Flash News

ಹಾಸನ | ಮನೆಯಲ್ಲಿ ನಗ್ನವಾಗಿ ಒಂಟಿ ಮಹಿಳೆಯ ಶವ ಪತ್ತೆ: ಕೊಲೆ ಶಂಕೆ

ಹಾಸನ: ಬೇಲೂರು ಪಟ್ಟಣದ ಗಾಣಿಗರ ಬೀದಿಯ ಮನೆಯೊಂದರಲ್ಲಿ ನಗ್ನ ಸ್ಥಿತಿಯಲ್ಲಿ ಒಂಟಿ ಮಹಿಳೆಯ ಶವ ಪತ್ತೆಯಾಗಿದೆ. ಮೃತ ಮಹಿಳೆಯನ್ನು ಚಿಕ್ಕಮಗಳೂರಿನ ಮಲ್ಲೇನಹಳ್ಳಿ ಗ್ರಾಮದ ಸ್ಪಂದನ (34) ಎಂದು ಗುರುತಿಸಲಾಗಿದೆ. ಮಹಿಳೆ ಪತಿಯಿಂದ ದೂರಾಗಿ 8 ದಿನಗಳ ಹಿಂದೆ ಬೇಲೂರಿನಲ್ಲಿ ಬಾಡಿಗೆ ಮನೆಗೆ ಬಂದು ನೆಲೆಸಿದ್ದಳು. ಎರಡು ದಿನಗಳಿಂದ ಮನೆಯಲ್ಲಿ ಯಾರೂ ಇಲ್ಲದ್ದನ್ನ ಸ್ಥಳೀಯರು ಗಮನಿಸಿದಾಗ ಈ ಪ್ರಕರಣ ಬಯಲಾಗಿದೆ. ಮನೆಯ ಬಾಗಿಲು ತೆರೆದಿದ್ದರೂ ಯಾರ ಸುಳಿವು ಇಲ್ಲದೇ ಇದ್ದಿದ್ದರಿಂದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು […]

ಫರಂಗಿಪೇಟೆ | ರೈಲ್ವೆ ಇಲಾಖೆಯ ಅರ್ಧಂಬರ್ಧ ಕಾಮಗಾರಿ: ಸ್ಪೀಕರ್ ಯು.ಟಿ ಖಾದರ್ ಕರೆ ಬೆನ್ನಲ್ಲೇ ಇಲಾಖೆ ಸ್ಪಂದನೆ

ಫರಂಗಿಪೇಟೆ: ಅಮ್ಮೆಮ್ಮಾರ್- ಫರಂಗಿಪೇಟೆಯಲ್ಲಿ ರೈಲ್ವೆ ಕಾಮಗಾರಿ ಅರ್ಧಂಬರ್ಧ ಪೂರ್ಣಗೊಂಡಿದ್ದು, ಸ್ಪೀಕರ್ ಯು.ಟಿ ಖಾದರ್ ಕರೆ ಬೆನ್ನಲ್ಲೇ ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಹಾರದ ಭರವಸೆ ನೀಡಿದ್ದಾರೆ. ಅಮ್ಮೆಮ್ಮಾರ್ ನಲ್ಲಿ ಸುಮಾರು 5 ಸಾವಿರ ಜನಸಂಖ್ಯೆ ಇದ್ದು, ಇಲ್ಲಿ ಹಲವು ವರ್ಷಗಳಿಂದ ರೈಲ್ವೆ ಅಂಡರ್ ಪಾಸ್ ಮಾಡಲಾಗಿದ್ದು, ಅದು ಕೂಡ ಅರ್ಧಂಬರ್ಧ ಮಾಡಲಾಗಿದೆ. ಅಲ್ಲಿ ಮೂಲ ಸೌಕರ್ಯ ಕೂಡ ಸರಿಯಾಗಿಲ್ಲ. ಇದರಿಂದ ಜನಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ರೈಲು ಹಾದು ಹೋಗಲು ಕನಿಷ್ಠ ಅರ್ಧಗಂಟೆ ಹಿಡಿಯುತ್ತದೆ‌. ರೈಲ್ವೆ ಇಲಾಖೆ […]

ಬಂಟ್ವಾಳ: ಟೆಕ್ಸ್ ಟೈಲ್ಸ್ ಮಾಲಿಕನಿಗೆ ಪತ್ನಿಯಿಂದಲೇ ಚೂರಿ ಇರಿತ!

