Flash News

ದೇಶ ನಡೆಯುತ್ತಿರುವುದು ಸಂವಿಧಾನದ ತಳಹದಿಯ ಮೇಲೆಯೇ ಹೊರತು ಮನುಸ್ಮೃತಿಯ ಪ್ರತಿಪಾದನೆಯಿಂದಲ್ಲ: ಬಿಕೆ ಹರಿಪ್ರಸಾದ್ ತಿರುಗೇಟು

“ನೊಂದಣಿ ಇಲ್ಲದ ಸಂಘಟನೆಯ ನಾಯಕರು ಹೇಳಿದ ತಕ್ಷಣ ದೇಶ ಹಿಂದೂ ರಾಷ್ಟ್ರವಾಗಲು ಸಾಧ್ಯವಿಲ್ಲ” ಬೆಂಗಳೂರು: ಭಾರತ ಹಿಂದೂ ರಾಷ್ಟ್ರವೋ, ಜಾತ್ಯಾತೀತ ರಾಷ್ಟ್ರವೋ ಎನ್ನುವುದು ದೇಶದ ಸಂವಿಧಾನದಲ್ಲಿ ಸ್ಪಷ್ಟವಾಗಿದೆ. ನೊಂದಣಿ ಇಲ್ಲದ ಸಂಘಟನೆಯ ನಾಯಕರು ಹೇಳಿದ ತಕ್ಷಣ ದೇಶ ಹಿಂದೂ ರಾಷ್ಟ್ರವಾಗಲು ಸಾಧ್ಯವಿಲ್ಲ. ದೇಶ ನಡೆಯುತ್ತಿರುವುದು ಸಂವಿಧಾನದ ತಳಹದಿಯ ಮೇಲೆಯೇ ಹೊರತು ಮನುಸ್ಮೃತಿಯ ಪ್ರತಿಪಾದನೆಯ ಮೇಲಲ್ಲ ಎಂದು ವಿಧಾನ ಪರಿಷತ್ತಿನ ಕಾಂಗ್ರೆಸ್‌ ಸದಸ್ಯ ಬಿ.ಕೆ.ಹರಿಪ್ರಸಾದ್ ತೀರುಗೇಟು ನೀಡಿದ್ದಾರೆ. ಭಾರತದಲ್ಲಿರುವವರೆಲ್ಲರೂ ಹಿಂದುಗಳಾದರೇ ಇದೇ ನೆಲದಲ್ಲಿ ವಾಸಿಸುತ್ತಿರುವ ಮುಸ್ಲಿಂ, ಕ್ರಿಶ್ಚಿಯನ್, ಜೈನ, […]

ಜನರು ಮನಸ್ಸು ಮಾಡಿದರೆ ಭಾರತ ನಾಳೆ ಬೆಳಗ್ಗೆ ಹಿಂದು ರಾಷ್ಟ್ರ ಆಗಲಿದೆ: ಮೋಹನ್ ಭಾಗವತ್

ಬೆಂಗಳೂರು: ದೇಶದ 140 ಕೋಟಿ ಜನರು ಮನಸ್ಸು ಮಾಡಿದರೆ ಭಾರತ ನಾಳೆ ಬೆಳಗ್ಗೆಯೆ ಹಿಂದು ರಾಷ್ಟ್ರ ಆಗುತ್ತದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಸರಸಂಘ ಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಹಲವು ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ಮೋಹನ್ ಭಾಗವತ್ ತಮ್ಮ ಭಾಷಣದಲ್ಲಿ ಹಿಂದೂ ರಾಷ್ಟ್ರ ಪರಿಕಲ್ಪನೆ ಮತ್ತಷ್ಟು ಗಟ್ಟಿಗೊಳಿಸಿದ್ದಾರೆ. ಹಿಂದು ರಾಷ್ಟ್ರಕ್ಕೆ ಜನರು ಮನಸ್ಸು ಮಾಡಬೇಕು ಎಂದು ಹೇಳಿದ್ದಾರೆ. ಬಲಿಷ್ಠ ಭಾರತ ಕಟ್ಟುವುದು ಆರ್‌ಎಸ್ಎಸ್ ಗುರಿಯಾಗಿದೆ. ಇದಕ್ಕಾಗಿ ಅವರಿತ ಪ್ರಯತ್ನ ಮಾಡುತ್ತೇವೆ. ಬಲಿಷ್ಠ ಭಾರತ […]

ನ.9ರಂದು ದುಬೈ ಕರ್ನಾಟಕ ಸಂಘದಿಂದ “ದುಬೈ ಕರ್ನಾಟಕ ರಾಜ್ಯೋತ್ಸವ -2025”: ಸಮದ್ ಬಿರಾಲಿಗೆ “ದುಬೈ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ-2025”

ದುಬೈ : ಕರ್ನಾಟಕ ಸಂಘ ದುಬೈ ಆಯೋಜನೆಯ “ದುಬೈ ಕರ್ನಾಟಕ ರಾಜ್ಯೋತ್ಸವ -2025” ನವೆಂಬರ್ 9ರಂದು ನಗರದ ನ್ಯೂ ಡಾನ್ ಪ್ರೈವೇಟ್ ಸ್ಕೂಲ್ ಮುಹೇಸಿನ ಕಿಸೀಸ್ (ಮದೀನಾ ಮಾಲ್ ಹಿಂಬದಿಯಲ್ಲಿ) ನ ಸಭಾಂಗಣದಲ್ಲಿ ನಡೆಯಲಿದೆ. ಬೆಳಿಗ್ಗೆ ಹತ್ತು ಮೂವತ್ತರಿಂದ ಸಂಜೆಯ ವರೆಗೆ ಜರುಗುವ ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು , ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳು ಮತ್ತು ಜಾಗತಿಕ ವ್ಯಾಪಾರ ವೇದಿಕೆಯ ಅನಾವರಣಗಳು ನಡೆಯಲಿರುವುದು. ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರಕಾರದ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ಕರ್ನಾಟಕ […]

ಭಾರತ ಹಿಂದೂ ರಾಷ್ಟ್ರ । ಮುಸ್ಲಿಂ ಪೂರ್ವಜರೆಲ್ಲರೂ ಹಿಂದೂಗಳೇ ; ಮೋಹನ್ ಭಾಗವತ್

ಬೆಂಗಳೂರು: ‘ಭಾರತವು ಹಿಂದೂ ರಾಷ್ಟ್ರವಾಗಿದ್ದು, ಈ ರಾಷ್ಟ್ರದ ಹೊಣೆ ಹಿಂದೂಗಳ ಮೇಲಿದೆ’ ಎಂದು ಆರ್‌ಎಸ್‌ಎಸ್‌ ಸರಸಂಘ ಚಾಲಕ ಮೋಹನ್ ಭಾಗವತ್ ಹೇಳಿದರು. ನಗರದ ಪಿಇಎಸ್‌ ವಿಶ್ವವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಸಂಘದ 100 ವರ್ಷದ ಪಯಣ: ನವ ಕ್ಷಿತಿಜ’ ಕುರಿತು ಉಪನ್ಯಾಸದಲ್ಲಿ ಅವರು, ಸಂಘ ನಡೆದು ಬಂದ ಹಾದಿ ಮತ್ತು ಉದ್ದೇಶದ ಕುರಿತು ವಿವರಿಸಿದರು. ‘ಸಾಮರಸ್ಯ ಬಯಸುವ ನಿಟ್ಟಿನಲ್ಲಿ ಸಂಘವು ಕೆಲಸ ಮಾಡುತ್ತದೆ. ಬ್ರಿಟಿಷರು ಭಾರತಕ್ಕೆ ರಾಷ್ಟ್ರೀಯತೆ ನೀಡಿಲ್ಲ. ಪ್ರಾಚೀನ ಕಾಲದಿಂದಲೇ ಭಾರತವು ತನ್ನದೇ ರಾಷ್ಟ್ರೀಯತೆಯನ್ನು ಹೊಂದಿದೆ’ […]

PFIಯ 67 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಿದ ED

ಹೊಸದಿಲ್ಲಿ: ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ) ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ 67 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಲು ನ.6ರಂದು ಹೊಸ ಆದೇಶವನ್ನು ಹೊರಡಿಸಿರುವುದಾಗಿ ಜಾರಿ ನಿರ್ದೇಶನಾಲಯ(ಈಡಿ)ವು ಶನಿವಾರ ತಿಳಿಸಿದೆ. ಈ ಆಸ್ತಿಗಳು ಪಿಎಫ್‌ಐನ ಒಡೆತನ ಮತ್ತು ನಿಯಂತ್ರಣದಲ್ಲಿವೆ ಹಾಗೂ ಅದರ ರಾಜಕೀಯ ಘಟಕ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ) ಮತ್ತು ವಿವಿಧ ಟ್ರಸ್ಟ್‌ಗಳ ಹೆಸರುಗಳಲ್ಲಿವೆ ಎಂದು ಈಡಿ ಹೇಳಿಕೆಯಲ್ಲಿ ತಿಳಿಸಿದೆ. ಇತ್ತೀಚಿನ ಜಪ್ತಿಯೊಂದಿಗೆ ಈಡಿ […]

ಧರ್ಮಸ್ಥಳ: ʼಗೋಹತ್ಯೆ ಕಾಯ್ದೆʼ ಬಗ್ಗೆ ಮಸೀದಿಗಳಲ್ಲಿ ಜಾಗೃತಿ ಕಾರ್ಯಕ್ರಮ ಅಸಂವಿಧಾನಿಕ; ಪೊಲೀಸರ ವಿರುದ್ಧ ಕಾನೂನು ಕ್ರಮಕ್ಕೆ ಐಜಿಪಿಗೆ ದೂರು

