Flash News

ಸ್ವಾತಂತ್ರ, ಸಮಾನತೆ ಮತ್ತು ಭಾತೃತ್ವದ ಮೇಲೆ ನಿಂತ ಸಂವಿಧಾನದ ನೆರಳಿನಲ್ಲಿ ಮುನ್ನಡೆಯೋಣ: ಫಾರೂಕ್ ಫರಂಗಿಪೇಟೆ ಕರೆ

ಮಂಗಳೂರು: ಸ್ವಾತಂತ್ರ, ಸಮಾನತೆ ಮತ್ತು ಭಾತೃತ್ವ ಈ ಮೂರು ಕಂಬಗಳ ಮೇಲೆ ನಿಂತ ನಮ್ಮ ಸಂವಿಧಾನದ ನೆರಳಿನಲ್ಲಿ ಮುನ್ನಡೆಯೋಣ ಎಂದು ಟುಡೇ ಫೌಂಡೇಶನ್ ನ ಅಧ್ಯಕ್ಷ, ಮಾಜಿ ಜಿಪಂ ಸದಸ್ಯ ಉಮರ್ ಫಾರೂಕ್ ಕರೆ ನೀಡಿದ್ದಾರೆ.

ದ.ಕ ಜಿ.ಪಂ.ಮಾ.ಹಿ.ಪ್ರಾ. ಶಾಲೆ ಪುದು ಇಲ್ಲಿ 77ನೇ ಗಣರಾಜ್ಯೋತ್ಸವದ‌ಲ್ಲಿ ಸಂಭ್ರಮ ನಡೆಯಿತು. ಶಾಲಾ ಎಸ್ ಡಿಎಂಸಿ ಅಧ್ಯಕ್ಷ ರಮ್ಲಾನ್ ಕುಂಪನಮಜಲು ಧ್ವಜಾರೋಹಣ ನೆರವೇರಿಸಿದರು.

ಬಳಿಕ ಮಾತನಾಡಿದ ಉಮರ್ ಫಾರೂಕ್, ಹಕ್ಕು ಕೇಳುವ ಧೈರ್ಯದ ಜೊತೆಗೆ ಕರ್ತವ್ಯ ನಿಭಾಯಿಸುವ ಶಿಸ್ತಿದ್ದಾಗ ಮಾತ್ರನಿಜಾರ್ಥದಲ್ಲಿ ಗಣರಾಜ್ಯದ ಪ್ರಜೆಯಾಗುತ್ತೇವೆ ಎಂದರು. ತಾರತಮ್ಯವನ್ನು ಆಧರಿಸಿದ್ದ ವಸಾಹತುಶಾಹಿಯನ್ನು ಹಾಗೂ ಪುರಾತನ ಕಾನೂನುಗಳನ್ನು ಕಿತ್ತೆಸೆದು ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯದ ವಿಚಾರದಲ್ಲಿ ಎಲ್ಲರೂ ಸಮಾನರು ಎನ್ನುವ ನವ ಭಾರತದ ಪರಿಕಲ್ಪನೆಯ ಸಂವಿಧಾನವನ್ನು ಜಾರಿಗೊಳಿಸಿದ ದಿನ. ಗಣತಂತ್ರ ವ್ಯವಸ್ಥೆಯನ್ನು ರೂಪುಗೊಳಿಸಿಕೊಳ್ಳುವುದಕ್ಕಾಗಿ ಅಸಂಖ್ಯಾತ ಜನರು ತ್ಯಾಗ-ಬಲಿದಾನಗಳನ್ನು ಮಾಡಿದ್ದಾರೆ ಎಂದರು.

ಅಂಧಕಾರವನ್ನು ಓಡಿಸಿ ಬೆಳಕು ಹರಿದಂತೆ. ಅನ್ಯಾಯವನ್ನು ಸೋಲಿಸಿ ನ್ಯಾಯ ಬೆಳಗಿದಂತೆ ಗಣರಾಜ್ಯ ದಿನಸ ಹಣತೆ ನಮ್ಮೇಲ್ಲರ ಮನವನ್ನು ಬೆಳಗಲಿ ಎಂದು ಶುಭಹಾರೈಸಿದರು.

ಧ್ವಜರೋಹಣದ ಬಳಿಕ ಮಕ್ಕಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಪಥಸಂಚಲನ ನೇತೃತ್ವವನ್ನು ಶಿಕ್ಷಕಿಯರಾದ ಬೆನದಿತ್ತಲ ಸಾದೊ, ಶಾಲೆಟ್ ಕ್ರಾಸ್ತಾ ವಹಿಸಿದ್ದರು. ಈ ವೇಳೆ ಎಸ್ ಡಿಎಂಸಿಯ ಎಲ್ಲಾ ಸದಸ್ಯರು, ಟುಡೇ ಫೌಂಡೇಶನ್ ನ ಸದಸ್ಯರಾದ ಮಜೀದ್, ಪಂಚಾಯತ್ ಸದಸ್ಯರಾದ ಎಫ್ ಎಚ್ ಮೊಹಮ್ಮದ್ ಹಾಗೂ ಪೋಷಕರು ಹಾಜರಿದ್ದರು.

ಈ ವೇಳೆ ಪ್ರಭಾರ ಶಾಲಾ ಮುಖ್ಯ ಶಿಕ್ಷಕಿ ಸಿಲ್ವಿಯಾ ಸಿಕ್ವೇರಾ ಸ್ವಾಗತಿಸಿದರು. ಮಮತಾ, ಅರ್ಪಿತಾ, ಜ್ಯೋತಿ, ಉದ್ಯಮಿ ತ್ವಾಹೀರ್ ಉಪಸ್ಥಿತರಿದ್ದರು.