ಮದುವೆ ವಿಚಾರ ಮಾತಾಡೋಣ ಬಾ: ಬಿ.ಟೆಕ್ ವಿದ್ಯಾರ್ಥಿಯನ್ನು ಕರೆಸಿ ಬ್ಯಾಟ್‌ನಲ್ಲಿ ಬಡಿದು ಕೊಂದ ಗರ್ಲ್‌ಫ್ರೆಂಡ್ ಕುಟುಂಬ!

ಅಮರಾವತಿ: ಮದುವೆ ಬಗ್ಗೆ ಮಾತಾಡೋಣ ಬಾ ಎಂದು ಕರೆಸಿ ಯುವಕನನ್ನು ಪ್ರೇಯಸಿಯ ಕುಟುಂಬಸ್ಥರು ಬ್ಯಾಟ್‌ನಲ್ಲಿ ಹೊಡೆದು ಕೊಂದ ಘಟನೆ ತೆಲಂಗಾಣದಲ್ಲಿ ನಡೆದಿದೆ. ಹತ್ಯೆಯಾದ ಯುವಕನನ್ನು ಜ್ಯೋತಿ ಶ್ರವಣ್ ಸಾಯಿ ಎಂದು ಗುರುತಿಸಲಾಗಿದೆ. ಶ್ರವಣ್ ಸಾಯಿ ಸೇಂಟ್ ಪೀಟರ್ಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎರಡನೇ ವರ್ಷದ ಬಿ.ಟೆಕ್ ಓದುತ್ತಿದ್ದ ಎಂದು ತಿಳಿದುಬಂದಿದೆ. ಈತ ಶ್ರೀಜಾ (19) ಎಂಬ ಯುವತಿಯನ್ನು ಪ್ರೀತಿಸುತ್ತಿದ್ದ. ಈ ಬಗ್ಗೆ ಯುವತಿಯ ಕುಟುಂಬಸ್ಥರು ಆತನಿಗೆ ಬೆದರಿಕೆ ಹಾಕಿ ಎಚ್ಚರಿಕೆ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಶ್ರವಣ್‌ನನ್ನು ಮನೆಗೆ […]
ಬಿಜೆಪಿ ಕಾರ್ಯಕರ್ತನೊಂದಿಗೆ ಮುಸ್ಲಿಂ ಲೀಗ್ ಅಭ್ಯರ್ಥಿ ಪರಾರಿ..!

ತಲಶ್ಶೇರಿ: ಚೋಕ್ಲಿ ಪಂಚಾಯತ್‌ನ ಒಂಬತ್ತನೇ ವಾರ್ಡ್ ಕಂಜರತೀನ್‌ಕೀಝುವಿನಿಂದ ನಾಪತ್ತೆಯಾಗಿದ್ದ ಯುಡಿಎಫ್ ಅಭ್ಯರ್ಥಿ ಮತ್ತು ಮುಸ್ಲಿಂ ಲೀಗ್ ಕಾರ್ಯಕರ್ತೆ ಟಿಪಿ ಅರುವ (29) ಬಿಜೆಪಿ ಕಾರ್ಯಕರ್ತನೊಂದಿಗೆ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾದರು. ಮಹಿಳೆ ತನ್ನ ಸ್ವಂತ ಇಚ್ಛೆಯಿಂದ ಹೋಗಿದ್ದಾಳೆಂದು ಹೇಳಿದ ನಂತರ ಮ್ಯಾಜಿಸ್ಟ್ರೇಟ್ ಯುವಕನೊಂದಿಗೆ ಮಹಿಳೆಯನ್ನು ಬಿಡುಗಡೆ ಮಾಡಿದರು. ಮಹಿಳೆಯ ಕಣ್ಮರೆ ಘಟನೆಯನ್ನು ವಾರ್ಡ್‌ನಲ್ಲಿ ಮತಗಳನ್ನು ವಿಭಜಿಸಲು ಸಿಪಿಎಂ ನಡೆಸಿದ ನಾಟಕ ಎಂದು ಯುಡಿಎಫ್ ಬಣ್ಣಿಸಿದೆ. ಸಿಪಿಎಂ ಅಭ್ಯರ್ಥಿಯನ್ನು ಮರೆಮಾಡಿರಬಹುದು ಎಂಬ ಆರೋಪವಿತ್ತು. ಆದಾಗ್ಯೂ, ಎಲ್‌ಡಿಎಫ್ ನಾಯಕರು ಈ ವಿಷಯದ […]
ಮೋದಿ ನಂತರ ಬಿಜೆಪಿಯ ಪ್ರಧಾನ ಮಂತ್ರಿ ಅಭ್ಯರ್ಥಿ ಯಾರು?: RSS ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದೇನು?

