Flash News

ಮಂಗಳೂರು | ತಲವಾರು ದಾಳಿ ಪ್ರಕರಣ: ಇಬ್ಬರ ಬಂಧನ

ಬಜ್ಪೆ: ಎಡಪದವು ಎಂಬಲ್ಲಿ ಬೈಕಿನಲ್ಲಿ ತೆರಳುತ್ತಿದ್ದ ಅಖಿಲೇಶ್ ಎಂಬವರ‌ ಕೈಗೆ ಚೂರಿಯಿಂದ ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಬಂದರ್‌ ನಿವಾಸಿ ಸಿನಾನ್, ವೇಣೂರು ನಿವಾಸಿ ಇರ್ಷಾದ್ ಎಂಬವರನ್ನು ಬಗ್ಗೆ ಪೊಲೀಸರು ಬಂಧಿಸಿದ್ದಾರೆ.

ಅವರ ಸ್ನೇಹಿತರಾದ ಸಾದೀಕ್ ಮತ್ತು ಅಕ್ರಮ್ ಎಂಬವರ ಬಂಧನಕ್ಕಾಗಿ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ ಎಂದು ತಿಳಿದು ಬಂದಿದೆ. ಆರೋಪಿಗಳೆಲ್ಲರೂ ಅಮಲು ಪದಾರ್ಥ ಸೇವಿಸಿ ಈ ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗಿದೆ.

ಒಂದೇ ಬೈಕ್ ನಲ್ಲಿ ನಾಲ್ವರು ಮಾರಕಾಸ್ತ್ರಗಳನ್ನು ಹಿಡಿದುಕೊಂಡು ತೆರಳುತ್ತಿರುವುದನ್ನು ಕಂಡು ಅದನ್ನು ವಿಡಿಯೋ ಮಾಡಲು ಬೆಂಬತ್ತಿದ ಅಖಿಲೇಶ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ.