Flash News

ಹಿಂದೂಗೆ ಊಟ ಹಾಕಲ್ಲ ಎಂದು ಸುಳ್ಳು ಸುದ್ದಿ ಹರಿಯ ಬಿಟ್ಟ ಮಾಧ್ಯಮಗಳು: ಸ್ಪಷ್ಟನೆ ನೀಡಿದ ರಾಜು

ನೆಲಮಂಗಲ: ವಿಶ್ವೇಶ್ವರಪುರದ ಮದುವೆಯಲ್ಲಿ ಊಟಕ್ಕೆ ಕುಳಿತ ವ್ಯಕ್ತಿಗೆ ಊಟ ಹಾಕುವುದಿಲ್ಲ, ನೀವು ತಿಲಕ ಇಟ್ಟಿದ್ದೀರಿ ಎಂದು ಹಿಂದೂವಿಗೆ ಅವಮಾನ ಮಾಡಲಾಗಿದೆ ಎಂದು ಸುಳ್ಳು ಸುದ್ದಿಯನ್ನು ಮಾಧ್ಯಮಗಳು ಹರಿಯಬಿಟ್ಟಿರುವ ಘಟನೆ ವರದಿಯಾಗಿದೆ. ಅದರೆ ಈ ಸುದ್ದಿ ಸಂಪೂರ್ಣ ಸುಳ್ಳು ಎಂದು ರಾಜು ವೀಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ನಾನು ಊಟ ಮಾಡುವಾಗ ಮುಸ್ಲಿಮರು ಎಬ್ಬಿಸಿದ್ದು ಕಾರಣ ಅದು ಅಲ್ಲ. ಪಂತಿಯಲ್ಲಿ ಒಬ್ಬನೇ ಯಾಕೆ ಕುಂತಿದ್ದೀಯಾ ನಮ್ಮೆಲ್ಲರ ಜೊತೆ ಊಟಕ್ಕೆ ಕೂಡುಬಾ ಎಂದು ಕರ್ಕೊಂಡು ಹೋಗಿದ್ದು. ಅಷ್ಟೇ ವಿನ: ಬೇರೇನೂ ಇಲ್ಲ. ನಾನು ಅವರ ಜೊತೆ ಸಂತೋಷವಾಗಿ ಊಟ ಮಾಡಿ ಬಂದೆ ಎಂದು ಸ್ಪಷ್ಟಪಡಿಸಿದ್ದಾರೆ. ಕೆಲವರು ಆ ವಿಡಿಯೋವನ್ನು ಈ ರೀತಿ ಮಾಡಿರೋದು ನನಗೆ ಗೊತ್ತೇ ಇಲ್ಲ ಎಂದು ಕೆಲವು ಮಾಧ್ಯಮಗಳ ಮುಖಾಂತರ ತಿಳಿಸಿದ್ದಾರೆ.