ಚೆನ್ನೈ: ಬಿಜೆಪಿಯಲ್ಲಿ ಪ್ರಧಾನ ಮಂತ್ರಿ ಹುದ್ದೆಗೆ ನರೇಂದ್ರ ಮೋದಿ ಅವರ ಉತ್ತರಾಧಿಕಾರಿ ಯಾರು ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುತ್ತದೆ. ಆದರೆ ಆ ಬಗ್ಗೆ ಮಾತನಾಡಲು ನಿರಾಕರಿಸಿರುವ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಈ ವಿಷಯದ ಬಗ್ಗೆ ಪ್ರಧಾನಿ ಮತ್ತು ಬಿಜೆಪಿ ಚರ್ಚಿಸಿ ನಿರ್ಧರಿಸಬೇಕು ಎಂದು ಹೇಳಿದ್ದಾರೆ. ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಭಾಗವತ್ ಈ ಹೇಳಿಕೆ ನೀಡಿರುವುದು ಸುದ್ದಿಯಾಗಿದೆ. RSS 100 years: ಚೆನ್ನೈಯಲ್ಲಿ ನಡೆದ ಸಾಗಾ ಆಫ್ ಆರ್‌ಎಸ್‌ಎಸ್ ಎನ್ವಿಶಿನಿಂಗ್ ದಿ ವೇ […]
ಮೋದಿ ತಮ್ಮ ಕೆಲಸದ ಅರ್ಧ ಭಾಗ ವಿದೇಶದಲ್ಲಿ ಕಳೆಯುತ್ತಾರೆ: ಪ್ರಿಯಾಂಕಾ ಗಾಂಧಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಕೆಲಸದ ಅರ್ಧ ಭಾಗ ವಿದೇಶದಲ್ಲೇ ಕಳೆಯುತ್ತಾರೆ ಎಂದು ಬುಧವಾರ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಟೀಕಿಸಿದ್ದಾರೆ. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿದೇಶ ಪ್ರವಾಸಕ್ಕೆ ಕಿಡಿ ಕಾರಿದ್ದ ಬಿಜೆಪಿ ವಿರುದ್ಧ ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದರು. ರಾಹುಲ್ ಗಾಂಧಿ ಪ್ರಶ್ನೆಗಳಿಗೆ ಉತ್ತರ ಸಿಗದಾಗ ಬಿಜೆಪಿ ನಾಯಕರು ಇಂತಹ ಆರೋಪಗಳನ್ನು ಮಾಡುತ್ತಾರೆ ಎಂದು ಲೇವಡಿ ಮಾಡಿದ್ದಾರೆ. ಕಾಂಗ್ರೆಸ್ ನಾಯಕ ಗೌರವ್ ಗೊಗೊಯ್ ಮಾತನಾಡಿ, ಚುನಾವಣಾ ಅಕ್ರಮಗಳ ಕುರಿತು […]
ಉಡುಪಿ | ಅಕ್ರಮ ಕಸಾಯಿಖಾನೆ ಪ್ರಕರಣಕ್ಕೆ ತಿರುವು; ಗೋವು ನೀಡಿದ್ದೇ ಸಂಘಪರಿವಾರದ ಕಾರ್ಯಕರ್ತ ಶಿವಪ್ರಸಾದ್..!

