Flash News

ಪ್ರತಿಷ್ಠಿತ ಲೌವ್ರೆ ಮ್ಯೂಸಿಯಂ ದರೋಡೆ: 895 ಕೋಟಿ ರೂ. ಮೌಲ್ಯದ ಆಭರಣ ದೋಚಿದ ಕಳ್ಳರು

ಪ್ಯಾರಿಸ್, ಫ್ರಾನ್ಸ್​: ಒಂದು ಕಾಲದಲ್ಲಿ ಫ್ರಾನ್ಸ್‌ನ ರಾಜಮನೆತನದ ಸ್ವತ್ತಾಗಿದ್ದ ಹೊಳೆಯುವ ನೀಲಮಣಿಗಳು, ಪಚ್ಚೆಗಳು ಮತ್ತು ವಜ್ರಗಳು ಶಾಶ್ವತವಾಗಿ ಕಣ್ಮರೆಯಾಗಬಹುದು ಎಂದು ತಜ್ಞರು ಮಂಗಳವಾರ ಕಳವಳ ವ್ಯಕ್ತಪಡಿಸಿದ್ದಾರೆ. ಹಗಲು ಹೊತ್ತಿನಲ್ಲಿ ನಾಲ್ಕು ನಿಮಿಷಗಳ ಕಾಲ ನಡೆದ ದರೋಡೆ ರಾಷ್ಟ್ರವನ್ನು ದಿಗ್ಭ್ರಮೆಗೆ ಈಡು ಮಾಡಿದೆ. ಲೌವ್ರೆಯಲ್ಲಿ ಆದ ಘಟನೆ ಹಾಗೂ ಅದನ್ನು ತಡೆಗಟ್ಟುವಲ್ಲಿ ಆದ ವೈಪಲ್ಯವನ್ನ ವಿವರಿಸಲು ಅಲ್ಲಿನ ಸರ್ಕಾರ ಹೆಣಗಾಡುತ್ತಿದೆ.

ಪಚ್ಚೆ ಹಾರ ಮತ್ತು ಕಿವಿಯೋಲೆಗಳು, ಎರಡು ಕಿರೀಟಗಳು, ಎರಡು ಬ್ರೂಚ್‌ಗಳು, ನೀಲಮಣಿ ಹಾರ ಮತ್ತು ಒಂದೇ ಕಿವಿಯೋಲೆ – 19 ನೇ ಶತಮಾನದ ಅತ್ಯುತ್ತಮ ಆಭರಣಗಳಲ್ಲಿ ಇವುಗಳಿಗೆ ಅಗ್ರ ಸ್ಥಾನವಿತ್ತು. ಆದರೆ, ರಾಜಮನೆತನದವರಿಗೆ ಇವುಗಳು ಅಲಂಕಾರಕ್ಕಿಂತ ಹೆಚ್ಚಿನದಾಗಿದ್ದವು. ಈ ಆಭರಣಗಳು ಫ್ರಾನ್ಸ್‌ನ ಸಂಪತ್ತು, ಶಕ್ತಿ ಮತ್ತು ಸಾಂಸ್ಕೃತಿಕತೆಯ ಪ್ರತಿಬಿಂಬವಾಗಿದ್ದವು. ಅವು ಎಷ್ಟು ಮಹತ್ವ ಪಡೆದುಕೊಂಡಿದ್ದವು ಎಂದರೆ, 1887ರಲ್ಲಿ ಸರ್ಕಾರವು ನಡೆಸಿದ ಹೆಚ್ಚಿನ ರಾಜಮನೆತನದ ಆಭರಣಗಳ ಹರಾಜಿನಿಂದ ಉಳಿಸಲಾದ ನಿಧಿಗಳಲ್ಲಿ ಇವು ಪ್ರಮುಖ ಸ್ಥಾನ ಪಡೆದುಕೊಂಡಿದ್ದವು.

