Flash News

ಹಣದ ವಿಚಾರಕ್ಕೆ ಗಲಾಟೆ: ಲೈಂಗಿಕ ಕಾರ್ಯಕರ್ತೆಯನ್ನು ಕೊಂದು ಚೀಲದಲ್ಲಿ ಹಾಕಿ ಎಸೆದ!

ಕೊಚ್ಚಿ: ಮಹಿಳೆಯೊಬ್ಬರನ್ನು ಕೊಲೆ ಮಾಡಿ ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ಮನೆಯ ಆವರಣ ಗೋಡೆ ಸಮೀಪ ಎಸೆದ ಘಟನೆ ಕೇರಳ ಕೊಚ್ಚಿ ಸಮೀಪದ ನಡೆದಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಪ್ರಕರಣ ಸಂಬಂಧ ಕೊಂತುರ್ತಿ ನಿವಾಸಿ ಜಾರ್ಜ್ ಕೆ.ಕೆ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ತಾನೇ ಕೃತ್ಯ ಎಸಗಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ. ಲೈಂಗಿಕ ಕಾರ್ಯಕರ್ತೆಯಾಗಿರುವ ಆಕೆಯನ್ನು ತೇವರದಲ್ಲಿರುವ ಬಾಲಕಿಯ ಪ್ರೌಢ ಶಾಲೆಯ ಬಳಿಯಿಂದ ತನ್ನ ಮನೆಗೆ ಕರೆದುಕೊಂಡು ಬಂದಿದ್ದ. ಹಣಕಾಸಿನ ವಿಚಾರದಲ್ಲಿ ಇವರಿಬ್ಬರ ನಡುವೆ ವಾಗ್ವಾದ ನಡೆದಿದೆ. […]

ಭರತ್ ಕುಮ್ಡೇಲು ವಿರುದ್ಧ ಕೋಕ ಪ್ರಕರಣ: ಚಾರ್ಜ್ ಶೀಟ್ ವಿಸ್ತರಣೆ ಅರ್ಜಿ ವಜಾಗೊಳಿಸಿದ ಮೈಸೂರು ನ್ಯಾಯಾಲಯ!

ಮೈಸೂರು: ಅಶ್ರಫ್ ಕಲಾಯಿ, ಅಬ್ದುಲ್ ರೆಹಮಾನ್ ಕೊಲೆ ಆರೋಪಿ ಭರತ್ ಕುಮ್ಡೇಲು ವಿರುದ್ಧ ಕೋಕ ಪ್ರಕರಣದ ಚಾರ್ಜ್ ಶೀಟ್ ವಿಸ್ತರಣೆ ಅರ್ಜಿಯನ್ನು ಮೈಸೂರು ಜಿಲ್ಲಾ ಪ್ರಧಾನ ಸತ್ರ / ವಿಶೇಷ ( ಕೋಕ) ನ್ಯಾಯಾಲಯ ವಜಾ ಗೊಳಿಸಿದೆ. ಪ್ರಕರಣ ತನಗೆ ಸಂಬಂಧಿಸಿದ್ದಲ್ಲ ಎಂದು ಕಡತವನ್ನು ಮೈಸೂರು ವಿಶೇಷ ನ್ಯಾಯಾಲಯ ಹಿಂತಿರುಗಿಸಿದೆ. ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವಂತೆ ಸೂಚನೆ ನೀಡಿದೆ. ನ್ಯಾಯವಾದಿಗಳಾದ ಮಹೇಶ್ ಕಜೆ,ಪ್ರಸಾದ್ ಕುಮಾರ್ ಬಂಟ್ವಾಳ, ಸಿವಿ ಕೇಶವ ಮೂರ್ತಿ , […]