►ಕಸಾಯಿಖಾನೆಯ ಮನೆಯನ್ನು ಸರಕಾರ ಮುಟ್ಟುಗೋಲು ಹಾಕಬೇಕು ಎಂದು ಆಗ್ರಹಿಸಿದ್ದ ಬಜರಂಗದಳ..! ಉಡುಪಿ: ಕಸಾಯಿಖಾನೆಗೆ ದನ ಮತ್ತು ಕರುವನ್ನು ಮಾರಾಟ ಮಾಡಿದ ಆರೋಪದಲ್ಲಿ ಸ್ಥಳೀಯ ಸಂಘ ಪರಿವಾರದ ಕಾರ್ಯಕರ್ತನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ನಲ್ಲೂರಿನ ಶಿವಪ್ರಸಾದ್(28) ಬಂಧಿತ ಆರೋಪಿ. ನ.12ರಂದು ನಲ್ಲೂರಿನ ಮನೆಯೊಂದಕ್ಕೆ ದಾಳಿ ನಡೆಸಿದ ಕಾರ್ಕಳ ಗ್ರಾಮಾಂತರ ಪೊಲೀಸರು ಅಕ್ರಮವಾಗಿ ಕಸಾಯಿಖಾನೆ ನಡೆಸುತ್ತಿದ್ದ ಆರೋಪದಲ್ಲಿ ಅಶ್ರಫ್ ಅಲಿ ಹಾಗೂ ಆತನ ಪತ್ನಿಯನ್ನು ಬಂಧಿಸಿದ್ದರು. ಈ ಬಗ್ಗೆ ವಿಶ್ವ ಹಿಂದೂ ಪರಿಷತ್, ಬಜರಂಗ ದಳದ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ದನಕರುವನ್ನು […]
ದುಬೈ; ಕಾಸರಗೋಡಿನ ಯುವಕ ನಿಗೂಢ ರೀತಿಯಲ್ಲಿ ಸಮುದ್ರದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ದುಬೈ: ಪೋರ್ಟ್ ರಾಶೀದ್ ಬಳಿ ಕಾಸರಗೋಡು ಮೂಲದ ಯುವಕನೊಬ್ಬ ಸಮುದ್ರದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಮಂಜೇಶ್ವರಂ ತಾಲೂಕಿನ ಮಂಗಳಪಾಡಿ ತಾಲೂಕಿನ ಪಂಚಂ ನಿವಾಸಿ ಮೊಹಮ್ಮದ್ ಶಫೀಕ್ (25) ಮೃತ ಯುವಕ. ಘಟನೆಯ ಬಗ್ಗೆ ದುಬೈ ಪೊಲೀಸರು ವಿವರವಾದ ತನಿಖೆಯನ್ನು ಪ್ರಾರಂಭಿಸಿದ್ದಾರೆ. ತನ್ನ ರೂಮ್ ಮೇಟ್ ಗಳೊಂದಿಗೆ ವಾಗ್ವಾದದ ನಂತರ ಅವನು ನಾಪತ್ತೆಯಾಗಿದ್ದಾನೆ. ವರದಿಗಳ ಪ್ರಕಾರ, ಅವರ ಸಂಬಂಧಿಕರು ನೀಡಿದ ದೂರಿನ ಮೇರೆಗೆ ದುಬೈ ಪೊಲೀಸರು ನಡೆಸಿದ ತನಿಖೆಯಲ್ಲಿ ಇಬ್ಬರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಮಹಮ್ಮದ್ ಶಫೀಕ್ ಹಸೈನಾರ್ ಮತ್ತು ಸಫಿಯಾ […]
