ದಾವಣಗೆರೆ ಉಪಸಮರ: ಮುಸ್ಲಿಮರು ನಿರ್ಣಾಯಕವಾಗಿರುವ ಕ್ಷೇತ್ರಕ್ಕೆ ಓವೈಸಿ ಎಂಟ್ರಿ!

SDPI ಎಂಟ್ರಿ ಕೊಟ್ರೆ ಕಾಂಗ್ರೆಸ್ ಲೆಕ್ಕಾಚಾರ ಮತ್ತಷ್ಟು ಉಲ್ಟಾಪಲ್ಟಾ ಸಾಧ್ಯತೆ? ದಾವಣಗೆರೆ : ಕಾಂಗ್ರೆಸ್ಸಿನ ಹಿರಿಯ ನಾಯಕ, ದಾವಣಗೆರೆ ಧಣಿ ಮತ್ತು ಲಿಂಗಾಯತ ಸಮುದಾಯದ ಪ್ರಭಾವೀ ನಾಯಕರಾಗಿದ್ದ ಶಾಮನೂರು ಶಿವಶಂಕರಪ್ಪನವರ ನಿಧನದ ನಂತರ, ಅವರು ಪ್ರತಿನಿಧಿಸುವ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಬೇಕಿದೆ. ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು, ಟಿಕೆಟ್’ಗಾಗಿ ಭಾರೀ ಲಾಬಿಯನ್ನು ಆರಂಭಿಸಿದ್ದಾರೆ. ಬಿಜೆಪಿಗಿಂತ ಕಾಂಗ್ರೆಸ್ಸಿಗೆ ಟಿಕೆಟ್ ಯಾರಿಗೆ ಫೈನಲ್ ಮಾಡಬೇಕು ಎನ್ನುವುದು ಸುಲಭ ತುತ್ತಾಗಿ ಉಳಿದಿಲ್ಲ. ಇದಕ್ಕೆ ಪ್ರಮುಖ ಕಾರಣ, ಕ್ಷೇತ್ರದಲ್ಲಿ ನಿರ್ಣಾಯಕರಾಗಿರುವ […]
ಮಂಗಳೂರು ಮೂಲದ ಅಹ್ಯಾನ್ ಅನ್ವರ್ ಅಂತರ್ರಾಷ್ಟ್ರೀಯ ರೋಲರ್ ಸ್ಕೇಟಿಂಗ್ ಕ್ರೀಡಾ ಪ್ರಮೋಷನ್ ಪಂದ್ಯಾಟಕ್ಕೆ ಆಯ್ಕೆ

ಮಂಗಳೂರು: ಮಂಗಳೂರು ಮೂಲದ ಅಹ್ಯಾನ್ ಅನ್ವರ್ ಗೋವಾದ ಪಣಜಿ ಯಲ್ಲಿ ನಡೆದ ರಾಜ್ಯ ಮಟ್ಟದ ಮಿನಿ /ಸೆಕೆಂಡರಿ ಶಾಲಾ ಕ್ರೀಡೆ ಯಲ್ಲಿ U-11 ಬಾಲಕರ ರೋಲರ್ ಸ್ಕೇಟಿಂಗ್ ನಲ್ಲಿ ಚಿನ್ನದ ಪದಕ ಹಾಗೂ ರಿಂಕ್ 1 ರಲ್ಲಿ ಮೂರನೇ ಸ್ಥಾನ ಪಡೆದು ಕಂಚಿನ ಪದಕ ವಿಜೇತರಾಗಿದ್ದಾರೆ. ಜೊತೆಗೆ ದಕ್ಷಿಣ ಗೋವಾದ ಮಡಗಾoವ್ ನಲ್ಲಿ ಫೆಬ್ರವರಿ 1 ರಂದು ನಡೆದ ಗೋವಾ ಸ್ಕೇಟಿಂಗ್ ಫೆಸ್ಟಿವಲ್ ಟೂರ್ನಮೆಂಟ್ ನಲ್ಲಿ, 11 ವರ್ಷ ದೊಳಗಿನ ಬಾಲಕರ ವಿಭಾಗ ದಲ್ಲಿ 1000 ಮೀಟರ್ […]
ಹುಬ್ಬಳ್ಳಿ | ಸಾಲ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಪತ್ನಿಯ ಕತ್ತು ಸೀಳಿದ ಪತಿ: ಜೀವ ಉಳಿಸೆಂದು ಬೇಡಿಕೊಂಡರೂ ಬಿಡದ ರಾಕ್ಷಸ ಇರ್ಫಾನ್

