Flash News

ಚಿಕ್ಕಮಗಳೂರು| ಉರೂಸ್​​ ಆಚರಣೆಗೆ ತಾರತಮ್ಯ: ಕಾಂಗ್ರೆಸ್​​ ಸರ್ಕಾರದ ವಿರುದ್ಧ ತಿರುಗಿಬಿದ್ದ ಮುಸ್ಲಿಮರು

ಚಿಕ್ಕಮಗಳೂರು: ವಿವಾದಿತ ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ಉರುಸ್ ಆಚರಣೆ ವೇಳೆ ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮುಸ್ಲಿಂ ಸಮುದಾಯದವರು ರಾಜ್ಯ ಕಾಂಗ್ರೆಸ್ ಸರ್ಕಾರದ ತಿರುಗಿ ಬಿದ್ದಿದ್ದಾರೆ. ಗೋರಿಗಳ ಮೇಲೆ ಹಸಿರು ಬಟ್ಟೆ, ಗಂಧ ಲೇಪನ ಮಾಡದ ಹಿನ್ನಲೆ ಜನ ಶಕ್ತಿ ಸೇರಿದಂತೆ ಮುಸ್ಲಿಂ ಸಮುದಾಯದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿಕ್ಕಮಗಳೂರು ತಾಲೂಕಿನ ಚಂದ್ರದ್ರೋಣ ಪರ್ವತ ಸಾಲಿನಲ್ಲಿರುವ ವಿವಾದಿತ ಇನಾಂ‌ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ನಿನ್ನೆಯಿಂದ ಸೆಂದಿಲ್ ಉರುಸ್ ಆರಂಭವಾಗಿದೆ. ನಿನ್ನೆ ವಿವಾದಿತ ಗುಹೆ ಹಾಗೂ ದತ್ತ ಪೀಠದ ಆವರಣದಲ್ಲಿರುವ ಗೋರಿಗಳಿಗೆ ಗಂಧ‌ ಲೇಪನ ಹಾಗೂ ಸೇಂದಿಲ್​ಗೆ ಅವಕಾಶ ನೀಡಿಲ್ಲ. ಗೋರಿಗಳಿಗೆ ಹಸಿರಿ ಬಟ್ಟೆ ಹೊದಿಸಲು ಬಿಡಲಿಲ್ಲ ಅಂತಾ‌ ಮುಸ್ಲಿಂ ಸಂಘಟನೆಗಳು ಆರೋಪ ಮಾಡುತ್ತಿವೆ.

ಹಿಂದೂಗಳಿಗೆ ಗುಹೆಯ ಒಳಗೆ ಪೂಜೆ ಮಾಡುವುದಕ್ಕೆ ಬಿಡುವ ಜಿಲ್ಲಾಡಳಿತ ನಮಗೆ ಮಾತ್ರ ಪೂಜೆಗೆ ಅವಕಾಶ ಕೊಟ್ಟಿಲ್ಲ‌ ಅಂತಾ ಆರೋಪಿಸಿವೆ. ಜಿಲ್ಲಾಡಳಿತ ಹಾಗೂ ಕಾಂಗ್ರೆಸ್ ಸರ್ಕಾರ ಹಿಂದಿನ ಬಿಜೆಪಿ‌ ಸರ್ಕಾರದಲ್ಲಿ ಮಾಡಿದ್ದ ಕೆಲವು ಆಚರಣೆಗಳನ್ನೇ ಮುಂದುವರಿಸಿಕೊಂಡು ಹೋಗ್ತಿದೆ. ಹಿಂದಿನ ವರ್ಷ ಯಾವ ರೀತಿ ನಡೆಸಲಾಗಿತ್ತೋ ಅದೇ ರೀತಿ ಕೂಡ ಈ ವರ್ಷವೂ ನಡೆಸೋದಕ್ಕೆ ಅವಕಾಶ ಕೊಡ್ತೀವಿ ಅಂತಾ ಹೇಳ್ತಿದ್ದಾರೆ. ಉರುಸ್ ನಡೆಸಲಾಗುತ್ತಿದೆ ಎಂದು ಕೇವಲ ದಾಖಲೆಗಳನ್ನ‌ ತೋರಿಸೋದಕ್ಕಾಗಿ ಮಾಡ್ತಿರುವ ಷಡ್ಯಂತ್ರ ಎಂದು ಆರೋಪಿಸಿದ್ದು, ರಾಜ್ಯ ಕಾಂಗ್ರೆಸ್ ವಿರುದ್ಧ ಮುಸ್ಲಿಂ‌ ಮುಖಂಡ ಗೌಸ್ ಮೊಹಿದ್ದೀನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿನ್ನೆ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ನಡೆದ ಉರುಸ್ ವೇಳೆ ಜಿಲ್ಲಾಡಳಿತದ‌ ಕೆಲವು ನಿರ್ಧಾರಗಳನ್ನ‌ ಕಂಡು ಇಡೀ‌ ಮುಸ್ಲಿಂ ಸಮುದಾಯವೇ ಒಂದು ಕ್ಷಣ ಶಾಕ್ ಆಗಿದ್ದು, ಜಿಲ್ಲಾಡಳಿತದ ವಿರುದ್ಧ ತಿರುಗಿ ಬಿದ್ದಿದೆ. ಯಾವಾಗ ಮುಸ್ಲಿಂ ಸಮುದಾಯದ ಮುಖಂಡರು ಹಿಂದಿನಿಂದ ನಡೆದುಕೊಂಡು ಬರುತ್ತಿದ್ದಂತೆಯೇ ಈ ವರ್ಷವೂ ಅವಕಾಶ ಕೊಡಬೇಕು ಅಂತಾ ಪಟ್ಟು ಹಿಡಿದರೋ ಕೇವಲ 10 ಜನರನ್ನ‌ ಮಾತ್ರ ವಿವಾದಿತ ಗುಹೆಯ ಒಳಗೆ ಬಿಡಲಾಯ್ತು. ಅಲ್ಲಿ ಕೂಡ ಗೋರಿಗಳಿಗೆ ಗಂಧ‌ ಲೇಪನಕ್ಕೆ ಬಿಟ್ಟಿಲ್ಲ ಎಂದು ಆರೋಪಿಸಿದರು.