Flash News

ಇರಾನ್ ಸುಪ್ರೀಂ ಲೀಡರ್ ಖಮೇನಿ ಸಾವಿಗೆ ಸಂತಾಪ ಸೂಚಿಸಿದ ಭಾರತ: ವಿದೇಶಾಂಗ ಕಾರ್ಯದರ್ಶಿ ಮೂಲಕ ಸಂದೇಶ

ನವದೆಹಲಿ: ಇರಾನ್​ ಮೇಲಿನ ಇಸ್ರೇಲ್​​ ಹಾಗೂ ಅಮೆರಿಕ ಜಂಟಿ ಸೇನಾ ದಾಳಿಯಲ್ಲಿ ಹತ್ಯೆಯಾದ ಇರಾನ್​ನ ಮಾಜಿ ಸರ್ವೋಚ್ಚ ನಾಯಕ ಅಲಿ ಖಮೇನಿ ಅವರ ನಿಧನಕ್ಕೆ ಭಾರತ ಸಂತಾಪ ವ್ಯಕ್ತಪಡಿಸಿದೆ. ಇಂದು ನವದೆಹಲಿಯಲ್ಲಿರುವ ಇರಾನ್ ರಾಯಭಾರ ಕಚೇರಿಯಲ್ಲಿ, ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿಯವರು ಸಂತಾಪ ಪುಸ್ತಕಕ್ಕೆ ಸಹಿ ಹಾಕಿದ್ದಾರೆ. ಇರಾನ್ ರಾಯಭಾರ ಕಚೇರಿಯಲ್ಲಿ ತೆರೆಯಲಾಗಿದ್ದ ಸಂತಾಪ ಪುಸ್ತಕಕ್ಕೆ ಸಹಿ ಹಾಕಿದ ಮಿಶ್ರಿ, ಖಾಮಿನೈ ಅವರ ನಿಧನದ ಹಿನ್ನೆಲೆಯಲ್ಲಿ ಇರಾನ್ ಸರ್ಕಾರ ಮತ್ತು ಜನತೆಗೆ ಭಾರತದ ಪರವಾಗಿ ಸಂತಾಪ ಸೂಚಿಸಿದರು‌

ಇಸ್ರೇಲ್ ಸರ್ವನಾಶ ಆಗಬೇಕು: ಇರಾನ್ ಕೇಳಿದರೆ ಅತ್ಯುತ್ತಮ ಕ್ಷಿಪಣಿಗಳನ್ನು ನೀಡುತ್ತೇನೆ; ಕಿಮ್ ಜಾಂಗ್-ಉನ್

ಪ್ಯೊಂಗ್ಯಾಂಗ್: ಮಧ್ಯಪ್ರಾಚ್ಯದಲ್ಲಿ ಯುದ್ಧ ಮುಂದುವರೆದಂತೆ ಇಸ್ರೇಲ್ ವಿರುದ್ಧ ಇರಾನ್ ಬೆಂಬಲಕ್ಕೆ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಉನ್ ಬಂದಿದ್ದಾರೆ. ಇರಾನ್ ಕೇಳಿದರೆ ಇಸ್ರೇಲ್ ಅನ್ನು ಎದುರಿಸಲು ಅಗತ್ಯವಾದ ಕ್ಷಿಪಣಿಗಳನ್ನು ಒದಗಿಸಲು ಉತ್ತರ ಕೊರಿಯಾ ಸಿದ್ಧವಾಗಿದೆ ಎಂದು ಅವರು ಘೋಷಿಸಿದ್ದಾರೆ. ಇಸ್ರೇಲ್ ಅನ್ನು ಭೂಪಟದಿಂದ ಅಳಿಸಿಹಾಕಲು ತನಗೆ ಒಂದೇ ಒಂದು ಕ್ಷಿಪಣಿ ಸಾಕು ಎಂದು ಕಿಮ್ ಹೇಳಿಕೊಂಡಿದ್ದಾರೆ ಎಂದು ಚೀನಾದ ಮಾಧ್ಯಮ ಸಂಸ್ಥೆ ಚೀನಾ ಲೈವ್ ವರದಿ ಮಾಡಿದೆ. ‘ಆಪರೇಷನ್ ಎಪಿಕ್ ಫ್ಯೂರಿ’ ಎಂದು ಕರೆಯಲ್ಪಡುವ ಇರಾನ್ […]

