ್ ಮಾಡಿತ್ತು. ಅದು ಈಗ 14.7 ಕೋಟಿ ರೂಪಾಯಿಗೆ ಇಳಿಕೆ […]
2 ದಶಕಗಳ ಬಳಿಕ ವಿಎಚ್‌ಪಿ-ಬಜರಂಗದಳ ಜೊತೆ ಮುತಾಲಿಕ್ ದತ್ತ ಮಾಲಾಧಾರಣೆ

►ದತ್ತಜಯಂತಿ ಆಚರಣೆಗೆ ಚಾಲನೆ, ವ್ಯಾಪಕ ಕಟ್ಟೆಚ್ಚರ ಚಿಕ್ಕಮಗಳೂರು:ಕಾಫಿನಾಡಲ್ಲಿ ದತ್ತಜಯಂತಿಗಾಗಿ ಬುಧವಾರ(ನ26) ದತ್ತ ಮಾಲಾಧಾರಣೆ ಆರಂಭವಾಗಿದ್ದು,2 ದಶಕಗಳ ಬಳಿಕ ವಿಶ್ವ ಹಿಂದೂ ಪರಿಷದ್ -ಜರಂಗದಳ ಜೊತೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ದತ್ತ ಮಾಲಾಧಾರಣೆ ಮಾಡಿದ್ದಾರೆ. ನೂರಾರು ದತ್ತಭಕ್ತರು ದತ್ತಜಯಂತಿ ಆಚರಣೆಗೆ ಚಾಲನೆ ನೀಡಿದ್ದು, ಬಿಜೆಪಿ ನಾಯಕ ಸಿ.ಟಿ.ರವಿ, ಪ್ರಮೋದ್ ಮುತಾಲಿಕ್, ಬಜರಂಗದಳದ ರಘ ಸಕಲೇಶಪುರ ಸೇರಿ ನೂರಾರು ಭಕ್ತರು ಮಾಲಾಧಾರಣೆ ಮಾಡಿದರು. 2 ದಶಕಗಳಿಂದ ಪ್ರತ್ಯೇಕವಾಗಿದ್ದ ಮುತಾಲಿಕ್ ಅವರ ಶ್ರೀರಾಮ ಸೇನೆ ಈ ಬಾರಿ ವಿಎಚ್‌ಪಿ-ಜರಂಗದಳ […]
ಮಂಗಳೂರು | ಚೂರಿ ಇರಿತ ಪ್ರಕರಣ; ನಾಲ್ವರ ಬಂಧನ

ಬಜ್ಪೆ: ಇಲ್ಲಿನ ಎಡಪದವು ಎಂಬಲ್ಲಿ ಅಖಿಲೇಶ್ ಎಂಬವರ ಮೇಲೆ ಚೂರಿ ಇರಿದ ಪ್ರಕರಣ ಸಂಬಂಧ ಪೊಲೀಸರು ಎಲ್ಲಾ ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಬಂದರು ನಿವಾಸಿ ಸಿನಾನ್, ವೇಣೂರು ನಿವಾಸಿ ಇರ್ಷಾದ್, ವಾಮಂಜೂರು ನಿವಾಸಿ ಸುಹೈಲ್ ಅಕ್ರಮ್ ಮತ್ತು ವಾಮಂಜೂರು ಪಿಲಿಕುಳ ನಿವಾಸಿ ನಿಸಾನ್ ಬಂಧಿತರು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ. ಬಂಧಿತರ ಪೈಕಿ ಮಂಗಳೂರು ಬಂದರು ನಿವಾಸಿ ಸಿನಾನ್ ನನ್ನು ಸಾರ್ವಜನಿಕರು ಸ್ಥಳದಲ್ಲೇ ಪೊಲೀಸರಿಗೆ ಒಪ್ಪಿಸಿದ್ದರು. ಉಳಿದಂತೆ […]
ಉಡುಪಿಗೆ ಪ್ರಧಾನಿ ಮೋದಿ: ಉಡುಪಿ ಸುತ್ತಲಿನ ಶಾಲೆಗೆ ರಜೆ ಘೋಷಣೆ

