ಹಿಂದೂ ಕುಟುಂಬಕ್ಕೆ ಬಹಿಷ್ಕಾರ: ಶವ ಎತ್ತಲೂ ಬರದ ಜನ, ಅಂತ್ಯಕ್ರಿಯೆ ನಡೆಸಿದ ಮುಸ್ಲಿಮರು!

ನವದೆಹಲಿ: ಟಿಎಂಸಿ ನಾಯಕರಿಂದ ಬಹಿಷ್ಕೃತರಾದ ಕುಟುಂಬದ ಸದಸ್ಯರೊಬ್ಬ ಸಾವು ಕಂಡಿದ್ದರಿಂದ, ಯಾವುದೇ ನೆರೆಹೊರೆಯವರು ಆ ವ್ಯಕ್ತಿಯ ಶವವನ್ನು ಹೂಳಲು ಮುಂದೆ ಬಂದಿರಲಿಲ್ಲ. ಈ ಹಂತದಲ್ಲಿ ನೆರೆಹೊರೆಯ ಮುಸ್ಲಿಂ ಸಮುದಾಯದ ಯುವಕರು ಮೃತದೇಹವನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಅಂತ್ಯಕ್ರಿಯೆಗಾಗಿ ಸ್ಮಶಾನಕ್ಕೆ ಸಾಗಿಸಿದರು. ಮಾಲ್ಡಾದಲ್ಲಿ ನಡೆದ ಈ ಘಟನೆ ಹಿಂದೂ-ಮುಸ್ಲಿಂ ಐಕ್ಯತೆಗೆ ಒಂದು ಉತ್ತಮ ಉದಾಹರಣೆಯಾಗಿದೆ. ಪ್ರದೇಶದಲ್ಲಿ ಅಕ್ರಮ ಭೂಕಬಳಿಕೆ ವಿವಾದ ನಡೆಯುತ್ತಿದ್ದು, ಸ್ಥಳೀಯ ಟಿಎಂಸಿ ನಾಯಕರು ಬಹಳ ಹಿಂದಿನಿಂದಲೂ ಅತಿಕ್ರಮಣದಾರರಿಗೆ ಬೆಂಬಲ ನೀಡುತ್ತಿದ್ದರು. ಟಿಎಂಸಿ ನಾಯಕನ ಆದೇಶದ […]
2 ತಿಂಗಳ ಗೃಹಲಕ್ಷ್ಮಿ ಹಣ ಯಾವಾಗ ಬಿಡುಗಡೆ ಗೊತ್ತಾ?: ಲಕ್ಷ್ಮೀ ಹೆಬ್ಬಾಳ್ಕರ್ ಸ್ಫೋಟಕ ಹೇಳಿಕೆ

ತುಮಕೂರು: ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳ ಗೃಹಲಕ್ಷ್ಮಿ ಹಣವನ್ನು ಆದಷ್ಟು ಬೇಗ ಬಿಡುಗಡೆ ಮಾಡುತ್ತೇವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು. ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳ ಗೃಹಲಕ್ಷ್ಮಿ ಹಣ ಇನ್ನೂ ಬಿಡುಗಡೆಯಾಗಿಲ್ಲ. ಆದಷ್ಟು ಬೇಗ ಬಿಡುಗಡೆ ಮಾಡ್ತೀವಿ. ನಮ್ಮ ಗೃಹಲಕ್ಷ್ಮಿಯನ್ನು ಕಾಪಿ ಮಾಡಿಕೊಂಡು ಬಿಜೆಪಿ ಅವರು ಎಲ್ಲಾ ಕಡೆ ಚುನಾವಣೆ ಪ್ರಚಾರ ಮಾಡುತ್ತಿದ್ದಾರೆ. ಕರ್ನಾಟಕವನ್ನು ರೋಲ್ ಮಾಡಲ್ ಮಾಡಿಕೊಂಡು ಹೋಗುತ್ತಿದ್ದಾರೆ ಎಂದು ಹೇಳಿದರು […]
26 ದಾಳಿಗಳ ರೂವಾರಿ-ಟಾಪ್ ನಕ್ಸಲ್ ಕಮಾಂಡರ್ ಹಿಡ್ಮಾ ಎನ್ ಕೌಂಟರ್ ನಲ್ಲಿ ಹತ