ಇರಾನ್ ದಾಳಿಯಿಂದ ಖತಾರ್ LNG ಘಟಕ ಸ್ಥಗಿತ: ಭಾರತದ ಗ್ಯಾಸ್ ಆಮದು ಸಂಪೂರ್ಣ ಬಂದ್‌

ನವದೆಹಲಿ: ಇಸ್ರೇಲ್ ಹಾಗೂ ಅಮೆರಿಕ ಸೇರಿ ಇರಾನ್ ಮೇಲೆ ನಡೆಸುತ್ತಿರುವ ದಾಳಿ ತೀವ್ರ ಸ್ವರೂಪ ಪಡೆದುಕೊಂಡಿದೆ. ಇರಾನ್ ಸರ್ವೋಚ್ಚ ನಾಯಕ ಆಯತೊಲ್ಲ ಖಮನೈ ಹತ್ಯೆ ಬಳಿಕ ಇರಾನ್ ನಡೆಸುತ್ತಿರುವ ಪ್ರತಿದಾಳಿ ಗುರಿ ತಪ್ಪುತ್ತಿದೆ. ಅಮೆರಿಕ ಸೇನಾ ನೆಲೆಗಳ ಗುರಿಯಾಗಿಸಿ ನಡೆಸುತ್ತಿರುವ ದಾಳಿಯಲ್ಲಿ ಗಲ್ಫ್ ರಾಷ್ಟ್ರಗಳು ಹೈರಾಣಾಗಿದೆ. ಖತಾರ್ ಮೇಲೆ ಇರಾನ್ ನಡೆಸಿದ ದಾಳಿಯಿಂದ ಖತಾರ್‌ನ ಸಿಎನ್‌ಜಿ ಘಟಕ ಸ್ಥಗಿತಗೊಳಿಸಲಾಗಿದೆ. ಸುರಕ್ಷತಾ ದೃಷ್ಟಿಯಿಂದ ಘಟಕ ಸಂಪೂರ್ಣ ಬಂದ್ ಮಾಡಲಾಗಿದೆ. ಇದು ಭಾರತಕ್ಕೆ ಸಂಕಷ್ಟಕ್ಕೆ ಸಲುಕಿಸಿದೆ. ಖತಾರ್‌ನಿಂದ ಭಾರತಕ್ಕೆ ಬರುತ್ತಿದ್ದ […]

ಮೌಲ್ವಿ ಮೇಲೆ ಹಿಂದೂ ಯುವಕರ ಹಲ್ಲೆ; ಪೊಲೀಸ್ ಠಾಣೆಗೆ ನುಗ್ಗಿದ ಗುಂಪಿನ ಮೇಲೆ ಲಾಠಿ ಚಾರ್ಜ್, 49 ಜನರ ಮೇಲೆ ಎಫ್‌ಐಆರ್!

ಬೀದರ್: ಬೀದರ್ ಜಿಲ್ಲೆಯ ಐತಿಹಾಸಿಕ ನಗರಿ ಬಸವಕಲ್ಯಾಣದಲ್ಲಿ ತಡರಾತ್ರಿ ಭಾರಿ ಹೈಡ್ರಾಮಾ ನಡೆದಿದೆ. ಮುಸ್ಲಿಂ ಮೌಲ್ವಿಗಳ ಮೇಲೆ ಹಿಂದೂ ಯುವಕರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ, ಆಕ್ರೋಶಗೊಂಡ ಸಾವಿರಾರು ಮುಸ್ಲಿಂ ಸಮುದಾಯದ ಜನರು ಬಸವಕಲ್ಯಾಣ ನಗರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದಾರೆ. ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಪೊಲೀಸರು ಜನರನ್ನು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿದ್ದು, ಇಡೀ ನಗರದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಮಾಹಿತಿಯ ಪ್ರಕಾರ, ಕೆಲವು ಹಿಂದೂ ಯುವಕರು ಮುಸ್ಲಿಂ ಮೌಲ್ವಿಗಳ ಮೇಲೆ […]

ಖಮೇನಿ ಉತ್ತರಾಧಿಕಾರಿ ಮೊಜ್ತಬಾ ಖಮೇನಿ ಹತ್ಯೆ ಮಾಡಿ: ಇಸ್ರೇಲ್‌ ಸೇನೆಗೆ ನೆತನ್ಯಾಹು ಆದೇಶ!

ನವದೆಹಲಿ: ಇರಾನ್‌ನ ಹೊಸ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿಯ ಉತ್ತರಾಧಿಕಾರಿಗೆ ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಬುಧವಾರ ಬಹಿರಂಗ ಹತ್ಯೆಯ ಬೆದರಿಕೆ ಹಾಕಿದ್ದಾರೆ. ಇರಾನ್‌ನ ಶಕ್ತಿಶಾಲಿ ರೆವಲ್ಯೂಷನರಿ ಗಾರ್ಡ್‌ಗಳ ಒತ್ತಡದ ಮೇರೆಗೆ ಖಮೇನಿ ಪುತ್ರ ಮೊಜ್ತಾಬಾ ಅವರನ್ನು ಮುಂದಿನ ಸುಪ್ರೀಂ ಲೀಡರ್ ಆಗಿ ಆಯ್ಕೆ ಮಾಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಬರೆದುಕೊಂಡಿರುವ ಕಾಟ್ಜ್, “ಇಸ್ರೇಲ್ ಅನ್ನು ನಾಶಪಡಿಸುವ ಯೋಜನೆ, ಅಮೆರಿಕ ಮತ್ತು ಮುಕ್ತ ಪ್ರಪಂಚಕ್ಕೆ ಬೆದರಿಕೆ ಹಾಗೂ […]

ಬಿರಿಯಾನಿ ಶಾಪ್ ಫ್ರೀಜರ್‌ನಲ್ಲಿ ಯುವಕನ ಶವ ಪತ್ತೆ

ಲಖನೌ: ರುಚಿ ರುಚಿಯಾದ ಆಹಾರ ಎಷ್ಟೇ ದೂರದಲ್ಲಿದ್ದರೂ ಪ್ರಯಾಣ ಮಾಡಿ ಸವಿಯುವರ ಸಂಖ್ಯೆ ಹೆಚ್ಚು. ಸ್ವಾದ ಇಷ್ಟವಾದರೆ ಖಾಯಂ ಆಗುತ್ತಾರೆ. ಬಿರಿಯಾನಿ ಇಷ್ಟಪಡದ ಜನರಿಲ್ಲ. ಸಸ್ಯಾಹಾರ ಪ್ರಿಯರಿಗೆ ವೆಜ್ ಬಿರಿಯಾನಿಗೂ ಅದೇ ರೀತಿಯ ಬೇಡಿಕೆ ಇದೆ. ಇಲ್ಲೊಂದು ವೆಜ್ ಬಿರಿಯಾನಿ ಶಾಪ್ ಅತ್ಯಂತ ಜನಪ್ರಿಯವಾಗಿತ್ತು. ಜನರು ಕ್ಯೂ ನಿಂತು ವೆಜ್ ಬಿರಿಯಾನಿ ಸವಿದು ತೆರಳುತ್ತಿದ್ದರು. ಆದರೆ ಇದೇ ಬಿರಿಯಾನಿ ಶಾಪ್‌ನ ಫ್ರೀಜರ್ ಒಳಗೆ ಯುವಕನ ಶವವೊಂದು ಪತ್ತೆಯಾದ ಘಟನೆ ಉತ್ತರ ಪ್ರದೇಶದ ಬಕ್ಷಿ ಕಾ ತಲಾಬ್ ಪೊಲೀಸ್ […]