ಡಿಸೆಂಬರ್ 6 ರಂದು ಬಾಬರಿ ಮಸೀದಿಗೆ ಅಡಿಗಲ್ಲು: ಶಾಸಕ ಹುಮಾಯೂನ್ ಕಬೀರ್

ಕೋಲ್ಕತಾ:”ನಾವು ಡಿಸೆಂಬರ್ 6 ರಂದು ಮುರ್ಷಿದಾಬಾದ್ ಜಿಲ್ಲೆಯ ಬೆಲ್ದಂಗಾದಲ್ಲಿ ಬಾಬರಿ ಮಸೀದಿಗೆ ಅಡಿಗಲ್ಲು ಹಾಕುತ್ತೇವೆ” ಎಂದು ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಶಾಸಕ ಹುಮಾಯೂನ್ ಕಬೀರ್ ಹೇಳಿಕೆ ನೀಡಿದ್ದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ಸುದ್ದಿ ಸಂಸ್ಥೆ ಎಎನ್ ಐನೊಂದಿಗೆ ಮಾತನಾಡಿದ ಹುಮಾಯೂನ್ ಕಬೀರ್ ”ನಾವು ಡಿಸೆಂಬರ್ 6 ರಂದು ಮುರ್ಷಿದಾಬಾದ್ ಜಿಲ್ಲೆಯ ಬೆಲ್ದಂಗಾದಲ್ಲಿ ಬಾಬರಿ ಮಸೀದಿಗೆ ಅಡಿಗಲ್ಲು ಹಾಕುತ್ತೇವೆ.ಅದು ಪೂರ್ಣಗೊಳ್ಳಲು ಮೂರು ವರ್ಷಗಳು ಬೇಕಾಗುತ್ತದೆ. ಸಮಾರಂಭದಲ್ಲಿ 2 ಲಕ್ಷ ಜನರು 400 ಮಂದಿ ಮುಸ್ಲಿಂ ನಾಯಕರು […]

ಅಧಿಕಾರವಿದ್ದಾಗ ಎಷ್ಟು ಜನ ಮನೆಗೆ ಬರುತ್ತಾರೆ ಎನ್ನುವುದು ಮುಖ್ಯವಲ್ಲ, ಬದಲಾಗಿ ಸಾಯುವಾಗ ಎಷ್ಟು ಜನರು ಬೆನ್ನು ಕೊಡುತ್ತಾರೆ ಎನ್ನವುದು ಮುಖ್ಯ: ಯುಟಿ ಖಾದರ್

ಸೌದಿ ಅರೇಬಿಯಾ: ಅಧಿಕಾರ ಶಾಶ್ವತವಲ್ಲ. ನಿನ್ನೆ ಬೇರೊಬ್ಬರೊಂದಿಗಿತ್ತು. ಇಂದು ಮತ್ತೊಬ್ಬರಲ್ಲಿದೆ. ಅದು ನಾಳೆ ಇನ್ನೊಬ್ಬರದ್ದಾಗಲಿದೆ. ನಮ್ಮೊಂದಿಗೆ ಅಧಿಕಾರವಿದ್ದಾಗ ಜನರು ನಮ್ಮ ಮನೆಗೆ ಬರುತ್ತಲೇ ಇರುತ್ತಾರೆ. ಆದರೆ ಅಧಿಕಾರದಲ್ಲಿರುವಾಗ ನಮ್ಮ ಬಳಿಗೆ ಎಷ್ಟು ಜನ ಬರುತ್ತಾರೆ ಎನ್ನುವುದು ಮುಖ್ಯವಲ್ಲ ಬದಲಾಗಿ ನಮ್ಮ ಅಂತ್ಯ ಸಂಸ್ಕಾರಕ್ಕೆ ಬಂದು ನಮಗೆ ಎಷ್ಟು ಜನರು ಬೆನ್ನು ಕೊಡುತ್ತಾರೆ, ಪ್ರಾರ್ಥನೆ ಮಾಡುತ್ತಾರೆ ಎನ್ನವುದೇ ಮುಖ್ಯ. ಆ ನಿಟ್ಟಿನಲ್ಲಿ ಪ್ರೀತಿಯಿಂದ, ಸೌಹಾರ್ದತೆಯಿಂದ ಜೀವನ ಸಾಗಿಸಿ ನಾವು ಜನತೆಯ ಹೃದಯದಲ್ಲಿ ಸ್ಥಾನ ಪಡೆಯಬೇಕು. ಆ ಮೂಲಕ ನಮ್ಮ […]

