Flash News

ಮಂಗಳೂರು | ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ಇನಾಯತ್ ಅಲಿ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆ

ಗುರುಪುರ: ಗುರುಪುರ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾದ ಪದ್ಮನಾಭ ಕೋಟ್ಯಾನ್ ಅವರ ಪದಗ್ರಹಣ ಸಮಾರಂಭ ಹಾಗೂ ನೂತನ ಬ್ಲಾಕ್ ಕಾಂಗ್ರೆಸ್ ಕಚೇರಿಯ ಉದ್ಘಾಟನಾ ಸಮಾರಂಭವು ಕೆಪಿಸಿಸಿ ಪ್ರಧಾನ‌ಕಾರ್ಯದರ್ಶಿ ಇನಾಯತ್ ಅಲಿ ಅವರ ನೇತೃತ್ವದಲ್ಲಿ ಶುಕ್ರವಾರ ಗುರುಪುರ ಕೈಕಂಬದ ಪೊಳಲಿ ಕ್ರಾಸ್ ನ ಜಯಲಕ್ಷ್ಮೀ ಸಂಕೀರ್ಣದ ಬಳಿ ನಡೆಯಿತು.

ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್,‌ ಜನರನ್ನು ದಾರಿ ತಪದಪಿಸುತ್ತಾ ಎದುರಾಳಿ ಬಿಲಿಷ್ಠವಾಗುತ್ತಿದ್ದಾರೆ. ಮುಂದಿನ‌ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ರಾಜ್ಯ ದೇಶದಲ್ಲಿ ಅಧಿಕಾರ ಹಿಡಿಯುತ್ತೇವೆ. ಕೋಮುವಾದವನ್ನು ಹರಡಿ ಅಧಿಕಾರ ಹಿಡಿಯುತ್ತಿದೆ. ಮಾಧ್ಯಮಗಳು ಸಂಪೂರ್ಣ ಕೋಮುವಾದ ಹರಡುವವರ‌ ಕೈಯ್ಯಲ್ಲಿದೆ‌. ಜಿಎಸ್ ಟಿ ಸೂಕ್ತ ರೀತಿಯಲ್ಲಿ ಜಾರಿಗೆ ತಂದಿಲ್ಲ.

ಜನಪರವಾಗಿ ಇರುವ ಸರಕಾರ ಸಿದ್ದರಾಮಯ್ಯ ಅವರ‌ನೇತೃತ್ವದ ಸರಕಾರ ಮಾತ್ರ. ಪಂಚ ಗ್ಯಾರಂಟಿಗಳನ್ನು ಘೋಶಿಸಿ ಜನರಿಗೆ ನೀಡುತ್ತಿದೆ‌. ಇಷ್ಟು ದೊಡ್ಡ ಯೋಜನೆಗೆ ಕೇಂದ್ರ ಸರಕಾರ ಒಂದು ಪೈಸೆವನ್ನೂ ನೀಡಿಲ್ಲ. 12 ಸಾವಿರಕ್ಕೂ ಹೆಚ್ಚಿನ ಹಕ್ಕು ಪತ್ರ ನೀಡಿದ್ದೇವೆ. 9/11ಸಂಬಂಧ ಸಮಸ್ಯೆಗಳಾಗಿವೆ‌ ಈ ಹಿನ್ನೆಲೆಯಲ್ಲಿ ಸಂಬಂಧ ಪಟ್ಟ ಇಲಾಖೆಯ ಸಚಿವರೊಂದಿಗೆ ಮಾತುಕತೆ ನಡೆಯುತ್ತಿದ್ದು, ಶೀಘ್ರ ಪರಿಹರಿಸಲಾಗುವುದು. ಬಿಜೆಪಿ ಹಿಂದುತ್ವ ಅಜೆಂಡಾ ಬಿಟ್ಟು ಧರ್ಮವನ್ನು ಬಳಸಿಕೊಂಡು ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಗುಂಡೂರಾವ್‌ ನುಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಇನಾಯತ್ ಅಲಿ, ಗುರುಪುರ ಕಾಂಗ್ರೆಸ್ ನ ಗಟ್ಟಿನೆಲ. ರಮಾನಾಥರೈ 4 ಬಾರಿ ಗೆಲ್ಲಿಸಿದ ಪ್ರದೇಶ. ಗುರುಪುರ, ಕೈಕಂಬದಲ್ಲಿ ಕಾಂಗ್ರೆಸ್ ನ ಹಿಂದಿನ ಗಥವೈಭವ ಮೆರೆಯಲಿದೆ. ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಮಾಡುವ ವರೆಗೆ ನಾವು ಕಾರ್ಯಕರ್ತರು ವಿರಮಿಸುವುದಿಲ್ಲ. ಜಿಲ್ಲೆ ಆರೋಗ್ಯ ಕ್ರಾಂತಿ ಯಾಗುತ್ತಿದೆ. ಅಶಾಂತಿಯಲ್ಲಿದ್ದ ಜಿಲ್ಲೆಯಲ್ಲಿ ಶಾಂತಿ ಮರುಸ್ಥಾಪಿಸಿದ ಕೀರ್ತಿ ಕಾಂಗ್ರೆಸ್ ಸರಕಾರಕ್ಕೆ ಸಲ್ಲುತ್ತದೆ‌ ಎಂದ ಅವರು, ಜಿಲ್ಲಾ ಉಸ್ತುವಾರಿ ಸಚಿವರಿಗೆ ಕೃತಜ್ಞತೆ ಸಲ್ಲಿಸಿದರು.