ಬಂಟ್ವಾಳ: ಟೆಕ್ಸ್ ಟೈಲ್ಸ್ ಮಾಲಿಕನಿಗೆ ಪತ್ನಿಯೇ ಚೂರಿಯಿಂದ ಇರಿದಿರುವ ಘಟನೆ ಬಿ.ಸಿ.ರೋಡ್ ಕೆ.ಎಸ್.ಆರ್.ಟಿಸಿ ಬಸ್ ನಿಲ್ದಾಣ ಬಳಿ ನಡೆದಿದೆ. ಪತಿ ಕೃಷ್ಣ ಪ್ರಸಾದ್ ಗಾಯಗೊಂಡಿದ್ದು, ಪತ್ನಿಯನ್ನು ಬಂಧಿಸಲಾಗಿದೆ. ಹಲವು ದಿನಗಳಿಂದ ಪತಿ ಹತ್ಯೆಗೆ ಕಾದು ಕುಳಿತಿದ್ದ ಪತ್ನಿ ಜ್ಯೋತಿ ಕಾದುಕುಳಿತಿದ್ದಳು ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ

ಮಂಗಳೂರು: ಸುಖಾನಂದ್ ಶೆಟ್ಟಿ ಕೊಲೆ ಪ್ರಕರಣ, 19 ವರ್ಷಗಳ ಬಳಿಕ ಆರೋಪಿಯ ಬಂಧನ

ಮಂಗಳೂರು: 2006ರ ಡಿಸೆಂಬರ್ 1ರಂದು ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಬೆಟ್ಟು ಬಳಿ ನಡೆದಿದ್ದ ಸುಖಾನಂದ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಆರೋಪಿಗಳಿಗೆ ಆಶ್ರಯ ನೀಡಿ ತಲೆಮರೆಸಿಕೊಂಡಿದ್ದ ಮುಖ್ಯ ಆರೋಪಿ ಅಬ್ದುಲ್ ಸಲಾಂ ಅಡ್ಡೂರು (ಕಿನ್ನಿಗೊಳಿ ನಿವಾಸಿ) ಅವರನ್ನು 19 ವರ್ಷಗಳ ಬಳಿಕ ಮಂಗಳೂರು ಪೊಲೀಸರು ಬಂಧಿಸಿದ್ದಾರೆ. 01.12.2006ರಂದು ಪ್ರಮುಖ ಆರೋಪಿ ಕಬೀರ್ ಮತ್ತು ಸಹಚರರು ಸುಖಾನಂದ್ ಶೆಟ್ಟಿ ಅವರನ್ನು ಕೊಲೆ ಮಾಡಿ ಪರಾರಿಯಾಗಿದ್ದರು. ಕೊಲೆ ನಂತರ ಕಬೀರ್‌ಗೆ ಅಡ್ಡೂರು ಸಹೋದರರಾದ ಲತೀಫ್ (ಅಡ್ಡೂರು ಲತೀಫ್) ಹಾಗೂ ಅಬ್ದುಲ್ […]

ಮಂಗಳೂರಿನಲ್ಲಿ ನೀರಿಲ್ಲ: ಖಾಸಗಿಯವರ ಬಿಲ್ಡಿಂಗ್ ಕಾಮಗಾರಿ ವೇಳೆ ಭಾರೀ ಎಡವಟ್ಟು..!

► ನಗರದ ವಸತಿ ಸಮುಚ್ಛಯ, ಹೊಟೇಲ್, ಆಸ್ಪತ್ರೆಗಳಲ್ಲಿ ನೀರಿನ ಅಭಾವ ಮಂಗಳೂರು,: ನಗರದ ವಿವಿಧ ಪ್ರದೇಶಗಳಿಗೆ ನೀರು ಸರಬರಾಜು ಮಾಡುವ ಮುಖ್ಯ ಪೈಪ್ ಲೈನ್ ಪಡೀಲ್- ಕಣ್ಣೂರು ಬಳಿ ಕಾಮಗಾರಿ ವೇಳೆ ಹಾನಿಗೊಳಗಾದ ಪರಿಣಾಮ ಸೋಮವಾರ ಮತ್ತು ಮಂಗಳವಾರ ನೀರು ಪೂರೈಕೆ ಸ್ಥಗಿತವಾಗಿತ್ತು. ಇದರಿಂದ ನಗರದಲ್ಲಿ ನೀರಿನ ಸಮಸ್ಯೆ ತಲೆದೋರಿದ್ದು, ಜನರು ಪರದಾಡುವಂತಾಗಿದೆ. ಕಳೆದ ಬಾರಿ NRC ವಿರುದ್ಧ ನಡೆದ ಪ್ರತಿಭಟನೆಗೆ ಬಳಕೆಯಾಗಿದ್ದ ಮೈದಾನದಲ್ಲಿ ಖಾಸಗಿಯವರು ಕಟ್ಟಡ ನಿರ್ಮಾಣದಲ್ಲಿ ತೊಡಗಿದ್ದಾರೆ. ಇದಕ್ಕಾಗಿ ಭಾರೀ ಪ್ರಮಾಣದಲ್ಲಿ ಹೆದ್ದಾರಿಗೆ ಸಂಪರ್ಕಕ್ಕಾಗಿ […]

ಬೆಂಗಳೂರಲ್ಲಿ ಹಾಡಹಗಲೇ ಮಹಾ ದರೋಡೆ; ನಡು ರಸ್ತೆಯಲ್ಲೇ 7 ಕೋಟಿ ದೋಚಿದ ಕಳ್ಳರು!

