ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಅವಹೇಳನಕಾರಿ ಮತ್ತು ಅಶ್ಲೀಲ ಹೇಳಿಕೆ ನೀಡಿರುವ ಆರೋಪದಲ್ಲಿ ಯುವಕನಿಗೆ ಜಾಮೀನು ಮಂಜೂರಾಗಿದೆ.
ಶಾರೂಕ್ ಕೊಪ್ಪಳ ಎನ್ನುವವರ ವಿರುದ್ಧ ಬಂಟ್ವಾಳ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಕಲ್ಲಡ್ಕ ಶ್ರೀರಾಮ ಶಾಲೆಯ ಸಿಬ್ಬಂದಿ ಸೀತಾರಾಮ ಆಚಾರ್ಯ ಅವರ ಮಗ ಕೃಷ್ಣಪ್ಪ ಅನ್ನುವವರು ಕೊಟ್ಟ ದೂರಿನ ಅನ್ವಯ ಬಂಟ್ವಾಳ ಟೌನ್ ಪೊಲೀಸ್ ಠಾಣೆ ಪೊಲೀಸರು FIR ಮಾಡಿ ಕ್ರೈಂ ನಂಬರ್ 129/2025 ರಂತೆ ಕೇಸ್ ಧಾಖಲಿಸಿದ್ದರು. ಈ ಪ್ರಕರಣದಲ್ಲಿ ಆರೋಪಿತರು ಮಂಗಳೂರಿನ ಗೌರವಾನ್ವಿತ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ನಿರೀಕ್ಷಣ ಜಾಮೀನು ಸಲ್ಲಿಸಿದ್ದರು. ಆದರೆ ಜಿಲ್ಲಾ ನ್ಯಾಯಾಲಯವು ಜಾಮೀನು ನೀಡಲು ನಿರಾಕರಿಸಿ ಅರ್ಜಿಯನ್ನು ವಜಾಗೊಳಿಸಿತ್ತು. ಜಿಲ್ಲಾ ನ್ಯಾಯಾಲಯದಲ್ಲಿ ವಜಾಗೊಂಡ ಮೇಲೆ ಆರೋಪಿತರು ಗೌರವಾನ್ವಿತ ಉಚ್ಚ ನ್ಯಾಯಾಲಯಕ್ಕೆ ಎರಡನೇ ಅರ್ಜಿ ಮುಖಾಂತರ ಮೆಲ್ಮನವಿ ಸಲ್ಲಿಸಿದ್ದರು. ಇದೀಗ ಹೈ ಕೋರ್ಟ್ ಆಫ್ ಕರ್ನಾಟಕ ಈ ಪ್ರಕರಣದಲ್ಲಿ ಷರತ್ತು ಬದ್ದ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಆರೋಪಿಗಳ ಪರ ನ್ಯಾಯವಾದಿ ರಾಶಿಫ್ ನಾಯರ್ಮೂಲೆ ವಾದ ಮಂಡಿಸಿದ್ದರು.