ಖಮೇನಿ ಪುತ್ರ ಮೊಜ್ತಬಾ ಸರ್ವೋಚ್ಚ ನಾಯಕನಾಗಿ ಆಯ್ಕೆ

ಟೆಹ್ರಾನ್: ಇರಾನ್‌ನ ಧಾರ್ಮಿಕ ಪ್ರಮುಖರ ಸಭೆಯು ಅಯತೊಲ್ಲಾ ಅಲಿ ಖಮೇನಿಯ ಪುತ್ರ ಮೊಜ್ತಬಾ ಖಮೇನಿ ಅವರನ್ನು ಹೊಸ ಸರ್ವೋಚ್ಚ ನಾಯಕನನ್ನಾಗಿ ಆಯ್ಕೆ ಮಾಡಿದೆ ಎಂದು ಇರಾನ್ ಇಂಟರ್‌ನ್ಯಾಷನಲ್ ಮೂಲಗಳು ಮಂಗಳವಾರ ವರದಿ ಮಾಡಿದೆ. ಮಾಧ್ಯಮದ ವರದಿ ಪ್ರಕಾರ, 56 ರ ಹರೆಯದ ಮೊಜ್ತಬಾ ಅವರನ್ನು ದೇಶದ ನಿಯಂತ್ರಣ ವಹಿಸಿಕೊಳ್ಳಲು ಆಯ್ಕೆ ಮಾಡಲಾಗಿದ್ದು, ಅವರು ಅಲಿ ಖಮೇನಿಯವರ ಎರಡನೇ ಪುತ್ರ ಮತ್ತು ವೀಕ್ಷಕರು ಅವರನ್ನು ಸಂಭಾವ್ಯ ಉತ್ತರಾಧಿಕಾರಿಯಾಗಿ ದೀರ್ಘಕಾಲದಿಂದ ಪರಿಗಣಿಸುತ್ತಿದ್ದರು. ತಂದೆ ಅಮೆರಿಕ-ಇಸ್ರೇಲಿ ಜಂಟಿ ದಾಳಿಯ ಅಲೆಯಲ್ಲಿ ಹತ್ಯೆಗೀಡಾದ ಕೆಲವೇ […]

ರಹಸ್ಯವಾಗಿ ಆಟವಾಡಿದ ಚೀನಾ: ಇರಾನ್‌ ಕೈ ಸೇರಿದೆ 5 ದೊಡ್ಡ ಶಸ್ತ್ರಾಸ್ತ್ರ: ಇಸ್ರೇಲ್-ಅಮೆರಿಕಾ ಖೇಲ್ ಖತಮ್!

ಟೆಹ್ರಾನ್: ಇರಾನ್ ಜೊತೆಗಿನ ಯಾವುದೇ ನೇರ ಶಸ್ತ್ರಾಸ್ತ್ರ ಒಪ್ಪಂದಗಳನ್ನು ಚೀನಾ ಅಧಿಕೃತವಾಗಿ ನಿರಾಕರಿಸಿದ್ದರೂ, ಅಮೆರಿಕ ಮತ್ತು ಇಸ್ರೇಲ್ ಜೊತೆ ಇರಾನ್ ನಡೆಯುತ್ತಿರುವ ಸಂಘರ್ಷದ ಮಧ್ಯೆ ಟೆಹ್ರಾನ್‌ನ ವಾಯು ಮತ್ತು ಕ್ಷಿಪಣಿ ರಕ್ಷಣೆಯನ್ನು ಬಲಪಡಿಸುವಲ್ಲಿ ಬೀಜಿಂಗ್ ಪಾತ್ರವನ್ನು ತಜ್ಞರು ಪ್ರಶ್ನಿಸುತ್ತಿದ್ದಾರೆ. ಪ್ರಸ್ತುತ, ಇರಾನ್‌ನ ಮಿಲಿಟರಿ ಸಾಮರ್ಥ್ಯಗಳು ತನ್ನದೇ ಆದ ದೇಶೀಯ ತಂತ್ರಜ್ಞಾನ ಮತ್ತು ರಷ್ಯಾದಂತಹ ಇತರ ಪಾಲುದಾರರ ಮೇಲೆ ಹೆಚ್ಚು ಅವಲಂಬಿತವಾಗಿವೆ. ವರದಿಯ ಪ್ರಕಾರ, ಅಂತಾರಾಷ್ಟ್ರೀಯ ನಿರ್ಬಂಧಗಳು ಮತ್ತು ಭೌಗೋಳಿಕ ರಾಜಕೀಯ ಅಪಾಯಗಳಿಂದಾಗಿ ಚೀನಾ ಮತ್ತು ಇರಾನ್ ನಡುವಿನ […]

ದುಬೈನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಬಳಿ ಡ್ರೋನ್ ದಾಳಿ; ಅಧಿಕಾರಿಗಳು ಹೇಳಿದ್ದೇನು?