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ (ಇಂದು) ಮಧ್ಯಾಹ್ನ ಮಹಾ ದರೋಡೆ ನಡೆದಿದೆ. ಎಟಿಎಂಗೆ ಹಣ ಸಾಗಿಸುವ ವಾಹನವನ್ನು ರಸ್ತೆ ಮಧ್ಯೆದಲ್ಲೇ ಅಡ್ಡಗಟ್ಟಿದ ದರೋಡೆಕೋರರು ಕೋಟ್ಯಂತರ ರೂಪಾಯಿ ದರೋಡೆ ಮಾಡಿದೆ. ಬೆಂಗಳೂರಿನ ಜಯದೇವ ಡೈರಿ ಸರ್ಕಲ್ ಫ್ಲೈ ಓವರ್ ಮೇಲೆ (ಅಶೋಕ ಪಿಲ್ಲರ್‌ ಬಳಿ) ಈ ಘಟನೆ ನಡೆದಿದೆ. ವಾಹನದಲ್ಲಿದ್ದ 7 ಕೋಟಿ 11 ಲಕ್ಷ ರೂಪಾಯಿ ಹಣವನ್ನ ದೋಚಿ ದರೋಡೆಕೋರರು ಪರಾರಿಯಾಗಿದ್ದಾರೆ. ಸದ್ಯ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಸೌತ್ ಎಂಡ್ ಸರ್ಕಲ್ ಬಳಿಯ […]

ಮೋಸದಿಂದ ಚುನಾವಣೆ ಗೆಲ್ಲುವಂತಹ ಪ್ರಧಾನಿಯನ್ನು ಎಲ್ಲೂ ನೋಡಿಲ್ಲ: ಸಚಿವ ಸಂತೋಷ್ ಲಾಡ್

ಹುಬ್ಬಳ್ಳಿ: ಮೋಸದಿಂದ ಚುನಾವಣೆ ಗೆಲ್ಲುವಂತಹ ಪ್ರಧಾನಿಯನ್ನು ಎಲ್ಲೂ ನೋಡಿಲ್ಲ. ಬಿಜೆಪಿ ಮೋಸದಿಂದ ಬಿಹಾರ ಚುನಾವಣೆ ಗೆದ್ದಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಆರೋಪಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಹಾರ ಚುನಾವಣೆ ವೇಳೆ ದೆಹಲಿಯಲ್ಲಿ ಬಾಂಬ್ ಬ್ಲಾಸ್ಟ್ ಆಗುತ್ತೆ. ದೆಹಲಿ ಸ್ಫೋಟ ಆದಾಗ ಪ್ರಧಾನಿ ಎಲ್ಲಿದ್ದರು. ದುರ್ಘಟನೆ ಸಂಭವಿಸಿದ ಕೂಡಲೇ ಮೋದಿ ವಾಪಸ್ ಬರಬಹುದಿತ್ತು. ಆದರೆ ಭೂತನ್ ರಾಜನ ಹುಟ್ಟುಹಬ್ಬ ಮುಗಿಸಿ ಬಂದಿದ್ದಾರೆ ಎಂದು ಟೀಕಿಸಿದರು. ಚುನಾವಣಾ ಆಯೋಗ ಬಿಜೆಪಿ ಅಣತಿಯಂತೆ ಕೆಲಸ ಮಾಡಿದೆ. ಪೋಸ್ಟಲ್ ಬ್ಯಾಲೆಟ್‌ನಲ್ಲಿ […]