ವಿಶಾಖಪಟ್ಟಣ: ಭದ್ರತಾ ಪಡೆ ಹಾಗೂ ನಾಗರಿಕರ ಮೇಲೆ ಕನಿಷ್ಠ 26 ದಾಳಿಗಳನ್ನು ನಡೆಸಿರುವ ಆರೋಪ ಹೊತ್ತಿದ್ದ ನಟೋರಿಯಸ್ ಮಾವೋವಾದಿ ಕಮಾಂಡರ್ ಮಡ್ವಿ ಹಿಡ್ಮಾ ಮಂಗಳವಾರ (ನ.18) ಪೊಲೀಸ್ ಎನ್ ಕೌಂಟರ್ ನಲ್ಲಿ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಅಲ್ಲುರಿ ಸೀತಾರಾಮರಾಜು ಜಿಲ್ಲೆಯಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ. ಆಂಧ್ರಪ್ರದೇಶ, ಛತ್ತೀಸ್‌ಗಢ ಮತ್ತು ತೆಲಂಗಾಣದ ತ್ರಿ-ಜಂಕ್ಷನ್ ಬಳಿಯ ಮಾರೆಡುಮಿಲ್ಲಿ ಅರಣ್ಯದಲ್ಲಿ ಮಾವೋವಾದಿಗಳು ಮತ್ತು ಆಂಧ್ರಪ್ರದೇಶ ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದಿದೆ. ಮೂಲಗಳ ಪ್ರಕಾರ, ಕನಿಷ್ಠ ಆರು ನಕ್ಸಲೀಯರ ಮೃತದೇಹಗಳು ಪತ್ತೆಯಾಗಿದ್ದು, […]
“ ISI ಏಜೆಂಟ್‌ಗಳಾಗಿ ಮುಸಲ್ಮಾನರಿಗಿಂತ ಹಿಂದೂಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ”: ಅಜಿತ್ ದೋವಲ್ ಅಚ್ಚರಿ ಹೇಳಿಕೆ

ಕೆಂಪು ಕೋಟೆ ಬಳಿ ನವೆಂಬರ್ 10ರಂದು ಸ್ಪೋಟ ಸಂಭವಿಸಿ 13 ಜನರು ಸಾವನ್ನಪ್ಪಿದ ಬಳಿಕ, ದೇಶದಲ್ಲಿ ಇಡೀ ಮುಸ್ಲಿಂ ಸಮುದಾಯವನ್ನು ಭಯೋತ್ಪಾದಕರು ಎಂದು ಕಟಕಟೆಯಲ್ಲಿ ನಿಲ್ಲಿಸುವ ಪ್ರಯತ್ನಗಳು ಜೋರಾಗಿಯೇ ನಡೆಯುತ್ತಿದೆ. ಬಹುತೇಕ ಮುಖ್ಯವಾಹಿನಿ ಮಾಧ್ಯಮಗಳು ಕೂಡ ದೃಢೀಕರಿಸಿದ, ಕಪೋಲಕಲ್ಪಿತ ವರದಿಗಳನ್ನು ಪ್ರಕಟಿಸಿ ಜನರನ್ನು ಪ್ರಚೋದಿಸುವ ಮೂಲಕ ಈ ಪ್ರಯತ್ನಕ್ಕೆ ಏಣಿ ಇಟ್ಟು ಕೊಡುತ್ತಿವೆ. ಈ ನಡುವೆ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರರ (ಎನ್‌ಎಸ್‌ಎ) ಅಜಿತ ದೋವಲ್ ಅವರು “ಭಾರತದಲ್ಲಿ ಐಎಸ್‌ಐ (ಪಾಕಿಸ್ತಾನದ ಗುಪ್ತಚರ ಏಜೆನ್ಸಿ) ಕಾರ್ಯಗಳಿಗಾಗಿ ಮುಸ್ಲಿಮರಿಗಿಂತ […]
ಮದುವೆಯಾದ ಒಂದೇ ವರ್ಷದಲ್ಲಿ ಮೂರನೇ ಗಂಡನನ್ನೂ ಬಿಟ್ಟ ಖ್ಯಾತ ನಟಿ