ದುಬೈಯಲ್ಲಿ ಅದ್ಧೂರಿಯಾಗಿ ನೆರವೇರಿದ ಬದ್ರಿಯಾ ಪ್ರೀಮಿಯರ್ ಲೀಗ್-8 ಸೀಸನ್

ದುಬೈ: ಅನಿವಾಸಿ ಕನ್ನಡಿಗರ ಸಾಮಾಜಿಕ ಸಂಘಟನೆಯಾದ ದುಬೈ ಯುವಕರ ಕೂಟವಾದ ಬದ್ರಿಯಾ ಫ್ರೆಂಡ್ಸ್ ಸಂಘಟನೆಯ ವರ್ಷಂಪ್ರತಿ ನಡೆಯುವ ಕ್ರಿಡಾ ಕಾರ್ಯಕ್ರಮವು ಆದಿತ್ಯವಾರ BCC ಗ್ರೌಂಡ್ ಶಾರ್ಜಾದಲ್ಲಿ ಅದ್ಧೂರಿಯಾಗಿ ನೆರವೇರಿತು. ಸಾಮಾಜಿಕ ಕ್ಷೇತ್ರದಲ್ಲಿ ತನ್ನದೆ ಶೈಲಿಯ ಚಾಪು ಮೂಡಿಸಿದ ಬದ್ರಿಯಾ ಫ್ರೆಂಡ್ಸ್ ಸಂಘಟನೆಯ ಈ ಕ್ರೀಡಾಕೂಟವು ಸಂಘಟನೆಯ ಕಾರ್ಯ ಪ್ರವೃತ್ತಿಗೆ ಇನ್ನಷ್ಟು ಮೆರೆಗು ನೀಡುವಂತಾಯಿತು. ಕ್ರೀಡಾ ಕೂಟದ ಪ್ರಾಯೋಜಕತ್ವವನ್ನು ಗ್ರೀನ್ ಟೀಮ್ ನವೀಕರಣ ತಾಂತ್ರಿಕ ಸಂಸ್ಥೆಯು ವಹಿಸಿಕೊಂಡಿತು. ಫೈನಲ್ ಪಂದ್ಯದಲ್ಲಿ ಅಲ್ ದನಾ X1 ತಂಡವು ರಾಯಲ್ ಥಂಡರ್ […]
RSS ಪಥಸಂಚಲನದಲ್ಲಿ ಒಂದೇ ಒಂದು ಕಡೆಯೂ ಗಲಾಟೆ, ದೊಂಬಿ ಆಗಿಲ್ಲವೆಂದ ಕಾಂಗ್ರೆಸ್ ಸರ್ಕಾರ!

ಬೆಳಗಾವಿ: ಸರ್ಕಾರಕ್ಕೆ ಸಂಬಂಧಿಸಿದ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮ ಹಾಗೂ ಪಥಸಂಚಲನಕ್ಕೆ ಅವಕಾಶ ನೀಡಲೇಬಾರದು. ಆರ್‌ಎಸ್‌ಎಸ್ ಸಂವಿಧಾನ ವಿರೋಧಿ ಚಟುವಟಿಕೆ ಮಾಡುತ್ತದೆ ಎಂದು ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಸೇರಿ ಅನೇಕ ಕಾಂಗ್ರೆಸ್ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಅದರಲ್ಲೂ, ಪ್ರಿಯಾಂಕ್ ಖರ್ಗೆ ತವರು ಜಿಲ್ಲೆ ಕಲಬುರಗಿಯ ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅವಕಾಶ ನೀಡುವ ವಿಚಾರ ಕೋರ್ಟ್ ಮೆಟ್ಟಿಲೇರಿ, ಕೊನೆಗೂ ಪಥಸಂಚಲನ ನಡೆದಿದೆ. ಅಂಥದ್ದರಲ್ಲಿ, ಈ ವರ್ಷ ಕರ್ನಾಟಕದಾದ್ಯಂತ 518 ಕಡೆ ಆರ್‌ಎಸ್‌ಎಸ್ ಕಾರ್ಯಕ್ರಮ, ಪಥಸಂಚಲ ನಡೆದಿದೆ. ಎಲ್ಲಿಯೂ […]