ಸಾಮಾಜಿಕ ಕಾರ್ಯಕರ್ತನ ಕೊಲೆ ಯತ್ನ; ನಟಿ, ಮಾಡೆಲ್ ಸವಿತಾಬಾಯಿ ಬಂಧನ

ಇತ್ತೀಚೆಗೆ ದಾವಣಗೆರೆಯಲ್ಲಿ ಸಾಮಾಜಿಕ ಕಾರ್ಯಕರ್ತ ಟಿ. ಅಜ್ಗರ್ ಮೇಲೆ ಕೊಲೆ ಯತ್ನ ನಡೆದಿತ್ತು. ಈ ವೇಳೆ ಗಾಯಗೊಂಡ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ನಡೆದ ಎರಡು ವಾರಗಳು ಕಳೆಯುತ್ತಿದೆ. ಈಗ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕಿ ಸವಿತಾಬಾಯಿ ಮಲ್ಲೇಶ್ ನಾಯ್ಕ ಬಂಧನ ಆಗಿದೆ. ಇವರು ಮಾಡೆಲ್ ಹಾಗೂ ನಟಿ ಕೂಡ ಆಗಿದ್ದರು. ಅವರ ಮೇಲೆ ಕೊಲೆಗೆ ಸಾಥ್ ನೀಡಿದ ಆರೋಪ ಇದೆ. ಸವಿತಾಬಾಯಿ ಕಾಂಗ್ರೆಸ್ ನಾಯಕಿ ಮಾತ್ರವಲ್ಲ, ಮಾಯಕೊಂಡ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆಗಿದ್ದರು. ಈ […]

ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾಗಿ ಎಚ್.ಡಿ.ದೇವೇಗೌಡ, ರಾಜ್ಯಾಧ್ಯಕ್ಷರಾಗಿ ಎಚ್.ಡಿ.ಕುಮಾರಸ್ವಾಮಿ ಪುನರಾಯ್ಕೆ

ಬೆಂಗಳೂರು : ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ರಾಜ್ಯಾಧ್ಯಕ್ಷರಾಗಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವಿರೋಧವಾಗಿ ಪುನರಾಯ್ಕೆ ಆಗಿದ್ದಾರೆ. ಶುಕ್ರವಾರ ಪಕ್ಷದ ಕಚೇರಿ ಜೆಪಿ ಭವನದಲ್ಲಿ ನಡೆದ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ಈ ಇಬ್ಬರು ನಾಯಕರ ಪುನರಾಯ್ಕೆ ಬಗ್ಗೆ ರಾಷ್ಟ್ರೀಯ ಪ್ರತಿನಿಧಿಗಳು ಒಮ್ಮತ ನಿರ್ಧಾರ ಕೈಗೊಂಡರು.ರಾಷ್ಟ್ರ ಮಟ್ಟದಲ್ಲಿ ಪಕ್ಷ ಸಂಘಟನೆಗೆ ವಿಫುಲ ಅವಕಾಶಗಳಿವೆ. ಅದೇ ರೀತಿಯಲ್ಲಿ ಕರ್ನಾಟಕದಲ್ಲಿ ಪಕ್ಷ ಸಂಘಟನೆಯನ್ನು ಬಲಿಷ್ಠವಾಗಿ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ದೇವೇಗೌಡರು ಹಾಗೂ ಕುಮಾರಸ್ವಾಮಿ ನೇತೃತ್ವದಲ್ಲಿಯೇ ಪಕ್ಷವನ್ನು […]

Dubai | 24 ವರ್ಷಗಳ ಇತಿಹಾಸದಲ್ಲಿ 2ನೇ ದುರಂತ: ಒಂದು ʻತೇಜಸ್‌ʼಗೆ ತಗುಲುವ ವೆಚ್ಚ ಎಷ್ಟು?

