Flash News

ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ

ಮಂಗಳಮುಖಿ ಅಂತ ಗೊತ್ತಿದ್ರೂ ಯುವಕನೊಬ್ಬ ಐದು ವರ್ಷಗಳಿಂದ ಪ್ರೀತಿಯಲ್ಲಿ ಬಿದ್ದಿದ್ದ. ಇದೀಗ ಮಂಗಳಮುಖಿ ಸುಹಾಸಿನಿಯನ್ನು ಕೊಂದು ಆ ಪಾಗಲ್ ಪ್ರೇಮಿ ಶೇಖರ್ ತಾನೂ ಆತ್ಮ*ಹತ್ಯೆ ಮಾಡಿಕೊಂಡ ಘಟನೆ ಬಳ್ಳಾರಿ ನಗರದ ಮೇದಾರ ಕೇತಯ್ಯ ಮಗರದ ಮನೆಯಲ್ಲಿ ಈ ಘಟನೆ ನಡೆದಿದೆ.

29 ವರ್ಷದ ಮಂಗಳಮುಖಿ ಸುಹಾಸಿನಿಯನ್ನು 27 ವರ್ಷದ ಶೇಖರ್ ಲವ್ ಮಾಡುತ್ತಿದ್ದ. ಇದೀಗ ಇಬ್ಬರೂ ಸಾವನ್ನಪ್ಪಿದ್ದು, ಆತ್ಮ*ಹತ್ಯೆ ಸಂಖ್ಯೆ ವ್ಯಕ್ತವಾಗಿದೆ. ಹಣದ ವಿಚಾರಕ್ಕೆ ಈ ಇಬ್ಬರೂ ಕೆಲ ದಿನಗಳ ಹಿಂದೆ ಬೇರೆ-ಬೇರೆಯಾಗಿದ್ದರು ಎನ್ನಲಾಗುತ್ತಿದೆ. ನಿನ್ನೆ ರಾತ್ರಿ ಸುಹಾಸಿನಿ ಮನೆಗೆ ಬಂದಾಗ ಸುಹಾಸಿನಿ ಹಾಗೂ ಶೇಖರ್ ನಡುವೆ ಜಗಳವಾಗಿತ್ತು. ಜಗಳ ವಿಕೋಪಕ್ಕೆ ತಿರುಗಿ ಶೇಖರ್, ಸುಹಾಸಿನಿಯನ್ನು ಕೊ*ಲೆ ಮಾಡಿದ್ದಾನೆ. ಇದಾದ ಬಳಿಕ ಆತನೂ ಆತ್ಮ*ಹತ್ಯೆ ಮಾಡಿಕೊಂಡಿದ್ದಾನೆ. ಮನೆಯ ಕಿಟಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರ ಶವ ಪತ್ತೆಯಾಗಿದೆ. 

ಸಾವಿನ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಬಳ್ಳಾರಿ ಬಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಬ್ರೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಹಣಕ್ಕಾಗಿ ಸುಹಾಸಿನಿಯ ಜೊತೆ ಇದ್ದ ಶೇಖರ್, ನಂತರ ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಮಂಗಳಮುಖಿ ಸಮುದಾಯದ ಸದಸ್ಯರು ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದರ ಬಗ್ಗೆ ಪೊಲೀಸರು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ.

ಮತ್ತೊಂದೆಡೆ, ಸಾವಿನ ಕಾರಣ ಮರಣೋತ್ತರ ವರದಿ ನಂತರವೇ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.