ಬಹುಭಾಷಾ ಖ್ಯಾತ ನಟಿಯೋರ್ವರು ಇದೀಗ ಮೂರನೇ ಮದುವೆಯಿಂದಲೂ ವಿಚ್ಛೇದನ ಪಡೆದು ಸುದ್ದಿಯಾಗಿದ್ದಾರೆ. ಮೋಹನ್‌ಲಾಲ್ ಜೊತೆ `ತನ್ಮಾತ್ರ’ ಚಿತ್ರದಲ್ಲಿ ನಟಿಸಿದ್ದ ಖ್ಯಾತ ಮಲಯಾಳಂ ನಟಿ ಮೀರಾ ವಸುದೇವನ್ ಇದೀಗ ಮೂರನೇ ಪತಿಯಿಂದ ದೂರಾಗಿರುವ ಅಧಿಕೃತ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಘೋಷಿಸಿದ್ದಾರೆ. 2024ರಲ್ಲಿ ಇವರು ಸಿನಿಮಾಟೋಗ್ರಾಫರ್ ವಿಪಿನ್ ಪುತಿಯಂಕಂ ಜೊತೆ ವಿವಾಹವಾಗಿದ್ದರು. 2025ರಲ್ಲೇ ವಿಚ್ಛೇದನ(Divorce) ಪಡೆದು ಈಗ ಸಿಂಗಲ್ ಆಗಿರುವುದಾಗಿ ಪೋಸ್ಟ್ ಹಾಕಿದ್ದಾರೆ. ಕನ್ನಡ ಹೊರತಾಗಿ ಮಲಯಾಳಂ, ಹಿಂದಿ, ತಮಿಳು, ತೆಲುಗು ಚಿತ್ರದಲ್ಲಿ ನಟಿಸಿದ್ದ ಮೀರಾ ವಸುದೇವನ್ 2005ರಲ್ಲಿ ವಿಶಾಲ್ […]
ದೆಹಲಿ ಬಾಂಬ್ ಸ್ಪೋಟ; ವೈದ್ಯೆ ಡಾ. ಪ್ರಿಯಾಂಕಾ ಶರ್ಮಾ ವಶಕ್ಕೆ ಪಡೆದ ಪೊಲೀಸರು: ಆರೋಪ ನಿರಾಕರಿಸಿದ ಕುಟುಂಬ

ಹೊಸದಿಲ್ಲಿ: ರೋಹ್ಟಕ್ ಮೂಲದ ವೈದ್ಯೆ ಡಾ. ಪ್ರಿಯಾಂಕಾ ಶರ್ಮಾ ಅವರನ್ನು ʼವೈಟ್ ಕಾಲರ್ʼ ಭಯೋತ್ಪಾದಕ ಸಂಪರ್ಕದ ಶಂಕೆಯಿಂದ ಜಮ್ಮು–ಕಾಶ್ಮೀರ ಗುಪ್ತಚರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಆಕೆಯ ಕುಟುಂಬ ಸದಸ್ಯರು ಯಾವುದೇ ಆರೋಪಗಳಿಗೆ ಆಧಾರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದು Hindustan Times ವರದಿ ಮಾಡಿದೆ. ಶನಿವಾರ ಅನಂತ್ ನಾಗ್ ನ ಮಲಕ್ ನಾಗ್ ಪ್ರದೇಶದಲ್ಲಿರುವ ಹಾಸ್ಟೆಲ್ ಗೆ ತನಿಖಾಧಿಕಾರಿಗಳು ಭೇಟಿ ನೀಡಿ ಪ್ರಿಯಾಂಕಾ ಅವರನ್ನು ವಿಚಾರಣೆಗೆ ಕರೆದೊಯ್ದಿದ್ದರು. ಬಳಿಕ ಅವರನ್ನು ಬಿಡುಗಡೆ ಮಾಡಿದ್ದಾರೆ. […]
ಸಿಎಂ ಸಿದ್ದರಾಮಯ್ಯ ಪತ್ನಿ ಆಸ್ಪತ್ರೆಗೆ ದಾಖಲು