ತನಿಖೆಯ ನೇತೃತ್ವ ವಹಿಸಿರುವ ಪ್ಯಾರಿಸ್ ಪ್ರಾಸಿಕ್ಯೂಟರ್ ಲಾರೆ ಬೆಕುವಾ ಈ ಬಗ್ಗೆ ಮಂಗಳವಾರ ಮಾತನಾಡಿದ್ದು, ಹಣಕಾಸಿನ ಲೆಕ್ಕಾಚಾರದಲ್ಲಿ ಕದ್ದ ಆಭರಣಗಳು ಅಂದಾಜು $102 ಮಿಲಿಯನ್ (88 ಮಿಲಿಯನ್ ಯುರೋಗಳು ಅಥವಾ ರೂ. 895 ಕೋಟಿ) ಮೌಲ್ಯದ್ದಾಗಿದೆ ಎಂದು ಹೇಳಿದರು. ಈ ಅಂದಾಜಿನಲ್ಲಿ ಪ್ರಸ್ತುತ ಐತಿಹಾಸಿಕ ಮೌಲ್ಯವನ್ನು ಒಳಗೊಂಡಿಲ್ಲ ಎಂದು ತಿಳಿಸಿದ್ದಾರೆ. ಶಂಕಿತರು ಮತ್ತು ಅಮೂಲ್ಯ ರತ್ನಗಳಿಗಾಗಿ ಪೊಲೀಸರು ಹುಡುಕಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಸುಮಾರು 100 ತನಿಖಾಧಿಕಾರಿಗಳು ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಸರ್ಕಾರವನ್ನು ಪೇಚಿಗೆ ಸಿಲುಕಿಸಿದ ಪ್ರಕರಣ: ಕಿರೀಟ ಆಭರಣಗಳ ಕಳ್ಳತನವು ಫ್ರೆಂಚ್ ಸರ್ಕಾರವನ್ನು ಗೊಂದಲಕ್ಕೆ ಈಡು ಮಾಡಿದೆ. ಜನಸಂಚಯ ಮತ್ತು ಹಳೆಯ ಸೌಲಭ್ಯಗಳ ಕೊರತೆಯಿಂದ ತೊಂದರೆಗೊಳಗಾಗಿರುವ ಲೌವ್ರೆ ಮ್ಯೂಸಿಯಂನಲ್ಲಿ ನಡೆದ ಈ ಇತ್ತೀಚಿನ ಘಟನೆಯನ್ನು ವಿವರಿಸುವಲ್ಲಿ ಅಧಿಕಾರಿಗಳು ಬೇಸತ್ತಿದ್ದಾರೆ. 2024ರಲ್ಲಿ ಕಾರ್ಯಕರ್ತರು ಮೋನಾ ಲಿಸಾ ಚಿತ್ರಕ್ಕೆ ಸೂಪ್‌ ಕ್ಯಾನ್‌ ಎಸೆದಿದ್ದರು. ಜೂನ್‌ನಲ್ಲಿ ಮ್ಯೂಸಿಯಂನ ಸ್ವಂತ ಸಿಬ್ಬಂದಿಯ ಸತ್ಯಾಗ್ರಹದಿಂದ ಮ್ಯೂಸಿಯಂ ಸ್ಥಗಿತಗೊಂಡಿತ್ತು. ಈಗ ಹಿಂದಿನ ಫ್ರೆಂಚ್ ಸಂಸ್ಕೃತಿಯ ಅಮೂಲ್ಯ ಆಭರಣಗಳು ಕಳ್ಳತನಕ್ಕೊಳಗಾಗಿವೆ. ಇವುಗಳು ಐತಿಹಾಸಿಕ ಮೌಲ್ಯದ ಹೊಳೆಯುತ್ತಿರುವ ರತ್ನಗಳಾಗಿವೆ. ಕಳ್ಳತನಕ್ಕೆ ಒಳಗಾಗಿರುವ ಕಿರೀಟಗಳು ಗುಪ್ತವಾಗಿ ಕತ್ತರಿಸಲ್ಪಟ್ಟು, ವೈಯಕ್ತಿಕ ತುಂಡುಗಳಾಗಿ ಮಾರಾಟಕ್ಕೆ ಒಳಪಟ್ಟಿವೆ ಎಂದು ತಜ್ಞರು ಹೇಳುತ್ತಿದ್ದಾರೆ. ಇವುಗಳು ಫ್ರೆಂಚ್ ಕಿರೀಟ ಆಭರಣಗಳ ಭಾಗವೆಂದು ಗುರುತಿಸಲು ಸಾಧ್ಯವಾಗಬಹುದು ಅಥವಾ ಆಗದೇ ಇರಬಹುದು ಎಂದು ಅವರು ತಿಳಿಸಿದ್ದಾರೆ.