Chikkamagaluru | ಪ್ರವಾಸಿಗರೇ ಗಮನಿಸಿ: ಮುಳ್ಳಯ್ಯನಗಿರಿ ತಪ್ಪಲು 4 ದಿನ ಬಂದ್

ಚಿಕ್ಕಮಗಳೂರು: ದತ್ತಪೀಠದಲ್ಲಿ ದತ್ತಜಯಂತಿ ಹಿನ್ನೆಲೆ ಡಿ.1ರಿಂದ 4ರವರೆಗೆ ಚಿಕ್ಕಮಗಳೂರುತಾಲೂಕಿನ ಮುಳ್ಳಯ್ಯನಗಿರಿ ಭಾಗಕ್ಕೆ ಪ್ರವಾಸಿಗರಿಗೆ ನಿರ್ಬಂಧ ಹೇರಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಮುಳ್ಳಯ್ಯನಗಿರಿ, ದತ್ತಪೀಠ, ಸೀತಾಳಯ್ಯನಗಿರಿ, ಗಾಳಿಕೆರೆ ಮಾಣಿಕ್ಯಧಾರಕ್ಕೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಡಿಸೆಂಬರ್ 2, 3 ಹಾಗೂ 4ರಂದು ದತ್ತಪೀಠದಲ್ಲಿ ದತ್ತಜಯಂತಿ ಸಂಭ್ರಮ ನಡೆಯಲಿದೆ. ವಿಶ್ವಹಿಂದೂ ಪರಿಷತ್, ಬಜರಂಗದಳದ ನೇತೃತ್ವದಲ್ಲಿ ದತ್ತಜಯಂತಿ ಸಂಭ್ರಮ ನಡೆಯಲಿದೆ. ಪ್ರವಾಸಿಗರಿಗೆ ನಿರ್ಬಂಧ ಹೇರಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ. ಡಿಸೆಂಬರ್ 5ರ ಬೆಳಗ್ಗೆ 10 ಗಂಟೆ ಬಳಿಕ ಮುಳ್ಳಯ್ಯನಗಿರಿ ಭಾಗ […]

ನ.25ಕ್ಕೆ ಅಯೋಧ್ಯೆಗೆ ಮೋದಿ ಭೇಟಿ: ಮಸೀದಿಗಳ ಮೇಲೆ ನಿಗಾ ವಹಿಸಲು BJP ನಾಯಕರ ಆಗ್ರಹ

ಅಯೋಧ್ಯೆ: ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಪ್ರಬಲ ಸ್ಫೋಟ ಪ್ರಕರಣದ ಬೆನ್ನಲ್ಲೇ ನವೆಂಬರ್ 25ರಂದು ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಗೆ ಭೇಟಿ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದಾದ್ಯಂತ ಎಲ್ಲಾ ಮಸೀದಿಗಳನ್ನು ನಿಯಮಿತವಾಗಿ ತಪಾಸಣೆ ನಡೆಸುವಂತೆ ಮತ್ತು ಸಂದರ್ಶಕರ ವಿವರಗಳನ್ನು ಕಡ್ಡಾಯವಾಗಿ ದಾಖಲಿಸಬೇಕೆಂದು ಬಿಜೆಪಿ ನಾಯಕರು ಒತ್ತಾಯಿಸಿದ್ದಾರೆ. ನಗರದಲ್ಲಿರುವ ಎಲ್ಲಾ ಮದರಸಾಗಳು ಮತ್ತು ಮಸೀದಿಗಳಲ್ಲಿ ಶುಕ್ರವಾರದ ಸಾಮೂಹಿಕ ಪ್ರಾರ್ಥನೆಗಳನ್ನು (ನಮಾಜ್) ತಕ್ಷಣ ನಿಲ್ಲಿಸುವಂತೆ ಕೋರಿ ಬಿಜೆಪಿ ವಕ್ತಾರ ರಜನೀಶ್ ಸಿಂಗ್ ಪತ್ರ ಬರೆದಿದ್ದಾರೆ ಎಂದು ವರದಿಯಾಗಿದೆ. ಎಲ್ಲಾ ಮಸೀದಿಗಳಲ್ಲಿ […]

ಇನಾಯತ್ ಅಲಿ ಶಿಫಾರಸ್ಸು: 12 ಮಂದಿ ರೋಗಿಗಳಿಗೆ 9,26,824 ರೂ. ಪರಿಹಾರ ಧನ ಬಿಡುಗಡೆ

ಸುರತ್ಕಲ್ : ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರ ಶಿಫಾರಸ್ಸಿನ ಮೇರೆಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಒಟ್ಟು 12 ಮಂದಿ ರೋಗಿಗಳಿಗೆ 9,26,824 ರೂ. ಪರಿಹಾರ ಧನ ಬಿಡುಗಡೆಗೊಂಡಿದೆ. ಮಾರಕ ಬೋನ್ ಮ್ಯಾರೊ ಕ್ಯಾನ್ಸರ್ ರೋಗಕ್ಕೆ ತುತ್ತಾಗಿರುವ ಕೃಷ್ಣಾಪುರ ನಿವಾಸಿ 24 ವರ್ಷದ ಅಬೂಬಕರ್ ಫರ್ವೀಝ್ ಅವರಿಗೆ 4,00,000 ರೂ. ಹಾಗೂ ಇತರ 11 ಮಂದಿಗೆ ಪರಿಹಾರ ಬಿಡುಗಡೆಯಾಗಿದೆ ಎಂದು ಕೆಪಿಸಿಸಿ ಪ್ರಧಾನ‌ ಕಾರ್ಯದರ್ಶಿ ಇನಾಯತ್ ಅಲಿ ಅವರು ಪತ್ರಿಕಾ […]