ಅಮೆರಿಕ ಹಾಗೂ ಇಸ್ರೇಲ್ ಸೇರಿ ಇರಾನ್ ಮೇಲೆ ಶನಿವಾರ ದಾಳಿ ನಡೆಸಿವೆ, ಇರಾನ್‌ನ ಅಣು ಯೋಜನೆ ಸಂಬಂಧ ಮಾತುಕತೆ ಮುರಿದುಬಿದ್ದ ಕಾರಣ ಈ ದಾಳಿ ನಡೆದಿದೆ.
ಇರಾನ್ ರಾಜಧಾನಿ ಟೆಹರಾನ್ ಸೇರಿ ದೇಶದ ವಿವಿಧಡೆ ದಾಳಿ ನಡೆಸಲಾಗಿದೆ. ಇರಾನ್‌ನ ಪರಮೋಚ್ಚ ನಾಯಕ ಆಯತ್‌ಉಲ್ಲಾ ಖಮೇನಿ ಅವರ ನಿವಾಸ, ಕಚೇರಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆದಿವೆ.
ಟೆಹ್ರಾನ್‌ನ ಉತ್ತರದ ಶೇಮಿರಾನ್‌ನಲ್ಲಿರುವ ಅಧ್ಯಕ್ಷರ ಅರಮನೆಯ ಸಮೀಪದ ಪ್ರದೇಶ, ಖಮೇನಿ ಅವರ ಕಚೇರಿಗಳ ಸಂಕೀರ್ಣದ ಮೇಲೆ ಏಳು ಕ್ಷಿಪಣಿಗಳು ದಾಳಿ ಮಾಡಿವೆ ಎಂದು ಇರಾನ್‌ನ ಅರೆ ಸರ್ಕಾರಿ ಸುದ್ದಿ ಸಂಸ್ಥೆ ‘ತಸ್ನಿಮ್’ ವರದಿ ಮಾಡಿದೆ. ರಾಜಧಾನಿಯಲ್ಲಿರುವ ಖಮೇನಿ ಅವರ ಕಚೇರಿಗಳ ಸಮೀಪವೂ ದಾಳಿಗಳು ನಡೆದಿವೆ.
ಖಮೇನಿ ಎಲ್ಲಿದ್ದಾರೆ ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಿಲ್ಲ. ಅವರನ್ನು ಟೆಹ್ರಾನ್‌ನಿಂದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಮೂಲವೊಂದನ್ನು ಉಲ್ಲೇಖಿಸಿ ರಾಯಿಟರ್ಸ್ ಸುದ್ದಿ ಸಂಸ್ಥೆ ತಿಳಿಸಿದೆ.


