ಮಂಗಳೂರು: “ಒರ್ಮೆಪ್ಪಾಡ್-3,” ನವೆಂಬರ್ ತಿಂಗಳ 30 ಭಾನುವಾರದಂದು ಮಂಗಳೂರು ಅಶೋಕ ನಗರದ ಪ್ರಾನ್ಸಿಸ್ ಡೋರಿಸ್ ಸ್ಕೇಟ್ ಸಿಟಿಯಲ್ಲಿ ನಡೆಯಿತು.
ಈ ಕೂಟದ ನಿರ್ವಾಹಕಿ ಝುಲೈಕ ಮುಮ್ತಾಝ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಡಾ.ಜುವೇರಿಯಾ ಮುಫೀದ ಇವರ ಸಂಯೋಜನೆಯಲ್ಲಿ ನಡೆದ ಕವಿಗೋಷ್ಟೀಯಲ್ಲಿ ಕವತ್ರಿಯರಾದ ರಮೀಝ ಯಂ.ಬಿ, ರಹ್ಮತ್ ಪುತ್ತೂರು, ಹಸೀನ ಮಲ್ನಾಡ್, ಅಸ್ಮತ್ ವಗ್ಗ, ನಸೀಮ ಸಿಧ್ದಕಟ್ಟೆ, ನಸೀಬ ಗಡಿಯಾರ್, ಮುನೀರ ತೊಕೊಟ್ಟು, ಕಲಂದರ್ ಬೀವಿ, ಸಲ್ಮಾ ಮೈಕಾಲ, ಮುಝಾಹಿದ, ಸಾರ ಅಲಿ, ರೇಶ್ಮ ಎಸ್ ಐ, ಮರಿಯಂ ಇಸ್ಮಾಯಿಲ್ ಭಾಗವಹಿಸಿದರು.
ಬಳಿಕ ನಡೆದ ಹಾಸ್ಯ ಲೇಖನ ಗೋಷ್ಠಿಯಲ್ಲಿ ಮಿಸ್ರಿಯ ಪಜೀರ್, ಮರ್ಯಂ ಇಸ್ಮಾಯಿಲ್, ಝುಲೇಖ ಮುಮ್ತಾಝ್, ಸಾರಾ ಪರ್ಲಡ್ಕ, ರಹ್ಮತ್ ಪುತ್ತೂರು, ಸಲ್ಮಾ ಮೈಕಾಲ, ಮುಝಾಯಿದ, ರೈಹಾನ ವಿ.ಕೆ, ಜುವೈರಿಯಾ ವಳಚಿಲ್, ಅಸ್ಮತ್ ವಗ್ಗ ಭಾಗವಹಿಸಿ ಮನರಂಜಿಸಿದರು.
ಹಸೀನಾ ಮಲ್ನಾಡ್ ಈ ಕೂಟದ ಸದಸ್ಯೆಯರಿಗೆ ರಸಪ್ರಶ್ನೆಯನ್ನೂ, ಆಯಿಷಾ ಪೆರ್ನೆ ಮನರಂಜನೆಯ ಆಟವನ್ನೂ ಅದ್ಭುತವಾಗಿ ನಡೆಸಿಕೊಟ್ಟರು. ಮಕ್ಕಳಿಗಾಗಿಯೂ ಇಲ್ಲಿ ಆಟಗಳನ್ನೂ ನಡೆಸಲಾಯಿತು.
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಪುರಾತನ ವಸ್ತುಗಳ ಪ್ರದರ್ಶನವನ್ನು ಏರ್ಪಾಡು ಮಾಡಲಾಗಿತ್ತು.
ಶಮೀಮಾ ಕುತ್ತಾರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಆಯಿಷಾ ಯು.ಕೆ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಲಂದರ್ ಬೀವಿ ಕೈಕಂಬ ಖಿರಾಅತ್ ಪಠಿಸಿದರು. ಅಸ್ಮತ್ ವಗ್ಗ ಕಾರ್ಯಕ್ರಮದ ನಿರೂಪಣೆ ಮಾಡಿದರು. ಜುವೈರಿಯಾ ವಳಚ್ಚಿಲ್ ಕಾರ್ಯಕ್ರಮದ ಸುಂದರ ಕ್ಷಣಗಳನ್ನು ಸೆರೆಹಿಡಿದು ಸಹಕರಿಸಿದರು. ರೇಶ್ಮ ಎಸ್.ಐ ಧನ್ಯವಾದವಿತ್ತರು.