ದುಬೈನ ಅಲ್‌ ಮುಕ್ತೌಮ್‌ ಏರ್‌ಪೋರ್ಟ್‌ನಲ್ಲಿ ನಡೆಯುತ್ತಿದ್ದ ʻದುಬೈ ಅಂತಾರಾಷ್ಟ್ರೀಯ ಏರ್‌ ಶೋʼನಲ್ಲಿ ಹಿಂದೂಸ್ತಾನ್‌ ಏರೋನಾಟಿಕ್ಸ್ ಲಿಮಿಟೆಡ್ ನಿರ್ಮಿತ ತೇಜಸ್‌ ಲಘು ಯುದ್ಧ ವಿಮಾನ ಪತನಗೊಂಡಿದೆ. ಈ ಬೆನ್ನಲ್ಲೇ ತೇಜಸ್‌ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತವಾಗಿದೆ, ಸೋಷಿಯಲ್‌ ಮೀಡಿಯಾದಲ್ಲೂ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. 2001ರಲ್ಲಿ ತೇಜಸ್ ಫೈಟರ್ ಜೆಟ್‍ನ (Tejas Fighter Jet) ಮೊದಲ ಪರೀಕ್ಷಾ ಹಾರಾಟದ ನಂತರ, 2016 ರಲ್ಲಿ ಭಾರತೀಯ ವಾಯುಪಡೆಗೆ ಸೇರಿಸಲಾಯಿತು. 2024ರ ಮಾರ್ಚ್‌ 12ರಂದು ಜೈಸಲ್ಮೇರ್‌ನ ವಿದ್ಯಾರ್ಥಿನಿಯರ ಹಾಸ್ಟೆಲ್ ಮೈದಾನದಲ್ಲಿ ತರಬೇತಿಯ […]

ದುಬೈ ಏರ್‌ಶೋ: HAL ನಿರ್ಮಿತ ‘ತೇಜಸ್‘ ಲಘು ಯುದ್ಧವಿಮಾನ ಪತನ; ಪೈಲಟ್ ಸಾವು

ದುಬೈ: ಇಲ್ಲಿನ ಅಲ್ ಮಕ್ತೌಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆಯುತ್ತಿರುವ ‘ದುಬೈ ಏರ್ ಶೋ 2025’ರಲ್ಲಿ ಭಾರತದ ‘ತೇಜಸ್‘ ಲಘು ಯುದ್ಧವಿಮಾನ ಪತನವಾಗಿದೆ. ಅಪಘಾತದಲ್ಲಿ ಪೈಲಟ್‌ ಮೃತಪಟ್ಟಿದ್ದಾರೆ. ಏರ್‌ಶೋನಲ್ಲಿ ‘ತೇಜಸ್‘ ಯುದ್ಧವಿಮಾನ ಪ್ರದರ್ಶನ ನಡೆಸುತ್ತಿದ್ದಾಗ ಪತನವಾಗಿದೆ. ಈ ಘಟನೆ ಶುಕ್ರವಾರ ಮಧ್ಯಾಹ್ನ 2:10ರ ಸುಮಾರಿಗೆ ನಡೆದಿದೆ ಎಂದು ವರದಿಯಾಗಿದೆ. ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಜನಸಂದಣಿಯಲ್ಲಿದ್ದವರು ನೋಡನೋಡುತ್ತಿದ್ದಂತೆ ವಿಮಾನ ಪತನವಾಗಿದ್ದು ನಿಲ್ದಾಣದ ಮೇಲೆ ಕಪ್ಪು ಹೊಗೆ ಆವರಿಸಿಕೊಂಡಿದೆ. ಭಾರತೀಯ ವಾಯುಪಡೆ ಮತ್ತು ಭಾರತೀಯ ನೌಕಾಪಡೆಗಾಗಿ ಎಚ್‌ಎಎಲ್ ನಿರ್ಮಿಸಿದ […]