ರಿಯಲ್ ಲೈಫ್ ಹೀರೋ: ಭಿಕ್ಷೆ ಬೇಡುತ್ತಿದ್ದ ಯುವತಿಯ ರಕ್ಷಿಸಿ ಮದುವೆಯಾದ ಗೋಲು ಯಾದವ್

ಬಕ್ಸಾರ್: ರೈಲಿನಲ್ಲಿ ಭಿಕ್ಷೆ ಬೇಡುತ್ತಿದ್ದ ಯುವತಿಯನ್ನು ರಕ್ಷಿಸಿ ಆಕೆಯನ್ನು ಕುಟುಂಬಸ್ಥರೊಂದಿಗೆ ಸೇರಿಸಿ ಆಕೆಯನ್ನೇ ಯುವಕನೋರ್ವ ಮದುವೆಯಾಗಿರುವ ಅತ್ಯಪರೂಪದ ಘಟನೆ ಬಿಹಾರದಲ್ಲಿ ವರದಿಯಾಗಿದೆ. ಬಿಹಾರದ ಬಕ್ಸಾರ್ ನಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ನಿವಾಸಿ ಗೋಲು ಯಾದವ್ ಅನಾಥ ಹುಡುಗಿಯನ್ನು ಕೆಟ್ಟದೃಷ್ಟಿಗಳಿಂದ ರಕ್ಷಿಸಿ, ಅವಳನ್ನು ಮದುವೆಯಾಗಿ, ಹೀರೋ ಆಗಿದ್ದಾರೆ. ಆ ಮೂಲಕ ಗೋಲು ಯಾದವ್ ಇದೀಗ ಬಿಹಾರದಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದ್ದಾನೆ. ಅಲ್ಲದೆ ಗೋಲು ಯಾದವ್ ನ ಮದುವೆಯ ಫೋಟೋಗಳು ವ್ಯಾಪಕ ವೈರಲ್ ಆಗುತ್ತಿದೆ. ವರದಿಗಳ ಪ್ರಕಾರ, ಗೋಲು […]
ಬೆಂಗಳೂರಿನಲ್ಲಿ ರಸ್ತೆ ಅಪಘಾತ: ಮಂಗಳೂರಿನ ಯುವಕ ಮೃತ್ಯು

ಬೆಂಗಳೂರು: ಬೆಂಗಳೂರಿನ ಕೂಡ್ಲು ಗೇಟ್ ಸಮೀಪ ಮಧ್ಯಾಹ್ನ ನಡೆದ ರಸ್ತೆ ಅಪಘಾತವೊಂದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಯುವಕನೋರ್ವ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಜಿಲಮೊಗರು ಸಮೀಪದ ಅಲ್ಲಿಪಾದೆ ಎಂಬಲ್ಲಿನ ಯುವಕ ಮುಹಮ್ಮದ್ ಹಾರಿಸ್ (34) ಮೃತಪಟ್ಟ ಯುವಕ. ಮುಹಮ್ಮದ್ ಹಾರಿಸ್ ಬೆಂಗಳೂರಿನ ಏಸಿ ಕಂಪನಿಯೊಂದರಲ್ಲಿ ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದು, ಕೆಲಸದ ನಿಮಿತ್ತ ಇಂದು ತನ್ನ ಸಹೋದ್ಯೋಗಿಯೋರ್ವನೊಡನೆ ಬೈಕಿನಲ್ಲಿ ತೆರಳುತ್ತಿದ್ದಾಗ ಗೂಡ್ಸ್ ವಾಹನವು ಹಿಂಬದಿಯಿಂದ ಢಿಕ್ಕಿಯಾಗಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ […]