ಟೆಲ್ ಅವೀವ್: ಮಧ್ಯ ಇಸ್ರೇಲ್ನ ಬೈತ್ ಶೆಮೇಶ್ ನಗರದ ಮೇಲೆ ಇರಾನ್ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಕನಿಷ್ಠ 9 ಮಂದಿ ಮೃತಪಟ್ಟಿದ್ದು, 27 ಜನರು ಗಾಯಗೊಂಡಿದ್ದಾರೆ. ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು aljazeera.com ವರದಿ ಮಾಡಿದೆ.
ಮ್ಯಾಗೆನ್ ಡೇವಿಡ್ ಆಡಮ್ ಆಂಬ್ಯುಲೆನ್ಸ್ ಸೇವೆಯ ಪ್ರಕಾರ, ಜೆರುಸಲೇಂನ ಪಶ್ಚಿಮಕ್ಕೆ 30 ಕಿಮೀ ದೂರದಲ್ಲಿರುವ ಮಧ್ಯ ಇಸ್ರೇಲ್ನ ಬೈತ್ ಶೆಮೇಶ್ ನಗರದಲ್ಲಿ ಇರಾನಿನ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಯಲ್ಲಿ ಕನಿಷ್ಠ 9 ಮಂದಿ ಮೃತಪಟ್ಟಿದ್ದಾರೆ.
ಇಸ್ರೇಲ್ ಸೇನೆಯು ಟೆಲಿಗ್ರಾಮ್ನಲ್ಲಿ ನೀಡಿದ ಹೇಳಿಕೆಯಲ್ಲಿ, ರಕ್ಷಣಾ ಪಡೆಗಳು ಮತ್ತು ವೈದ್ಯಕೀಯ ತಂಡಗಳು ಗಾಯಾಳುಗಳ ರಕ್ಷಣಾ ಕಾರ್ಯವನ್ನು ನಡೆಸುತ್ತಿದೆ ಎಂದು ತಿಳಿಸಿದೆ.