ಉಡುಪಿ: ಶ್ರೀ ಕೃಷ್ಣಮಠದಲ್ಲಿ ನಡೆಯುತ್ತಿರುವ ಬೃಹತ್ ಗೀತೋತ್ಸವದ ಹಿನ್ನೆಲೆಯಲ್ಲಿ ನ.28ರಂದು ಜರಗಲಿರುವ ಲಕ್ಷಕಂಠ ಗೀತಾ ಪಾರಾಯಣದಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿಯವರು ಉಡುಪಿಗೆ ಆಗಮಿಸಲಿದ್ದು ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನ.28 ರಂದು ಉಡುಪಿ ನಗರದ ಸುತ್ತ ಮುತ್ತಲ ಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಉಡುಪಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ ನಡೆಯಲಿದ್ದು ಸುಮಾರು 30 ಸಾವಿರ ಮಂದಿ ಭಾಗವಹಿಸುವ ಸಾಧ್ಯತೆ ಇದ್ದು ಈ ವೇಳೆ ಶಾಲಾ ಮಕ್ಕಳ ವಾಹನ ಸಂಚಾರಕ್ಕೆ ತೊಡಕು […]
ಕಾರು ಅಪಘಾತ: ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು

ಕಲಬುರಗಿ: ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಮೃತಪಟ್ಟಿದ್ದಾರೆ. ಕರ್ನಾಟಕ ರಾಜ್ಯ ಖನಿಜ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಮಹಾಂತೇಶ್ ಬೀಳಗಿ ಹಾಗೂ ಅವರ ಸಹೋದರರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು ಇಂದು ಜೇವರ್ಗಿ ಬೈಪಾಸ್ ಬಳಿ ಅಪಘಾತಕ್ಕೀಡಾಗಿದೆ. ಭೀಕರ ಅಪಘಾತದಲ್ಲಿ ಮಹಾಂತೇಶ್ ಬಿಳಗಿ ಅವರ ಸಹೋದರ ಶಂಕರ ಬೀಳಗಿ ಹಾಗೂ ಈರಣ್ಣ ಶಿರಸಂಗಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಹಾಂತೇಶ್ ಬೀಳಗಿ ಅವರನ್ನು ಕಲಬುರಗಿಯ ಖಾಸಗಿ […]
ಇವರು ಪೊಲೀಸರಲ್ಲ ದರೋಡೆಕೋರರು: ರಾಬರಿ ಕೇಸ್ನಲ್ಲಿ ಇಬ್ಬರು ಪಿಎಸ್ಐಗಳು ಅರೆಸ್ಟ್

ದಾವಣಗೆರೆ: ಕಳ್ಳತನವಾದ್ರೆ, ರಾಬರಿಗಳು ನಡೆದರೆ ಜನರು ಪೊಲೀಸರ ಬಳಿ ಹೋಗ್ತಾರೆ. ಆದ್ರೆ ಅದೇ ಪೊಲೀಸರೇ ದರೋಡೆಗೆ ಇಳಿದ್ರೆ ಸ್ಥಿತಿ ಏನಾಗಬಹುದು? ಹೌದು, ಅಂತಹುದ್ದೇ ಒಂದು ಘಟನೆ ರಾಜ್ಯದಲ್ಲಿ ನಡೆದಿರೋದು ಬೆಳಕಿಗೆ ಬಂದಿದೆ. ಬಂಗಾರ ವ್ಯಾಪಾರಿಯನ್ನು ಬೆದರಿಸಿ ಲಕ್ಷಾಂತರ ರೂ. ಮೌಲ್ಯದ ಚಿನ್ನ ಲಪಟಾಯಿಸಿದ್ದ ಪ್ರಕರಣ ಸಂಬಂಧ ಇಬ್ಬರು ಪೊಲೀಸ್ ಅಧಿಕಾರಿಗಳನ್ನ ದಾವಣಗೆರೆಯಲ್ಲಿ ಬಂಧಿಸಲಾಗಿದೆ. ಮಾಳಪ್ಪ ಚಿಪ್ಪಲಕಟ್ಟಿ ಹಾಗೂ ಪ್ರವೀಣ್ ಕುಮಾರ್ ಬಂಧಿತ ಪಿಎಸ್ಐಗಳಾಗಿದ್ದಾರೆ. ಘಟನೆ ಏನು?ಕಾರವಾರ ಮೂಲದ ಚಿನ್ನದ ವ್ಯಾಪಾರಿ ವಿಶ್ವನಾಥ್ ಎಂಬವರು ದಾವಣಗೆರೆಯ ಚಿನ್ನದ ವ್ಯಾಪಾರಿಗಳಿಂದ […]
ರಾಮ ಮಂದಿರಕ್ಕಾಗಿ ಪ್ರಾಣ ತ್ಯಾಗ ಮಾಡಿದವರಿಗೆ ಇಂದು ಶಾಂತಿ ಸಿಕ್ಕಿರಬಹುದು: ಮೋಹನ್ ಭಾಗವತ್

ಅಯೋಧ್ಯೆ: ಅಯೋಧ್ಯೆಯ ರಾಮ ಮಂದಿರದ ನಿರ್ಮಾಣಕ್ಕಾಗಿ ಪ್ರಾಣ ತ್ಯಾಗ ಮಾಡಿದವರಿಗೆ ಇಂದು ಶಾಂತಿ ಸಿಕ್ಕಿರಬಹುದು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಇಂದು ರಾಮ ಮಂದಿರದ ಶಿಖರದ ಮೇಲೆ ಕೇಸರಿ ಬಾವುಟ ಹಾರಿಸುವ ಮೂಲಕ ಧ್ವಜಾರೋಹಣ ನಡೆಸಲಾಯಿತು. ಈ ವೇಳೆ ಮಾತನಾಡಿದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಹಿಂದೂಗಳು 500 ವರ್ಷಗಳ ಹೋರಾಟದ ಮೂಲಕ ತಮ್ಮ ಸತ್ವವನ್ನು ಸಾಬೀತುಪಡಿಸಿದ್ದಾರೆ. ಶತಮಾನಗಳ ಹೋರಾಟವನ್ನು ನಿರ್ಲಕ್ಷಿಸಿದರೂ ಸಹ ಈ ಕ್ಷಣವನ್ನು ತಲುಪಲು ಕನಿಷ್ಠ 30 […]
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಬಹಿರಂಗ ಅಧಿವೇಶನ, ಸಾಧಕರಿಗೆ ಸನ್ಮಾನ

ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟ ಇದರ 29ನೇ ವಾರ್ಷಿಕ ಮಹಾಸಭೆ ಬಹಿರಂಗ ಅಧಿವೇಶನ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಬಂಟ್ಸ್ ಹಾಸ್ಟೆಲ್ ಬಳಿಯ ಬಂಟರ ಯಾನೆ ನಾಡವರ ಮಾತೃ ಸಂಘದ ಮೈದಾನದಲ್ಲಿ ಜರುಗಿತು. ಕಾರ್ಯಕ್ರಮವನ್ನು ಅತಿಥಿಗಳು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತಾಡಿದ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರು, ಸುಸಂಸ್ಕೃತ ಸಮಾಜಕ್ಕೆ ಇನ್ನೊಂದು ಹೆಸರೇ ನಮ್ಮ ಬಂಟ ಸಮಾಜ. ಲಕ್ಷ್ಮಿ, ಜ್ಞಾನ ಶಕ್ತಿ, ಕ್ರಿಯಾ ಶಕ್ತಿ ಎಲ್ಲವೂ ಒಗ್ಗೂಡಿದಾಗ ಸಮಾಜದ ಶ್ರೇಯಸ್ಸು ಸಾಧ್ಯ. […]