ದುಬೈ: ದುಬೈನಲ್ಲಿರುವ ಅಮೆರಿಕದ ರಾಯಭಾರ ಕಚೇರಿಯ ಮೇಲೆ ಇರಾನ್ ಡ್ರೋನ್ ದಾಳಿ ನಡೆಸಿದೆ ಎಂದು ವರದಿಯಾಗಿದೆ. ಈ ದಾಳಿಯಿಂದಾಗಿ ರಾಯಭಾರ ಕಚೇರಿಯ ಸಮೀಪ ಸಣ್ಣ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮಾಹಿತಿ ಸಿಕ್ಕಿದ ತಕ್ಷಣ ಸ್ಥಳಕ್ಕೆ ಧಾವಿಸಿದ ದುಬೈ ಸಿವಿಲ್ ಡಿಫೆನ್ಸ್ ತಂಡ ಬೆಂಕಿಯನ್ನು ನಂದಿಸಿದೆ. ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ದುಬೈ ಸರ್ಕಾರಿ ಮಾಧ್ಯಮ ಕಚೇರಿ ಸ್ಪಷ್ಟಪಡಿಸಿದೆ. ದಾಳಿಯ ಬಗ್ಗೆ ಮಾಹಿತಿ ಸಿಕ್ಕಿದ ಕೂಡಲೇ ದುಬೈನ ತುರ್ತು ಸ್ಪಂದನಾ ತಂಡಗಳು ಸ್ಥಳಕ್ಕೆ ಬಂದು ಬೆಂಕಿಯನ್ನು ಹತೋಟಿಗೆ […]

ಇರಾನ್ ಸೇಡಿನ ದಾಳಿ: ಕೇವಲ ಎರಡು ದಿನದಲ್ಲಿ 650 ಅಮೇರಿಕಾ ಸೈನಿಕರು ಸಾವು

ಪಶ್ಚಿಮ ಏಷ್ಯಾದಾದ್ಯಂತ ಅಮೆರಿಕದ ಮಿಲಿಟರಿ ಸ್ಥಾಪನೆಗಳು ಮತ್ತು ಯುದ್ಧನೌಕೆಗಳ ವಿರುದ್ಧ ಇರಾನ್ ಸಶಸ್ತ್ರ ಪಡೆಗಳು ನಡೆಸಿದ ಪ್ರತೀಕಾರದ ಆಪರೇಷನ್ ಟ್ರೂ ಪ್ರಾಮಿಸ್ 4 ರ ಮೊದಲ ಎರಡು ದಿನಗಳಲ್ಲಿ 650 ಕ್ಕೂ ಹೆಚ್ಚು ಅಮೆರಿಕದ ಮಿಲಿಟರಿ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಮತ್ತು ಗಾಯಗೊಂಡಿದ್ದಾರೆ ಎಂದು ಇಸ್ಲಾಮಿಕ್ ರೆವಲ್ಯೂಷನ್ ಗಾರ್ಡ್ ಕಾರ್ಪ್ಸ್ (IRGC) ವಕ್ತಾರರು ತಿಳಿಸಿದ್ದಾರೆ. “ಯುದ್ಧದ ಮೊದಲ ಎರಡು ದಿನಗಳಲ್ಲಿ, 650 ಅಮೇರಿಕನ್ ಸೈನಿಕರು ಕೊಲ್ಲಲ್ಪಟ್ಟರು ಮತ್ತು ಗಾಯಗೊಂಡರು” ಎಂದು ಬ್ರಿಗೇಡಿಯರ್ ಜನರಲ್ ಅಲಿ ಮೊಹಮ್ಮದ್ ನೈನಿ ಮಂಗಳವಾರ […]