ಬೆಂಗಳೂರು: ಶ್ವಾಸಕೋಶದ ಸಮಸ್ಯೆಯಿಂದ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶೇಷಾದ್ರಿಪುರಂನ ಅಪೋಲೊ ಆಸ್ಪತ್ರೆಯಲ್ಲಿ ಪಾರ್ವತಿ ಸಿದ್ದರಾಮಯ್ಯ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಳೆ ಸಂಜೆ ವರೆಗೆ ಆಸ್ಪತ್ರೆಯಲ್ಲೇ ಇರಲು ವೈದ್ಯರು ಸಲಹೆ ನೀಡಿದ್ದಾರೆ. ಹೀಗಾಗಿ, ಸಿಎಂ ಪತ್ನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಚಾರ ತಿಳಿದು ಅಪೋಲೋ ಆಸ್ಪತ್ರೆಗೆ ಶಾಸಕ ಶಿವಲಿಂಗೇಗೌಡ ಭೇಟಿ ನೀಡಿದರು. ಆಸ್ಪತ್ರೆಯಲ್ಲಿ ತಾಯಿ ಜೊತೆ ಪುತ್ರ ಯತೀಂದ್ರ ಸಿದ್ದರಾಮಯ್ಯ ಇದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಶಿವಲಿಂಗೇಗೌಡ, ಸಿಎಂ ಪತ್ನಿ ಅವರ ಆರೋಗ್ಯ ವಿಚಾರಿಸಲು ಬಂದೆ. […]
ಬಾಂಗ್ಲಾ ಮಾಜಿ ಪ್ರಧಾನಿಗೆ ಗಲ್ಲು ಶಿಕ್ಷೆ: ಏನಿದು ಕೇಸ್? ಶೇಖ್ ಹಸೀನಾರ ಫಸ್ಟ್ ರಿಯಾಕ್ಷನ್ ಏನು?

ಢಾಕಾ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಪಾಲಿಗೆ ಇಂದು ಕರಾಳ ದಿನ. ಏಕೆಂದರೆ, ಬಾಂಗ್ಲಾದ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ ಹಸೀನಾ ಅವರಿಗೆ ಮರಣದಂಡನೆ ವಿಧಿಸಿದೆ. ಏಕೆಂದರೆ, ಕಳೆದ ವರ್ಷ ನಡೆದ ವಿದ್ಯಾರ್ಥಿಗಳ ದಂಗೆಯನ್ನು ಹತ್ತಿಕ್ಕಲು ಕ್ರೂರ ಕ್ರಮ ತೆಗೆದುಕೊಂಡ ಆರೋಪ ಅವರ ಮೇಲಿದೆ. ಹಲವು ತಿಂಗಳುಗಳ ಕಾಲ ವಿಚಾರಣೆ ನಡೆಸಿದ ನ್ಯಾಯಾಲಯ, ಮೂರು ಆರೋಪಗಳಲ್ಲಿ ಹಸೀನಾ ಅವರನ್ನು ತಪ್ಪಿತಸ್ಥರೆಂದು ಘೋಷಿಸಿ, ಮರಣದಂಡನೆ ವಿಧಿಸಿದೆ. ನ್ಯಾಯಮೂರ್ತಿ ಮೊಹಮ್ಮದ್ ಘೋಲಂ ಮೊರ್ತುಜಾ ಮಜುಂದಾರ್ ನೇತೃತ್ವದ ತ್ರಿಸದಸ್ಯ ನ್ಯಾಯಮಂಡಳಿಯು […]
ಸುರತ್ಕಲ್; ತುರ್ತಾಗಿ ಕರೆ ಮಾಡಲು ಇದೆ ಎಂದು ನಾಟಕವಾಡಿ ಮೊಬೈಲ್ ಪಡೆದು ಪರಾರಿ!