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರು ಅಕ್ರಮ ದನ ಸಾಗಾಟ ಮತ್ತು ದನ ಹತ್ಯೆಯ ಕುರಿತು ಮಸೀದಿಗಳಿಗೆ ಭೇಟಿ ನೀಡಿ ʼಕರ್ನಾಟಕ ಗೋವಧೆ ತಡೆ ಮತ್ತು ದನಗಳ ಸಂರಕ್ಷಣಾ ಕಾಯ್ದೆ’ ಜಾಗೃತಿ ಎಂಬ ಕಾರ್ಯಕ್ರಮದ ಮೂಲಕ ಅಸಂವಿಧಾನಿಕ, ತಾರತಮ್ಯದ ಕೃತ್ಯವನ್ನು ಎಸಗುತ್ತಿದ್ದು, ಈ ಪೊಲೀಸರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕೆಂದು ಪಶ್ಚಿಮ ವಲಯ ಐಜಿಪಿಗೆ ಸಿಪಿಐ(ಎಂ) ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಅವರು ದೂರು ನೀಡಿದ್ದಾರೆ. ಧರ್ಮಸ್ಥಳ ಪೊಲೀಸರು ಕೊಕ್ಕಡ ಮಸೀದಿಗೆ ಭೇಟಿ ನೀಡಿ […]

ಅನಿವಾಸಿ ಕನ್ನಡಿಗರಿಗೆ ಕೊಟ್ಟ ‘ಪ್ರತ್ಯೇಕ ಸಚಿವಾಲಯ’ ಗ್ಯಾರಂಟಿ ಯಾವಾಗ?: ಕರ್ನಾಟಕ ಸರಕಾರವನ್ನು ಪ್ರಶ್ನಿಸಿದ ಅನಿವಾಸಿ ಉದ್ಯಮಿ ಡಾ.ರೊನಾಲ್ಡ್ ಕೊಲಾಸೊ

ದುಬೈ: ಅನಿವಾಸಿ ಕನ್ನಡಿಗರ ರಕ್ಷಣೆ, ಸಾಮಾಜಿಕ ಭದ್ರತೆ ದೃಷ್ಟಿಯಿಂದ ಕರ್ನಾಟಕ ರಾಜ್ಯ ಸರಕಾರ ಚುನಾವಣೆಯ ವೇಳೆ ಅನಿವಾಸಿ ಕನ್ನಡಿಗರಿಗಾಗಿ ಘೋಷಿಸಿದ್ದ ‘ಪ್ರತ್ಯೇಕ ಸಚಿವಾಲಯ’ ಗ್ಯಾರಂಟಿಯನ್ನು ಯಾವಾಗ ಆರಂಭಿಸುತ್ತೀರಿ ಎಂದು ರಾಜ್ಯ ಸರಕಾರವನ್ನು ಖ್ಯಾತ ಅನಿವಾಸಿ ಉದ್ಯಮಿ ಡಾ.ರೊನಾಲ್ಡ್ ಕೊಲಾಸೊ ಪ್ರಶ್ನಿಸಿದ್ದಾರೆ. ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ಅವರು ವಿಧಾನ ಪರಿಷತ್ ಗೆ ನೂತನ ಸದಸ್ಯೆಯಾಗಿ ಆಯ್ಕೆಗೊಂಡಿರುವ ಹಿನ್ನೆಲೆಯಲ್ಲಿ ಅವರಿಗಾಗಿ KNRI ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ, ಬಿಸಿಸಿಐ ಅಧ್ಯಕ್ಷ ಹಿದಾಯತ್ ಅಡ್ಡೂರು ಹಾಗು ಕರ್ನಾಟಕ […]

ಕಾಸರಗೋಡು: ಮುಸ್ಲಿಂ ಲೀಗ್ ನಾಯಕ ಬಿಜೆಪಿ ಸೇರ್ಪಡೆ..!

