Flash News

ವೇಶ್ಯಾವಾಟಿಕೆ ಮಾಡುವಂತೆ ಅತ್ತೆಯಿಂದ ಕಿರುಕುಳ: ಮನೆಯಲ್ಲೇ ನೇಣು ಬಿಗಿದು ಸೊಸೆ ಆತ್ಮಹತ್ಯೆ

ಬೀದರ್‌: ಗಂಡನ ಮನೆಯವರ ಮಾನಸಿಕ ಕಿರುಕುಳದಿಂದಾಗಿ ಮನೆಯಲ್ಲೇ ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೀದರ್ ಜಿಲ್ಲೆಯ ಬಸವಕವಲ್ಯಾಣ ನಗರದ ಓಂ ನಗರದಲ್ಲಿ ನಡೆದಿದೆ.

ಅಂಜನಾಬಾಯಿ ಪಾಟೀಲ್ (22) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿಯಾಗಿದ್ದು ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದು ಮೃತಪಟ್ಟಿದ್ದಾರೆ.

ಮೃತಳ ಗಂಡ ಶೇಖರ್, ಅತ್ತೆ ಅರುಣಾಬಾಯಿ, ಮಾವ ಚಂದ್ರಕಾಂತ ಅವರ ಕಿರುಕುಳದಿಂದ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಂದೆ ವಿಜಯ್‌ ಕುಮಾರ್‌ ಬಸವಕಲ್ಯಾಣ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

ದೂರಿನಲ್ಲಿ ಅತ್ತೆ ಅರುಣಾಬಾಯಿ ತನ್ನ ಮಗಳಿಗೆ ವೇಶ್ಯವಾಟಿಕೆ (Prostitution) ಮಾಡುವಂತೆ ಮಾನಸಿಕ ಕಿರುಕುಳ ನೀಡುತ್ತಿದ್ದಳು ಎಂದು ವಿಜಯ್‌ ಕುಮಾರ್‌ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

3 ವರ್ಷಗಳ ಹಿಂದೆ ಅಂಜನಾಬಾಯಿ ಮತ್ತು ಶೇಖರ್ ಮಧ್ಯೆ ವಿವಾಹ ನಡೆದಿತ್ತು. ಪಾನಿಪುರಿ ವ್ಯಾಪಾರ ಮಾಡಿ ಮನೆಗೆ ರಾತ್ರಿ ತಡವಾಗಿ ಅಳಿಯ ಶೇಖರ್‌ ಬರುತ್ತಿದ್ದ. ರಾತ್ರಿ ಬೇಗನೆ ಬನ್ನಿ ಎಂದು ಶೇಖರ್‌ಗೆ ಅಂಜನಾಬಾಯಿ ಹೇಳಿದ್ದಳು. ಇದಕ್ಕೆ ಅತ್ತೆ ಮಾವ ರಾತ್ರಿಯವರೆಗೂ ಪಾನಿಪುರಿ ವ್ಯಾಪಾರ ಇರುತ್ತದೆ. ರಾತ್ರಿಯವರೆಗೂ ನೀನು ಹೀಗೆಯೇ ಇರಬೇಕು ಎಂದು ಹೇಳಿ ಜಗಳ ಮಾಡುತ್ತಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.