ಬಳಿಕ ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ಇನಾಯತ್ ಅಲಿ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.

ಸೇರ್ಪಡೆಯಾದವರ ವಿವರ

ಶ್ರೀ.ಚಂದ್ರಹಾಸ ಅಮೀನ್
ಸಾಮಾಜಿಕ ಮುಖಂಡರು

ಶ್ರೀ.ಮಹಾಬಲ ಅಮೀನ್
ಅಧ್ಯಕ್ಷರು, ಬಿಲ್ಲವ ಸಂಘ ಗುರುಪುರ

ಶ್ರೀ.ಅಮರನಾಥ ಭಂಡಾರಿ, ಗುರುಪುರ
ನಿವೃತ್ತ DYSP, ಅಬಕಾರಿ ಇಲಾಖೆ

ಶ್ರೀ.ಲುಕ್ಮಾನ್ ಅಡ್ಯಾರ್
ಯುವ ಬರಹಗಾರರು, ಪತ್ರಕರ್ತರು

ಶ್ರೀ.ಜಿತಿನ್ ಶೆಟ್ಟಿ ಪರಾರಿ
ಬಿಜೆಪಿ ಯುವ ಸದಸ್ಯರು

ತನ್ವೀರ್ ಗುರುಪುರ
ಜೆಡಿಎಸ್ ಮುಖಂಡರು, ಗುರುಪುರ

ಶ್ರೀ.ಹಫೀಝುಲ್ಲಾ ಪಾಟೀಲ್
ಜೆಡಿಎಸ್ ಮುಖಂಡರು

ಕುಪ್ಪೆಪದವು ಗ್ರಾಮ ಪಂಚಾಯತ್

1.ಶ್ರೀ.ಡಿ.ಪಿ.ಹಮ್ಮಬ್ಬ
ಅಧ್ಯಕ್ಷರು ಜಾತ್ಯಾತೀತ ಜನತಾದಳ, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ, ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರು, ಕುಪ್ಪೆಪದವು ಗ್ರಾಮ ಪಂಚಾಯತ್

2.ಶ್ರೀ ಆದಂ.ಕೆ
ಜೆಡಿಎಸ್ ಮುಖಂಡರು, ಮಾಜಿ ಗ್ರಾಮ ಪಂಚಾಯತ್ ಸದಸ್ಯರು

3.ಸುಲೈಮಾನ್ ದರ್ಕಾಸ್
ಜೆಡಿಎಸ್ ಮುಖಂಡರು

4.ಗಂಗಾಧರ ಗೌಡ
ಜೆಡಿಎಸ್ ಸದಸ್ಯರು

5.ಜಬ್ಬಾರ್ ದರ್ಕಾಸ್
ಜೆಡಿಎಸ್ ಸದಸ್ಯರು

6.ಅಬ್ದುಲ್ ಸಲಾಮ್
ಜೆಡಿಎಸ್ ಸದಸ್ಯರು

ಹಾಗೂ ಹಮ್ಮಬ್ಬ ಅವರ ಅಪಾರ ಬೆಂಬಲಿಗರು