ಮಡಿಕೇರಿ: SDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಸಂಚರಿಸುತ್ತಿದ್ದ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಜೀದ್ ಕೊಡ್ಲಿಪೇಟೆ ಸಂಚರಿಸುತ್ತಿದ್ದ ಕಾರು ಬೆಂಕಿ ಹೊತ್ತಿ ಕಾರು ಭಸ್ಮವಾಗಿದೆ, ಮಜೀದ್ ಹಾಗೂ ಚಾಲಕ ಪಾರಾಗಿದ್ದಾರೆ.
ಇಂದು ದಿನಾಂಕ 07/02/2026, ರಾತ್ರಿ ಸುಮಾರು 10 ಗಂಟೆ ವೇಳೆಗೆ, ಎಸ್‌ಡಿಪಿಐ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಮೈಸೂರು ಅವರು ಪಕ್ಷದ ಸಂಘಟನಾ ಕಾರ್ಯದ ನಿಮಿತ್ತ ಉಡುಪಿ ಜಿಲ್ಲೆಯಿಂದ ಮೈಸೂರಿನತ್ತ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ, ಕುಶಾಲನಗರ ಸಮೀಪದ ಆನೆಕಾಡು ಪ್ರದೇಶದ ಬಳಿ ಅನಿರೀಕ್ಷಿತ ಘಟನೆ ಸಂಭವಿಸಿದೆ.
ಅವರು ಪ್ರಯಾಣಿಸುತ್ತಿದ್ದ ಕ್ರೇಟಾ ಕಾರಿನ ಇಂಜಿನ್ ಮುಂಭಾಗದಲ್ಲಿ ಅಚಾನಕ್‌ವಾಗಿ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಅಪಾರ ಸಮಯಪ್ರಜ್ಞೆ ಮೆರೆದ ಕಾರಿನ ಚಾಲಕ ಸಮೀರ್ ಅವರು ತಕ್ಷಣವೇ ವಾಹನವನ್ನು ನಿಲ್ಲಿಸಿ, ಅಬ್ದುಲ್ ಮಜೀದ್ ಅವರನ್ನು ಸುರಕ್ಷಿತವಾಗಿ ಕಾರಿನಿಂದ ಕೆಳಗಿಳಿಯುವಂತೆ ಸೂಚಿಸಿದ್ದಾರೆ.
ಅವರು ಕಾರಿನಿಂದ ಹೊರಬಂದ ಕೆಲವೇ ಕ್ಷಣಗಳಲ್ಲಿ, ನೋಡ ನೋಡುತ್ತಿದ್ದಂತೆಯೇ ಕಾರು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿ ಜ್ವಾಲಾಮುಖಿಯಂತೆ ಉರಿದು ಬೂದಿಯಾಗಿದೆ.
ಅದೃಷ್ಟವಶಾತ್, ಈ ಭೀಕರ ಘಟನೆಯಲ್ಲಿ ಅಬ್ದುಲ್ ಮಜೀದ್ ಮೈಸೂರು ಅವರು ಹಾಗೂ ಚಾಲಕ ಸಮೀರ್ ಇಬ್ಬರೂ ಯಾವುದೇ ಗಾಯ ಅಥವಾ ಅಪಾಯವಿಲ್ಲದೆ ಸಂಪೂರ್ಣ ಸುರಕ್ಷಿತರಾಗಿದ್ದಾರೆ.
ಈ ದುರ್ಘಟನೆಯಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ.