ಸುರತ್ಕಲ್: ತುರ್ತಾಗಿ ಕರೆ ಮಾಡಬೇಕು ಎಂದು ನಾಟಕವಾಡಿ ಮೊಬೈಲ್ ಕೇಳಿ ಹಿಂದಿರುಗಿಸದೆ ಚಾಲಾಕಿ ಕಳ್ಳನೊಬ್ಬ ಪರಾರಿಯಾದ ಘಟನೆ ಸುರತ್ಕಲ್ ಜಂಕ್ಷನ್ ನಲ್ಲಿ ರವಿವಾರ ನಡೆದಿದೆ. ಮನೆ ಮನೆಗೆ ಪತ್ರಿಕೆ ವಿತರಿಸುವ ಕೆಲಸ ಮಾಡುವ ಸ್ಥಳೀಯರಾದ ಮೊಹಮ್ಮದ್ ಇಕ್ಬಾಲ್ ಮೊಬೈಲ್ ಕಳೆದುಕೊಂಡವರು. ಸುರತ್ಕಲ್ ಜಂಕ್ಷನ್ ಕೆನರಾ ಬ್ಯಾಂಕ್ ಮುಂಭಾಗ ಬೆಳಗ್ಗೆ 4 ಗಂಟೆಯ ಸುಮಾರಿಗೆ ಪತ್ರಿಕೆಯ ಪುರವಣಿಯನ್ನು ಜೋಡಿಸುತ್ತಿದ್ದ ಸಂದರ್ಭ ಅಪರಿಚಿತನೊಬ್ಬ ಸ್ಕೂಟರ್ ನಲ್ಲಿ ಆಗಮಿಸಿ , ತುರ್ತಾಗಿ ಕರೆ ಮಾಡಲಿದೆ, ಮೊಬೈಲ್, ಪರ್ಸ್ ಬಿಟ್ಟು ಬಂದಿದ್ದೇನೆ ಎಂದು […]
ಪ್ಯಾಲೆಸ್ಟೈನ್ ರಾಷ್ಟ್ರವಾಗಲು ಬಿಡುವುದಿಲ್ಲ; ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಪ್ರತಿಜ್ಞೆ

ಟೆಲ್ಅವಿವ್: ನಾವು ಪ್ಯಾಲೆಸ್ಟೈನ್ ರಾಷ್ಟ್ರವನ್ನು ಸ್ಥಾಪಿಸುವ ಯಾವುದೇ ಪ್ರಯತ್ನವನ್ನು ವಿರೋಧಿಸುವುದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಪ್ರತಿಜ್ಞೆ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿರುವ ನೆತನ್ಯಾಹು, ಪ್ಯಾಲೆಸ್ಟೀನಿಯನ್ ರಾಷ್ಟ್ರ ರಚನೆಯಾದರೆ, ಹಮಾಸ್‌ಗೆ ಪ್ರತಿಫಲ ದೊರೆಯುತ್ತದೆ. ಅಲ್ಲದೆ, ಅಂತಿಮವಾಗಿ ಇಸ್ರೇಲ್‌ನ ಗಡಿಗಳಲ್ಲಿ ಇನ್ನೂ ದೊಡ್ಡ ಹಮಾಸ್ ನಡೆಸುವ ಉಗ್ರದಾಳಿಗೆ ಕಾರಣವಾಗುತ್ತದೆ ಎಂದಿದ್ದಾರೆ. ಪ್ಯಾಲೆಸ್ಟೀನಿಯನ್ ರಾಷ್ಟ್ರಕ್ಕೆ ಇಸ್ರೇಲ್‌ನ ವಿರೋಧವು ಒಂದು ಕ್ಷಣವೂ ಬದಲಾಗಿಲ್ಲ ಮತ್ತು ಬಾಹ್ಯ ಅಥವಾ ಆಂತರಿಕ ಒತ್ತಡದಿಂದ ಬೆದರಿಕೆಗೆ ಒಳಗಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ನನಗೆ ಯಾರಿಂದಲೂ ದೃಢೀಕರಣಗಳು, […]