ಹುಬ್ಬಳ್ಳಿ, ಫೆಬ್ರವರಿ 3: ಸಾಲದ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಪತಿಯೇ ಪತ್ನಿಯ ಕತ್ತು ಸೀಳಿ ಕೊಂದ ಅಮಾನುಷ ಘಟನೆ ಹುಬ್ಬಳ್ಳಿಯ ರಾಮಲಿಂಗೇಶ್ವರ ನಗರದಲ್ಲಿ ನಡೆದಿದೆ. ಗಾರೆ ಕೆಲಸ ಮಾಡಿಕೊಂಡಿದ್ದ ಇರ್ಫಾನ್ ಎಂಬಾತ ಪತ್ನಿ ಮಾಸಬ್ಬಿಯನ್ನು ಚಾಕುವಿನಿಂದ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಈ ಭೀಕರ ಕೃತ್ಯದಿಂದ ಇಡೀ ಏರಿಯಾವೇ ಬೆಚ್ಚಿಬಿದ್ದಿದೆ. ಮಾಸಬ್ಬಿ ಮತ್ತು ಇರ್ಫಾನ್ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳು ಇದ್ದರು. ಆದರೂ, ಮನೆಯೊಳಗಿನ ಸಾಲದ ಸಂಕಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿತ್ತು. ಗಾರೆ ಕೆಲಸ ಮಾಡಿಕೊಂಡಿದ್ದ ಇರ್ಫಾನ್ ಸಾಲದ ಸುಳಿಯಲ್ಲಿ […]
ಅಡ್ಡೂರು ಸರಕಾರಿ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಮಂಗಳೂರು: ಅಡ್ಡೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2025-2026ನೇ ಸಾಲಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ‘ಸಂಭ್ರಮ’ ಶನಿವಾರ ಶಾಲಾ ಮೈದಾನದಲ್ಲಿ ನಡೆಯಿತು. ಗುರುಪುರ ಗ್ರಾಮ ಪಂಚಾಯತ್ ಅಧ್ಯಕ್ಷೆ ಸಫರಾ ನಾಸಿರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹಿದಾಯತ್ ಶಾಲೆಯ ಭವಿಷ್ಯದ ಬೆಳವಣಿಗೆಯ ಬಗ್ಗೆ ಬೆಳಕು ಚೆಲ್ಲಿದರು. ಮಂಗಳೂರು ಶಿಕ್ಷಣ ವಿಭಾಗದ ಬಿಇಒ ಮತ್ತು ಸಿಆರ್ ಪಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಯು.ಪಿ.ಇಬ್ರಾಹೀಂ ಮತ್ತು ಅಶ್ರಫ್ ನಡುಗುಡ್ಡೆ ಅತಿಥಿಗಳಾಗಿ […]
ಮಂಜೇಶ್ವರ | ಕುಟುಂಬ ಕಲಹದಲ್ಲಿ ಕೊಲೆಗೀಡಾದವರ ಸಂಖ್ಯೆ 2ಕ್ಕೆ ಏರಿಕೆ

ಮಂಜೇಶ್ವರ: ಮಂಜೇಶ್ವರ ತೂಮಿನಾಡುವಿನ ಹಿಲ್ ಟಾಪ್ ನಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿ ನಡೆದ ಕುಟುಂಬ ಕಲಹದಲ್ಲಿ ಕೊಲೆಗೀಡಾದವರ ಸಂಖ್ಯೆ ಎರಡಕ್ಕೇರಿದೆ. ಮಾರಣಾಂತಿಕವಾಗಿ ಇರಿತಕ್ಕೆ ಒಳಗಾಗಿದ್ದ ಶೇಕುಂಞಿ ಎಂಬವರು ಇಂದು(ಫೆ.3) ಬೆಳಗ್ಗೆ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇವರ ಪತ್ನಿಯ ಅಕ್ಕನ ಮಗಳು ಜುಮೈಲಾ(17) ಸೋಮವಾರ ಸಂಜೆ ಕೊಲೆಯಾಗಿದ್ದರು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಶೇಕುಂಞಿ ಇದೀಗ ಕೊನೆಯುಸಿರೆಳೆದಿದ್ದಾರೆ. ಜುಲೈಲಾ ಅವರ ತಂದೆ ಉಮರ್ ಫಾರೂಕ್ ಕೊಲೆ ಆರೋಪಿಯಾಗಿದ್ದಾನೆ. ಕುಟುಂಬ ಕಲಹ, ಆಸ್ತಿ ವಿಚಾರವಾಗಿ ಉಮರ್ ಫಾರೂಕ್ ಮತ್ತು ಆತನ ಪತ್ನಿಯ ತಂಗಿ(ನಾದಿನಿ)ಯ […]
ಮಂಜೇಶ್ವರ | ತಂದೆಯಿಂದ ಮಗಳ ಕೊಲೆ: ಆರೋಪಿ ಉಮ್ಮರ್ ಫಾರೂಕ್ ಬಂಧನ

