ಹಾಸನ: ಬೇಲೂರು ಪಟ್ಟಣದ ಗಾಣಿಗರ ಬೀದಿಯ ಮನೆಯೊಂದರಲ್ಲಿ ನಗ್ನ ಸ್ಥಿತಿಯಲ್ಲಿ ಒಂಟಿ ಮಹಿಳೆಯ ಶವ ಪತ್ತೆಯಾಗಿದೆ.
ಮೃತ ಮಹಿಳೆಯನ್ನು ಚಿಕ್ಕಮಗಳೂರಿನ ಮಲ್ಲೇನಹಳ್ಳಿ ಗ್ರಾಮದ ಸ್ಪಂದನ (34) ಎಂದು ಗುರುತಿಸಲಾಗಿದೆ. ಮಹಿಳೆ ಪತಿಯಿಂದ ದೂರಾಗಿ 8 ದಿನಗಳ ಹಿಂದೆ ಬೇಲೂರಿನಲ್ಲಿ ಬಾಡಿಗೆ ಮನೆಗೆ ಬಂದು ನೆಲೆಸಿದ್ದಳು. ಎರಡು ದಿನಗಳಿಂದ ಮನೆಯಲ್ಲಿ ಯಾರೂ ಇಲ್ಲದ್ದನ್ನ ಸ್ಥಳೀಯರು ಗಮನಿಸಿದಾಗ ಈ ಪ್ರಕರಣ ಬಯಲಾಗಿದೆ.
ಮನೆಯ ಬಾಗಿಲು ತೆರೆದಿದ್ದರೂ ಯಾರ ಸುಳಿವು ಇಲ್ಲದೇ ಇದ್ದಿದ್ದರಿಂದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಪರಿಶೀಲನೆ ನಡೆಸಿದಾಗ ಸ್ಪಂದನ ಮೃತದೇಹ ಪತ್ತೆಯಾಗಿದೆ. ಮನೆಯಲ್ಲಿ ಸಂಪೂರ್ಣ ಬೆತ್ತಲಾದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆಯಾಗಿದ್ದರಿಂದ ಕೊಲೆ ಶಂಕೆ ವ್ಯಕ್ತವಾಗಿದೆ.



