Flash News

ನರಮೇಧ ನಡೆಸುವ ಇಸ್ರೇಲ್ ವಿಷಜಂತುಗಳಿಗೆ ತಕ್ಕ ಪಾಠ ಕಲಿಸಬೇಕು: ಮಿಯಾ ಖಲೀಫಾ ಗುಡುಗು

ಮಿಯಾ ಖಲೀಫಾ ವಿಶ್ವದ ಬಲು ಜನಪ್ರಿಯ ನೀಲಿ ಚಿತ್ರತಾರೆಯರಲ್ಲಿ ಒಬ್ಬರು. ಬಹು ಬೇಗನೇ ನಿವೃತ್ತಿ ಪಡೆದರಾದರೂ ಅವರ ಜನಪ್ರಿಯತೆ ಇಂದಿಗೂ ತಗ್ಗಿಲ್ಲ. ನೀಲಿ ಚಿತ್ರಗಳಲ್ಲಿ ನಟಿಸುವುದು ಬಿಟ್ಟ ಬಳಿಕ ಮಿಯಾ ಖಲೀಫಾ, ಇನ್​​ಸ್ಟಾಗ್ರಾಂ ಇನ್​​ಫ್ಲಯುಯೆನ್ಸರ್ ಆಗಿ, ವೆಬ್ ಕ್ಯಾಮ್ ಮಾಡೆಲ್ ಹಾಗೂ ಸ್ಪೋರ್ಟ್ ಕಮೆಂಟೇಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ವೆಬ್ ಕ್ಯಾಮ್ ಮಾಡೆಲಿಂಗ್​​ ಮೂಲಕ ದೊಡ್ಡ ಗಳಿಕೆಯನ್ನೇ ಮಾಡುತ್ತಿರುವ ಮಿಯಾ ಖಲೀಫಾ, ಇದೀಗ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದು, ವಿಡಿಯೋನಲ್ಲಿ ಕಣ್ಣೀರು ಹಾಕಿದ್ದಾರೆ.

ಮಿಯಾ ಖಲೀಫಾ, ನೆಲೆಸಿರುವುದು ಅಮೆರಿಕನಲ್ಲಿ ಆದರೆ ಅವರು ಮೂಲತಃ ಲೆಬನಾನ್​​ನವರು. ಇಸ್ರೇಲ್-ಅಮೆರಿಕ ಮತ್ತು ಇರಾನ್ ನಡುವೆ ಹಲವು ದಿನಗಳಿಂದ ನಡೆಯುತ್ತಿದ್ದ ಯುದ್ಧಕ್ಕೆ ಇದೀಗ ವಿರಾಮ ಬಿದ್ದಿದೆ. ಆದರೆ ಈ ಕದನ ವಿರಾಮದ ಬಳಿಕ ಇಸ್ರೇಲ್, ಲೆಬನಾನ್​​ ಮೇಲೆ ಭಾರಿ ಪ್ರಮಾಣದ ಬಾಂಬ್ ದಾಳಿ ಮಾಡಿದ್ದು, 250ಕ್ಕೂ ಹೆಚ್ಚು ಮಂದಿ ಜೀವ ಕಳೆದುಕೊಂಡಿದ್ದಾರೆ. ಇದನ್ನು ನಟಿ ಮಿಯಾ ಖಲೀಫಾ ಖಂಡಿಸಿದ್ದು, ತಮ್ಮ ಮಾತೃಭೂಮಿ ಮೇಲೆ ನಡೆದ ದಾಳಿಯಿಂದ ತೀವ್ರ ದುಃಖಿತರಾಗಿದ್ದಾರೆ.

ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವಿಡಿಯೋನಲ್ಲಿ ಅಳುತ್ತಲೇ ಮಾತನಾಡಿರುವ ಮಿಯಾ ಖಲೀಫಾ, ‘ಇದು ಬಹಳ ನೋವಿನ ದಿನ. ನಾವು ಸಾಮಾಜಿಕ ಜಾಲತಾಣದಲ್ಲಿ ನೋಡುತ್ತಿರುವುದನ್ನು ಇಷ್ಟು ವರ್ಷಗಳಲ್ಲಿ ನೋಡಿಯೇ ಇಲ್ಲ. ನರಮೇಧವನ್ನೇ ನಡೆಸಲಾಗುತ್ತಿದೆ. ಕಳೆದೊಂದು ದಶಕದಲ್ಲಿ ಇಂಥಹಾ ನರಮೇಧ ಯಾರೂ ನೋಡಿದ್ದಿಲ್ಲ. ಕೇವಲ 10 ನಿಮಿಷದಲ್ಲಿ 160 ವಾಯುದಾಳಿಗಳನ್ನು ಲೆಬನಾನ್ ಮೇಲೆ ಮಾಡಲಾಗಿದೆ. ಸ್ಕೂಲು, ಆಸ್ಪತ್ರೆ, ಸಾರ್ವಜನಿಕರು ವಾಸಿಸುವ ಪ್ರದೇಶಗಳು, ಸ್ಮಶಾನಗಳನ್ನು ಗುರಿ ಮಾಡಿಕೊಂಡು ಈ ದಾಳಿಯನ್ನು ಇಸ್ರೇಲ್ ನಡೆಸಿದೆ, ಅದೂ ಕದನ ವಿರಾಮದ ಅವಧಿಯಲ್ಲಿ’ ಎಂದಿದ್ದಾರೆ ಮಿಯಾ ಖಲೀಫಾ.

ಮುಂದುವರೆದು ಮಾತನಾಡಿ, ‘ನನ್ನ ತೆರಿಗೆ ಹಣವನ್ನು ನನ್ನ ಮಾತೃಭೂಮಿಯನ್ನು ಧ್ವಂಸ ಮಾಡಲು ಬಳಸಲಾಗುತ್ತಿದೆ. ಇದಕ್ಕೆ ಹೇಗೆ ನಾನು ಪ್ರತಿಕ್ರಿಯಿಸಬೇಕು ಅರ್ಥವಾಗುತ್ತಿಲ್ಲ. ನನಗೆ ಏನು ಹೇಳಲು ಸಹ ತೋಚುತ್ತಿಲ್ಲ. ನನಗೆ ಪದಗಳೇ ಹೊಳೆಯುತ್ತಿಲ್ಲ. ಇಷ್ಟು ದಿನ ನನಗೆ ಸರಿ ಎನಿಸುವ ಬೇರೆಯವರ ಅಭಿಪ್ರಾಯಗಳನ್ನು ನಾನು ಹಂಚಿಕೊಳ್ಳುತ್ತಿದ್ದೆ. ಆದರೆ ಈಗ ನಾನೇ ಮಾತನಾಡುತ್ತಿದ್ದೇನೆ’ ಎಂದಿದ್ದಾರೆ ನಟಿ.

‘ಏನಾಗುತ್ತಿದೆ? ನಾವು ಮಂಗಳ ಗ್ರಹಕ್ಕೆ ಜನರನ್ನು ಕಳಿಸಿ ಜೀವ ಇರಬಹುದೇನೋ ಎಂದು ಹುಡುಕುತ್ತಿದ್ದೇವೆ, ಆದರೆ ಇಲ್ಲಿ ಭೂಮಿಯ ಮೇಲೆ ಇನ್ನೊಬ್ಬ ಜೀವಿಯನ್ನು ಕೊಲ್ಲಲಾಗುತ್ತಿದೆ. ಇದು ಅನಾಗರೀಕತೆ. ಇದೇ ರೀತಿಯ ದೌರ್ಜನ್ಯಕ್ಕೆ ತುತ್ತಾದ ದೇಶವನ್ನು ನಾವು ನೋಡಿದ್ದೇವೆ, ಈಗ ಮತ್ತೊಂದು ದೇಶದ ಮೇಲೆ ದೌರ್ಜನ್ಯ ಎಸೆಗಲಾಗುತ್ತಿದೆ. ಆದರೆ ಇದು ನಿಲ್ಲುವುದು ಯಾವಾಗ? ಎಂದು ಮಿಯಾ ಖಲೀಫಾ ಪ್ರಶ್ನೆ ಮಾಡಿದ್ದಾರೆ. ಮಿಯಾ ಖಲೀಫಾ ಅಳುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.