Flash News

ಮಂಗಳೂರು | ಯುವಕನಿಗೆ ಚೂರಿ ಇರಿತ ಪ್ರಕರಣ: ಓರ್ವ ವಶಕ್ಕೆ

ಬಜ್ಪೆ: ಎಡಪದವು ಎಂಬಲ್ಲಿ ಬೈಕಿನಲ್ಲಿ ತೆರಳುತ್ತಿದ್ದ ಅಖಿಲೇಶ್ ಎಂಬವರ‌ ಕೈಗೆ ಚೂರಿಯಿಂದ ಇರಿಯಲಾಗಿದೆ.

ಪೊಲೀಸರು ಆರೋಪಿಯೊಬ್ಬನನ್ನು ವಶಕ್ಕೆ ಪಡೆದುಕೊಂಡಿದ್ದು ಉಳಿದ ಮೂವರ ಬಂಧನಕ್ಕೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.

ಒಂದು ಬೈಕಿನಲ್ಲಿ ನಾಲ್ವರು ಮಾರಕಾಸ್ತ್ರಗಳೊಂದಿಗೆ ತೆರಳುತ್ತಿರುವುದನ್ನು ಕಂಡು ಫಾಲೋ ಮಾಡಿದ ಅಖಿಲೇಶ್ ಮೇಲೆ ದಾಳಿ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಒಂದೇ ಬೈಕ್ ನಲ್ಲಿ ನಾಲ್ವರು ಮಾರಕಾಸ್ತ್ರಗಳನ್ನು ಹಿಡಿದುಕೊಂಡು ತೆರಳುತ್ತಿರುವುದನ್ನು ಕಂಡು ಅದನ್ನು ವಿಡಿಯೋ ಮಾಡಲು ಬೆಂಬತ್ತಿದ ಅಖಿಲೇಶ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ.
ಅಷ್ಟರಲ್ಲಿ ಸ್ಥಳೀಯರು ಸೇರಿ ಆರೋಪಿಯೊಬ್ಬನನ್ನ ಹಿಡಿದಿದ್ದಾರೆ ಉಳಿದ ಮೂವರು ಪರಾರಿಯಾಗಿದ್ದಾರೆ.
ಹೆಚ್ಚಿನ ಮಾಹಿತಿಗಳು ಬರಬೇಕಿದೆ.