ಇಂಡಿಯಾ ಟುಡೇ-ಸಿ ವೋಟರ್ ನಡೆಸಿದ ‘ಮೂಡ್ ಆಫ್ ದಿ ನೇಷನ್’ ಸಮೀಕ್ಷೆಯ ಪ್ರಕಾರ, ಇಂದು ಲೋಕಸಭಾ ಚುನಾವಣೆ ನಡೆದರೆ ಎನ್‌ಡಿಎ ಮೈತ್ರಿಕೂಟ 352 ಸ್ಥಾನಗಳನ್ನು ಗೆಲ್ಲಲಿದೆ. ಇದಕ್ಕೆ ಪ್ರತಿಯಾಗಿ, ಇಂಡಿಯಾ ಒಕ್ಕೂಟವು 182 ಸ್ಥಾನಗಳಿಗೆ ಕುಸಿಯಲಿದೆ ಎಂದು ಸಮೀಕ್ಷೆ ತಿಳಿಸಿದೆ.
ಇಂದು ಲೋಕಸಭಾ ಚುನಾವಣೆಯೇನಾದರೂ ನಡೆದರೆ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟ ಒಟ್ಟು 543 ಲೋಕಸಭಾ ಕ್ಷೇತ್ರಗಳ ಪೈಕಿ 352ರಲ್ಲಿ ಭರ್ಜರಿ ಗೆಲುವು ಸಾಧಿಸಲಿದೆ.
ಇಂಡಿಯಾ ಒಕ್ಕೂಟ 182 ಸ್ಥಾನಗಳಿಗೆ ತೃಪ್ತಿಪಡಲಿದೆ ಎಂದು ಇಂಡಿಯಾ ಟುಡೇ-ಸಿ ವೋಟರ್ ಮೂಡ್ ಆಫ್ ದಿ ನೇಷನ್ ಸಮೀಕ್ಷೆ ತಿಳಿಸಿದೆ.
ದೇಶಾದ್ಯಂತ ಎನ್‌ಡಿಎ ಪರ ಜನರ ಒಲವು ವ್ಯಕ್ತವಾಗಿದ್ದು, ಇಂಡಿಯಾ ಒಕ್ಕೂಟದ 52 ಸ್ಥಾನ ಕುಸಿತವಾಗುವ ಸಾಧ್ಯತೆ ಇದೆ ಎಂದು ಮೂಡ್ ಆಫ್ ದಿ ನೇಷನ್ ಸಮೀಕ್ಷೆ ಮಾಹಿತಿ ನೀಡಿದೆ.
2024ರ ಚುನಾವಣೆಯಲ್ಲಿ ಪ್ರಧಾನಿ ಮೋದಿಯವರು ‘ಅಬ್ಕಿ ಬಾರ್ 400 ಪಾರ್’ ಘೋಷಣೆ ಮೂಲಕ ಪ್ರಚಾರ ನಡೆಸಿದ್ದರು. ಆದರೆ ಎನ್‌ಡಿಎ 293 ಸ್ಥಾನಗಳಲ್ಲಿ ಜಯ ಗಳಿತ್ತು.
2026ರಲ್ಲೂ ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜಯಭೇರಿ ಬಾರಿಸಿದೆ. ದೇಶಾದ್ಯಂತ ಎನ್‌ಡಿಎ ಪರ ಜನರ ಒಲವಿದ್ದು, ಇಂದು ಚುನಾವಣೆಯೇನಾರೂ ನಡೆದರೆ 352 ಸ್ಥಾನಗಳಲ್ಲಿ ಜಯ ಸಾಧಿಸಲಿದೆ.
ಆದರೆ 2024ರಲ್ಲಿ 234 ಸ್ಥಾನ ಗಳಿಸಿದ್ದ ಇಂಡಿಯಾ ಒಕ್ಕೂಟ ಕೇವಲ 182 ಸ್ಥಾನಗಳಿಗೆ ತೃಪ್ತಿ ಪಡಲಿದೆ ಎಂದು ಸಮೀಕ್ಷೆ ತಿಳಿಸಿದೆ. ಈ ವರ್ಷ ಪಶ್ಚಿಮ ಬಂಗಾಳ, ತಮಿಳುನಾಡು ಸೇರಿ ಪಂಚ ರಾಜ್ಯಗಳಲ್ಲಿ ಚುನಾವಣೆ ನಡೆಯಲಿದ್ದು, ಈ ಸಮೀಕ್ಷೆ ಗಮನ ಸೆಳೆದಿದೆ.
2024ರ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ 293 ಸ್ಥಾನ ಸಂಪಾದಿಸಿದ್ದರೆ, ಇಂಡಿಯಾ ಒಕ್ಕೂಟ 234 ಸ್ಥಾನ ಗೆದ್ದಿದೆ. ಮೂಡ್ ಆಫ್ ದಿ ನೇಷನ್ ಪ್ರಕಾರ ಈಗ ಚುನಾವಣೆ ನಡೆದರೆ ಎನ್‌ಡಿಎ 352 ಸ್ಥಾನ ಗೆಲ್ಲಲಿದ್ದರೆ, ಇಂಡಿಯಾ ಒಕ್ಕೂಟದ ಸ್ಥಾನ 182ಕ್ಕೆ ಕುಸಿಯಲಿದೆ.