ಕಾಸರಗೋಡು: 18 ವರ್ಷದ ಮಗಳನ್ನು ತಂದೆಯೇ ಕಡಿದು ಕೊಲೆಗೈದಿದ್ದಾನೆ ಎನ್ನಲಾದ ದಾರುಣ ಘಟನೆ ಮಂಜೇಶ್ವರ ಸಮೀಪದ ಕುಂಜತ್ತೂರು ತೂಮಿನಾಡು ಎಂಬಲ್ಲಿ ಇಂದು ಸಂಜೆ ನಡೆದಿದೆ. ಕೌಟುಂಬಿಕ ಕಲಹ ಕೃತ್ಯಕ್ಕೆ ಕಾರಣ ಎಂದು ತಿಳಿದುಬಂದಿದೆ.ತೂಮಿನಾಡಿನ ಜುಮೈಲಾ ಕೊಲೆಗೀಡಾದ ಯುವತಿ. ಕೃತ್ಯ ನಡೆಸಿದ ಆರೋಪದಲ್ಲಿ ತಂದೆ ಉಮ್ಮರ್ ಫಾರೂಕ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಿರುಚಾಟದ ಶಬ್ದ ಕೇಳಿ ಪರಿಸರ ವಾಸಿಗಳು ಸ್ಥಳಕ್ಕೆ ಬಂದಾಗ ಜುಮೈಲಾ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಜೀವ […]
ನನ್ನ ಭಾಷಣದ ಕಾರಣಕ್ಕೆ ಒಂದೇ ಒಂದು ಗಲಾಟೆ, ಸಂಘರ್ಷ ಆಗಿದ್ದು ಇದೆಯಾ?: ಶರಣ್ ಪಂಪ್ವೆಲ್

ಮಂಗಳೂರು : ನನ್ನ ಭಾಷಣದ ಕಾರಣಕ್ಕೆ ಒಂದೇ ಒಂದು ಗಲಾಟೆ, ಸಂಘರ್ಷ ಆಗಿದ್ದು ಇದೆಯಾ..? ನನ್ನ ಭಾಷಣ ಕೇಳಿ ಯಾರು ಕೂಡ ಪೊಲೀಸ್ ಜೀಪಿಗೆ ಬೆಂಕಿ ಹಾಕಲ್ಲ, ಪೊಲೀಸರಿಗೆ ಕಲ್ಲು ಬಿಸಾಕಿದ್ದು ಇಲ್ಲ. ಪಾಕಿಸ್ತಾನಕ್ಕೆ ಜೈಕಾರ ಹಾಕಲ್ಲ, ದೇಶ ವಿರೋಧಿ ಘೋಷಣೆ ಹಾಕುವ ತುಕ್ಡೇ ಗ್ಯಾಂಗ್ ನಿರ್ಮಾಣವಂತೂ ಆಗಲ್ಲ, ಬಜರಂಗದಳ ರೀತಿಯ ದೇಶಭಕ್ತರ ಸಂಘಟನೆ ಸೃಷ್ಟಿಯಾಗಬಹುದು ವಿನಾ ಯಾರೂ ದೇಶ ವಿರೋಧಿ ಘೋಷಣೆ ಕೂಗಲ್ಲ. ನನ್ನ ಭಾಷಣದ ಕಾರಣಕ್ಕೆ ಗಲಾಟೆಯಾಗುತ್ತೆ ಎಂದು ಈಗ ಸರ್ಕಾರ, ಪೊಲೀಸರು ನಿರ್ಬಂಧ […]
ಸಿ.ಟಿ ರವಿಗೆ ಡಾಕ್ಟರೇಟ್ ಪ್ರದಾನ

