ದುಬೈ: ಇಲ್ಲಿನ ಅಲ್ ಮಕ್ತೌಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆಯುತ್ತಿರುವ ‘ದುಬೈ ಏರ್ ಶೋ 2025’ರಲ್ಲಿ ಭಾರತದ ‘ತೇಜಸ್‘ ಲಘು ಯುದ್ಧವಿಮಾನ ಪತನವಾಗಿದೆ.
ಅಪಘಾತದಲ್ಲಿ ಪೈಲಟ್ ಮೃತಪಟ್ಟಿದ್ದಾರೆ. ಏರ್ಶೋನಲ್ಲಿ ‘ತೇಜಸ್‘ ಯುದ್ಧವಿಮಾನ ಪ್ರದರ್ಶನ ನಡೆಸುತ್ತಿದ್ದಾಗ ಪತನವಾಗಿದೆ. ಈ ಘಟನೆ ಶುಕ್ರವಾರ ಮಧ್ಯಾಹ್ನ 2:10ರ ಸುಮಾರಿಗೆ ನಡೆದಿದೆ ಎಂದು ವರದಿಯಾಗಿದೆ.
ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಜನಸಂದಣಿಯಲ್ಲಿದ್ದವರು ನೋಡನೋಡುತ್ತಿದ್ದಂತೆ ವಿಮಾನ ಪತನವಾಗಿದ್ದು ನಿಲ್ದಾಣದ ಮೇಲೆ ಕಪ್ಪು ಹೊಗೆ ಆವರಿಸಿಕೊಂಡಿದೆ.
ಭಾರತೀಯ ವಾಯುಪಡೆ ಮತ್ತು ಭಾರತೀಯ ನೌಕಾಪಡೆಗಾಗಿ ಎಚ್ಎಎಲ್ ನಿರ್ಮಿಸಿದ ತೇಜಸ್ ಯುದ್ಧ ವಿಮಾನ ಏಕ-ಎಂಜಿನ್, 4.5 ತಲೆಮಾರಿನ ಡೆಲ್ಟಾ ವಿಂಗ್ ಬಹುಪಾತ್ರದ ವಿಮಾನ ಎಂಬ ವೈಶಿಷ್ಟ್ಯ ಹೊಂದಿದೆ.



