Flash News

ರತ್ನಗಿರಿಯಲ್ಲಿ ಭೀಕರ ಅಪಘಾತ: ಮಂಗಳೂರಿನ ಯುವಕ ಮೃತ್ಯು

ಮಂಗಳೂರು: ಮಹಾರಾಷ್ಟ್ರದ ರತ್ನಗಿರಿಯಲ್ಲಿ ಸಂಭವಿಸಿದ ಭೀಕರ ಅಪಘಾತವೊಂದರಲ್ಲಿ ಮುಡಿಪು ಸಮೀಪದ ಬೋಳಿಯಾರ್ ನಿವಾಸಿಯೊಬ್ಬರು ಮೃತಪಟ್ಟ ಘಟನೆ ವರದಿಯಾಗಿದೆ.

ಮುಹಮ್ಮದ್ ರಿಝ್ವಾನ್ (28) ಮೃತ ವಿವಾಹಿತ ಯುವಕ ಎಂದು ತಿಳಿದು ಬಂದಿದೆ.

ಕಳೆದ‌ ಹಲವಾರು ವರ್ಷಗಳಿಂದ ಕಂಪೆನಿಯೊಂದರ ಮೂಲಕ ಮೀನಿನ ಲಾರಿಯಲ್ಲಿ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ರಿಝ್ವಾನ್ ಅವರು ಮಹಾರಾಷ್ಟ್ರಕ್ಕೆ ಮೀನಿನ ಲಾರಿ ಚಲಾಯಿಸುತ್ತಿದ್ದು, ಮಹಾರಾಷ್ಟ್ರದ ರತ್ನಗಿರಿ ಎಂಬಲ್ಲಿ ಎರಡು ಲಾರಿಗಳ ನಡುವೆ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡ ರಿಝ್ವಾನ್ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.