ಮಂಗಳೂರಿನ ವಂಶಿ ಈ ಸಲದ ಮಹಾನಟಿ ವಿನ್ನರ್ ಆಗಿದ್ದಾರೆ. ಫಸ್ಟ್ ರನ್ನರ್ ಅಪ್ ಬೆಳಗಾವಿಯ ವರ್ಷಾ ಡಿಗ್ರಜೆ ಆಗಿದ್ದಾರೆ. ಮಹಾನಟಿ ಸೀಸನ್ ಎರಡರ ವಿನ್ನರ್ ಆದ ವಂಶಿ ಪ್ರತಿಭಾವಂತ ನಟಿನೇ ಆಗಿದ್ದಾರೆ. ನಟಿ ಆಗ್ಬೇಕು ಅಂತ ಬಂದು ಈ ಗೆಲುವಿನ ಮೂಲಕ ಮೊದಲ ಹೆಜ್ಜೆ ಇಟ್ಟಿದ್ದೇನೆ ಅಂತ ತಮ್ಮ ವಿನ್ನಿಂಗ್ ಸ್ಪೀಚ್ ಅಲ್ಲೂ ಹೇಳಿಕೊಂಡಿದ್ದಾರೆ. ಬಿ.ಸರೋಜಾ ದೇವಿ ಅವರನ್ನೂ ಈ ಸಮಯದಲ್ಲಿ ನೆನಪಿಸಿಕೊಂಡಿದ್ದಾರೆ. ಇವರ ಮಾತು ಮತ್ತು ವಿನ್ನರ್ ವಂಶಿ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
ಮಹಾನಟಿ ಸೀಸನ್-2 ರ ವಿನ್ನರ್ ಯಾರ್ ಆಗ್ತಾರೆ ಅನ್ನೋ ಕುತೂಹಲ ಇತ್ತು. ಪ್ರತಿ ಶನಿವಾರ ಮತ್ತು ಭಾನುವಾರ ಮಹಾನಟಿ ಸ್ಪರ್ಧಿಗಳು ತಮ್ಮ ಪ್ರತಿಭೆಯನ್ನ ತೋರಿ ಒಂದೊಂದೇ ಹೆಜ್ಜೆ ಮುಂದೆ ಹೋಗ್ತಾನೇ ಇದ್ದರು. ಆ ರೀತಿ ವಂಶಿ ಕೂಡ ಫೈನಲ್‌ಗೆ ಬಂದಿದ್ದರು. ಹಾಗೆ ಬೆಳಗಾವಿಯ ವರ್ಷಾ ಡಿಗ್ರಜೆ ಕೂಡ ಫೈನಲ್‌ಗೆ ಬಂದಿದ್ದರು.
ಆದರೆ, ವಿನ್ನರ್ ಅಂತ ಬಂದ್ರೆ ಇಲ್ಲಿ ಮಂಗಳೂರಿನ ವಂಶಿ ಮಹಾನಟಿ ಸೀಸನ್-2 ರ ವಿನ್ನರ್ ಆಗಿದ್ದಾರೆ. ವಿನ್ನಿಂಗ್ ಸ್ಪೀಚ್ ಅಲ್ಲಿ ಬಿ.ಸರೋಜಾ ದೇವಿ ಅವರನ್ನ ನೆನಪಿಸಿಕೊಂಡಿದ್ದಾರೆ. ಸರೋಜಾ ದೇವಿ ಅವರ ಚಿತ್ರಗಳನ್ನ ನೋಡಿಕೊಂಡು ಬೆಳೆದಿದ್ದೇನೆ. ಆದರೆ, ಅವರನ್ನ ನೋಡಿಲ್ಲ. ಈ ಒಂದು ಟ್ರೋಫಿ ಮೂಲಕವೇ ನನಗೆ ಅವರ ಆಶೀರ್ವಾದ ಸಿಕ್ಕಿದೆ ಅಂತಲೂ ವಂಶಿ ಹೇಳಿಕೊಂಡಿದ್ದಾರೆ.
ಡ್ರಾಮಾ ಜೂನಿಯರ್ಸ್ ಸೀಸನ್-2 ರಲ್ಲೂ ವಂಶಿ ಇದ್ದರು. ಇಲ್ಲೂ ತಮ್ಮ ಅದ್ಭುತ ಪ್ರತಿಭೆಯನ್ನ ತೋರಿದ್ದರು. ಇದಕ್ಕೂ ಹೆಚ್ಚಾಗಿ ಇವರು ಇಲ್ಲೂ ಗೆಲುವು ಕಂಡಿದ್ದರು. ಹಾಗೆ ಇದೀಗ ಮಹಾನಟಿ ಸೀಸನ್-2 ರ ವಿನ್ನರ್ ಆಗಿದ್ದಾರೆ. ಬೆಳಗಾವಿಯ ವರ್ಷಾ ಡಿಗ್ರಜೆ ಫಸ್ಟ್ ರನ್ನರಪ್ ಆಗಿದ್ದಾರೆ. ಈ ಮೂಲಕ ಮಹಾನಟಿ ಸೀಸನ್-2ಕ್ಕೆ ತೆರೆ ಬಿದ್ದಿದೆ ಅಂತಲೇ ಹೇಳಬಹದು.
ಮಹಾನಟಿ ವಿನ್ನರ್ ವಂಶಿ ಅವರಿಗೆ ಸಿನಿಮಾ ಚಾನ್ಸ್ ಸಿಕ್ಕಿದೆ. ಮಹಾನಟಿ ವಿನ್ನರ್ ಆಗೋ ಮೊದಲೇ ನಾಯಕಿ ಆಗುವ ಚಾನ್ಸ್ ಸಿಕ್ಕಿದೆ. ಲವ್ ಕೇಸ್ ಹೆಸರಿನ ಚಿತ್ರಕ್ಕೇನೆ ವಂಶಿ ನಾಯಕಿ ಆಗಿದ್ದಾರೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಚಿತ್ರ ದಡ್ಡ ಪ್ರವೀಣ್ ಖ್ಯಾತಿಯ ರಂಜನ್ ಇಲ್ಲಿ ಜೋಡಿ ಆಗಿದ್ದಾರೆ. ಮೊನ್ನೆ ಈ ಚಿತ್ರದ ಮುಹೂರ್ತ ಬಂಡಿ ಮಹಾಕಾಳಮ್ಮ ದೇವಸ್ಥಾನದಲ್ಲಿ ಆಗಿದೆ. ಈ ಚಿತ್ರವನ್ನ ಜೈಶ್ ಡೈರೆಕ್ಷನ್ ಮಾಡುತ್ತಿದ್ದಾರೆ. ವಿ.ಹರಿಕೃಷ್ಣ ಪುತ್ರ ಆದಿ ಈ ಚಿತ್ರಕ್ಕೆ ಸಂಗೀತ ಕೊಡುತ್ತಿದ್ದಾರೆ. ಶ್ರೀನಗರ ಕಿಟ್ಟಿ, ಸುಧಾರಾಣಿ ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. 6 ತಿಂಗಳಲ್ಲಿಯೇ ಈ ಚಿತ್ರವನ್ನ ತೆರೆಗೆ ತರೋ ಪ್ಲಾನ್ ಅನ್ನು ಸಿನಿಮಾ ತಂಡ ಹಾಕಿಕೊಂಡಿದೆ.