5 ವರ್ಷ ನಾನೇ ಸಿಎಂ ಅಂದಿದ್ದಾರೆ, ಅವರಿಗೆ ಶುಭ ಕೋರುತ್ತೇನೆ: ಡಿ.ಕೆ.ಶಿವಕುಮಾರ್‌

ಬೆಂಗಳೂರು: ‘ನನ್ನ ಬಳಿ ಯಾವ ಬಣವೂ ಇಲ್ಲ. ನಾನು ಯಾವುದೇ ಬಣದ ನಾಯಕನಲ್ಲ. ನಾನು 140 ಶಾಸಕರ ಅಧ್ಯಕ್ಷ. 140 ಶಾಸಕರೂ ನನಗೆ ಮುಖ್ಯ. ಗುಂಪುಗಾರಿಕೆ ನನ್ನ ರಕ್ತದಲ್ಲೇ ಇಲ್ಲ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸ್ಪಷ್ಟಪಡಿಸಿದರು. ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶುಕ್ರವಾರ ಪ್ರತಿಕ್ರಿಯಿಸಿದರು. ಕೆಲವು ಶಾಸಕರು, ಮಂತ್ರಿಗಳು ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುತ್ತಿದ್ದಾರೆ, ಮತ್ತೊಂದೆಡೆ ಡಿನ್ನರ್ ಮೀಟಿಂಗ್ ನಡೆಯುತ್ತಿದೆ ಎಂದು ಕೇಳಿದಾಗ, “ಯಾವ ಗುಂಪನ್ನು ದೆಹಲಿಗೆ […]

ಶಿವಮೊಗ್ಗದಲ್ಲಿ ವ್ಯಾಪಾರಿ​​ ಮೇಲೆ ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್​​: ಹಿಂದೂ ಯುವಕ ಸೇರಿ ಮೂವರು ಅರೆಸ್ಟ್​​

ಹಲ್ಲೆ ಪ್ರಕರಣವನ್ನು ಕೋಮು ಸ್ವರೂಪ ನೀಡಿದ್ದ ಸಂಘಪರಿವಾರ ಶಿವಮೊಗ್ಗ: ಮನೆಯಿಂದ ಬಸ್ ನಿಲ್ದಾಣದತ್ತ ತೆರಳುತ್ತಿದ್ದ ಪಾತ್ರೆ ವ್ಯಾಪಾರಿ ಹರೀಶ್​​ ಮೇಲೆ ಜಾತಿ ಕೇಳಿ ಹಲ್ಲೆ ನಡೆಸಿದ ಆರೋಪ ಪ್ರಕರಣಕ್ಕೆ ಟ್ವಿಸ್ಟ್​ ಸಿಕ್ಕಿದೆ. ಹರೀಶ್ ಮೇಲಿನ ಪ್ರಕರಣವು ಕೋಮು ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಎಚ್ಚೆತ್ತ ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್, ಪ್ರಕರಣ ಸಂಬಂಧ ಎರಡು ತಂಡಗಳನ್ನು ರಚನೆ ಮಾಡಿ ಆರೋಪಿಗಳ ಪತ್ತೆಗೆ ಮುಂದಾಗಿದ್ದರು. ಘಟನೆ ಸಂಬಂಧ ಅರ್ಮಾನ (21), ನಿರಂಜನ್ (20) ಮತ್ತು ಓರ್ವ ಅಪ್ರಾಪ್ತ ಸೇರಿ ಮೂವರನ್ನು ಬಂಧಿಸಲಾಗಿದೆ. […]