Flash News

‘ನಮ್ಮ ಬಾಡಿ ನಮ್ಮ ಇಷ್ಟ, ನಾನು ಕೇರೇ ಮಾಡಲ್ಲ’, ರಚಿತಾ ರಾಮ್

ರಚಿತಾ ರಾಮ್ ಒಂದು ಮಾತು ಹೇಳಿದ್ದಾರೆ. ಅದು ಎಲ್ಲ ಹೆಣ್ಣುಮಕ್ಕಳಿಗೂ ಸ್ಪೂರ್ತಿ ನೀಡುತ್ತದೆ. ಅಷ್ಟೆ ಮೋಟಿವೇಟ್ (Motivate) ಮಾಡೋ ರೀತಿನೇ ಇದೆ. ಕಲ್ಟ್ ಚಿತ್ರದ ಟ್ರೈಲರ್ ರಿಲೀಸ್ ಇವೆಂಟ್‌ ಅಲ್ಲಿ ಕೇಳಿದ ಪ್ರಶ್ನೆಗಳಿಗೆ ರಚಿತಾ ರಾಮ್ ನೇರಾನೇರವಾಗಿಯೆ ಮಾತನಾಡಿದ್ದಾರೆ. ನಮ್ಮ ದೇಹ ನಮ್ಮ ಇಷ್ಟ. ಹೇಗಾದರೂ ಇರ್ತಿವಿ, ನಿಮಗೆ ಯಾಕೆ ಅನ್ನೋದನ್ನೆ ರಚಿತಾ (Rachita) ಹೇಳಿದ್ದಾರೆ. ಇವರ ಈ ಮಾತುಗಳ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಗಮನ ಸೆಳೆಯುತ್ತಿವೆ. ಈ ಮಾತುಗಳ ಹಿನ್ನೆಲೆ ಏನು ಅನ್ನೋದು ಇಲ್ಲಿದೆ ಓದಿ.

ನಮ್ಮ ದೇಹ ನಮ್ಮ ಇಷ್ಟ…

ಹೆಣ್ಣುಮಕ್ಕಳ ದೇಹದ ಬಗ್ಗೆ ಸಾಕಷ್ಟು ಕಾಮೆಂಟ್‌ ಬರುತ್ತವೆ. ಆ ಕಾಮೆಂಟ್‌ಗಳ ಬಗ್ಗೆ ತಲೆ ಕೆಡಿಸಿಕೊಳ್ಳಲೇ ಬಾರದ. ಕಾರಣ, ಆ ಕಾಮೆಂಟ್‌ಗಳನ್ನ ಇಗ್ನೋರ್‌ ಮಾಡ್ಬೇಕು. ಹಾಗೆ ಮಾಡಿದರೆ ನಾವು ನೆಮ್ಮದಿ ಆಗಿಯೇ ಇರುತ್ತೇವೆ. ನೆಗೆಟಿವ್ ಕಾಮೆಂಟ್ ಬರ್ತಿವೆ ಅಂತ ನಾವು ಯಾಕೆ ತಲೆ ಕೆಡಿಸಿಕೊಳ್ಳಬೇಕು. ಇದನ್ನ ನಾನು ಕೇರೇ ಮಾಡೋದಿಲ್ಲ. ನಮ್ಮ ದೇಹ ನಮ್ಮ ಇಷ್ಟ ನಮಗೆ ಹೇಗೆ ಬೇಕೋ ಹಾಗೆ ಇರುತ್ತವೆ. ಅದರ ಬಗ್ಗೆ ಯಾರೋ ಕಾಮೆಂಟ್ ಹೊಡೆದ್ರು ಅಂತ ನಾವ್ ಯಾಕ್ ತಲೆಗೆ ಹಚ್ಚಿಕೊಳ್ಳಬೇಕು. ತಲೆನೆ ಕೆಡಿಸಿಕೊಳ್ಳಲೇಬಾರದು ಅಂತಲೇ ರಚಿತಾ ರಾಮ್ ಹೇಳಿಕೊಂಡಿದ್ದಾರೆ.

ಹೆಣ್ಣು ಮಕ್ಕಳ ದೇಹ ಒಂದೇ ತರ ಇರೋದಿಲ್ಲ. ಕೆಲವರು ಕಡಿಮೆ ಮಲಗಿದರೆ ದೇಹದ ತೂಕ ಹೆಚ್ಚಾಗುತ್ತದೆ. ಟೆನ್ಷನ್ ಮಾಡಿಕೊಂಡ್ರು ದೇಹದ ತೂಕ ಹೆಚ್ಚುತ್ತದೆ. ಹಾಗಂತ ನಮಗೆ ಇರೋ ಸಮಸ್ಯೆಗಳನ್ನ ಎಲ್ಲರಿಗೂ ಹೇಳೋಕೆ ಆಗುತ್ತಾ? ಕಾಮೆಂಟ್ ಹೊಡೆಯೋರ ಮಾತುಗಳನ್ನ ಕೇಳ್ತಾನೇ ಅಳ್ತಾ ಕುಳಿತುಕೊಳ್ಳುವುದುಕ್ಕೆ ಆಗುತ್ತಾ? ಇಲ್ಲ ಅಲ್ವೇ? ಹಾಗಾದರೆ ಯಾಕೆ ಕಾಮೆಂಟ್‌ಗಳಿಗೆ ತಲೆ ಕೆಡಿಸಿಕೊಳ್ಳಬೇಕು ಹೇಳಿ ಅಂತಲೂ ರಚಿತಾ ರಾಮ್ ಕೇಳಿದ್ದಾರೆ.

ಆತ್ಮಹತ್ಯೆ ಮಾಡಿಕೊಳ್ಳುವವರು ಮುಟ್ಟಾಳರು

ಯಾರೋ ಕಾಮೆಂಟ್ ಹೊಡೆದರು ಅಂತ ಆತ್ಮಹತ್ಯೆ ಮಾಡಿಕೊಳ್ಳುವುದು ಎಷ್ಟು ಸರಿ. ಅಪ್ಪ ಅಮ್ಮ ಸಾಕಷ್ಟು ಕಷ್ಟಪಟ್ಟು ಬೆಳೆಸಿರುತ್ತಾರೆ. ಆದರೆ, ಅದ್ಯಾರೋ ಕಾಮೆಂಟ್ ಹೊಡೆದರು ಅಂತ ಆತ್ಮಹತ್ಯೆ ಮಾಡಿಕೊಳ್ಳುವವರು ಮುಟ್ಟಾಳರು ಅಂತಲೇ ರಚಿತಾ ರಾಮ್ ಸಿಟ್ಟಿನಿಂದಲೇ ಹೇಳಿಕೊಂಡಿದ್ದಾರೆ.