ಚಿಕ್ಕಮಗಳೂರು: ಮೈಸೂರಿನಲ್ಲಿ ಶನಿವಾರ ನಡೆದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ 21ನೇ ಘಟಿಕೋತ್ಸವ ಸಮಾರಂಭದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರಿಂದ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಪಿಎಚ್‌ಡಿ ಪದವಿ ಸ್ವೀಕರಿಸಿದರು. ಈ ವೇಳೆ ಮಾತನಾಡಿದ ಸಿ.ಟಿ.ರವಿ, ಓದುವುದು ಪ್ರಮುಖ ಆಸಕ್ತಿಯಾಗಿದ್ದು, ಕೆಎಸ್‌ಒಯುನಲ್ಲಿ ರಾಜಕೀಯ ಶಾಸ್ತ್ರದ ಪ್ರಾಧ್ಯಾಪಕ ಡಾ। ಕೆ.ಜೆ. ಸುರೇಶ್ ಮಾರ್ಗದರ್ಶನದಲ್ಲಿ ಪ್ರಬಂಧವನ್ನು ನಿರಂತರ 4 ವರ್ಷಗಳ ಅಧ್ಯಯನದ ಬಳಿಕ 2023ರಲ್ಲಿ ಪೂರ್ಣಗೊಳಿಸಿ, ಮಂಡಿಸಿದೆ. ಯುಪಿಎ ಮತ್ತು ಎನ್‌ಡಿಎ ಒಕ್ಕೂಟಗಳ ಮೈತ್ರಿಕೂಟ ಸರ್ಕಾರಗಳನ್ನು ತುಲನಾತ್ಮಕವಾಗಿ ಅಧ್ಯಯನ ಮಾಡಿ ಮಹಾ […]
ರಿಶೇಲ್ ಡಿಸೋಜಾ ಆತ್ಮಹತ್ಯೆ: ಕೊನೆಗೂ JDS ನಾಯಕಿ ಚೈತ್ರಾ ಕೋಠಾರಕರ್ ಪುತ್ರ ಅರೆಸ್ಟ್

ಕಾರವಾರ : ಕಾರವಾರ ತಾಲೂಕಿನ ಕದ್ರಾ ಗ್ರಾಮದ ರಿಶೇಲ್ ಡಿಸೋಜಾ ಆತ್ಮಹತ್ಯೆ ಪ್ರಕರಣ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಎರಡು ಗ್ರಾಮಗಳ ಮಧ್ಯೆ ವೈಮನಸ್ಸಿಗೂ ಕಾರಣವಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಜೆಡಿಎಸ್ ಸ್ಥಳೀಯ ನಾಯಕಿ ಚೈತ್ರಾ ಕೋಠಾರಕರ್ ಪುತ್ರ, ಆರೋಪಿತ ಚಿರಾಗ್ ನನ್ನ ಚೆನ್ನೈನಲ್ಲಿ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣವು ಕ್ರಿಶ್ಚಿಯನ್ ಸಮುದಾಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು, ಆರೋಪಿಯ ಬಂಧನಕ್ಕೆ ಆಗ್ರಹಿಸಿ ಕಾರವಾರದಲ್ಲಿ ಪ್ರತಿಭಟನೆಗಳು ನಡೆದಿದ್ದವು. ಇದೀಗ ದೂರು ದಾಖಲಾಗಿ 20 ದಿನಗಳ ಬಳಿಕ ಆರೋಪಿಯನ್ನು ಬಂಧಿಸುವಲ್ಲಿ […]
ಕೊಡಗಿನ ಯುವತಿಯರ ಜೊತೆ ಲವ್ವಿಡವ್ವಿ; ಖಾಸಗಿ ಕ್ಷಣ ಚಿತ್ರೀಕರಿಸಿ ವಿಕೃತಿ, BBA ವಿದ್ಯಾರ್ಥಿ ಸವದ್ ಅರೆಸ್ಟ್

ಮಡಿಕೇರಿ:ಕಳೆದ ಕೆಲವು ದಿನದಿಂದ ಕೊಡಗು ಜಿಲ್ಲೆಯಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದ ಕಾಲೇಜು ವಿದ್ಯಾರ್ಥಿನಿಯರ ಜೊತೆಗಿದ್ದ ಖಾಸಗಿ ಕ್ಷಣಗಳ ದೃಶ್ಯ ಚಿತ್ರೀಕರಿಸಿದ್ದ ವಿಡಿಯೋ ವೈರಲ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಮೊಹಮ್ಮದ್ ಸವದ್‌ನನ್ನು ಮಡಿಕೇರಿ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಕೊಡಗು ಜಿಲ್ಲೆಯಾದ್ಯಂತ ಸೋಶಿಯಲ್ ಮೀಡಿಯಾದಲ್ಲಿ ಅಸಭ್ಯ ವಿಡಿಯೋ ಹರಿದಾಡುತ್ತಿರುವ ಬಗ್ಗೆ ತನಿಖೆ ಶುರು ಮಾಡಿದ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿಯಾಗಿ, ಆರೋಪಿ ಮೊಹಮ್ಮದ್ ಸವದ್‌ನನ್ನು ಬಂಧಿಸಿದ್ದಾರೆ. ಪ್ರಾಥಮಿಕ ತನಿಖೆ ಪ್ರಕಾರ, ಬೆಂಗಳೂರಿನ ಸಂಪಿಗೆಹಳ್ಳಿಯಲ್ಲಿರುವ ಕಾಲೇಜಿನಲ್ಲಿ ಮೊಹಮ್ಮದ್ […]