Flash News

ಕೊಲೆ ಆರೋಪಿ, ಗೂಂಡಾ ಪುನೀತ್ ಕೆರೆಹಳ್ಳಿಗೆ ಪ್ರಶಸ್ತಿ ಪ್ರದಾನ ಮಾಡಿದ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ; ವ್ಯಾಪಕ ಆಕ್ರೋಶ

ಬೆಂಗಳೂರು: ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕೊಲೆ ಆರೋಪಿ ಹಾಗೂ ಸ್ವಘೋಷಿತ ಗೋರಕ್ಷಕ ಪುನೀತ್ ಕೆರೆಹಳ್ಳಿಗೆ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಸನ್ಮಾನ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ.

ಕಾರ್ಯಕ್ರಮದಲ್ಲಿ ಪುನೀತ್ ಕೆರೆಹಳ್ಳಿ ಸೇರಿದಂತೆ ಹತ್ತು ಮಂದಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದ್ದು, ಅನೇಕ ಗಣ್ಯರು ಹಾಜರಿದ್ದರು. ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮತ್ತು ಮಾಜಿ ಲೋಕಾಯುಕ್ತ ಎನ್. ಸಂತೋಷ್ ಹೆಗ್ಡೆ, ಕೇರಳ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಸ್.ಆರ್. ಬನ್ನೂರಮಠ್ ಹಾಗೂ ರಾಜ್ಯದ ಮಾಜಿ ಪೊಲೀಸ್ ಮಹಾನಿರ್ದೇಶಕ ಅಜಯ್ ಕುಮಾರ್ ಸಿಂಗ್ ಸೇರಿದಂತೆ ಪ್ರಮುಖರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


ಇನ್ನು ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಅವರನ್ನು FirstNews.com ಸಂಪರ್ಕಿಸಿದಾಗ, ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿರುವುದನ್ನು ದೃಢಪಡಿಸಿದರು. ಆದರೆ 2023 ರಲ್ಲಿ ದನದ ವ್ಯಾಪಾರಿ ಇದ್ರೀಸ್ ಪಾಷಾ ಅವರನ್ನು ಕೊಲೆ ಮಾಡಿದ ಪ್ರಕರಣದ ಆರೋಪಿ ಪುನೀತ್ ಕೆರೆಹಳ್ಳಿ ಎಂಬುದು ತಮಗೆ ತಿಳಿದಿಲ್ಲ ಎಂದು ಹೇಳಿದರು.


“ಆತನ ಮೇಲೆ ಕೊಲೆ ಆರೋಪವಿದೆ ಎಂಬುದು ನಿಜವಾಗಿದ್ದರೆ ನನಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ತುಂಬಾ ವಿಷಾದವಿದೆ. ನಾನು ಹಾಗೆ ಮಾಡಬಾರದಿತ್ತು. ಏಕೆಂದರೆ ಅದು ಸರಿಯಾದ ಕೆಲಸವಲ್ಲ. ತನಿಖೆ ಎದುರಿಸುತ್ತಿರುವ ಯಾರನ್ನಾದರೂ ಸನ್ಮಾನಿಸುವಾಗ, ಜೈಲಿಗೆ ಹೋಗುವ ಜನರನ್ನು ಮರಳಿ ಸ್ವಾಗತಿಸಿದಂತಾಗುತ್ತದೆ. ಅದು ತಪ್ಪು ಎಂದು ನಾನು ಹೇಳಿಕೆಗಳನ್ನು ನೀಡಿದ್ದೇನೆ ನಾನು ಅದರ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇನೆ” ಎಂದು ಹೇಳಿದರು.