Flash News

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್​ ಕುಮಾರ್​ ವಿರುದ್ಧ ಪ್ರಿಯಾಂಕಾ ಗಾಂಧಿ ಬಹಿರಂಗ ಆಕ್ರೋಶ

ರಿಗಾ: ಭಾರತೀಯ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್​ ಕುಮಾರ್ ಗೆ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಬಹಿರಂಗವಾಗಿ ಆಕ್ರೋಶ ಹೊರಹಾಕಿದ್ದಾರೆ. ರಿಗಾದಲ್ಲಿ ನಡೆದ ರ‍್ಯಾಲಿಯಲ್ಲಿ ಸಭ್ಯತೆಯನ್ನು ಮರೆತು ವರ್ತಿಸಿದ್ದಾರೆ. ‘‘ನೀವು ನೆಮ್ಮದಿಯಿಂದ ನಿವೃತ್ತರಾಗಲು ಸಾಧ್ಯವಿಲ್ಲ, ಜ್ಞಾನೇಶ್ ಕುಮಾರ್ ಅವರ ಹೆಸರನ್ನು ನೀವು ಎಂದಿಗೂ ಮರೆಯಬಾರದು ಎಂದು ನಾನು ಸಾವ್ಝನಿಕರಲ್ಲಿ ಮನವಿ ಮಾಡುತ್ತೇನೆ’’ ಎಂದ ಪ್ರಿಯಾಂಕಾ ಎಸ್​ಎಸ್ ಸಂಧು ಹಾಗೂ ವಿವೇಕ್ ಜೋಶಿ ಹೆಸರುಗಳನ್ನು ಕೂಡ ಹೇಳಿದ್ದಾರೆ.

‘‘ಹರಿಯಾಣದಲ್ಲಿ ಮತಗಳನ್ನು ಹೇಗೆ ಕದಿಯಲಾಗಿದೆ ಎಂಬುದನ್ನು ನೀವೆಲ್ಲರೂ ನೋಡಿದ್ದೀರಿ, ಜ್ಞಾನೇಶ್ ಕುಮಾರ್, ಎಸ್.ಎಸ್. ಸಂಧು ಮತ್ತು ವಿವೇಕ್ ಜೋಶಿ ಎಂಬ ಮೂರು ಹೆಸರುಗಳನ್ನು ನೆನಪಿಟ್ಟುಕೊಳ್ಳಲು ನಾನು ನಿಮ್ಮನ್ನು ಒತ್ತಾಯಿಸುತ್ತೇನೆ’’ ಎಂದರು.

ಸಾರ್ವಜನಿಕರೇ ನಮ್ಮ ತಾಯಿ ಎಂದು ಹೇಳಿದ ಪ್ರಿಯಾಂಕಾ, ತಾಯಿ ತುಂಬಾ ಉದಾರಳು,ಆದರೆ ಅವರಿಗೆ ದ್ರೋಹ ಬಗೆದರೆ ಅದು ಸರಿಯಲ್ಲ, ಸಾರ್ವಜನಿಕರು ಕ್ಷಮಿಸುವುದಿಲ್ಲ. ಜ್ಞಾನೇಶ್ ಕುಮಾರ್, ಎಸ್.ಎಸ್. ಸಂಧು ಮತ್ತು ವಿವೇಕ್ ಜೋಶಿ ಅವರ ಹೆಸರುಗಳನ್ನು ಸಾರ್ವಜನಿಕರು ಎಂದಿಗೂ ಮರೆಯುವುದಿಲ್ಲ. ನಿವೃತ್ತರಾಗಿ ಶಾಂತಿಯಿಂದ ಬದುಕುತ್ತಾರೆ ಎಂದು ಭಾವಿಸಿದರೆ, ಆ ಆಲೋಚನೆಯನ್ನು ಈಗಲೇ ಕೈಬಿಡುವುದು ಒಳಿತು ಎಂದು ಬೆದರಿಕೆ ಹಾಕಿದ್ದಾರೆ.