ಈ ಆಭರಣಗಳನ್ನು ಮತ್ತೆ ಪಡೆಯುವುದು ಅಥವಾ ಮತ್ತೆ ನೋಡುವುದು ಅತ್ಯಂತ ಕಷ್ಟಕರವಾಗಿದೆ ಎಂದು ಐರೋಪಾದ ಅತಿದೊಡ್ಡ ಡೈಮಂಟ್ ಆಭರಣ ಕಂಪನಿ 77 ಡೈಮಂಡ್ಸ್‌ನ ನಿರ್ವಹಣೆಯ ನಿರ್ದೇಶಕ ಟೊಬೈಯಾಸ್ ಕಾರ್ಮಿಂಡ್ ಹೇಳಿದ್ದಾರೆ. ಈ ರತ್ನಗಳನ್ನು ಕತ್ತರಿಸಿ ಮಾರಾಟ ಮಾಡಿದರೆ, ಅವುಗಳು ಇತಿಹಾಸದಿಂದ ಮಾಯವಾಗಿ, ಜಗತ್ತಿಗೆ ಶಾಶ್ವತವಾಗಿ ಕಳೆದುಕೊಳ್ಳಲ್ಪಡುತ್ತವೆ ಎಂದು ಅವರು ಇದೇ ವೇಳೆ ಕಳವಳ ವ್ಯಕ್ತಪಡಿಸಿದ್ದಾರೆ.

ಕಿರೀಟ ಆಭರಣಗಳು: ಸಾಂಸ್ಕೃತಿಕ ಮತ್ತು ರಾಷ್ಟ್ರೀಯ ಗೌರವದ ಪ್ರತೀಕಗಳಾಗಿವೆ. ಈ ಕಿರೀಟ ಆಭರಣಗಳು ವೈಯಕ್ತಿಕ ಮತ್ತು ಸಾರ್ವಜನಿಕ ಎರಡೂ ರೀತಿಯಲ್ಲಿವೆ. ಲಂಡನ್‌ನ ಟವರ್ ಆಫ್ ಲಂಡನ್‌ನಿಂದ ಟೋಕಿಯೋದ ಇಂಪೀರಿಯಲ್ ಪ್ಯಾಲೇಸ್‌ನವರೆಗೆ, ಇವುಗಳನ್ನು ರಾಷ್ಟ್ರೀಯ ಗುರುತಿನ ದೃಶ್ಯ ಪ್ರತೀಕಗಳಾಗಿ ಭದ್ರತೆಯೊಂದಿಗೆ ಇರಿಸಿಕೊಳ್ಳಲಾಗುತ್ತದೆ. ಇಂತಹ ಆಭರಣಗಳನ್ನೇ ದರೋಡೆಕೋರರು ಟಾರ್ಗೆಟ್​ ಮಾಡಿ ಕದ್ದೊಯ್ದಿದ್ದಾರೆ.

ಸಚಿವ ಲಾರೆಂಟ್ ನುನ್ಯೆಜ್ ಅವರು ಈ ಬಗ್ಗೆ ಮಾತನಾಡಿದ್ದು, ನಾಲ್ಕು ಕಳ್ಳರ ಹುಡುಕಾಟದಲ್ಲಿ 60ಕ್ಕೂ ಹೆಚ್ಚು ಪೊಲೀಸ್​ ತನಿಖಾಧಿಕಾರಿಗಳ ಭಾಗವಹಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಕಳ್ಳರು ಎರಡು ಭಾಗಗಳಾಗಿ ವಿಭಜನೆಯಾಗಿದ್ದು, ಎರಡು ಜನರು ಚೆರ್ರಿ ಪಿಕರ್‌ನೊಂದಿಗಿನ ಟ್ರಕ್‌ನಲ್ಲಿ ಇದ್ದರು. ಅದನ್ನು ಬಳಸಿ ಅವರು ಗ್ಯಾಲರಿಗೆ ಪ್ರವೇಶಿಸಿದ್ದಾರೆ ಎಂದು ನುನ್ಯೆಜ್ ಹೇಳಿದ್ದಾರೆ.