ಮಂಗಳೂರು: 2025-26ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಸೇಂಟ್ ಆಗ್ನೆಸ್ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಮೈಮುನಾ ಮೆಹನಾಝ್ 600/509 (84%) ಅಂಕಗಳೊಂದಿಗೆ ತೇರ್ಗಡೆಗೊಂಡಿದ್ದಾರೆ.
ಇವರು ಕಣ್ಣೂರಿನ ನಿವಾಸಿ, ಹಾಗೂ ಭಾರತ್ ಬೀಡಿ ಗುತ್ತಿಗೆದಾರ ನಾಸಿರ್ ಮುಹಮ್ಮದ್ ಹಾಗೂ ಜಮೀಲ ದಂಪತಿಯ ಪುತ್ರಿಯಾಗಿದ್ದಾರೆ.
ಇವರ ಈ ಸಾಧನೆಗೆ ಶಿಕ್ಷಕರು ಹಾಗೂ ಕುಟುಂಬ ಸದಸ್ಯರು ಶುಭಹಾರೈಸಿದ್ದಾರೆ.