ಕಾಸರಗೋಡು : ಮುಸ್ಲಿಂ ಲೀಗ್ ಪೈವಳಿಕೆ ಪಂಚಾಯತ್ ಮಾಜಿ ಪ್ರಧಾನ ಕಾರ್ಯದರ್ಶಿ ಸಲೀಲ್ ಮಾಸ್ಟರ್ ಪೈವಳಿಕೆ ಬಿಜೆಪಿ ಪಕ್ಷವನ್ನು ಸೇರಿದ್ದಾರೆ. ಬಿಜೆಪಿ ಕಾಸರಗೋಡು ಜಿಲ್ಲಾ ಮೈನಾರಿಟಿ ಮೋರ್ಚಾದ ಅಧ್ಯಕ್ಷರಾದ ಪಿ.ಎಂ. ಸುಹೈಲ್, ಮೈನಾರಿಟಿ ಮೋರ್ಚಾದ ಜಿಲ್ಲಾ ಪ್ರಭಾರಿ ಮತ್ತು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಪುಷ್ಪ ಗೋಪಾಲನ್ ಅವರ ಸಮ್ಮುಖದಲ್ಲಿ, ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷರಾದ ಅಶ್ವಿನಿ ಎಂ.ಎಲ್. ಶಾಲು ಹೊದಿಸಿ ಅವರನ್ನು ಪಕ್ಷಕ್ಕೆ ಸ್ವಾಗತಿಸಿದರು. ಯೂತ್ ಮುಸ್ಲಿಂ ಲೀಗ್‌ನ ಪ್ರಧಾನ ಕಾರ್ಯದರ್ಶಿಯಾಗಿಯೂ ಸಹ ಕಾರ್ಯ ನಿರ್ವಹಿಸಿದ್ದರು. ಸಲೀಲ್ […]

ಹಿಂದು ಪದ್ಧತಿಯಂತೆ ನೆರವೇರಿದ ನಟಿ ಜರೀನ್ ಖಾನ್ ಅವರ ಅಂತ್ಯಕ್ರಿಯೆ: ಕಾರಣವೇನು ಗೊತ್ತೇ!

ಮುಂಬೈ: ಬಾಲಿವುಡ್​ನ ಖ್ಯಾತ ನಿರ್ಮಾಪಕ ಸಂಜಯ್​ ಖಾನ್​ ಅವರ ಪತ್ನಿ ಜರೀನ್​ ಖಾನ್ ಅವರು ಇದೇ ನ.7ರಂದು ತಮ್ಮ 81ನೇ ವಯಸ್ಸಿನಲ್ಲಿ ಹೃದಯಘಾತದಿಂದ ನಿಧನರಾದರು. ಅವರ ಅಂತ್ಯಕ್ರಿಯೆಯೂ ಅಂದೇ ನಡೆಯುತು. ಆದರೆ, ಅವರ ಅಂತ್ಯಕ್ರಿಯೆ ಹಿಂದು ಸಂಪ್ರದಾಯದಂತೆ ನೇರವೇರಿಸಲಾಗಿದೆ. ಈ ಸಂಬಂಧ ಕೆಲ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಸಂಜಯ್ ಮತ್ತು ಜರೀನ್ ಅವರಿಗೆ ಸುಸ್ಸಾನ್ ಖಾನ್, ಜಾಯೆದ್ ಖಾನ್, ಫರಾ ಅಲಿ ಖಾನ್ ಮತ್ತು ಸಿಮೋನ್ ಖಾನ್ ಸೇರಿ ನಾಲ್ಕು ಮಕ್ಕಳಿದ್ದಾರೆ. ಈ ನಾಲ್ವರ […]

ಮಂಗಳೂರು: ಬಹು ಕೋಟಿ ವಂಚನೆ ಕೇಸ್‌ – ರೋಷನ್ ಸಲ್ಡಾನ 2.85 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು

ಮಂಗಳೂರು: ಉದ್ಯಮಿಗಳಿಗೆ ಸಾಲ ಕೊಡಿಸೋದಾಗಿ ಕೋಟಿ ಕೋಟಿ ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಂಚಕ ರೋಷನ್ ಸಲ್ಡಾನ 2.85 ಕೋಟಿ ರೂ. ಮೌಲ್ಯದ ಆಸ್ತಿ ಇಡಿ (ಜಾರಿ ನಿರ್ದೇಶನಾಲಯ) ಅಧಿಕಾರಿಗಳು ತಾತ್ಕಾಲಿಕ ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಮಂಗಳೂರು ಉಪವಲಯ ಕಚೇರಿ ಅಧಿಕಾರಿಗಳು ರೋಷನ್ ಸಲ್ಡಾನ ಮನೆ ಮತ್ತು ಬ್ಯಾಂಕ್ ಖಾತೆ ಸೇರಿ 2.85 ಕೋಟಿ ರೂ. ಮೌಲ್ಯದ ಆಸ್ತಿಯನ್ನು ತತ್ಕಾಲಿಕ ಮುಟ್ಟುಗೋಲು ಹಾಕಿದ್ದಾರೆ. ರೋಷನ್ ಸಲ್ಡಾನ ಕೋಟಿಗಟ್ಟಲೆ ಸಾಲ ಕೊಡಿಸುವ ಆಮಿಷವೊಡ್ಡಿ ದೇಶದ ಐಷಾರಾಮಿ ವ್ಯಕ್ತಿಗಳು ಹಾಗೂ ಉದ್ಯಮಿಗಳಿಗೆ 200 […]