ಚಂಡೀಗಢ: ಹರಿಯಾಣದ ರೋಹ್ಟಕ್‌ನಲ್ಲಿ ಬ್ಯಾಸ್ಕೆಟ್‌ಬಾಲ್ ಅಭ್ಯಾಸದ ಸಮಯದಲ್ಲಿ ಕಬ್ಬಿಣದ ಕಂಬ ಬಿದ್ದು 16 ವರ್ಷದ ರಾಷ್ಟ್ರೀಯ ಮಟ್ಟದ ಆಟಗಾರನೊಬ್ಬ ಸಾವನ್ನಪ್ಪಿದ ಘಟನೆ ಮಂಗಳವಾರ ನಡೆದಿದೆ.
ಮೃತ ಆಟಗಾರ ಹಾರ್ದಿಕ್(16) ಎಂದು ಗುರುತಿಸಲಾಗಿದೆ.
ಈತ ಬೆಳಿಗ್ಗೆ 10 ಗಂಟೆ ಸುಮಾರಿಗೆ ಲಖನ್ ಮಜ್ರಾ ಗ್ರಾಮದ ಕ್ರೀಡಾ ಮೈದಾನದಲ್ಲಿ ಬ್ಯಾಸ್ಕೆಟ್‌ಬಾಲ್ ಅಂಕಣದಲ್ಲಿ ಅಭ್ಯಾಸ ಮಾಡುತ್ತಿದ್ದ. ಈ ವೇಳೆ ಬ್ಯಾಸ್ಕೆಟ್ ಕಂಬದಿಂದ ನೇತಾಡಲು ಪ್ರಯತ್ನಿಸಿದರು. ಆದರೆ, ಕಂಬ ಅವನ ಮೇಲೆ ಬಿದ್ದು ನೇರವಾಗಿ ಅವನ ಎದೆಯ ಮೇಲೆ ಬಿದ್ದಿತು. ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸಿಸಿಟಿವಿ ಕ್ಯಾಮೆರಾದಲ್ಲಿ ಏನಿದೆ?
ಆಟಗಾರ ಅಂಕಣದಲ್ಲಿ ಅಭ್ಯಾಸ ಮಾಡುತ್ತಿದ್ದಾಗ ಇಡೀ ಕಬ್ಬಿಣದ ಬ್ಯಾಸ್ಕೆಟ್‌ಬಾಲ್ ಕಂಬವು ಅವನ ಮೇಲೆ ಬೀಳುತ್ತದೆ. ಅವನು ನೆಲಕ್ಕೆ ಬೀಳುತ್ತಿದ್ದಂತೆ ಕಂಬ ಕೂಡ ಆತನ ಮೇಲೆ ಬೀಳುತ್ತದೆ.ಹತ್ತಿರದಲ್ಲಿ ಅಭ್ಯಾಸ ಮಾಡುತ್ತಿದ್ದ ಆಟಗಾರರು ಅವನ ಕಡೆಗೆ ಓಡಿ ಬಂದು ಆಸ್ಪತ್ರೆಗೆ ಕರೆದೊಯ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
In this country, if you are not playing cricket, you are on your own. The infrastructure in non-cricketing sports is a killing agent. You are plain lucky if you survive. A young, talented life lost in Basketball court in Rohtak Haryana. Rest in peace, Hardik Rathi 🙏🏾 pic.twitter.com/Uqc6FmRuVo
— Piyush Rai (@Benarasiyaa) November 26, 2025



